Home
Gadgets

ಜೆಬ್ರಾನಿಕ್ಸ್ನಿಂದ 5 ಪೋರ್ಟ್ ಹೊಂದಿರುವ 'ಚಾರ್ಜಿಂಗ್ ಹಬ್' ಬಿಡುಗಡೆ!

By Bhaskar N J

ಮೊಬೈಲ್ ಬಿಡಿಭಾಗಗಳ ತಯಾರಿಕೆಯಲ್ಲಿ ಭಾರತದಲ್ಲೇ ಹೆಚ್ಚು ಹೆಸರಾಂತ ಕಂಪೆನಿಯಾಗಿರುವ 'ಜೆಬ್ರಾನಿಕ್ಸ್' ಈಗ ಅತ್ಯಾಧುನಿಕ 5 ಪೋರ್ಟ್ ಡಾಕಿಂಗ್ ಚಾರ್ಜಿಂಗ್ ಹಬ್ ಅನ್ನು ಬಿಡುಗಡೆ ಮಾಡಿದೆ. ಜೆಬ್ರಾನಿಕ್ಸ್ "ZEB-5SLCU3' ಹೆಸರಿನ ಈ 5 ಪೋರ್ಟ್ ಡಾಕಿಂಗ್ ಚಾರ್ಜಿಂಗ್ ಹಬ್, ಫಾಸ್ಟ್ ಚಾರ್ಜರ್ ಮತ್ತು ಎಲ್‌ಇಡಿ ಲ್ಯಾಂಪ್ ಫೀಚರ್ಸ್ ಹೊತ್ತು ಬಂದಿದೆ.

5 ಸಾಧನಗಳನ್ನು ಒಂದೇ ಬಾರಿಗೆ ಚಾರ್ಜ್ ಮಾಡಬಹುದಾದ ಸಾಮರ್ಥವನ್ನು ಹೊಂದಿರುವ ಈ ಡಾಕಿಂಗ್ ಚಾರ್ಜಿಂಗ್ ಹಬ್ಗೆ 'ZEB-5CSLU3' ಎಂದು ಹೆಸರಿಡಲಾಗಿದ್ದು, ಮನೆಯ ಗೋಡೆಗಳ ಮೇಲೆ ಅನೇಕ ವೈರ್‌ಗಳಲ್ಲಿ ಮೊಬೈಲ್‌ಗಳನ್ನು ತೂಗುಹಾಕುವ ಸಮಸ್ಯೆ ಡಾಕಿಂಗ್ ಚಾರ್ಜಿಂಗ್ ನಿವಾರಿಸಲಿದೆ ಮತ್ತು ಬೆಳಕಿನ ಲ್ಯಾಂಪ್ ಆಗಿರಲಿದೆ ಎಂದು 'ಜೆಬ್ರಾನಿಕ್ಸ್' ಕಂಪೆನಿ ತಿಳಿಸಿದೆ.

ಜೆಬ್ರಾನಿಕ್ಸ್ನಿಂದ 5 ಪೋರ್ಟ್ ಹೊಂದಿರುವ 'ಚಾರ್ಜಿಂಗ್ ಹಬ್' ಬಿಡುಗಡೆ!

ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಈ 5 ಪೋರ್ಟ್ ಡಾಕಿಂಗ್ ಹಬ್‌ನಲ್ಲಿ ಹಾಕಿ ಫಾಸ್ಟ್ ಚಾರ್ಜ್ ವೈಶಿಷ್ಟ್ಯವನ್ನು ಹೊಂದಿದೆಯೆ ಎಂದು ನೋಡಬಹುದಾಗಿದೆ. ಫಾಸ್ಟ್ ಚಾರ್ಜ್ ವೈಶಿಷ್ಟ್ಯ ಹೆಚ್ಚು ಬಹು ಕಾರ್ಯದೊಂದಿಗೆ ಲಭ್ಯವಿದ್ದು ಮತ್ತು ಯಾವಾಗಲೂ ಬ್ಯಾಟರಿ ಉಳಿತಾಯ ಬಯಸುವವರಿಗೆ ಈ 5 ಪೋರ್ಟ್ ಚಾರ್ಜಿಂಗ್ ಹಬ್ ವರದಾನವಾಗಿದೆ.

ಆಲ್ ಇನ್ ಒನ್ ಮೊಬೈಲ್ ಮತ್ತು ಟ್ಯಾಬ್ಲೆಟ್ ಹೋಲ್ಡರ್ ಆಗಿರುವ ಈ ಜೆಬ್ರಾನಿಕ್ಸ್ "ZEB-5SLCU3' ಚಾರ್ಜಿಂಗ್ ಡಾಕ್, 5 ಯುಎಸ್‌ಬಿ ಪೋರ್ಟ್‌ಗಳನ್ನು ಹೊಂದಿರುವುದರ ಜೊತೆಗೆ ಫಾಸ್ಟ್ ಚಾರ್ಜಿಂಗ್ಗೆ ಸ್ಮಾರ್ಟ್ ಆದ ಐಸಿಯೊಂದಿಗೆ ಲಭ್ಯವಿದೆ. "ZEB-5SLCU3' ಚಾರ್ಜಿಂಗ್ ಡಾಕಿಂಗ್ ಸ್ಟೇಷನ್ ಒಟ್ಟು ಗರಿಷ್ಟ ಔಟ್ ಪುಟ್ 6A ಆಗಿದೆ ಎಂದು ಜೆಬ್ರಾನಿಕ್ಸ್ ಕಂಪೆನಿ ತಿಳಿಸಿದೆ.

ಉತ್ತಮ ವಿನ್ಯಾಸದೊಂದಿಗೆ ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿರುವ ಈ 5 ಪೋರ್ಟ್ ಚಾರ್ಜಿಂಗ್ ಡಾಕ್ ಯಾವಾಗಲೂ ಉತ್ತಮ ಸಾಮರ್ಥ್ಯ ನೀಡಲಿದೆ. ಎಲ್‌ಇಡಿ ಲೈಟ್ಗಳನ್ನು ಪ್ರತ್ಯೇಕಿಸಬಹುದಾದ ಬ್ಯಾಫಲ್ನೊಂದಿಗೆ ಲಭ್ಯವಿರುವ ಈ ಚಾರ್ಜಿಂಗ್ ಸ್ಟೇಷನ್ ಬೆಲೆ 3,495 ರೂ.ಗಳಾಗಿದ್ದು, ದೇಶದ ಎಲ್ಲಾ ಪ್ರಮುಖ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಜೆಬ್ರಾನಿಕ್ಸ್ ತಿಳಿಸಿದೆ.

Best Mobiles in India

English summary
Zebronics, which is one of the leading suppliers of IT peripherals, sound systems . to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+