Subscribe to Gizbot

ಸ್ಮಾರ್ಟ್‌ಫೋನ್‌ ಚಾರ್ಜಿಂಗ್ ವೇಗ ಸ್ಲೋ ಆಗಿದೆಯೇ? ಎಚ್ಚರ!

Written By:

ಬಹುಸಂಖ್ಯಾತ ಸ್ಮಾರ್ಟ್‌ಫೋನ್‌ ಬಳಕೆದಾರರ ಸಮಸ್ಯೆ ಅಂದ್ರೆ ಚಾರ್ಜಿಂಗ್‌ ಸಮಸ್ಯೆ. ಸ್ಮಾರ್ಟ್‌ಫೋನ್‌ ಖರೀದಿಸಿದ ಹೊಸದರಲ್ಲಿ ಬಹುಬೇಗ ಬ್ಯಾಟರಿ ಶೇಕಡ 100 ಚಾರ್ಜ್‌ ಆಗುತ್ತಿದ್ದದ್ದು, ನಂತರದಲ್ಲಿ ಅಧಿಕ ಸಮಯವನ್ನು ತೆಗೆದುಕೊಳ್ಳುತ್ತಾ ಹೋಗುತ್ತದೆ. ಇದರಿಂದ ಬೇಸತ್ತ ಸ್ಮಾರ್ಟ್‌ಫೋನ್ ಬಳಕೆದಾರರು ಬ್ಯಾಟರಿ ಸಮಸ್ಯೆ ಇರಬೇಕೆಂದು ಬ್ಯಾಟರಿ ಬದಲಾಯಿಸುವುದು, ಅಥವಾ ಸ್ಮಾರ್ಟ್‌ಫೋನ್‌ ಅನ್ನೇ ಬದಲಾಯಿಸುತ್ತಾರೆ. ಆದರೆ ಚಾರ್ಜಿಂಗ್ ಅಧಿಕ ಸಮಯವನ್ನು ತೆಗೆದುಕೊಳ್ಳಲು ಬಹುಮುಖ್ಯ ಕಾರಣಗಳು ಇವೆ. ಈ ಕಾರಣಗಳನ್ನು ನೀವೊಮ್ಮೆ ತಿಳಿದುಕೊಂಡರೆ ನಿಮ್ಮ ಸ್ಮಾರ್ಟ್‌ಫೋನ್‌ ಚಾರ್ಜಿಂಗ್‌ ವೇಗಗೊಳಿಸಬಹುದು ಅಥವಾ ಬ್ಯಾಟರಿ, ಫೋನ್‌ ಬದಲಾಯಿಸುವ ಚಟುವಟಿಕೆಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಓದಿರಿ: ಕಂಪ್ಯೂಟರ್ ಸ್ಲೋ ಆಗಿದೆಯೇ? ಚಿಂತೆ ಬೇಡ ಪರಿಹಾರ ಇಲ್ಲಿದೆ

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್‌ ಚಾರ್ಜಿಂಗ್ ಸ್ಲೋ ಆಗಲು ಕಾರಣಗಳನ್ನು ನೀಡುತ್ತಿದ್ದು, ಈ ಟಿಪ್ಸ್‌ಗಳಿಂದ ಎಚ್ಚರಗೊಂಡು ನಿಮ್ಮ ಸ್ಮಾರ್ಟ್‌ಫೋನ್‌ ಚಾರ್ಜಿಂಗ್‌ ವೇಗಗೊಳಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಯಾಡ್‌ ಕೇಬಲ್‌

ಸಲಹೆ -1

USB ಚಾರ್ಜಿಂಗ್ ಕೇಬಲ್‌ಗಳನ್ನು ಮೊದಲು ಪರೀಕ್ಷಿಸಿ. ಅವುಗಳು ಬ್ಯಾಟರಿ ಚಾರ್ಜ್‌ ಸ್ಲೋ ಆಗುವಲ್ಲಿ ಪ್ರಮುಖ ಕಾರಣವಾಗಿವೆ. ಆದ್ದರಿಂದ ಸರಿಯಾಗಿ ಹೊಂದಬಲ್ಲ ಕೇಬಲ್‌ ಪಡೆಯಿರಿ.

ವೀಕ್‌ ಪವರ್‌ ಮೂಲಗಳು

ಸಲಹೆ -2

ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡಲು ನಿಮ್ಮ ಕಂಪ್ಯೂಟರ್‌ಗಳನ್ನು ಬಳಸಿದರೇ ಚಾರ್ಜಿಂಗ್ ವೇಗ ಕಡಿಮೆಯಾಗುತ್ತದೆ. ಅಲ್ಲದೇ USB ಕೇಬಲ್‌ಗಳು ಸ್ವಲ್ಪ ಡ್ಯಾಮೇಜ್ ಆಗಿದ್ದರೂ ಸಹ ಪವರ್ ಸಪ್ಲೇ ವೇಗ ಕಡಿಮೆ ಆಗುತ್ತದೆ. ಹಾಗೂ ವೈರ್‌ಲೆಸ್‌ ಚಾರ್ಚಿಂಗ್‌ ಬಳಸಿದರು ಸಹ ಬ್ಯಾಟರಿ ಚಾರ್ಜ್‌ ಅತಿ ಯಾಗಿ ಕಡಿಮೆ ವೇಗವಾಗುತ್ತದೆ.

ಬ್ಯಾಡ್‌ ಅಡಾಪ್ಟರ್‌

ಸಲಹೆ -3

ಸಾರ್ವಜನಿಕ ಅಡಾಪ್ಟರ್‌ ಬಳಸಿ ಚಾರ್ಜಿಂಗ್‌ ಮಾಡುವುದನ್ನು ನಿಲ್ಲಿಸಿ.

ಹಳೆ ಸ್ಮಾರ್ಟ್‌ಫೋನ್‌ ಬಳಸುವುದು.

ಸಲಹೆ - 4

ಹಳೆಯ ಸ್ಮಾರ್ಟ್‌ಫೋನ್‌ ಆಪರೇಟಿಂಗ್‌ ವ್ಯವಸ್ಥೆಯು ಚಾರ್ಜಿಂಗ್‌ ವ್ಯವಸ್ಥೆಗೆ ಉತ್ತಮ ವ್ಯವಸ್ಥೆ ಕಲ್ಪಿಸದಿರುವುದರಿಂದ ಸ್ಮಾರ್ಟ್‌ಫೋನ್‌ ಚಾರ್ಜಿಂಗ್ ವೇಗ ಕಡಿಮೆ ಇರುತ್ತದೆ. ಆದರೆ ಪ್ರಸ್ತುತ ಫೋನ್‌ಗಳ ಆಪರೇಟಿಂಗ್‌ ವ್ಯವಸ್ಥೆಯು ಚಾರ್ಜಿಂಗ್‌ ವೇಗಕ್ಕೆ ಸಹಕಾರಯುತವಾಗಿವೆ.

ಬ್ಯಾಡ್‌ ಬ್ಯಾಟರಿ

ಸಲಹೆ -5

ಹಲವು ಮೊಬೈಲ್‌ ತಯಾರಕ ಕಂಪನಿಗಳು ಬ್ಯಾಟರಿ ಅವ್ಯವಸ್ಥೆ ಬಗ್ಗೆ ಗುರುತಿಸಿಕೊಂಡಿವೆ. ಆನ್‌ಲೈನ್‌ನಲ್ಲಿ ನಿಮ್ಮ ಫೋನ್‌ ಯಾವ ಬ್ಯಾಟರಿ ಹೊಂದಿದೆ ಎಂದು ತಿಳಿದು, ತುಂಬಾ ಹಳೆಯ ಬ್ಯಾಟರಿ ಆದಲ್ಲಿ ಅದನ್ನು ಬದಲಿಸಿ.

ಮೊಬೈಲ್‌ ಚಾರ್ಜ್‌ ವೇಳೇ ಬಳಸಬೇಡಿ

ಸಲಹೆ - 6

ಮೊಬೈಲ್‌ ಚಾರ್ಜಿಂಗ್‌ ವೇಳೇ ಬಳಸುವುದರಿಂದ ಚಾರ್ಜಿಂಗ್‌ ವೇಗ ಕಡಿಮೆಯಾಗುತ್ತದೆ.

ಬ್ಯಾಗ್ರೌಂಡ್‌ ಅಪ್ಲಿಕೇಶನ್‌

ಸಲಹೆ -7

ಇಮೇಲ್, ಫೇಸ್‌ಬುಕ್‌ನಂತಹ ಹಲವು ಆಪ್‌ಗಳು ಬ್ಯಾಗ್ರೌಂಡ್‌ನಲ್ಲಿ ಚಾಲ್ತಿಯಲ್ಲಿರುತ್ತವೆ, ಅವುಗಳ ಬ್ಯಾಗ್ರೌಂಡ್‌ ಸಿಂಕ್‌ ಆಫ್‌ ಮಾಡುವುದರಿಂದ ಡಿವೈಸ್‌ ವೇಗವಾಗಿ ಚಾರ್ಜ್‌ ಆಗುತ್ತದೆ.

ಬಳಕೆಯಾಗದ ಸೆಟ್ಟಿಂಗ್‌ಗಳನ್ನು ಆಫ್‌ಮಾಡಿ.

ಸಲಹೆ -8

ವೈಫೈ, ಬ್ಲೂಟೂತ್, ಜಿಪಿಎಸ್, ಸಿಂಕ್‌ ಪೀಚರ್‌ಗಳನ್ನು ಚಾರ್ಜಿಂಗ್ ವೇಳೇ ಆಫ್‌ ಮಾಡಿ. ಹೀಗೆ ಮಾಡುವುದರಿಂದ ಡಿವೈಸ್‌ ವೇಗವಾಗಿ ಚಾರ್ಜ್‌ ಆಗುತ್ತದೆ.

ಸ್ವಿಚ್‌ ಆಫ್‌

ಸಲಹೆ -9

ಚಾರ್ಜಿಂಗ್‌ಗೆ ಅತ್ಯುತ್ತಮ ಸಲಹೆ ಎಂದರೆ, ಸ್ವಿಚ್‌ ಆಫ್‌ ಮಾಡಿ ಚಾರ್ಜಿಂಗ್‌ಗೆ ಪ್ಲಗ್‌ ಮಾಡುವುದು. ಇದರಿಂದ ಚಾರ್ಜಿಂಗ್ ಬಹುಬೇಗ ಆಗುತ್ತದೆ. ಅಲ್ಲದೇ ಡಿವೈಸ್‌ ಅನ್ನು ವೇಗಗೊಳಿಸುತ್ತದೆ.

ಡಿವೈಸ್ USB ಪೋರ್ಟ್‌ ಡ್ಯಾಮೇಜ್‌

ಸಲಹೆ -10

ಸ್ವಿಚ್‌ ಆಫ್‌ ಮಾಡಿಯೂ ಸಹ ನಿಮ್ಮ ಡಿವೈಸ್‌ ನಿಧಾನವಾಗಿ ಚಾರ್ಜಿಂಗ್ ಆಗುತ್ತಿದ್ದಲ್ಲಿ, ಡಿವೈಸ್‌ USB ಪೊರ್ಟ್‌ ಡ್ಯಾಮೇಜ್‌ ಆಗಿದೆ ಎಂದರ್ಥ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
There might be cases when your Android smartphone battery always seems to take much longer to charge. If you have faced the same issues than you are not alone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more