ಕೌನ್‌ ಬನೇಗಾ ಕರೋರ್‌ಪತಿ ವಾಟ್ಸ್‌ಆಪ್ ಸ್ಕ್ಯಾಮ್‌ ಬಗ್ಗೆ ನಿಮಗೇಷ್ಟು ಗೊತ್ತು..?

|

ಪ್ರಸಿದ್ಧ ಕ್ವಿಝ್ ಶೋ ಆಗಿರುವ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕ್ವಿಝ್ ಸ್ಪರ್ಧೆಯನ್ನು ಮುಗ್ಧ ನಾಗರೀಕರಿಗೆ ಮಂಕುಬೂದಿ ಎರಚುವ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಟಿವಿಯಲ್ಲಿ ಮಾತ್ರವಲ್ಲದೇ ಆನ್ ಲೈನ್ ಸೆಗ್ಮೆಂಟ್ ನಲ್ಲೂ ಕೂಡ ಈ ಶೋದ ಪ್ರಶ್ನೆಗಳನ್ನು ಕೇಳಲಾಗುತ್ತದೆ ಮತ್ತು ಗೆದ್ದವರಿಗೆ ಬಾರೀ ಮೊತ್ತದ ಹಣವನ್ನ ನೀಡಲಾಗುತ್ತದೆ.

ಕೌನ್‌ ಬನೇಗಾ ಕರೋರ್‌ಪತಿ  ವಾಟ್ಸ್‌ಆಪ್ ಸ್ಕ್ಯಾಮ್‌ ಬಗ್ಗೆ ನಿಮಗೇಷ್ಟು ಗೊತ್ತು..?

ನೋಡುಗರು ಕೆಬಿಸಿ ಪ್ಲೇ ಮೂಲಕ ಮತ್ತು ಸೋನಿ ಲೈವ್ ಮೊಬೈಲ್ ಆಪ್ ಮೂಲಕ ಇದರಲ್ಲಿ ಭಾಗವಹಿಸಬಹುದು ಮತ್ತು ಕ್ಯಾಷ್ ಪ್ರೈಸ್ ಗಳನ್ನು ಗೆಲ್ಲಬಹುದು. ಆದರೆ ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಕೆಲವರು ಖದೀಮರು ಕೆಬಿಸಿ ಆನ್ ಲೈನ್ ನಲ್ಲಿ ನೀವು ಹಣವನ್ನು ಗೆದ್ದಿರುವುದಾಗಿ ಹೇಳಿ ವಂಚನೆ ಮಾಡುತ್ತಿದ್ದಾರೆ. ಸ್ಕ್ಯಾಮರ್ ಬಗ್ಗೆ ನೀವು ತಿಳಿದಿರಬೇಕಾಗುವ ಅಂಶಗಳು ಇಲ್ಲಿವೆ.

KBC ಸ್ಕ್ಯಾಮ್ ಹೊಸತೇನಲ್ಲ, ಆದರೂ ಜನ ಮರುಳಾಗುತ್ತಾರೆ

KBC ಸ್ಕ್ಯಾಮ್ ಹೊಸತೇನಲ್ಲ, ಆದರೂ ಜನ ಮರುಳಾಗುತ್ತಾರೆ

ಕೆಬಿಸಿ ಸ್ಕ್ಯಾಮ್ ಹೊಸತೇನಲ್ಲ ಪ್ರತಿ ವರ್ಷವೂ ನಡೆಯುತ್ತಲೇ ಇರುತ್ತದೆ. ಯಾವಾಗ ಶೋ ಪ್ರಸಾರಗೊಳ್ಳುತ್ತದೆಯೋ ಆಗ ಇದನ್ನು ಮಾಡುತ್ತಾರೆ. ಆದರೆ ಜನರು ಇವತ್ತಿಗೂ ಕೂಡ ಮರುಳಾಗುತ್ತಿದ್ದಾರೆ ಎಂಬುದೇ ಬಹಳ ವಿಚಿತ್ರ ಸಂಗತಿ. ಪೋಲೀಸರು ಹೇಳುವ ಪ್ರಕಾರ ಜನರು ತಮ್ಮ ಅದೃಷ್ಟವಾಗಿ ಬಹಳ ಬೇಗನೆ ನಂಬುತ್ತಾರೆ ಹಾಗಾಗಿ ಸುಲಭದಲ್ಲಿ ಈ ವಿಚಾರದಲ್ಲಿ ಮೋಸಗೊಳ್ಳುತ್ತಾರೆ.

ಮೋಸಗಾರರು ಆಯ್ಕೆ ಮಾಡಿ ಕರೆ ಮಾಡುತ್ತಾರೆ.

ಮೋಸಗಾರರು ಆಯ್ಕೆ ಮಾಡಿ ಕರೆ ಮಾಡುತ್ತಾರೆ.

ತಮ್ಮ ಡಾಟಾಬೇಸ್ ನಲ್ಲಿ ಇರುವ ಯಾವುದೇ ನಂಬರ್ ಗಳಿಗೆ ಸ್ಕ್ಯಾಮರ್ ಗಳು ಆಯ್ಕೆ ಮಾಡಿ ಕರೆಗಳನ್ನು ಮಾಡುತ್ತಾರೆ ಮತ್ತು ಯಾವುದೇ ಹಿನ್ನೆಲೆ ಇರುವ ವ್ಯಕ್ತಿಗೆ ಆದರೂ ಮನಸ್ಸನ್ನು ಒಲಿಸುವ ತಂತ್ರಗಾರಿಕೆಯನ್ನು ಅವರು ಕರಗತ ಮಾಡಿಕೊಂಡಿರುತ್ತಾರೆ. ಒಂದು ವೇಳೆ ಇಂತಹ ಮೋಸಗಾರರ ಬಲೆಯಲ್ಲಿ ನೀವು ಕುರಿಯಾದರೆ ಹಳ್ಳಕ್ಕೆ ಬಿದ್ದಿರಿ ಎಂತಲೇ ಅರ್ಥ.

ಸ್ಕ್ಯಾಮರ್ ಗಳು ವಾಟ್ಸ್ ಆಪ್ ಮೂಲಕ ಕೂಡ ನಿಮ್ಮನ್ನ ಸಂಪರ್ಕಿಸಬಹುದು

ಸ್ಕ್ಯಾಮರ್ ಗಳು ವಾಟ್ಸ್ ಆಪ್ ಮೂಲಕ ಕೂಡ ನಿಮ್ಮನ್ನ ಸಂಪರ್ಕಿಸಬಹುದು

ವಾಯ್ಸ್ ಕಾಲ್ ಗಳು ಆಗದೇ ಇದ್ದಲ್ಲಿ ಕೆಲವು ಮೋಸಗಾರರು ವಾಟ್ಸ್ ಆಪ್ ಕರೆಗಳನ್ನು ಮತ್ತು ಮೆಸೇಜ್ ಗಳನ್ನು ಕೂಡ ಕಳುಹಿಸುತ್ತಾರೆ.

ನೀವು Rs 10 lakh/ Rs 25 lakh/ Rs 30 ಲಕ್ಷ ಗೆದ್ದಿರುತ್ತೀರಿ

ನೀವು Rs 10 lakh/ Rs 25 lakh/ Rs 30 ಲಕ್ಷ ಗೆದ್ದಿರುತ್ತೀರಿ

ಸಾಮಾನ್ಯವಾಗಿ ಮೋಸ ಮಾಡುವವರು ಕರೆ ಮಾಡಿ ತಾವು ಕೆಬಿಸಿ ತಂಡದಿಂದ ಕರೆ ಮಾಡುತ್ತಿದ್ದು ನೀವು ಇಂತಿಷ್ಟು ಲಕ್ಷ ಗೆದ್ದಿದ್ದೀರಿ ಎಂದು ಸುಳ್ಳು ಮಾಹಿತಿಯನ್ನು ನಿಮಗೆ ನೀಡಿ ಧನ್ಯವಾದಗಳು ಎಂದು ಹೇಳಿ ನೀವು ಇಷ್ಟು ಹಣ ಗಳಿಸಿದ್ದಕ್ಕೆ ನಮಗೆ ಖುಷಿಯಾಗಿದೆ ಎಂದು ವಿಷ್ ಮಾಡುತ್ತಾರೆ. ಮಾತು ಮುಂದುವರಿಸಿ ನಿಮ್ಮನ್ನ ಮರಳು ಮಾಡುತ್ತಾರೆ.

ನೀವು ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳದಿದ್ದರೆ ನೀವು ಸ್ಪರ್ಧೆ ಮಾಡಿಲ್ಲ, ಅಥವಾ ನಿಮ್ಮ ಕುಟುಂಬ ಸದಸ್ಯರು ಸ್ಪರ್ಧೆ ಮಾಡಿದ್ದಾರೆ ಎನ್ನುತ್ತಾರೆ ಸ್ಕ್ಯಾಮರ್ ಗಳು

ನೀವು ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳದಿದ್ದರೆ ನೀವು ಸ್ಪರ್ಧೆ ಮಾಡಿಲ್ಲ, ಅಥವಾ ನಿಮ್ಮ ಕುಟುಂಬ ಸದಸ್ಯರು ಸ್ಪರ್ಧೆ ಮಾಡಿದ್ದಾರೆ ಎನ್ನುತ್ತಾರೆ ಸ್ಕ್ಯಾಮರ್ ಗಳು

ಒಂದು ವೇಳೆ ಇಂತಹ ಕರೆಯನ್ನು ನೀವು ಲೆಕ್ಕಕ್ಕೆ ತೆಗೆದುಕೊಳ್ಳದೇ ಇದ್ದರೆ ನಿಮ್ಮ ಕುಟುಂಬದ ಸದಸ್ಯರು ಯಾರಾದರೂ ಟ್ರೈ ಮಾಡಿರಬಹುದು, ನಿಮ್ಮ ಈ ನಂಬರಿನಿಂದ ನಿಮ್ಮವರು ಮಾಡಿರಬಹುದು ಎಂದು ಸುಳ್ಳು ಹೇಳಿ ನಂಬಿಸುವುದರಲ್ಲಿ ಯಶಸ್ವಿಯಾಗುತ್ತಾರೆ.

0092 ನಿಂದ ಆರಂಭವಾಗುವ ಸುಳ್ಳು ನಂಬರ್ ಗಳಿಂದ ಅವರು ನಿಮಗೆ ಕರೆ ಮಾಡಬಹುದು

0092 ನಿಂದ ಆರಂಭವಾಗುವ ಸುಳ್ಳು ನಂಬರ್ ಗಳಿಂದ ಅವರು ನಿಮಗೆ ಕರೆ ಮಾಡಬಹುದು

ಪೋಲೀಸ್ ದೂರಿನ ಅನ್ವಯವೇ ಹೇಳುವುದಾದರೆ ಹೆಚ್ಚಿನ ಫೇಕ್ ಕರೆಗಳು 0092 ನಂಬರಿನ ಫೋನಿನಿಂದಲೇ ಬಂದಿರುತ್ತದೆ.

ಕೆಲವೇ ಸಂದರ್ಬದಲ್ಲಿ ಸ್ಕ್ಯಾಮರ್ ಗಳನ್ನು ನಿಮ್ಮ ಬಳಿ ಪ್ರಶ್ನೆ ಕೇಳಬಹುದು ಅಥವಾ ಲಕ್ಕಿ ಡ್ರಾ ಮೂಲಕ ನಿಮ್ಮನ್ನ ಆಯ್ಕೆ ಮಾಡಲಾಗಿದೆ ಎಂದು ಹೇಳಬಹುದು.

ಕೆಲವೇ ಸಂದರ್ಬದಲ್ಲಿ ಸ್ಕ್ಯಾಮರ್ ಗಳನ್ನು ನಿಮ್ಮ ಬಳಿ ಪ್ರಶ್ನೆ ಕೇಳಬಹುದು ಅಥವಾ ಲಕ್ಕಿ ಡ್ರಾ ಮೂಲಕ ನಿಮ್ಮನ್ನ ಆಯ್ಕೆ ಮಾಡಲಾಗಿದೆ ಎಂದು ಹೇಳಬಹುದು.

ಮೋಸಗಾರರು ಕೆಲವೇ ಸಂದರ್ಬದಲ್ಲಿ ತಮ್ಮನ್ನ ತಾವು ಪರಿಚಯಿಸಿಕೊಳ್ಳುತ್ತಾರೆ ಮತ್ತುಕೆಲವು ಸರಳ ಪ್ರಶ್ನೆಗಳನ್ನು ಕೇಳುತ್ತಾರೆ. ನೀವು ಗೆಲ್ಲಲು ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಹೇಳುತ್ತಾರೆ. ಅಷ್ಟೇ ಅಲ್ಲ ಕೆಲವು ಬಾರಿ ಮೋಸಮಾಡುವವರು ನಿಮ್ಮ ನಂಬರ್ ನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಹೇಳುತ್ತಾರೆ.

ನಿಜವಾದ ಸ್ಕ್ಯಾಮರ್ ಎಂದು ತಿಳಿದುಬರುವುದು ನೀವು ಪ್ರೊಸೆಸಿಂಗ್ ಫೀಸ್ ಪಾವತಿಸಬೇಕು ಎಂದು ಹೇಳಿದಾಗ

ನಿಜವಾದ ಸ್ಕ್ಯಾಮರ್ ಎಂದು ತಿಳಿದುಬರುವುದು ನೀವು ಪ್ರೊಸೆಸಿಂಗ್ ಫೀಸ್ ಪಾವತಿಸಬೇಕು ಎಂದು ಹೇಳಿದಾಗ

ಕೆಬಿಸಿಯಲ್ಲಿ ನೀವು ಜಯಗಳಿಸಿದ್ದೀರಿ ಎಂದು ತಿಳಿಸಿದ ನಂತರ ನಿಜವಾದ ಮೋಸಗಾರಿಕೆ ತಿಳಿಯುವುದು ಯಾವಾಗ ಅವರು ನಿಮ್ಮ ಬಳಿ ಪ್ರೊಸೆಸಿಂಗ್ ಫೀಸ್ ಪಾವತಿಸಬೇಕು ಎಂದು ಹೇಳುತ್ತಾರೋ ಆಗ. ಹೆಚ್ಚು ಕಡಿಮೆ 8,000 ದಿಂದ 10,000 ರುಪಾಯಿ ವರೆಗೆ ಟ್ಯಾಕ್ಸ್ ಮನಿ ಅಥವಾ ಪ್ರೊಸೆಸಿಂಗ್ ಫೀಸ್ ಪಾವತಿಸಿದರೆ ನಿಮಗೆ ಕೆಬಿಸಿಯಿಂದ ಜಯಗಳಿಸಿರುವ 25 ಲಕ್ಷ ಅಥವಾ 30 ಲಕ್ಷ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ನಂಬಿಸುತ್ತಾರೆ.ಬ್ಯಾಂಕ್ ಡ್ರಾಫ್ಟ್ ಗಳ ಮೂಲಕ ಪಾವತಿ ಮಾಡುವಂತೆ ಹೆಚ್ಚಿನ ಮೋಸಗಾರರು ಹೇಳುತ್ತಾರೆ.

ಕಡಿಮೆ ಪ್ರೊಸೆಸಿಂಗ್ ಫೀಸ್ ಹೇಳುವುದು ಜನರು ಬೇಗನೆ ದೊಡ್ಡ ಮೊತ್ತಕ್ಕೆ ಮರುಳಾಗಲಿ ಎಂಬ ಉದ್ದೇಶಕ್ಕೆ

ಕಡಿಮೆ ಪ್ರೊಸೆಸಿಂಗ್ ಫೀಸ್ ಹೇಳುವುದು ಜನರು ಬೇಗನೆ ದೊಡ್ಡ ಮೊತ್ತಕ್ಕೆ ಮರುಳಾಗಲಿ ಎಂಬ ಉದ್ದೇಶಕ್ಕೆ

ಭಾರೀ ಕಡಿಮೆ ಮೊತ್ತದ ಪ್ರೊಸೆಸಿಂಗ್ ಫೀಸ್ ಜನರು ಬೇಗನೆ ಮೋಸವಾಗುವಂತೆ ಮಾಡಿ ಬಿಡುತ್ತದೆ. 25 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಸಿಗಬೇಕಾದರೆ 10 ಸಾವಿರ ಪಾವತಿಸುವುದು ದೊಡ್ಡದೇನಲ್ಲ ಎಂದು ಯೋಚಿಸುವ ಜನರು ಬೇಗನೆ ಮೋಸಕ್ಕೆ ಬಲಿಯಾಗುತ್ತಾರೆ..

ಕೆಲವು ಸಂದರ್ಬದಲ್ಲಿ ಮೋಸಗೊಳಿಸುವವರು ನಿಮ್ಮ ಅಕೌಂಟ್ ನಂಬರ್ ನ್ನು ಕೇಳಬಹುದು

ಕೆಲವು ಸಂದರ್ಬದಲ್ಲಿ ಮೋಸಗೊಳಿಸುವವರು ನಿಮ್ಮ ಅಕೌಂಟ್ ನಂಬರ್ ನ್ನು ಕೇಳಬಹುದು

ಕೆಲವರು ಒಮ್ಮೊಮ್ಮೆ ಪ್ರೊಸೆಸಿಂಗ್ ಫೀಸ್ ಕೇಳುತ್ತಾರೆ. ಆದರೆ ಮತ್ತೂ ಕೆಲವೊಮ್ಮೆ ಬ್ಯಾಂಕ್ ಅಕೌಂಟ್ ವಿವರಗಳನ್ನು ಕೇಳುವ ಸಾಧ್ಯತೆ ಇರುತ್ತದೆ. ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟಿಗೆ ಹಣ ಪಾವತಿ ಮಾಡಲಾಗುತ್ತದೆ ಎಂದು ಸುಳ್ಳು ಹೇಳಿ ಅಕೌಂಟ್ ವಿವರಗಳನ್ನು ಕೇಳುವ ಸಾಧ್ಯತೆ ಇದೆ. ಆದರೆ ಇದರಲ್ಲಿ ಕೆಲವು ಮಂದಿ ಯಾರೊಂದಿಗೂ ಹಂಚಿಕೊಳ್ಳಬಾರದ ಕೆಲವು ಬ್ಯಾಂಕಿಂಗ್ ವಿವರಗಳನ್ನು ಮೋಸಗೊಳಿಸುವವರಿಗೆ ನೀಡಿ ಬಿಡುವ ಸಾಧ್ಯತೆಗಳಿರುತ್ತದೆ. ಅವರು ಬ್ಯಾಂಕಿನ ಹಣವನ್ನು ಕದಿಯಲು ಇದನ್ನು ಬಳಸಿಕೊಂಡು ಬಿಡುತ್ತಾರೆ. ಹಾಗಾಗಿ ಎಚ್ಚರಿಕೆಯಿಂದಿರಿ.

Best Mobiles in India

English summary
10 things of the KBC WhatsApp scam you must know. to know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X