Subscribe to Gizbot

ವಿಭಿನ್ನ ರೀತಿಯಲ್ಲಿ ಟ್ಯಾಬ್ಲೆಟ್‌ ಬಳಕೆಮಾಡಲು ಕೆಲ ಟಿಪ್ಸ್

Posted By: Super
ವಿಭಿನ್ನ ರೀತಿಯಲ್ಲಿ ಟ್ಯಾಬ್ಲೆಟ್‌ ಬಳಕೆಮಾಡಲು ಕೆಲ ಟಿಪ್ಸ್
ಇಂದು ಎಲ್ಲೆಡೆ ಟ್ಯಾಬ್ಲೆಟ್‌ಗಳು ರಾರಾಜಿಸುತ್ತಿವೆ ಇದಕ್ಕೆ ಏಕೆಂದರೆ ಟ್ಯಾಬ್ಲೆಟ್‌ಗಳನ್ನು ನಾವು ಮೊಬೈಲ್‌ ಫೋನ್‌ನಂತೆಯು ಹಾಗೂ ಕಂಪ್ಯೂಟರ್‌ನಂತೆಯೂ ಬಳಸಬಹುದಾಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದಲ್ಲದೆ ಇದನ್ನು ಸುಲಭವಾಗಿ ಕೊಂಡೊಯ್ಯ ಬಹುದಾದ್ದರಿಂದ ಅಲ್ಲದೆ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿಯೇ ಲಭ್ಯವಾಗುವುದರಿಂದ ಬಹುತೇಕ ಮಂದಿ ಲ್ಯಾಪ್‌ಟಾಪ್‌ ಹಾಗೂ ಸ್ಮಾರ್ಟ್‌ಫೋನ್‌ಗಳ ಖರೀದಿಗೆ ಬದಲಾಗಿ ಟ್ಯಾಬ್ಲೆಟ್‌ಗಳ ಮೊರೆ ಹೋಗುತ್ತಿದ್ದಾರೆ.

ಭಾರತೀಯ ಮಾರುಕಟ್ಟೆಯಲ್ಲಿ ಇಂದು ಕೇವಲ 4 ರಿಂದ 20 ಸಾವಿರ ಖರ್ಚು ಮಾಡಿದರೆ ಸಾಕು ಉತ್ತಮ ಟ್ಯಾಬ್ಲೆಟ್‌ ಖರೀದಿಸಿಕೊಳ್ಳ ಬಹುದಾಗಿದೆ. ಅಂದಹಾಗೆ ಈ ಟ್ಯಾಬ್ಲೆಟ್‌ ಪಿಸಿಯನ್ನು ವಿವಿಧ ರೀತಿಯಲ್ಲಿಯೂ ಕೂಡಾ ಬಳಸ ಬಹುದಾಗಿದೆ. ಅದಕ್ಕಾಗಿಯೇ ಗಿಜ್ಬಾಟ್‌ ಇಂದು ಟ್ಯಾಬ್ಲೆಟ್‌ಗಳನ್ನು ವಿಭಿನ್ನ ರೀತಿಯಲ್ಲಿ ಬಳಕೆ ಮಾಡುವ ಹತ್ತು ವಿಧಾನಗಳ ಕುರಿತಾಗಿ ಮಾಹಿತಿಯನ್ನು ನಿಮಗಾಗಿ ತಂದಿದೆ ಒಮ್ಮೆ ಓದಿ ನೋಡಿ. ಅಂದಹಾಗೆ ಈ ವಿಧಾನಗಳು ನಿಮ್ಮ ಹಲವು ಕೆಲಸ ಕಾರ್ಯಗಳಿಗೆ ನೆರವಾಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಸೆಕೆಂಡ್‌ ಮಾನಿಟರ್‌ ರೂಪದಲ್ಲಿ

ಮನೆಯಲ್ಲಿ ಈಗಾಗಲೆ ಒಂದು ಮಾನಿಟರ್‌ ಇದ್ದು ಮತ್ತೊಂದು ಮಾನಿಟರ್‌ ಖರೀದಿಸ ಬೇಕೆಂದು ನೀವು ಆಲೋಚಿಸುತ್ತಿದ್ದೀರಾ ಹಾಗಿದ್ದಲ್ಲಿ ನಿಮ್ಮ ಟ್ಯಾಬ್ಲೆಟ್‌ ಅನ್ನೇ ಸೆಕೆಂಡ್‌ ಮಾನಿಟರ್‌ ಆಗಿ ಬಳಸಿಕೊಳ್ಳ ಬಹುದಾಗಿದೆ. ಆದರೆ ಈ ರೀತಿ ಮಾಡಲು ನಿಮ್ಮ ಟ್ಯಾಭ್ಲೆಟ್‌ನಲ್ಲಿ ಹೆಚ್‌ಡಿಎಂಐ ಫೋರ್ಟ್‌ ಹೊಂದಿರ ಬೇಕಾಗುತ್ತದೆ. ಅಂದಹಾಗೆ ರೂ. 5,000 ದರಕ್ಕಿಂತಲೂ ಮೇಲ್ಪಟ್ಟ ಎಲ್ಲಾ ಟ್ಯಾಬ್ಲೆಟ್‌ಗಳಲ್ಲಿಯೂ ಹೆಚ್‌ಡಿಎಂಐ ಪೋರ್ಟ್‌ ನೀಡಲಾಗಿರುತ್ತದೆ. ಈ ಮೂಲಕ ನೀವು ನಿಮ್ಮ ಟ್ಯಾಬ್ಲೆಟ್‌ ಅನ್ನು ಎಲ್ಲಿ ಬೇಕಾದರೂ ಅಲ್ಲಿ ಸೆಕೆಂಡ್‌ ಮಾನಿಟರ್‌ ರೂಪದಲ್ಲಿ ಬಳಸಬಹುದಾಗಿದೆ.

ರಿಮೋಡ್‌ ಕಂಟ್ರೋಲ್‌ ಮಾದರಿಯಲ್ಲಿ

ಟ್ಯಾಬ್ಲೆಟ್‌ ಅನ್ನು ಟಿವಿ ರಿಮೋಟ್‌ ಕಂಟ್ರೋಲ್‌ ರೀತಿಯಲ್ಲಿಯೂ ಕೂಡಾ ಬಳಸಬಹುದಾಗಿದೆ. ಈ ರೀತಿ ಮಾಡಲು ಮೊದಲಿಗೆ ನೀವು ಅಂತರ್ಜಾಲದಲ್ಲಿ ಲಭ್ಯವಿರುವಂತಹ ರಿಮೋಟ್‌ ಕಂಟ್ರೋಲ್‌ ಅಪ್ಲಿಕೇಷನ್‌ ಡೌನ್ಲೋಡ್‌ ಮಾಡಿಕೊಳ್ಳ ಬೇಕಾಗುತ್ತದೆ. ಇದರಬಳಕೆ ಇಂದ ನೀವು ನಿಮ್ಮ ಮನೆಯಲ್ಲಿನ ಟಿವಿ, ಎಸಿ ಹಾಗೂ ಮ್ಯೂಸಿಕ್‌ ಪ್ಲೇಯರ್‌ಗಳನ್ನ ದೋರದಿಂದಲೇ ಬಳಸಬಹುದಾಗಿದೆ.

ಗೇಮ್ ಆಡಲು

ನಿಮಗೆ ಬೇಜಾರಾಗುತ್ತಿದ್ದಲ್ಲಿ ನಿಮ್ಮ ಟ್ಯಾಬ್ಲೆಟ್‌ನಲ್ಲಿ ಕೆಲ ಹೆಚ್ಚು ಹಂತಗಳನ್ನೊಳಗೊಂಡಂತಹ ಗೇಮಿಂಗ್‌ ಅಪ್ಲಿಕೇಷನ್‌ಗಳನ್ನು ಡೌನ್ಲೋಡ್‌ ಮಾಡಿಕೊಳ್ಳಿ. ಅಂದಹಾಗೆ ನಿಮ್ಮ ಬಳಿ ಹೈಎಂಟ್‌ ಟ್ಯಾಬ್ಲೆಟ್‌ ಇಲ್ಲವಾದಲ್ಲಿ ಕಾಂಟ್ರಾ ಅಥವಾ ನಿನಿಂಟೋ ನಂತಹ ಗೇಮ್‌ಗಳನ್ನು ಆಡಬಹುದಾಗಿದೆ. ಈ ಮೂಲಕ ಹಳೆಯ ಗೇಮ್‌ಗಳನ್ನು ಮತ್ತೊಂಮ್ಮೆ ಆನಂದಿಸ ಬಹುದಾಗಿದೆ.

ಕಾರಿನಲ್ಲಿ ಟಿವಿಯಂತೆ

ನಿಮ್ಮ ಕಾರಿನಲ್ಲಿ ಟಿವಿ ಅಳವಡಿಸುವ ಬದಲಾಗಿ ಟ್ಯಾಬ್ಲೆಟ್‌ ಅನ್ನೇ ಟಿವಿ ರೂಪದಲ್ಲಿ ಉಪಯೋಗಿಸ ಬಹುದಾಗಿದೆ. ಇದರಿಂದಾಗಿ ದೂರದ ಪ್ರಾಯಾಣ ಬೆಳೆಸುವಾಗ ಸಿನಿಮಾ ವೀಕ್ಷಿಸಲು ನೆರವಾಗುತ್ತದೆ.

ಕ್ಯಾಷ್‌ ರೆಜಿಸ್ಟಾರ್‌ ರೂಪದಲ್ಲಿ

ನೀವು ವ್ಯಾಪಾರಿಗಳಾಗಿದ್ದಲ್ಲಿ ನಿಮ್ಮ ಟ್ಯಾಬ್ಲೆಟ್‌ ಅನ್ನು ಮಾನಿಟರ್‌ ಚಾರ್ಟ್‌ ರೂಪದಲ್ಲಿ ಬಳಸ ಬಹುದಾಗಿದೆ. ಈ ಮೂಲಕ ನೀವು ನಿಮ್ಮ ದಿನ ನಿತ್ಯದ ಶೇಡ್ಯೂಲ್‌ ಹಾಗೂ ಮೀಟಿಂಗ್‌ ಟೈಮ್‌ ಅಲ್ಲದೆ ಪೇಮೆಂಟ್‌ ರೆಜಿಸ್ಟಾರ್‌ ಆಗಿಯೂ ಕೂಡಾ ಬಳಸಬಹುದಾಗಿದೆ.

ರೆಸ್ಟೋರೆಂಟ್‌ನಲ್ಲಿ ಟೇಬಲ್‌ ಬುಕ್‌ ಮಾಡಲು

ನೀವು ನಿಮ್ಮ ಕುಟುಂಬದವರೊಡನೆ ರೆಸ್ಟೋರೆಂಟ್‌ಗೆ ತೆರಳುವ ಆಲೋಚನೆಯಲ್ಲಿದ್ದಲ್ಲಿ ಟ್ಯಾಬ್ಲೆಟ್‌ನ ನೆರವಿನಿಂದ ಟೇಬಲ್‌ ಬುಕ್‌ ಮಾಡಬಹುದಾಗಿದೆ. ಇದರಿಂದಾಗಿ ನಿಮ್ಮ ಸಮಯ ಕೂಡ ಉಳಿಸಿದಂತಾಗುತ್ತದೆ.

ಅಡುಗೆ ಟಿಪ್ಸ್‌ ಹೊಂದಿರುವ ಪುಸ್ತಕದಂತೆ

ನೀವು ವಿವಿಧ ರೀತಿಯ ಖಾದ್ಯಗಳನ್ನು ಸಿದ್ಧ ಪಡಿಸುತ್ತಿದ್ದಲ್ಲಿ ಟ್ಯಾಬ್ಲೆಟ್‌ನ ಮೂಲಕ ನೀವು ಹೊಸ ಬಗೆಯ ರೆಸಿಪಿಗಳನ್ನು ಪಡೆದುಕೋಳ್ಳ ಬಹುದಾಗಿದೆ. ಇದರಿಂದಾಗಿ ಪುಸ್ತಕದಲ್ಲಿ ಹಾಳೇ ತಿರುವಿ ಹಾಕುವಂತಹ ಅಗತ್ಯವಿರುವುದಿಲ್ಲ.

ಫೋಟೋ ಫ್ರೇಮ್‌ ರೂಪದಲ್ಲಿ

ಟ್ಯಾಬ್ಲೆಟ್‌ಗಳನ್ನು ನಿಮ್ಮ ಮನೆಯಲ್ಲಿ ಪಿಕ್ಚರ್‌ ಫ್ರೇಂನಂತೆಯೂ ಕೂಡಾ ಬಳಸ ಬಹುದಾಗಿದೆ. ಇದಕ್ಕಾಗಿ ನೀವೂ ನಿಮ್ಮ ಟ್ಯಾಬ್ಲೆಟ್‌ನಲ್ಲಿ ಆಲ್ಬಂ ಸಿದ್ಧಪಡಿಸಿ ಸ್ಲೈಡ್‌ ಶೂ ಆನ್‌ಮಾಡಿ ಇಡಬೇಕಾಗುತ್ತದೆ.

ಮ್ಯಾನ್ಯುಯೆಲ್‌ ರೂಪದಲ್ಲಿ

ಟ್ಯಾಬ್ಲೆಟ್‌ ಅನ್ನು ಟೇಬಲ್‌ ಮೇಲಿನ ಮ್ಯಾನ್ಯುಯೆಲ್‌ ರೀತಿಯಲ್ಲಿಯೂ ಕೂಡಾ ಬಳಸಬಹುದಾಗಿದೆ. ಇದರ ಮೂಲಕ ಎಲ್ಲಾ ಪ್ರಮುಖ ವಿಷಯಗಳನ್ನು ಅಥವಾ ಸಂದೇಶಗಳನ್ನು ಬರೆದಿಟ್ಟು ಹೊರ ಹೋಗ ಬಹುದಾಗಿದೆ.

ಸ್ಕೈಪ್‌ ಮೂಲಕ ವೆಬ್‌ಕ್ಯಾಮ್‌ ಚಾಟ್‌ ಮಾಡುವುದು ಹೇಗೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot