Home
Gadgets

ಶಿಯೋಮಿಯ Mi TV ಇನ್ಮುಂದೆ ಆಫ್‌ಲೈನ್ ಮಾರುಕಟ್ಟೆಯಲ್ಲೂ ಲಭ್ಯ..!

ಭಾರತೀಯ ಟಿವಿ ಮಾರುಕಟ್ಟೆಯಲ್ಲಿ ಹೊಸದೊಂದು ಭಾಷ್ಯವನ್ನು ಬರೆದಿರುವಂತಹ ಚೀನಾ ಮೂಲದ ಶಿಯೋಮಿ ಲಾಂಚ್ ಮಾಡಿರುವ Mi TV ಹೆಚ್ಚಿನ ಪ್ರಮಾಣದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದೆ. ಇದುವರೆಗೂ ಕೇವಲ ಆನ್ ಲೈನ್ ಮೂಲಕವೇ ಮಾರಾಟ ಮಾಡುತ್ತಿದೆ.

ಶಿಯೋಮಿಯ Mi TV ಇನ್ಮುಂದೆ ಆಫ್‌ಲೈನ್ ಮಾರುಕಟ್ಟೆಯಲ್ಲೂ ಲಭ್ಯ..!

ಆದರೆ ಇನ್ನು ಮುಂದೆ ದೇಶದ 900ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿರುವ mi ಪಾಟರ್ನರ್ ಸ್ಟೋರ್ ಗಳಲ್ಲಿ ಹಾಗೂ Mi ಹೋಮ್ ಗಳಲ್ಲಿ Mi TV ಗಳ್ನು ಮಾರಾಟ ಮಾಡಲು ಸಿದ್ಧತೆ ನಡೆಸಿದೆ.

ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿತ್ತು

ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿತ್ತು

ಈಗಾಗಲೇ ಮಾರುಕಟ್ಟೆಯಲ್ಲಿ ಶಿಯೋಮಿ ಮಾರಾಟ ಮಾಡುತ್ತಿರುವ Mi TV ಹೆಚ್ಚಿನ ಪ್ರಮಾಣದ ಖ್ಯಾತಿಯನ್ನು ಪಡೆದುಕೊಳ್ಳುತ್ತಿದ್ದು, Mi TV ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ Mi TVಯನ್ನು ಆನ್ ಲೈನ್ ಮಾರುಕಟ್ಟೆಯಲ್ಲಿ ಮಾತ್ರವೇ ಅಲ್ಲದೇ ಆಫ್ ಲೈನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಚಿಂತನೆ ನಡೆಸಿದೆ. ಇಷ್ಟು ದಿನ ಕೇವಲ ಫ್ಲಿಪ್ಕಾರ್ಟ್ ಮೂಲಕ ಮಾತ್ರ ಆನ್ಲೈನಲ್ಲಿ ದೊರೆತಿದ್ದ ಟಿವಿ ಗಳು ಇನ್ನು ಮುಂದೆ ಆಫ್ ಲೈನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿದೆ.

ಬಜೆಟ್‌ ಬೆಲೆಯಿಂದ ಫ್ಲಾಗ್‌ಶಿಪ್‌ವರೆಗೂ

ಬಜೆಟ್‌ ಬೆಲೆಯಿಂದ ಫ್ಲಾಗ್‌ಶಿಪ್‌ವರೆಗೂ

ಈಗಾಗಲೇ ಹಲವು ಮಾದರಿಯ ಟಿವಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿರುವ ಶಿಯೋಮಿ. ಹೆಚ್ಚಿನ ಪ್ರಮಾಣದ ಯಶಸ್ಸನ್ನು ಕಂಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹಲವು ಮಾದರಿಗಳನ್ನು Mi TV ಮಾರುಕಟ್ಟೆಗೆ ಪರಿಚಯಿಸುವ ಸನಿಹದಲ್ಲಿದೆ. ಮಾರುಕಟ್ಟೆಯಲ್ಲಿ ಶಿಯೋಮಿ ಬಜೆಟ್ ಬೆಲೆಯಿಂದ ಹಿಡಿದು, ಫಾಗ್ ಶಿಪ್ ಮಾದರಿಯ ಸ್ಮಾರ್ಟ್ ಟಿವಿಯನ್ನು Mi TVಯಲ್ಲಿ ಲಾಂಚ್ ಮಾಡಿದೆ.

ಬೆಲೆ

ಬೆಲೆ

Mi TV 4A ಮಾರುಕಟ್ಟೆಯಲ್ಲಿ ಎರಡು ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ. 32 ಇಂಚಿನ ಮತ್ತು 43 ಇಂಚಿನಲ್ಲಿ ದೊರೆಯುತ್ತಿದೆ. 32 ಇಂಚಿನ Mi TV 4A ರೂ. 13,999ಕ್ಕೆ ಹಾಗೂ 43 ಇಂಚಿನ Mi TV 4A ರೂ.22,999ಕ್ಕೆ ಮಾರಾಟವಾಗಲಿದೆ. ಇದೇ ಮಾದರಿಯಲ್ಲಿ ಶಿಯೋಮಿ 55 ಇಂಚಿನ ಟಾಪ್ ಎಂಡ್ Mi TV 4 ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ.

ಸ್ಪರ್ಧೆ

ಸ್ಪರ್ಧೆ

ಇದು ಸ್ಯಾಮ್ ಸಂಗ್ ಸೇರಿದಂತೆ ಬೇರೆ ಮಾದರಿಯ ಟಿವಿ ಕಂಪನಿಗಳಿಗೆ ಸಾಕಷ್ಟು ಹೊಡೆತವನ್ನು ನೀಡಿದೆ. ಈಗ ಶಿಯೋಮಿ ಆಫ್ ಲೈನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಬೇರೆ ಕಂಪನಿಗಳು ನಷ್ಟಕ್ಕೆ ಸಿಲುಕಲಿದೆ, ಅಲ್ಲದೇ ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ಹೆಚ್ಚಿನ ಆಯ್ಕೆಯೂ ಲಭ್ಯವಾಗಲಿದೆ.

Best Mobiles in India

English summary
Xiaomi Mi TV will now be available both online and offline. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+