Home
Gadgets

ರೆಟ್ರೋ ಸ್ಟೈಲ್‌ನಲ್ಲಿ ಜೆಬ್ರಾನಿಕ್ಸ್ ಬೂಮ್ ಬಾಕ್ಸ್: ಉತ್ತಮ ಸಂಗೀತಕ್ಕಾಗಿ..!

By Srinidhi

ಆಡಿಯೋ/ವೀಡಿಯೋ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚುಣಿಯಲ್ಲಿರುವ ಜೆಬ್ರಾನಿಕ್ಸ್, ರೆಟ್ರೋ ಬೂಮ್ ಬಾಕ್ಸ್ ವೊಂದನ್ನು ಲಾಂಚ್ ಮಾಡಿದ್ದು, 'ಆಕ್ಸೆಲ್' ಹೆಸರಿನ ಹೊಸ ಪೋರ್ಟಬಲ್ ಸ್ಪೀಕರ್ ವಿನ್ಯಾಸದಿಂದಲೇ ಗಮನ ಸೆಳೆಯುತ್ತಿದೆ. ಇದು ಪ್ರಯಾಣದ ಸಮಯದಲ್ಲಿ ನಿಮಗಿಷ್ಟವಾದ ಮ್ಯೂಸಿಕ್ ಪ್ಲೇ ಮಾಡಲು ಬಳಕೆಯಾಗಲಿದ್ದು, ಚಿಕ್ಕದಾದ ಮತ್ತು ಹಗುರವಾದ ವಿನ್ಯಾಸವನ್ನು ಹೊಂದಿದೆ.

ರೆಟ್ರೋ ಸ್ಟೈಲ್‌ನಲ್ಲಿ  ಜೆಬ್ರಾನಿಕ್ಸ್ ಬೂಮ್ ಬಾಕ್ಸ್: ಉತ್ತಮ ಸಂಗೀತಕ್ಕಾಗಿ..!

ರೆಟ್ರೋ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿರುವ ಆಕ್ಸೆಲ್ ಬೂಮ್ ಬಾಕ್ಸ್ ಶಕ್ತಿಶಾಲಿ ಶಬ್ದವನ್ನು ಹೊರಸೂಸಲಿದ್ದು, ವಾಲ್ಯೂಮ್ ಕಂಟ್ರೋಲ್, ಮೀಡಿಯಾ ಕಂಟ್ರೋಲ್, ರೇಡಿಯೋ, ಮತ್ತು ಈಕ್ವಲೈಸರ್ ಗಳಿಗಾಗಿ ಮೇಲ್ಭಾಗದಲ್ಲಿ ಕಂಟ್ರೋಲ್ ಬಟನ್ ಗಳನ್ನು ಹೊಂದಿದೆ. ಈಕ್ವಲೈಸರ್ ಸಹ ಇದರಲ್ಲಿದ್ದು, ಪ್ರಭಾವಶಾಲಿ ಶಬ್ದವನ್ನು ಹೊರ ಹಾಕಲಿದೆ.

ನೀವು ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಬ್ಲೂಟೂತ್ ಮೂಲಕವೂ ಸಂಪರ್ಕವನ್ನು ಸಾಧಿಸಲಿದ್ದು, ಈ ಮೂಲಕ ನಿಮ್ಮ ಫೋನ್‌ ಕರೆಗಳನ್ನೂ ಸ್ವೀಕರಿಸುವಂತೆ ವಿನ್ಯಾಸಗೊಳಿಸಲಾಗಿದೆ. LED ಡಿಸ್ ಪ್ಲೇ ಹೊಂದಿದ್ದು , USB/ಮೈಕ್ರೋ SD ಯನ್ನು ಹಾಕುವ ಅವಕಾಶದೊಂದಿಗೆ ಎಫ್ ಎಂ ರೇಡಿಯೋ ಸಹ ಇದರಲ್ಲಿದೆ.

ರೆಟ್ರೋ ಸ್ಟೈಲ್‌ನಲ್ಲಿ  ಜೆಬ್ರಾನಿಕ್ಸ್ ಬೂಮ್ ಬಾಕ್ಸ್: ಉತ್ತಮ ಸಂಗೀತಕ್ಕಾಗಿ..!

BT/ SD /USB /AUX ಯಂತಹ ಬಹು-ಸಂಪರ್ಕಿತ ಆಯ್ಕೆಗಳಲ್ಲಿ ಲಭ್ಯವಿರುವ ಸ್ಪೀಕರ್ ಅನ್ನು ಹೊರಾಂಗಣ/ಸಮಾರಂಭಗಳು/ಪಾರ್ಟಿಗಳು/ಮನೆಗಳಲ್ಲಿ ಬಳಸಲು ಸೂಕ್ತವಾಗುವಂತೆ ವಿನ್ಯಾಸ ಮಾಡಲಾಗಿದೆ. ಹಿಡಿದುಕೊಂಡು ಓಡಾಡಲು ಅನುಕೂಲವಾಗುವಂತೆ ಹ್ಯಾಂಡಲ್ ಬಾರ್ ಸಹ ನೀಡಲಾಗಿದೆ.

ಈ ವೈರ್ ಲೆಸ್ ಪೋರ್ಟಬಲ್ ಸ್ಪೀಕರ್ ಕೆಂಪು ಮತ್ತು ಕಪ್ಪು ಎರಡು ಬಣ್ಣಗಳಲ್ಲಿ ಲಭ್ಯವಿದ್ದು ಇದು ಭಾರತದಾದ್ಯಂತ ಎಲ್ಲಾ ಪ್ರಮುಖ ರೀಟೇಲ್ ಸ್ಟೋರ್ ಗಳಲ್ಲಿ ದೊರೆಯಲಿದೆ ಎನ್ನಲಾಗಿದೆ.

Best Mobiles in India

English summary
Zebronics music The Retro boombox.to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+