ನಿಮ್ಮ ಮೊಬೈಲ್‌ ಇಂಟರ್ನೆಟ್ ದುಡ್ಡು ನುಂಗುತ್ತಿದೆಯೇ?

By Shwetha
|

ಭಾರತದಲ್ಲಿ ವೈರ್‌ಲೆಸ್ ಒದಗಿಸುವವರು ಹೆಚ್ಚುವರಿ ವೇಗವುಳ್ಳ ಡೇಟಾ ಆಫರ್‌ಗಳನ್ನು ಒದಗಿಸುತ್ತಿದ್ದಾರೆ. 2ಜಿ, 3ಜಿ ಮತ್ತು 4ಜಿ ಸೌಲಭ್ಯವನ್ನು ಕೂಡ ಇದು ಒಳಗೊಂಡಿದೆ. ಆದರೆ ಈ ಪ್ಲಾನ್‌ಗಳ ದರದಲ್ಲಿ ಹೆಚ್ಚುವರಿಯನ್ನು ನಮಗೆ ಕಾಣಬಹುದಾಗಿದೆ.

ಆದರೆ ಈ ಸೌಲಭ್ಯಗಳನ್ನು ಹೆಚ್ಚು ಅರ್ಥಪೂರ್ಣವಾಗಿ ಬಳಸಿಕೊಂಡಾಗ ಮಾತ್ರವೇ ಇದು ತಿಂಗಳ ಕೊನೆಯಲ್ಲಿ ಭರ್ಜರಿಯಾಗಿ ಬರುವ ವೆಚ್ಚವನ್ನು ಕಡಿತಗೊಳಿಸಬಲ್ಲುದು. ಅದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ. ನೀವು ಸರಳವಾಗಿ ಕೆಲವೊಂದು ಹಂತಗಳನ್ನು ಅನುಸರಿಸಿದಲ್ಲಿ ಈ ಬಿಲ್‌ಗಳ ಹೊರೆಯಿಂದ ನಿಮಗೆ ತಪ್ಪಿಸಿಕೊಳ್ಳಬಹುದು ಅದು ಹೇಗೆ ಎಂಬುದನ್ನು ನೋಡೋಣ.

ವೈಫೈ ಬಳಕೆ

ವೈಫೈ ಬಳಕೆ

ನಿಮ್ಮ ಮೊಬೈಲ್ ಇಂಟರ್ನೆಟ್ ಬಳಕೆಯನ್ನು ಕಡಿಮೆ ಮಾಡುವಲ್ಲಿ ವೈಫೈ ಸಂಪರ್ಕ ಸಹಕಾರಿಯಾಗಿದೆ. ನಿಮ್ಮ ಟೆಲಿಕಾಮ್ ಆಪರೇಟರ್‌ಗಳು ಒದಗಿಸುವ ಇಂಟರ್ನೆಟ್ ದರಕ್ಕಿಂತ ವೈಫೈ ಬಳಕೆ ಕಡಿಮೆ ವೆಚ್ಚದ್ದಾಗಿರುತ್ತದೆ.

ಡಿಸ್ಕೌಂಟ್

ಡಿಸ್ಕೌಂಟ್

ವಿನಾಯಿತಿ ಕೊಡುಗೆಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಹಬ್ಬದ ಸಮಯಗಳಲ್ಲಿ ಇಂಟರ್ನೆಟ್ ಪ್ರೊವೈಡರ್‌ಗಳು ಒದಗಿಸುವ ಆಫರ್‌ಗಳನ್ನು ನಿಮಗೆ ಬಳಸಿಕೊಂಡು ವಿನಾಯಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ವಯರ್ಡ್ ಕನೆಕ್ಶನ್ ಅನ್ನು ಈ ಕಂಪೆನಿಗಳು ಒದಗಿಸುತ್ತಿವೆ ಎಂದಾದಲ್ಲಿ ಅದನ್ನು ಪಡೆದುಕೊಂಡು ನಂತರ ವೈಫೈಗೆ ಸಂಪರ್ಕ ಪಡಿಸಿಕೊಳ್ಳಬಹುದಾಗಿದೆ.

ಲೆಕ್ಕಾಚಾರ

ಲೆಕ್ಕಾಚಾರ

ನಿಮ್ಮ ಇಂಟರ್ನೆಟ್ ಬಳಕೆಯನ್ನು ಲೆಕ್ಕಾಚಾರ ಮಾಡಿ. ನಿಮಗೆ ಬರುವ ಇಮೇಲ್‌ಗಳ ಲೆಕ್ಕಾಚಾರ ನಿಮಗಿರಲಿ ಅಂತೆಯೇ ವೀಡಿಯೊ ಡೌನ್‌ಲೋಡ್ ಮತ್ತು ಸ್ಟ್ರೀಮಿಂಗ್ ಮಾಹಿತಿ ನಿಮ್ಮೊಂದಿಗಿರಲಿ. ಇದನ್ನು ನೋಡಿಕೊಂಡು ನಿಮಗೆ ಹೊಂದುವ ಡೇಟಾ ಯೋಜನೆಗಳನ್ನು ಆಯ್ದುಕೊಳ್ಳಬಹುದಾಗಿದೆ.

ಗಡಿಬಿಡಿ ಬೇಡ

ಗಡಿಬಿಡಿ ಬೇಡ

ಮಾರುಕಟ್ಟೆಗೆ ವೇಗವಾದ ಇಂಟರ್ನೆಟ್ ಸೇವೆ ಬಂದಿದೆ ಎಂದರೆ ಅದನ್ನು ಖರೀದಿಸಲು ಗಡಿಬಿಡಿ ಮಾಡದಿರಿ. ಬೇರೆಯವರ ಪ್ರತಿಕ್ರಿಯೆಗಳನ್ನು ಅರಿತುಕೊಂಡು ನಂತರ ಮುಂದುವರೆಯಿರಿ. ಕಾಯುವುದು ಉತ್ತಮವಾಗಿರುತ್ತದೆ.

ಬಳಕೆಯನ್ನು ಮಾನಿಟರ್ ಮಾಡಿ

ಬಳಕೆಯನ್ನು ಮಾನಿಟರ್ ಮಾಡಿ

ಇಂಟರ್ನೆಟ್ ಡೇಟಾವನ್ನು ಅತಿಯಾಗಿ ಬಳಸುತ್ತಿದ್ದೀರಾ? ಕೂಡಲೇ ನಿಮ್ಮ ಇಂಟರ್ನೆಟ್ ಬಳಕೆಯ ಮೇಲೆ ಕಣ್ಣಿಡಿ. ಪ್ರೊವೈಡರ್‌ಗಳು ಒದಗಿಸಿರುವುದಕ್ಕಿಂತ ಅತಿಯಾಗಿ ಇಂಟರ್ನೆಟ್ ಬಳಕೆ ಮಾಡುತ್ತಿದ್ದೀರಾ ಎಂಬುದನ್ನು ಗಮನಿಸಿ.

ಪ್ರಿಪೈಡ್ ಇಂಟರ್ನೆಟ್ ಬಳಕೆ

ಪ್ರಿಪೈಡ್ ಇಂಟರ್ನೆಟ್ ಬಳಕೆ

ನೀವು ಎಷ್ಟು ಬಳಕೆ ಮಾಡುತ್ತಿದ್ದೀರಿ ಎಂಬುದನ್ನು ಪ್ರಿಪೈಡ್ ಇಂಟರ್ನೆಟ್ ಯೋಜನೆಯಿಂದ ತಿಳಿದುಕೊಳ್ಳಬಹುದಾಗಿದೆ. ಅತಿಯಾಗಿ ಇಂಟರ್ನೆಟ್ ಬಳಸುವುದರ ಮೇಲೆ ಇದು ನಿಯಂತ್ರಣವನ್ನು ಹೇರುತ್ತದೆ.

ಫ್ಯಾಮಿಲಿ ಪ್ಲಾನ್

ಫ್ಯಾಮಿಲಿ ಪ್ಲಾನ್

ನಿಮ್ಮ ಡೇಟಾವನ್ನು ಉಳಿಸುವಲ್ಲಿ ಫ್ಯಾಮಿಲಿ ಪ್ಲಾನ್ ಯೋಜನೆಗಳು ಸಹಕಾರಿಯಾಗಲಿವೆ. ನೀವು ಮತ್ತು ನಿಮ್ಮ ಕುಟುಂಬ ಸದಸ್ಯರು ಈ ಯೋಜನೆಯನ್ನು ಆಯ್ಕೆಮಾಡಿಕೊಂಡಲ್ಲಿ ಡೇಟಾ ದರಗಳ ಮೇಲೆ ಉಳಿಸಬಹುದು.

ಒಂದೇ ಟೆಲಿಕಾಮ್ ಕ್ಯಾರಿಯರ್

ಒಂದೇ ಟೆಲಿಕಾಮ್ ಕ್ಯಾರಿಯರ್

ಒಂದೇ ಟೆಲಿಕಾಮ್ ಕ್ಯಾರಿಯರ್ ಅಡಿಯಲ್ಲಿ ನೀವಿರುವುದು ದರವನ್ನು ಉಳಿಸುವಲ್ಲಿ ನೆರವಾಗಲಿದೆ. ಇದು ದರ ವೆಚ್ಚಗಳು ಮತ್ತು ಡೇಟಾ ವೆಚ್ಚಗಳನ್ನು ಒಳಗೊಂಡಿರುತ್ತವೆ.

ಬಂಡಲ್ ಪ್ಲಾನ್

ಬಂಡಲ್ ಪ್ಲಾನ್

ನಿಮ್ಮ ಯೋಜನೆ ಬಂಡಲ್ ಆಫರ್‌ಗಳೊಂದಿಗೆ ಬಂದಿದೆ ನಿಜಕ್ಕೂ ಇದು ಉತ್ತಮ. ಕರೆಗಳು, ಡೇಟಾ ಯೋಜನೆಗಳು, ರಾತ್ರಿ ಕರೆಗಳು, ಎಸ್‌ಎಮ್‌ಎಸ್ ಇವುಗಳನ್ನು ಇದು ಒಳಗೊಂಡಿರುತ್ತದೆ.

ಎಸ್‌ಎಮ್‌ಎಸ್‌ಗಳನ್ನು ನಿವಾರಿಸಿಕೊಳ್ಳಿ

ಎಸ್‌ಎಮ್‌ಎಸ್‌ಗಳನ್ನು ನಿವಾರಿಸಿಕೊಳ್ಳಿ

ಉಚಿತ ಮೆಸೆಂಜರ್ ಅಪ್ಲಿಕೇಶನ್‌ಗಳು ಹಣ ಉಳಿಸುವಲ್ಲಿ ನೆರವನ್ನು ನೀಡಲಿದೆ.

Best Mobiles in India

English summary
People do receive inflated bills in our country, but here are some money saving tips on how you can save money on both Calls and Data on your phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X