ಪ್ರತಿಯೊಬ್ಬ ಡ್ರಾಪ್‌ಬಾಕ್ಸ್ ಬಳಕೆದಾರ ಈ ಅಂಶಗಳನ್ನು ಖಂಡಿತ ತಿಳಿದಿರಬೇಕು..!
ನೀವು ಒಂದು ತಂಡದೊಂದಿಗೆ ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ಪ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದರೆ ಡ್ರಾಪ್ ಬಾಕ್ಸ್ ಈಗ ನಿಮ್ಮ ಜೀವನದ ಒಂದು ಭಾಗವಾಗಿರಬಹುದು.ಆದರೆ ಡ್ರಾಪ್ ಬಾಕ್ಸ್ ನಿಮ್ಮ ಲ್ಯಾಪ್ ಟಾಪ್ ಮತ್ತು ಮೊಬೈಲ್ ಡಿವೈಸ್ ಗಳ ನಡುವೆ ಕೇವಲ ನಿಮ್ಮ ಫೈಲ್ಸ್ ಗಳನ್ನು ಸೇವ್ ಮಾಡಿ ಸೈನ್ಕ್ರನೈಜ್ ಮಾಡುವ ಸ್ಥಳವಲ್ಲ.

ಡ್ರಾಪ್ ಬಾಕ್ಸ್ ಈಗ ಪ್ರೊಜೆಕ್ಟ್ ಗಳನ್ನು ಸೇರಿಸುವುದು, ಡಾಕ್ಯುಮೆಂಟ್ ಗಳನ್ನು ಕಲೆಕ್ಟ್ ಮಾಡುವುದು, ಮತ್ತು ಮಹತ್ವವಾದ ಫೈಲ್ ಗಳನ್ನು ಹಂಚಿಕೊಳ್ಳುವ ಒಂದು ಪ್ರಮುಖ ವ್ಯವಸ್ಥೆಯಾಗಿ ಮಾರ್ಪಟ್ಟಿದೆ. ಆದರೆ, ಯಾವಾಗ ಸಂಪೂರ್ಣ ಕೆಲಸದ ಶೈಲಿಯು ಡ್ರಾಪ್ ಬಾಕ್ಸ್ ಆಗಿ ಮಾರ್ಪಾಡಾಗುತ್ತದೆಯೋ ಆಗ ಅದರ ವಿಭಿನ್ನ ಭಾಗಗಳನ್ನು ಮ್ಯಾನೇಜ್ ಮಾಡುವುದು ಕಷ್ಟವಾಗುತ್ತದೆ. ಹಾಗಾಗಿ ಸರಳವಾಗಿರುವ ಕೆಲವು ಟಿಪ್ಸ್ ಮತ್ತು ಟ್ರಿಕ್ಸ್ ಗಳನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

1. ಯಾವುದೇ ಫೈಲ್ ನ್ನು ಯಾರ ಜೊತೆ ಬೇಕಿದ್ದರೂ ತಕ್ಷಣವೇ ಹಂಚಿಕೊಳ್ಳಿ
ಡ್ರಾಪ್ ಬಾಕ್ಸ್ ಎನ್ನುವುದು ಸಪರೇಟ್ ಆಗಿರುವ ಒಂದು ಸಿಸ್ಟಮ್ ಆಗಿದ್ದು ನಿಮ್ಮ ಡ್ರಾಪ್ ಬಾಕ್ಸ್ ಅಕೌಂಟಿನಿಂದ ಫೈಲ್ಸ್ ಗಳನ್ನು ಶೇರ್ ಮಾಡಲು ಬಳಸಲಾಗುತ್ತದೆ. ನೀವು ಪಬ್ಲಿಕ್ ಫೋಲ್ಡರ್ ನ್ನು ಬಳಕೆ ಮಾಡುತ್ತೀರಿ ಮತ್ತು ಅದು ಸ್ವಯಂಚಾಲಿತವಾಗಿ ಪಬ್ಲಿಕ್ ಲಿಂಕ್ ಗಳನ್ನು ನಿಮ್ಮ ಫೈಲ್ ನಲ್ಲಿ ಏನೇ ಇದ್ದರೂ ಕೂಡ ಅದನ್ನು ಜನರೇಟ್ ಮಾಡುತ್ತದೆ. ಆಗ ಡ್ರಾಪ್ ಬಾಕ್ಸ್ ನಿಮ್ಮ ವರ್ಕ್ ಫ್ಲೋವನ್ನು ಸಿಂಪ್ಲಿಫೈ ಮಾಡುತ್ತದೆ.
ಡ್ರಾಪ್ ಬಾಕ್ಸ್ ನಿಂದ ಫೈಲ್ ಅಥವಾ ಫೋಲ್ಡರ್ ನ್ನು ಶೇರ್ ಮಾಡುವುದಕ್ಕೆ ಹಲವು ಮಾರ್ಗಗಳಿರುತ್ತದೆ. ನೀವು ಫೈಲ್ ಗಳನ್ನು ನೋಡಿದ ಕೂಡಲೇ ಶೇರ್ ಸೆಕ್ಷನ್ ಗೆ ತೆರಳಿ ಲಿಂಕ್ ನ್ನು ಕ್ರಿಯೇಟ್ ಮಾಡಲಾಗುತ್ತದೆ. ನಂತರ ಈ ಲಿಂಕ್ ನಲ್ಲಿರುವ ಎಲ್ಲಾ ವ್ಯಕ್ತಿಗಳು ಕೂಡ ಆಫೈಲ್ ನ್ನು ಆಕ್ಸಿಸ್ ಮಾಡಲು ಅವಕಾಶವಿರುತ್ತದೆ.
ಒಂದು ವೇಳೆ ನೀವು ಹಲವು ಮಂದಿಯೊಂದಿಗೆ ಫೈಲ್ ಅಥವಾ ಫೋಲ್ಡರ್ ನ್ನು ಕೊಲ್ಯಾಬುರೇಟ್ ಮಾಡಬೇಕು ಎಂದು ಬಯಸಿದ್ದಲ್ಲಿ ಆಗ ಅವರನ್ನು ಡ್ರಾಪ್ ಬಾಕ್ಸ್ ಶೇರಿಂಗ್ ಗೆ ನೇರವಾಗಿ ಆಡ್ ಮಾಡಲು ಅವಕಾಶವಿರುತ್ತದೆ.

2. ಡಿಲೀಟ್ ಆಗಿರುವ ಫೈಲ್ ಗಳನ್ನು ರಿಸ್ಟೋರ್ ಮಾಡಿ
ಡ್ರಾಪ್ ಬಾಕ್ಸ್ ನಲ್ಲಿ ಅಚಾನಕ್ ಆಗಿ ಯಾವುದೇ ಫೈಲ್ ಡಿಲೀಟ್ ಆಯ್ತಾ? ಹಾಗಂತ ಚಿಂತಿಸುವ ಅಗತ್ಯವಿಲ್ಲ. ಅದನ್ನು ಪುನಃ ಪಡೆಯಲು ಒಂದು ಸುಲಭ ವಿಧಾನವಿದೆ. ಡ್ರಾಪ್ ಬಾಕ್ಸ್ ಪ್ರೊಫೆಷನಲ್ ನ್ನು ಅಪ್ ಗ್ರೇಡ್ ಮಾಡಿಕೊಳ್ಳಬೇಕು. ಸುಮಾರು 120 ದಿನಗಳ ವರೆಗಿನ ಡಿಲೀಟೆಡ್ ಫೈಲ್ ಗಳನ್ನು ಪುನಃ ಪಡೆಯಲು ಸಾಧ್ಯವಾಗುತ್ತದೆ.
ಡ್ರಾಪ್ ಬಾಕ್ಸ್ ವೆಬ್ ಸೈಟ್ ನ್ನು ತೆರೆಯಿರಿ. ಫೈಲ್ ಸೆಕ್ಷನ್ ಗೆ ತೆರಳಿ ರೀಸೆಂಟ್ಲಿ ಡಿಲೀಟೆಡ್ ಫೈಲ್ಸ್ ನ್ನು ಕ್ಲಿಕ್ಕಿಸಿ. ನಿಮ್ಮ ಕಂಪ್ಯೂಟರ್ ನಲ್ಲಿನ ರೀಸೈಕಲ್ ಬಿಟ್ ನಂತೆಯೇ ಸರಿ. ನೀವು ಡಿಲೀಟ್ ಮಾಡಿರುವ ಫೈಲ್ಸ್ ಗಳ ಲಿಸ್ಟ್ ನ್ನು ಅಲ್ಲಿ ಗಮನಿಸಬಹುದು. ಅಗತ್ಯವಿರುವ ಫೈಲ್ ನ್ನು ಆಯ್ಕೆ ಮಾಡಿ ರಿಸ್ಟೋರ್ ಬಟನ್ ನ್ನು ಕ್ಲಿಕ್ಕಿಸಿ. ಒರಿಜಿನಲ್ ಪ್ಲೇಸ್ ಗೆ ತೆರಳಿದರೆ ನಿಮ್ಮ ಫೈಲ್ ಪುನಃ ನಿಮಗೆ ಲಭ್ಯವಾಗುತ್ತದೆ.

3. ಫೈಲಿನ ಹಳೆಯ ವರ್ಷನ್ ನ್ನು ರಿವರ್ಟ್ ಮಾಡುವುದು
ಡ್ರಾಪ್ ಬಾಕ್ಸ್ ನ ಮತ್ತೊಂದು ಅಧ್ಬುತ ವೈಶಿಷ್ಟ್ಯತೆ ಎಂದರೆ ರಿವಿಷನ್ ಹಿಸ್ಟರಿ. ಒಂದು ವೇಳೆ . ಅದೆಷ್ಟೋ ಸಂದರ್ಬದಲ್ಲಿ ಒಂದು ಫೈಲಿನ ಹಳೆಯ ವರ್ಷನ್ ಬೇಕಾಗುತ್ತದೆ. ಅದು ಸೇವ್ ಇಲ್ಲದೇ ಪಡೆಯಲು ಡ್ರಾಪ್ ಬಾಕ್ಸ್ ನಲ್ಲಿ ಅವಕಾಶವಿದೆ.
ಫೈಲಿನ ನೆಕ್ಸ್ಟ್ ಇರುವ ಮೆನು ಬಟನ್ ನ್ನು ಕ್ಲಿಕ್ಕಿಸಿ. ಡ್ರಾಪ್ ಬಾಕ್ಸ್ ನಲ್ಲಿ ಸೇವ್ ಆಗಿರುವ ಫೈಲಿನ ಎಲ್ಲಾ ಡಿಫರೆಂಟ್ ವರ್ಷನ್ ನ ಲಿಸ್ಟ್ ನಿಮಗೆ ಕಾಣಸಿಗುತ್ತದೆ. ಅದರಲ್ಲಿ ಟೈಮ್ ಸ್ಟಾಂಪ್ ಕೂಡ ಇರುತ್ತದೆ ಮತ್ತು ಯಾರು ಬದಲಾವಣೆ ಮಾಡಿದ್ದು ಎಂಬ ಯ್ಯೂಸರ್ ಡೀಟೇಲ್ ಕೂಡ ಇರುತ್ತದೆ. ನೀವು ಅಗತ್ಯವಿರುವ ವರ್ಷನ್ ನ ಪ್ರೀವ್ಯೂ ನೋಡಿ ರೀಸ್ಟೋರ್ ಬಟನ್ ಕ್ಲಿಕ್ಕಿಸಿ ಆಯ್ಕೆ ಮಾಡಿಕೊಳ್ಳಬಹುದು.

4. ಫೈಲ್ ಗಳ ರಿಕ್ವೆಸ್ಟ್
ರಿಕ್ವೆಸ್ಟ್ ಫೈಲ್ ವೈಶಿಷ್ಟ್ಯವು ನಿಮಗೆ ಡ್ರಾಪ್ ಬಾಕ್ಸ್ ನಲ್ಲಿ ಹಲವು ಯ್ಯೂಸರ್ ಗಳಿಂದ ಹಲವು ರೀತಿಯ ಫೈಲ್ ಗಳನ್ನು ಕಲೆಕ್ಟ್ ಮಾಡುವ ಸಂದರ್ಬದಲ್ಲಿ ಸಮಯವನ್ನು ಉಳಿಸುತ್ತದೆ. ಇದರ ಮೂಲಕ ನೀವು ಲಿಂಕ್ ಕ್ರಿಯೇಟ್ ಮಾಡಿ ಯೂನೀಕ್ ಫೋಲ್ಡರ್ ಅನ್ನು ಅದಕ್ಕೆ ಕ್ರಿಯೇಟ್ ಮಡಲು ಅವಕಾಶವಿದೆ. ಆ ಲಿಂಕ್ ನ್ನು ನೀವು ಯಾರಿಗೆ ಬೇಕಿದ್ದರೂ ಕಳಿಸಬಹುದು( ಅವರು ಡ್ರಾಪ್ ಬಾಕ್ಸ್ ಬಳಕೆದಾರರೇ ಆಗಿರಬೇಕು ಎಂದೇನೂ ಇಲ್ಲ) ಮತ್ತು ಅವರು ಆ ಫೋಲ್ಡರ್ ಗೆ ಫೈಲ್ ಸೇರಿಸಲು ಅವಕಾಶವಿರುತ್ತದೆ.
ಸೈಡ್ ಬಾರ್ ನಲ್ಲಿ ಫೈಲ್ ರಿಕ್ವೆಸ್ಟ್ ನ್ನು ಕ್ಲಿಕ್ಕಿಸಿ ಮತ್ತು ಸ್ಟಾರ್ಟ್ ಮಾಡಲು ರಿಕ್ವೆಸ್ಟ್ ಫೈಲ್ ಬಟನ್ ನ್ನು ಬಳಸಿ. ಫೋಲ್ಡರ್ ಗೆ ಹೆಸರಿಸಿ ಮತ್ತು ಎಲ್ಲಿ ಸೇವ್ ಮಾಡಬೇಕು ಎಂಬುದನ್ನು ಗುರಿತಿಸಿ. ಡೆಡ್ ಲೈನ್ ನ್ನು ಫಿಕ್ಸ್ ಮಾಡಿ. ಲಿಂಕ್ ಜನರೇಟ್ ಮಾಡಿ ಮತ್ತು ಸೆಂಡ್ ಮಾಡಿ.

5. ವೇಗದ ಆಕ್ಸಿಸ್ ಆಗಿ ಮಹತ್ವದ ಫೋಲ್ಡರ್ ಗಳನ್ನು ಸ್ಟಾರ್ ಮಾಡಿ ಗುರುತಿಸಿಟ್ಟುಕೊಳ್ಳುವಿಕೆ
ನಿಮ್ಮ ವರ್ಕ್ ಫೈಲ್ಸ್, ಆರ್ಕೈವ್ ಆಗಿರುವ ಡಾಕ್ಯುಮೆಂಟ್ ಗಳು, ಹೋಮ್ ಡಾಕ್ಯುಮೆಂಟ್, ಹಾಗೂ ಫೋಟೋ ಲೈಬ್ರರಿಯ ಶ್ವಾಸಕೋಶವೇ ಈ ಡ್ರಾಪ್ ಬಾಕ್ಸ್ ಎಂದು ಹೇಳಿದರೆ ಆಶ್ಚರ್ಯವಿಲ್ಲ.ನೀವು ಇವೆಲ್ಲವನ್ನೂ ಆರ್ಗನೈಸ್ ಮಾಡಲು ಡ್ರಾಪ್ ಬಾಕ್ಸ್ ಫೋಲ್ಡರ್ ನ್ನು ಬಳಸುತ್ತಿದ್ದಲ್ಲಿ ಸರಿಯಾದ ಫೋಲ್ಡರ್ ಹುಡುಕಾಡಲು ಹೆಚ್ಚು ಸಮಯ ವ್ಯಯಿಸಬೇಕಾಗುತ್ತದೆ.
ನೀವು ಪದೇ ಪದೇ ಬಳಸುವ ಕೆಲವು ಫೋಲ್ಡರ್ ಗಳನ್ನು ಅಥವಾ ಫೈಲ್ ಗಳನ್ನು ಸ್ಟಾರ್ ಮಾಡಿ ಇಡಲು ನಿಮಗೆ ಇದರಲ್ಲಿ ಅವಕಾಶವಿರುತ್ತದೆ.. ಮತ್ತು ಡ್ರಾಪ್ ಬಾಕ್ಸ್ ನ್ನು ನೀವು ಮತ್ತೊಮ್ಮೆ ಬಳಸುವಾಗ ಇದು ನಿಮಗೆ ಸಹಾಯ ಮಾಡುತ್ತದೆ.

6. ಆಫ್ ಲೈನ್ ಬಳಕೆಗಾಗಿ ಫೈಲ್ ಗಳನ್ನು ಸೇವ್ ಮಾಡುವುದು
ನೀವು ಯಾವಾಗಲೂ ಅಂತರ್ಜಾಲಕ್ಕೆ ಕನೆಕ್ಟ್ ಆಗಿಯೇ ಇರಲು ಸಾಧ್ಯವಾಗುವುದಿಲ್ಲ. ಆಫ್ ಲೈನ್ ನಲ್ಲಿ ಕೆಲವು ಫೈಲ್ ಗಳನ್ನು ಸೇವ್ ಮಾಡಿ ಇಡುವುದು ಸೂಕ್ತ. ಡ್ರಾಪ್ ಬಾಕ್ಸ್ ನ ಬೇಸಿಕ್ ಅಕೌಂಟನ್ನು ನೀವು ಬಳಸುತ್ತಿದ್ದರೆ, ಕೆಲವು ಫೈಲ್ ಗಳನ್ನು ಆಫ್ ಲೈನ್ ನಲ್ಲಿ ಸೇವ್ ಮಾಡಿ ಇಡಲು ಅವಕಾಶವಿರುತ್ತದೆ.
ಮೆನು ಬಟನ್ ನ್ನು ಟ್ಯಾಪ್ ಮಾಡಿ ಮತ್ತು ಫೈಲ್ ನ್ನು ವ್ಯೂ ಮಾಡಿ. ಮೇಕ್ ಅವೈಲೇಬಲ್ ಆಫ್ ಲೈನ್ ಬಟನ್ ನ್ನು ಕ್ಲಿಕ್ಕಿಸಿ ಫೈಲ್ ನ್ನು ಆಫ್ ಲೈನ್ ಬಳಕೆಗಾಗಿ ನಿಮ್ಮ ಡಿವೈಸ್ ನಲ್ಲಿ ಸೇವ್ ಮಾಡಿ ಇಟ್ಟುಕೊಳ್ಳಬಹುದು.

7. ಸ್ಟೋರೇಜ್ ಜಾಗ ಉಳಿಸಲು ಸಲೆಕ್ಟೀವ್ ಸಿಂಕ್ ಆಯ್ಕೆಯನ್ನು ಬಳಸುವಿಕೆ
ವಿಂಡೋಸ್ ಪಿಸಿ ಮತ್ತು ಮ್ಯಾಕ್ ನಲ್ಲಿ ಒಮ್ಮೆ ನೀವು ಡ್ರಾಪ್ ಬಾಕ್ಸ್ ಇನ್ಸ್ಟಾಲ್ ಮಾಡಿದ ನಂತರ, ಸೆಟ್ಟಿಂಗ್ಸ್ ಗೆ ತೆರಳಿ ಮತ್ತು ಸೆಲೆಕ್ಟೀವ್ ಸಿಂಕ್ ಆಯ್ಕೆಯನ್ನು ಗುರುತಿಸಿ. ಈ ವೈಶಿಷ್ಟ್ಯತೆ ಬಳಸಿ ಸಂಪೂರ್ಣ ಡ್ರಾಪ್ ಬಾಕ್ಸ್ ಅಕೌಂಟ್ ನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಸಿನ್ಕ್ರನೈಜ್ ಮಾಡುವ ಬದಲು ಕೆಲವೇ ಫೈಲ್ ಅಥವಾ ಫೋಲ್ಡರ್ ನ್ನು ಸಿನ್ಕ್ರನೈಜ್ ಮಾಡಿ ಸ್ಟೋರೇಜ್ ನ್ನು ಉಳಿಸಲು ಸಾಧ್ಯವಾಗುತ್ತದೆ.

8. ನೇರವಾಗಿ ಡೌನ್ ಲೋಡ್ ಲಿಂಕ್ ಸಿಗಲು URL ಬದಲಿಸುವುದು
ಫೈಲ್ ಗಳನ್ನು ಪ್ರಿವ್ಯೂ ಮಾಡಲು ಇಲ್ಲಿ ಕೆಲವು ಸರಳವಾಗಿ ಹ್ಯಾಕ್ ಮಾಡುವ ಅವಕಾಶವಿದೆ. ಯಾವಾಗಲೂ ಸೈನ್ ಇನ್ ಕೇಳುವ ಡ್ರಾಪ್ ಬಾಕ್ಸ್ ನ ಯುಆರ್ ಎಲ್ ನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಸುಲಭದಲ್ಲಿ ಬಳಕೆ ಮಾಡಬಹುದು. ಶೇರ್ ಆಗಿರುವ "dl=0" ಇರುವ ಜಾಗದಲ್ಲಿ "dl=1" ನ್ನು ಮಾಡಿ. ರಿಲೋಡ್ ಮಾಡಿದರೆ ಫೈಲ್ ಇನ್ಸ್ ಟೆಂಟ್ಲಿ ಡೌನ್ ಲೋಡ್ ಆಗುತ್ತದೆ.

9. 2 ಫ್ಯಾಕ್ಟರ್ ದೃಢೀಕರಣ ಮತ್ತು ಪಿನ್ ಲಾಕ್ ಬಳಸುವಿಕೆ
ನೀವು ಕೇವಲ ಸಿಂಕ್ರನೈಸೇಷನ್ ಗೆ ಮಾತ್ರವೇ ಅಲ್ಲದೆ ಪಾಸ್ ವರ್ಡ್ ಬಳಸಿ ಪ್ರೊಟೆಕ್ಟ್ ಮಾಡಲು ಬಯಸುತ್ತೀರಾದರೆ ಅದಕ್ಕೂ ಕೂಡ ಅವಕಾಶವಿದೆ. ಕಾಂಪ್ಲೆಕ್ಸ್ ಆಗಿರುವ ಪಾಸ್ ವರ್ಡ್ ಗಳನ್ನೂ ಬಳಸಬಹುದು ಅಥವಾ 2 ಫ್ಯಾಕ್ಟರ್ ದೃಢೀಕರಣಕ್ಕೂ ಇದರಲ್ಲಿ ಅವಕಾಶವಿರುತ್ತದೆ (ಎಸ್ಎಂಎಸ್ ಓಟಿಪಿ ಅಥವಾ ಗೂಗಲ್ ದೃಢೀಕರಣ ಬಳಸಬಹುದು)
Personal Settings > Security ತೆರಳಿ ಮತ್ತು Two-step Verification ನ್ನು ಟರ್ನ್ ಆನ್ ಮಾಡಿ.
ನಿಮ್ಮ ಐಫೋನ್ ಅಥವಾ ಆಂಡ್ರಾಯ್ಡ್ ಫೋನ್ ನಲ್ಲಿ ಡ್ರಾಪ್ ಬಾಕ್ಸ್ ನ ಸೆಟ್ಟಿಂಗ್ಸ್ ಸೆಕ್ಷನ್ ಗೆ ತೆರಳಿ ಲಾಕ್ ವೈಶಿಷ್ಟ್ಯತೆಯನ್ನು ಅನೇಬಲ್ ಮಾಡಿ. ಪಿನ್ ಲಾಕ್ ನ್ನು ಕೂಡ ನೀವು ಬಳಕೆ ಮಾಡಬಹುದು ಅಥವಾ ಫಿಂಗರ್ ಪ್ರಿಂಟ್,ಐಫೋನ್ ಎಕ್ಸ್ ನಲ್ಲಿ ಫೇಸ್ ಐಡಿ ಕೂಡ ಬಳಕೆ ಮಾಡಲು ಅವಕಾಶವಿದೆ.

10. ಡಾಕ್ಯುಮೆಂಟ್ ಗಳನ್ನು ನೇರವಾಗಿ ಡ್ರಾಪ್ ಬಾಕ್ಸ್ ಗೆ ಸ್ಕ್ಯಾನ್
ನೀವು ಥರ್ಡ್ ಪಾರ್ಟಿ ಸ್ಕ್ಯಾನರ್ ಆಪ್ ಗಳಾದ ಕ್ಯಾನ್ ಸ್ಕ್ಯಾನರ್ ಗಳನ್ನು ಬಳಸುತ್ತಿದ್ದರೂ ಪರವಾಗಿಲ್ಲ. ಡ್ರಾಪ್ ಬಾಕ್ಸ್ ಮೂಲಕ ನಿಮ್ಮ ಐಫೋನ್ ಅಥವಾ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ನೀವು ನೇರವಾಗಿ ಸ್ಕ್ಯಾನ್ ಆಗಿರುವ ಡಾಕ್ಯುಮೆಂಟ್ ಗಳನ್ನು ಅಪ್ ಲೋಡ್ ಮಾಡಬಹುದು ಅದಕ್ಕಾಗಿ ಮೂರನೇ ವ್ಯಕ್ತಿಗಳನ್ನು ಬಳಸುವ ಅಗತ್ಯವಿರುವುದಿಲ್ಲ.
ಆಪ್ ನ್ನು ತೆರೆದ ನಂತರ, + ಬಟನ್ ನ್ನು ಟ್ಯಾಪ್ ಮಾಡಿ ಮತ್ತು ಸ್ಕ್ಯಾನ್ ಡಾಕ್ಯುಮೆಂಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಸ್ಕ್ರೀನ್ ನಲ್ಲಿ ಬರುವ ಪ್ರಾಂಮ್ಟ್ ಗಳನ್ನು ಅನುಸರಿಸಿ ಮತ್ತು ಸ್ಕ್ಯಾನ್ಡ್ ಡಾಕ್ಯುಮೆಂಟ್ ಆಗಿ ಕನ್ವರ್ಟ್ ಮಾಡಿ. ನಂತರ ನೀವೆಲ್ಲಿ ಸೇವ್ ಮಾಡಬೇಕು ಅಂದುಕೊಂಡಿದ್ದೀರೋ ಅದನ್ನು ಆಯ್ಕೆ ಮಾಡಿ.


Click it and Unblock the Notifications








