Home
Gadgets

Year Ender 2024: ಈ ವರ್ಷ ಬಿಡುಗಡೆಯಾದ ಟಾಪ್ ಇಯರ್‌ಬಡ್‌ಗಳಿವು! ಬೆಲೆ, ವಿಶೇಷತೆಗಳೇನು?

Year Ender 2024: 2024 ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಇದೆ. ಆದರೆ, ಈ ವರ್ಷ ಟೆಕ್ ಮಾರುಕಟ್ಟೆಯಲ್ಲಿ ಹಲವು ಉತ್ತಮ ಸಾಧನಗಳನ್ನು ಬಿಡುಗಡೆ ಮಾಡಲಾಗಿದೆ. ಇವುಗಳಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಅಥವಾ ಇಯರ್‌ಬಡ್‌ಗಳು ಸೇರಿವೆ. ಪ್ರತಿ ವರ್ಷದಂತೆ ಈ ವರ್ಷವು ಹಲವು ಪ್ರಸಿದ್ಧ ಕಂಪನಿಗಳು ಹಲವು ಸಾಧನಗಳನ್ನು ಬಿಡುಗಡೆ ಮಾಡಿವೆ. ಈ ಲೇಖನದಲ್ಲಿ ನಾವು, ಈ ವರ್ಷ ಬಿಡುಗಡೆಯಾದ ಪ್ರೀಮಿಯಂನಿಂದ ಮಧ್ಯಮ ಶ್ರೇಣಿಯ ಇಯರ್‌ಬಡ್‌ಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.

ಹೌದು, ಆಪಲ್ (Apple), ಸ್ಯಾಮ್‌ಸಂಗ್ (Samsung), ನಾಯ್ಸ್‌ (Noise) ಮತ್ತು ಒನ್‌ಪ್ಲಸ್‌ (OnePlus) ಸೇರಿದಂತೆ ಹಲವು ಬ್ರಾಂಡ್‌ಗಳ ಹೆಸರುಗಳು ನಮ್ಮ ಪಟ್ಟಿಯಲ್ಲಿವೆ. ಇವುಗಳು ಟೆಕ್ ಪ್ರಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ. ಬನ್ನಿ, ಈ ವರ್ಷ ಬಿಡುಗಡೆಯಾದ ಟಾಪ್ ಇಯರ್‌ಬಡ್‌ಗಳ (Best earbuds launched in 2024) ಬಗ್ಗೆ ತಿಳಿಯೋಣ.

2024ರಲ್ಲಿ ಬಿಡುಗಡೆಯಾದ ಟಾಪ್ ಇಯರ್‌ಬಡ್‌ಗಳಿವು! ಬೆಲೆ, ವಿಶೇಷತೆಗಳೇನು?

2024ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಇಯರ್‌ಬಡ್‌ಗಳು

ಬೌಲ್ಟ್ W10 TWS ಮತ್ತು ಬೌಲ್ಟ್ K10 TWS

ಬೌಲ್ಟ್ W10 TWS (Boult W10 TWS) ಆರಂಭಿಕ ಬೆಲೆ 1,099 ರೂ. ಮತ್ತು ಬೌಲ್ಟ್ K10 TWS (Boult K10 TWS) ಬೆಲೆ 799 ರೂ. ಆಗಿದೆ. ಬೌಲ್ಟ್ W10 TWS ಬಡ್‌ಗಳು ಬ್ಲೂಟೂತ್ 5.4 ನೊಂದಿಗೆ ಬರುತ್ತವೆ. ಇವು 55 ಗಂಟೆಗಳ ಬ್ಯಾಟರಿ ಬ್ಯಾಕಪ್ ಹೊಂದಿವೆ. ವೇಗದ ಚಾರ್ಜಿಂಗ್ 10 ನಿಮಿಷಗಳಲ್ಲಿ 150 ನಿಮಿಷಗಳ ಪ್ಲೇಬ್ಯಾಕ್ ಅನ್ನು ಒದಗಿಸುತ್ತದೆ. ಇವು 13 ಎಂಎಂ ಡ್ರೈವರ್‌ ಹೊಂದಿವೆ.

ಇದರಲ್ಲಿರುವ BoomX ತಂತ್ರಜ್ಞಾನವು ಸ್ಪಷ್ಟ ಮತ್ತು ಆಳವಾದ ಧ್ವನಿಯನ್ನು ಒದಗಿಸುತ್ತದೆ. ಬಡ್ಸ್ ಗೇಮಿಂಗ್ ಚಲನಚಿತ್ರಗಳಿಗೆ ಶಬ್ದ ಕಡಿತ ಮತ್ತು ಅತ್ಯುತ್ತಮ ಆಡಿಯೊ ಗುಣಮಟ್ಟವನ್ನು ಒದಗಿಸುತ್ತವೆ. K10 TWS ಬಡ್ಸ್ ಕಾಂಪ್ಯಾಕ್ಟ್ ವಿನ್ಯಾಸದೊಂದಿಗೆ ಬರುತ್ತವೆ. ಇವುಗಳು ಬ್ಲೂಟೂತ್ 5.4 ಮತ್ತು IPX5 ರೇಟಿಂಗ್ ಹೊಂದಿವೆ. 50 ಗಂಟೆಗಳ ಬ್ಯಾಟರಿ ಬಾಳಿಕೆ ಮತ್ತು 45ms ಅಲ್ಟ್ರಾ ಕಡಿಮೆ ಲೇಟೆನ್ಸಿಯೊಂದಿಗೆ ಗೇಮಿಂಗ್ ಮೋಡ್‌ಗೆ ಬೆಂಬಲವಿದೆ.

ಒನ್‌ಪ್ಲಸ್ ನಾರ್ಡ್ ಬಡ್ಸ್ 3

ಒನ್‌ಪ್ಲಸ್ ನಾರ್ಡ್ ಬಡ್ಸ್ 3 (OnePlus Nord Buds 3) ಆರಂಭಿಕ ಬೆಲೆ 2,299 ರೂ. ಇದೆ. ಈ ಬಡ್ಸ್‌ಗಳು 32db ANC ಮತ್ತು ಎಐ ಕ್ಲಿಯರ್ ಕಾಲ್ ವೈಶಿಷ್ಟ್ಯ ಹೊಂದಿದೆ. ಇದರಲ್ಲಿ ಕಂಡುಬರುವ 12.4mm ಡಯಾಫ್ರಾಮ್ ಮತ್ತು BassWave 2.0 ತಂತ್ರಜ್ಞಾನವು ಆಳವಾದ ಬಾಸ್‌ನ ಅನುಭವವನ್ನು ನೀಡುತ್ತದೆ. ಇದರ ಬ್ಯಾಟರಿ ಬಾಳಿಕೆ 43 ಗಂಟೆಗಳು ಮತ್ತು ವೇಗದ ಚಾರ್ಜಿಂಗ್ 10 ನಿಮಿಷಗಳಲ್ಲಿ 11 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ. ಇದು IP55 ರೇಟಿಂಗ್ ಮತ್ತು ಡ್ಯುಯಲ್ ಸಂಪರ್ಕ ಬೆಂಬಲ ಸಹ ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್‌ 3

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್‌ 3 (Samsung Galaxy Buds 3) ಬೆಲೆ 14,999 ರೂ. ಆಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್‌ 3 ಪ್ರೀಮಿಯಂ ಇಯರ್‌ಬಡ್‌ಗಳಾಗಿವೆ. ಇದು 515mAh ಬ್ಯಾಟರಿಯನ್ನು ಹೊಂದಿದೆ. ಉತ್ತಮ ಧ್ವನಿಗಾಗಿ, ಇವುಗಳಲ್ಲಿ 11 ಎಂಎಂ ಡೈನಾಮಿಕ್ ಡ್ರೈವರ್‌ಗಳನ್ನು ಅಳವಡಿಸಲಾಗಿದೆ. ಇದು 360 ಡಿಗ್ರಿ ಸರೌಂಡ್ ಆಡಿಯೊಗೆ ಬೆಂಬಲವನ್ನು ಹೊಂದಿದೆ.

ನಾಯ್ಸ್ ಬಡ್ಸ್ Verse 2

ನಾಯ್ಸ್ ಬಡ್ಸ್ Verse 2 (Noise Buds Verse 2) ಬೆಲೆ ಕೇವಲ 1,299 ರೂ. ಆಗಿದೆ. ಈ ಬಡ್ಸ್‌ ಸೊಗಸಾದ ಡ್ಯುಯಲ್ ಟೋನ್ ವಿನ್ಯಾಸದೊಂದಿಗೆ ಬರುತ್ತವೆ. ಬಡ್ಸ್‌ಗಳು 13 ಎಂಎಂ ಡ್ರೈವರ್‌ಗಳು, ಕ್ವಾಡ್ ಮೈಕ್ರೊಫೋನ್‌ಗಳು ಮತ್ತು ಪರಿಸರದ ಶಬ್ದ ರದ್ದತಿ ಹೊಂದಿವೆ. ಬ್ಲೂಟೂತ್ 5.3 ಮತ್ತು ಹೈಪರ್‌ಸಿಂಕ್ ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿರುವ ಈ ಬಡ್‌ಗಳು 50 ಎಂಎಸ್ ಕಡಿಮೆ ಲೇಟೆನ್ಸಿ ಗೇಮಿಂಗ್ ಮೋಡ್ ಮತ್ತು 50 ಗಂಟೆಗಳ ಬ್ಯಾಟರಿ ಬಾಳಿಕೆ ಹೊಂದಿವೆ. ಈ ಬಡ್ಸ್‌ IPX5 ರೇಟಿಂಗ್ ಪಡೆದಿವೆ.

ಆಪಲ್ ಏರ್‌ಪಾಡ್ಸ್‌ 4

ಆಪಲ್ ಏರ್‌ಪಾಡ್ಸ್‌ 4 (Apple Airpods 4) ಬೆಲೆ 12,900 ರೂ. ಆಗಿದೆ. ಈ ವರ್ಷ ಬಿಡುಗಡೆಯಾದ ಆಪಲ್ ಏರ್‌ಪಾಡ್ಸ್‌ 4 ಸಿರಿ (Siri) ಬೆಂಬಲವನ್ನು ಒಳಗೊಂಡಿದೆ. ಈ ಬಡ್ಸ್‌ಗಳು ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ಬರುತ್ತವೆ. ಇದರ ಬ್ಯಾಟರಿ ಪೂರ್ಣ ಚಾರ್ಜ್‌ನಲ್ಲಿ 30 ಗಂಟೆಗಳ ಬ್ಯಾಟರಿ ಬ್ಯಾಕಪ್ ನೀಡುತ್ತದೆ. ಬಾಹ್ಯ ಶಬ್ದವನ್ನು ಕಡಿಮೆ ಮಾಡಲು ಸಕ್ರಿಯ ಶಬ್ದ ರದ್ದತಿ ಬೆಂಬಲಿಸಲಾಗುತ್ತದೆ. ಇದಲ್ಲದೆ, ಈ ಬಡ್ಸ್‌ಗಳಲ್ಲಿ ಪಾರದರ್ಶಕತೆ ಮೋಡ್ ಸಹ ಒದಗಿಸಲಾಗಿದೆ.

Best Mobiles in India

English summary
Year Ender 2024: Top earbuds launched in the year 2024: OnePlus Nord Buds 3, Noise Buds Verse 2, Samsung Galaxy Buds 3, Apple Airpods 4 and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+