ಏನಿದು 'ಟೈಪ್ ಸಿ' ಚಾರ್ಜರ್?..ಯುವಜನತೆ ಏಕೆ ಇದರ ಹಿಂದೆ ಬಿದ್ದಿದೆ?!
ಬದಲಾವಣೆ ಜಗದ ನಿಯಮವಾಗದರೆ, ಅತಿವೇಗದ ಬದಲಾವಣೆ ಮೊಬೈಲ್‌ನ ನಿಯಮ ಎನ್ನಬಹುದೇನೊ ಎನ್ನುವಷ್ಟು ಮೊಬೈಲ್ ಪ್ರಪಂಚ ಬದಲಾಗುತ್ತಿದೆ. ಮೊಬೈಲ್ ಈಗ ಸ್ಮಾರ್ಟ್‌ಫೋನ್ ಆಗಿ ಭವಿಷ್ಯದಲ್ಲಿ ಸೂಪರ್ ಸ್ಮಾರ್ಟ್‌ಫೋನ್ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಅದಕ್ಕೆ ಮೊದಲ ಹೆಜ್ಜೆಯೇ ಇತ್ತೀಚಿಗೆ ಹೆಚ್ಚು ಬಳಕೆಯಲ್ಲಿರುವ ಯುಎಸ್‌ಬಿ 'ಟೈಪ್ ಸಿ' ಚಾರ್ಜರ್.!
ಹೌದು, ಇತ್ತೀಚಿಗೆ 'ಟೈಪ್ ಸಿ' ಚಾರ್ಜರ್ ಎಂಬ ಗ್ಯಾಜೆಟ್ ಬಳಕೆ ಹೆಚ್ಚಾಗುತ್ತಿದೆ. ಎಲ್ಲಾ ಮೊಬೈಲ್ ಕಂಪೆನಿಗಳು ಟೈಪ್ ಸಿ ಚಾರ್ಜರ್ ಅನ್ನು ತಮ್ಮ ಸ್ಮಾರ್ಟ್‌ಫೋನಿನಲ್ಲಿ ಅಳವಡಿಸುತ್ತಿದ್ದಾರೆ. ಯುವಜನರು ಕೂಡ ಈ ಟೈಪ್ ಸಿ ಯುಎಸ್‌ಬಿ ಚಾರ್ಜರ್ ಕೇಬಲ್ ಹಿಂದೆ ಬಿದ್ದಿದ್ದಾರೆ. ಹಾಗಾದರೆ, ಏನಿದು ಯುಎಸ್‌ಬಿ 'ಟೈಪ್ ಸಿ' ಚಾರ್ಜರ್? ಮೊಬೈಲ್ ಬಳಕೆದಾರರಿಗೆ ಇದು ಅವಶ್ಯಕವೇ.?

ಇಂತಹ ಹತ್ತಾರು ಪ್ರಶ್ನೆಗಳು ಮೊಬೈಲ್ ಬಳಕೆದಾರರನ್ನು ಕಾಡುತ್ತಿದೆ. ಹಾಗಾಗಿ, ಯುಎಸ್‌ಬಿ ಟೈಪ್ ಸಿ ಚಾರ್ಜರ್ ಬಗೆಗೆ ಮೊಬೈಲ್ ಬಳಕೆದಾರರು ಹೊಂದಿರುವ ಎಲ್ಲಾ ಪ್ರಶ್ನೆಗಳಿಗೆ ನಾವಿಂದು ಉತ್ತರ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಹಾಗಾದರೆ, ಏನಿದು ಯುಎಸ್‌ಬಿ 'ಟೈಪ್ ಸಿ' ಚಾರ್ಜರ್? ಮೊಬೈಲ್ ಬಳಕೆದಾರರಿಗೆ ಇದು ಅವಶ್ಯಕವೇ ಎಂಬುದನ್ನು ಮುಂದೆ ತಿಳಿಯಿರಿ.

ಅಷ್ಟಕ್ಕೂ ಟೈಪ್ ಸಿ ಚಾರ್ಜರ್ ಬಳಕೆ ಏಕೆ?
ಎಗ್ಗಿಲ್ಲದೇ ಸ್ಮಾರ್ಟ್‌ಫೋನ್, ಮೊಬೈಲ್, ಲ್ಯಾಪ್‌ಟಾಪ್ ಬಳಸುತ್ತಿರುವ ಹಲವರಿಗೆ ಆಗುತ್ತಿರುವ ಬ್ಯಾಟರಿ ಬೇಗ ಚಾರ್ಜ್ ಆಗುತ್ತಿಲ್ಲ ಮತ್ತು ಸರಿಯಾದ ಚಾರ್ಜಿಂಗ್ ಪಿನ್ ಸಿಗಲ್ಲ ಎಂಬ ಹಲವು ಸಮಸ್ಯೆಗಳಿಗೆ ಕೊನೆ ಹಾಡಲು ಬಂದಿರುವುದೇ ಈ ಹೊಸ ಯುಎಸ್‌ಬಿ 'ಟೈಪ್ ಸಿ' ಚಾರ್ಜಿಂಗ್ ಪೋರ್ಟ್. ಹಾಗಾಗಿಯೇ, ಯುವಜನರಿಗೆ ಇದು ಹಾಟ್ ಫೇವರೇಟ್

ಏನಿದು 'ಟೈಪ್ ಸಿ' ಚಾರ್ಜರ್?
ಈ ಮೊದಲು ಇದ್ದ ‘ಟೈಪ್ ಬಿ'ನ ಸುಧಾರಿತ ಆವೃತ್ತಿಯಾಗಿ 'ಟೈಪ್ ಸಿ' ಚಾರ್ಜರ್ ಮಾರುಕಟ್ಟೆಗೆ ಕಾಲಿಟ್ಟಿದೆ. 24 ಮೈಕ್ರೊ ಪಿನ್ ಒಳಗೊಂಡಿಇರುವ ಇದ್ದನ್ನು ಎಲ್ಲಾ ಡಿವೈಸ್‌ಗಳನ್ನೂ ಒಮ್ಮೆಲೆ ಸಂಪರ್ಕಿಸುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಹೆಡ್‌ಫೋನ್ ಮತ್ತು ಚಾರ್ಜಿಂಗ್‌ಗೆ ಪ್ರತ್ಯೇಕ ಪೋರ್ಟ್ ಬೇಡದಿರುವುದು ಇದರ ವಿಶೇಷತೆ ಎಂದರೆ ತಪ್ಪಾಗಲಾರದು.

ತ್ವರಿತ ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆ!
ನೂತನ ಟೈಪ್ ಸಿ ಚಾರ್ಜರ್ ಪೋರ್ಟ್‌ನಿಂದ ಚಾರ್ಜಿಂಗ್ ಮತ್ತು ಡೇಟಾ ವಿನಿಮಯವನ್ನು ಏಕಕಾಲದಲ್ಲಿ ಮಾಡಬಹುದಾಗಿದೆ. ಪ್ರತಿ ಸೆಕೆಂಡಿಗೆ 10 ಜಿ.ಬಿಯಷ್ಟು ಡೇಟಾ ವರ್ಗಾಯಿಸಬಹುದಾದ ಸಾಮರ್ಥ್ಯದಲ್ಲಿ ತ್ವರಿತವಾಗಿ ಚಾರ್ಜಿಂಗ್ ಆಗುವಂತೆ ಅದನ್ನು ತಯಾರಿಸಲಾಗಿದೆ. ಇದರಿಂದ ಮೊಬೈಲ್ ಬಳಕೆದಾರರು ಮತ್ತಷ್ಟು ಫಾಸ್ಟ್ ಆಗಲಿದ್ದಾರೆ.

ಉಲ್ಟಾ ಪಲ್ಟಾ ಕೇಬಲ್!
ಟೈಪ್ ಸಿ ಚಾರ್ಜರ್ ಒಂದು ಉಲ್ಟಾ ಪಲ್ಟಾ ಕೇಬಲ್ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಏಕೆಂದರೆ, ಟೈಪ್ ಸಿ ಚಾರ್ಜರ್ ಅನ್ನು ರಿವರ್ಸಬೆಲ್ (ಉಲ್ಟಾ ಪಲ್ಟಾ) ಆಗಿ ಸಂಪರ್ಕಿಸುವಂತೆ ವಿನ್ಯಾಸ ಮಾಡಲಾಗಿದೆ. ಇದರಿಂದ ಟೈಪ್ ಸಿ ಚಾರ್ಜರ್ ಬಳಕೆ ಮಾಡುವಾಗ ಚಾರ್ಜಿಂಗ್ ಪಿನ್ ಬಹುಬೇಗ ಹಾಳಾಗುತ್ತದೆ ಎಂಬ ಭಯ ಎಲ್ಲರಿಂದಲೂ ದೂರಾಗಲಿದೆ.

ಮೊಬೈಲ್ ವಿನ್ಯಾಸ ಬದಲಾಗಲಿದೆ!
ಅನೇಕ ಪೋರ್ಟ್‌ಗಳನ್ನು ಒಂದೇ ಡಿವೈಸ್‌ನಲ್ಲಿ ಅಳವಡಿಸಬೇಕಾದ ಸಮಸ್ಯೆಯನ್ನು 'ಟೈಪ್ ಸಿ' ಚಾರ್ಜರ್ ತಪ್ಪಿಸಿದೆ. ಎಲ್ಲ ಪೋರ್ಟ್‌ಗಳ ಕಾರ್ಯವನ್ನು ಮಾಡುವ ಯುಎಸ್‌ಬಿ ‘ಟೈಪ್ ಸಿ' ಬಳಕೆಯಿಂದ ಲ್ಯಾಪ್‌ಟಾಪ್, ಮೊಬೈಲ್ ವಿನ್ಯಾಸವು ತೆಳುವಾಗಲಿವೆ. ಇದು ಗ್ರಾಹಕರ ಸ್ನೇಹಿಯಾಗುವದಲ್ಲದೆ ಭವಿಷ್ಯದ ಗ್ಯಾಜೆಟ್ ಸ್ನೇಹಿಯಾಗಿಯೂ ಕೂಡ ಬದಲಾಗಿದೆ.

ಮನಸೋತಿದೆ
ಈ ಮೊದಲು ತನ್ನ ಗ್ಯಾಜೆಟ್‌ಗಳಿಗೆ ಯುಎಸ್‌ಬಿ ಮಾದರಿಯನ್ನು ಅಳವಡಿಸಲು ಹಿಂಜರಿಯುತ್ತಿದ್ದ ಆಪಲ್ ಸಂಸ್ಥೆಯೂ ಮ್ಯಾಕ್ ಬುಕ್ ಲ್ಯಾಪ್‌ಟಾಪ್‌ಗಳಿಗೆ ‘ಟೈಪ್ ಸಿ'ಯನ್ನು ಪರಿಚಯಿಸಿದೆ. ಇತ್ತೀಚಿಗೆ ಬರುತ್ತಿರುವ ಹೊಸ ಗೆಜೆಟ್‌ಗಳೆಲ್ಲವೂ ಇದೇ ಮಾದರಿ ಅನುಸರಿಸಲಿವೆ ಎನ್ನಲಾಗಿದೆ. ಆಪಲ್ ಅನ್ನು ಆಕರ್ಷಿಸಿದ ತಂತ್ರಜ್ಞಾನ ಇದಾಗಿದೆ.

‘ಟೈಪ್ ಬಿ’ ಪೋರ್ಟ್ ಇದ್ದರೆ ಹೀಗೆ ಮಾಡಿ!
‘ಟೈಪ್ ಬಿ' ಪೋರ್ಟ್ ಡಿವೈಸ್‌ಗಳನ್ನು ಹೊಂದಿದ್ದೇವೆ, ಅವುಗಳನ್ನು ‘ಟೈಪ್ ಸಿ' ಗ್ಯಾಜೆಟ್‌ಗಳೊಂದಿಗೆ ಹೇಗೆ ಜೋಡಿಸುವುದು ಎಂಬ ಸಮಸ್ಯೆಗೂ ಪರಿಹಾರವಿದೆ. ‘ಟೈಪ್ ಬಿ' ಪೋರ್ಟ್ ಡಿವೈಸ್‌ಗಳಿಗೆ ಗೆ ಹೊಂದಿಕೊಳ್ಳುವಂತಹ ಸಣ್ಣ ಕನೆಕ್ಟರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅವುಗಳ ಮೂಲಕ ‘ಟೈಪ್ ಸಿ' ಚಾರ್ಜರ್ ಉಪಯೋಗವನ್ನು ನೀವು ಪಡೆಯಬಹುದು.

ಜಿಯೋ ಗಿಗಾ ಫೈಬರ್ ರಿಜಿಸ್ಟ್ರೇಷನ್ ಶುರು: ಉಚಿತ ಮೂರು ತಿಂಗಳು ಬ್ರಾಡ್ ಬ್ಯಾಂಡ್, 600 TV ಚಾನಲ್ ..!
ಭಾರತೀಯ ಬ್ರಾಡ್‌ಬ್ಯಾಂಡ್ ಲೋಕದಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡಲಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ಗಿಗಾ ಫೈಬರ್ ರಿಜಿಸ್ಟ್ರೇಷನ್ ಶುರುವಾಗಿದೆ. ಮೂರು ತಿಂಗಳು ಉಚಿತ ಬ್ರಾಡ್ ಬ್ಯಾಂಡ್- ಉಚಿತ 600 TV ಚಾನಲ್‌ಗಳು ದೊರೆಯುವ ಸಾಧ್ಯತೆ ಇದೆ. ಈ ಸೇವೆಗಳನ್ನು ಸೇವೆಯನ್ನು ಪಡೆದುಕೊಳ್ಳುವ ಸಲುವಾಗಿ ರಿಜಿಸ್ಟ್ರೇಷನ್ ಅನ್ನು ಜಿಯೋ ಓಪನ್ ಮಾಡಿದೆ. ನೀವು ಜಿಯೋ ಗಿಗಾ ಫೈಬರ್ ಸೇವೆಯನ್ನು ಪಡೆದುಕೊಳ್ಳಬೇಕು ಎಂದರೆ ನೀವು ಮೊದಲಿಗೆ ರಿಜಿಸ್ಟರ್ ಆಗಬೇಕಾಗಿದೆ.

ಜಿಯೋ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಯೋ, ತನ್ನ ಫೈಬರ್ ಬ್ರಾಡ್ ಬ್ರಾಂಡ್ ಸೇವೆ 'ಗಿಗಾ ಫೈಬರ್' ನೋಂದಣಿಗೆ ಚಾಲನೆ ನೀಡಿದೆ. 1 GBPS ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ನೀಡಲಿದ್ದು, ಮೊಬೈಲ್ ಡೇಟಾ ಕ್ರಾಂತಿಯಲ್ಲಿ ಪ್ರಮುಖ ಪಾತ್ರವಹಿಸಿದ ಮಾದರಿಯಲ್ಲಿ, ಬ್ರಾಡ್ ಬ್ಯಾಂಡ್ ಲೋಕದಲ್ಲಿಯೂ ಹೊಸ ಕಾಂತ್ರಿಗೆ ನಾಂದಿ ಹಾಡಲಿದೆ. ಈ ಹಿನ್ನಲೆಯಲ್ಲಿ ನೀವು ಗಿಗಾ ಫೈಬರ್ ಸೇವೆಯನ್ನು ಪಡೆಯಲು ಬೇಕಾದ ಮಾಹಿತಿಯು ಮುಂದಿದೆ.

ಒಟ್ಟು 1100 ನಗರಗಳು:
ದೇಶದಲ್ಲಿ ಇರುವ 1100 ನಗರಗಳಲ್ಲಿ ಜಿಯೋ ತನ್ನ ಗಿಗಾ ಫೈಬರ್ ಸೇವೆಯನ್ನು ಆರಂಭಿಸಲಿದೆ ಎನ್ನಲಾಗಿದೆ. ಸದ್ಯ ರಿಜಿಸ್ಟರ್ ಮಾಡಿಕೊಳ್ಳುವ ಅವಕಾಶವನ್ನು ಮಾತ್ರವೇ ನೀಡಲಾಗಿದ್ದು, ಲಾಂಚ್ ಆಗುವ ಕುರಿತು ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಈಗಾಗಲೇ ಸುಮಾರು ನಗರಗಳಲ್ಲಿ ಟೆಸ್ಟಿಂಗ್ ಸೇವೆಯನ್ನು ನೀಡುತ್ತಿದೆ.

ರಿಜಿಸ್ಟೆರೆಷನ್ ಮಾಡಿಕೊಳ್ಳುವುದು ಹೇಗೆ..?
ಮೊದಲಿಗೆ ನೀವು ಜಿಯೋ ಗಿಗಾ ಫೈಬರ್ ರಿಜಿಸ್ಟರ್ ಮಾಡಿಕೊಳ್ಳಲು ಜಿಯೋ ಅಧಿಕೃತ ವೆಬ್‌ಸೆಟ್‌ಗೆ ಹೋಗಬೇಕಾಗಿದೆ. ನಂತರದಲ್ಲಿ ಅಲ್ಲಿರುವ ಜಿಯೋ ಗಿಗಾ ಫೈಬರ್ ಪೇಜ್ ಅನ್ನು ಓಪನ್ ಮಾಡಬೇಕಾಗಿದೆ.

ಹಂತ 02:
ನಂತರದಲ್ಲಿ ನೀವು ನಿಮ್ಮ ಆಡ್ರಸ್ ಅನ್ನು ಎಂಟ್ರಿ ಮಾಡಬೇಕಾಗಿದೆ. ಮೊದಲೆ ನಿಮ್ಮ ಆಕೌಂಟ್ ನಿಂದಾಗಿ ಆಡ್ರೆಸ್ ಅಲ್ಲಿಯೇ ಇರಲಿದೆ. ಇದಾದ ನಂತರದಲ್ಲಿ ಸಬಿಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 03:
ಮುಂದಿನ ಪೇಜ್‌ನಲ್ಲಿ ನಿಮ್ಮ ಹೆಸರು ಮತ್ತು ಫೋನ್ ನಂಬರ್ ಅನ್ನು ಎಂಟ್ರಿ ಮಾಡಬೇಕಾಗಿದೆ. ಇದಾದ ನಂತರದಲ್ಲಿ OTP ಜನರೇಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗಿದೆ. ಇದಾದ ನಂತರದಲ್ಲಿ ನಿಮ್ಮ ಮೊಬೈಲ್ ನಂಬರ್‌ಗೆ OTPಯೊಂದು ಬರಲಿದೆ.

ಹಂತ 04:
ಇದಾದ ನಂತರದಲ್ಲಿ ನೀವು ನಿಮ್ಮ ಫೋನಿನಲ್ಲಿ ಬಂದಿರುವ OTPಯನ್ನು ಎಂಟ್ರಿ ಮಾಡಬೇಕಾಗಿದೆ. ಇದಾದ ನಂತರದಲ್ಲಿ ಮತ್ತೆ ನೀವು ಸಬಿಟ್ ಬಟನ್ ಅನ್ನು ಒತ್ತಬೇಕಾಗಿದೆ. ಹೀಗೆ ಮಾಡಿದಲ್ಲಿ ನೀವು ಜಿಯೋ ಗಿಗಾ ಫೈಬರ್ ಖರೀದಿಸಲು ನೋಂದಣಿ ಮಾಡಿಕೊಂಡಂತಾಗಲಿದೆ.

ವೇಗದ ಇಂಟರ್ನೆಟ್:
ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಎಂದರೆ 100 Mbps ವೇಗದ ಸೇವೆಯನ್ನು ಮಾತ್ರವೇ ಕಾಣಬಹುದಾಗಿದೆ. ಆದರೆ ಜಿಯೋ ಗಿಗಾ ಫೈಬರ್ ನಿಮಗೆ 1 Gbps ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ನೀಡಲಿದೆ. ಇದರಿಂದಾಗಿ ನಿಮ್ಮ ಮನೆಯನ್ನು ಸ್ಮಾರ್ಟ್ ಆಗಿಸಿಕೊಳ್ಳಬಹುದಾಗಿದೆ.

ಮೂರು ತಿಂಗಳು ಉಚಿತ:
ಮೂಲಗಳ ಪ್ರಕಾರ ಮೊದಲ ಮೂರು ತಿಂಗಳು ಜಿಯೋ ಉಚಿತ ಸೇವೆಯೂ ಬಳಕೆದಾರರಿಗೆ ನೀಡಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಜಿಯೋ ತನ್ನ ನೂತನ ಗಿಗಾ ಫೈಬರ್ ಸೇವೆಯನ್ನು ಆರಂಭಿಸುವ ಬಗ್ಗೆ ಮಾತ್ರವೇ ಮಾಹಿತಿ ಬಿಟ್ಟುಕೊಟ್ಟಿದ್ದು, ಇದಕ್ಕಿಂತ ಹೆಚ್ಚಾಗಿ ಯಾವುದೇ ಮಾಹಿತಿ ಲೀಕ್ ಆಗಿಲ್ಲ.

ಸ್ಮಾರ್ಟ್ ಮನೆ:
ಬ್ರಾಂಡ್ ಬ್ಯಾಂಡ್ ಸೇವೆಯಲ್ಲಿ ವೇಗದ ಇಂಟರ್ನೆಟ್ ಸೇವೆಯೂ ದೊರೆಯಲಿದ್ದು, ಒಂದೇ ಕನೆಕ್ಷನ್ ಅನ್ನು ನಿಮ್ಮ ಮನೆಯನ್ನು ಸ್ಮಾರ್ಟ್ ಮನೆಯಾಗಿಸಿ ಕೊಳ್ಳಬಹುದಾಗಿದೆ. ಮನೆಯಲ್ಲಿರುವ ಟಿವಿ, ಸಿಸಿಟಿವಿ, ಸ್ಮಾರ್ಟ್ ಸ್ಪೀಕರ್ ಸೇರಿಂದಂತೆ ಎಲ್ಲಾ ವಸ್ತುಗಳನ್ನು ಕೆನೆಕ್ಟ್ ಮಾಡಿಕೊಳ್ಳಬಹುದಾಗಿದೆ.

ಉಚಿತ ಟಿವಿ:
ಇದರೊಂದಿಗೆ ಉಚಿತ ಟಿವಿ ಚಾನಲ್‌ಗಳನ್ನು ಪಡೆದುಕೊಳ್ಳಬುದಾಗಿದೆ. 600ಕ್ಕೂ ಹೆಚ್ಚು ಚಾನಲ್‌ಗಳು, ಸಾವಿರಕ್ಕೂ ಹೆಚ್ಚು ಸಿನಿಮಾಗಳನ್ನು ನೋಡಬಹುದಾಗಿದೆ. ಇದಲ್ಲದೇ ಎಲ್ಲಾ ಜಿಯೋ ಸೇವೆಯೂ ಉಚಿತವಾಗಿ ದೊರೆಯಲಿದೆ.


Click it and Unblock the Notifications








