ಸ್ಮಾರ್ಟ್‌ಫೋನ್ ಭದ್ರತೆಗೆ ಟಾಪ್ ಹತ್ತು ಸಲಹೆಗಳು

Written By:

ಸ್ಮಾರ್ಟ್‌ಫೋನ್‌ಗಳ ಬಳಕೆಯನ್ನು ಹೇಗೆ ನಾವು ಆನಂದದಿಂದ ನಿರ್ಬಹಿಸುತ್ತೇವೋ ಅದೇ ರೀತಿ ಅವುಗಳ ಜಾಗರೂಕತೆಯನ್ನು ಗಮನವಿಟ್ಟು ಮಾಡಬೇಕಾಗುತ್ತದೆ. ಯಾವುದೇ ಆನ್‌ಲೈನ್ ಅಥವಾ ಆಫ್‌ಲೈನ್ ವಿಪತ್ತುಗಳಿಂದ ನಮ್ಮ ಫೋನ್‌ಗಳನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯ ಮತ್ತು ಕಟ್ಟುನಿಟ್ಟಾದ ಕ್ರಮವಾಗಿದೆ. ನೀವು ಈ ದಿಸೆಯಲ್ಲಿ ಅಜಾಗರೂಕರಾಗಿದ್ದೀರಿ ಎಂದಾದಲ್ಲಿ ನಿಮ್ಮ ಫೋನ್‌ನೊಂದಿಗೆ ಅತ್ಯಮೂಲ್ಯ ಮಾಹಿತಿಗಳು ಮತ್ತು ಸಂಪರ್ಕಗಳನ್ನು ನೀವು ಕಳೆದುಕೊಂಡಂತೆ. ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳು, ನಿಮ್ಮ ಸಿಂಕ್ ಫೈಲ್‌ಗಳು, ಮುಖ್ಯ ಡಾಕ್ಯುಮೆಂಟ್‌ಗಳು, ನಿಮ್ಮ ಇಮೇಲ್‌ಗಳು, ಫೋಟೋಗಳು ಮತ್ತು ಸಂದೇಶಗಳ ಜಾಗರೂಕತೆಯನ್ನು ನೀವು ನಿಮ್ಮ ಫೋನ್‌ನೊಂದಿಗೆ ಮಾಡಬೇಕಾಗುತ್ತದೆ.

ಇದನ್ನೂ ಓದಿ: ಆಂಡ್ರಾಯ್ಡ್ ಫೋನ್ ಬಳಕೆಗೆ ಸಹಕಾರಿ ಈ ಸಲಹೆಗಳು

ಹಾಗಿದ್ದರೆ ನಿಮ್ಮ ಫೋನ್‌ನಲ್ಲಿರುವ ಈ ಮಾಹಿತಿಗಳ ಜೋಪಾನವನ್ನು ಮಾಡುವುದು ಹೇಗೆ ಎಂಬುದರ ವಿವರಕ್ಕಾಗಿ ಕೆಳಗಿನ ಸ್ಲೈಡ್‌ಗಳು ನಿಮಗೆ ಸಹಕಾರಿಯಾಗಲಿದ್ದು ಇದನ್ನು ಮಾಡುವ ವಿಧಾನವನ್ನು ಸಂಪೂರ್ಣ ಮಾಹಿತಿಯೊಂದಿಗೆ ನಾವು ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮೆಲ್ಲಾ ಪಾಸ್‌ವರ್ಡ್‌ಗಳನ್ನು ಉಳಿಸದಿರಿ

#1

ಹೆಚ್ಚಿನ ಮೊಬೈಲ್ ಬಳಕೆದಾರರು ತಮ್ಮ ಪಾಸ್‌ವರ್ಡ್‌ಗಳನ್ನು ಆನ್‌ಲೈನ್ ಸೇವೆಗಳು ಮತ್ತು ಸೈಟ್‌ಗಳಲ್ಲಿ ಫೋನ್‌ಗಳಲ್ಲಿ ಉಳಿಸುತ್ತಾರೆ. ಆಗಂತುಕರ ಕೈಗೆ ಈ ಮಾಹಿತಿಗಳು ದೊರಕಿದಾಗ ಏನು ಸಂಭವಿಸಬಹುದು ಎಂಬುದನ್ನು ಆಲೋಚಿಸದೇ ಇಂತಹ ಕೆಲಸಕ್ಕೆ ಕೈ ಹಾಕುತ್ತಾರೆ. ಆದ್ದರಿಂದ ನಿಮ್ಮ ಅತೀ ಅಗತ್ಯದ ಮತ್ತು ಅತ್ಯಮೂಲ್ಯ ದಾಖಲೆಗಳ ಪಾಸ್‌ವರ್ಡ್‌ಗಳನ್ನು ಮೊಬೈಲ್‌ಗಳಲ್ಲಿ ಉಳಿಸದಿರಿ.

ಆಂಡ್ರಾಯ್ಡ್ ಇನ್‌ ಬಿಲ್ಟ್ ಭದ್ರತೆ

#2

ನೀವು ಜೆಲ್ಲಿಬೀನ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ಸ್ಕ್ರೀನ್ ಲಾಕ್ ಮತ್ತು ಎನ್‌ಕ್ರಿಪ್ಶನ್ ಅನ್ನು ಬಳಸಿ ಫೋನ್ ಭದ್ರತೆಯನ್ನು ಮಾಡಬಹುದು. ಪಾಸ್‌ವರ್ಡ್, ಪಿನ್, ಪ್ಯಾಟ್ರನ್, ಫೇಸ್ ಅನ್‌ಲಾಕ್ ಮೊದಲಾದ ವಿವಿಧ ಸ್ಕ್ರೀನ್ ಲಾಕ್‌ಗಳನ್ನು ಬಳಸಿ.

ನಿಮ್ಮ ಅಪ್ಲಿಕೇಶನ್ ಲಾಕ್ ಮಾಡಿ

#3

ನೀವು ಮಾತ್ರವೇ ನೋಡುವ ಅತೀ ಪ್ರಮುಖವಾದ ಖಾಸಗಿ ಮಾಹಿತಿಗಳನ್ನು ನಿಮ್ಮ ಫೋನ್ ಒಳಗೊಂಡಿದ್ದಾಗ ಅಪ್ಲಿಕೇಶನ್‌ಗಳನ್ನು ಲಾಕ್ ಮಾಡುವುದು ಮುಖ್ಯ. ಆಪ್ ಲಾಕ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ನಿಮ್ಮ ಫೋನ್ ಅಪ್ಲಿಕೇಶನ್‌ಗಳನ್ನು ಲಾಕ್ ಮಾಡಬಹುದು.

ಅಪ್ಲಿಕೇಶನ್ ಅನುಮತಿ ಪ್ರಾಮುಖ್ಯತೆ

#4

ಗೂಗಲ್ ಪ್ಲೇನಿಂದ ಅಪ್ಲಿಕೇಶನ್ ಅನ್ನು ನೀವು ಸ್ಥಾಪಿಸುವ ಮುನ್ನ, ಅಪ್ಲಿಕೇಶನ್ ಅನುಮತಿಯನ್ನು ಒಳಗೊಂಡಿರುವ ಪಾಪ್ ಅಪ್ ಅನ್ನು ನಿಮಗೆ ಕಾಣಬಹುದು. ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮುನ್ನ ಈ ಅನುಮತಿಗಳನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಗೂಗಲ್ ಪ್ಲೇನಲ್ಲಿರುವ ಎಲ್ಲಾ ಅಪ್ಲಿಕೇಶನ್‌ಗಳು ಸುರಕ್ಷಿತವಾಗಿರುವುದಿಲ್ಲ ಎಂಬ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಿ.

ನಿಮ್ಮ ನೆಟ್‌ವರ್ಕ್ ಭದ್ರತೆ

#5

ಆದಷ್ಟು ಸಾರ್ವಜನಿಕ ವೈಫೈ ಅನ್ನು ನಿಮ್ಮ ಫೋನ್‌ನಲ್ಲಿ ಬಳಸುವುದನ್ನು ಕಡಿಮೆ ಮಾಡಿ. ಅದರಲ್ಲೂ ಬ್ಯಾಂಕಿಂಗ್ ವ್ಯವಹಾರಗಳನ್ನು ನೀವು ನಡೆಸುತ್ತಿದ್ದೀರಾ ಎಂದಾದಲ್ಲಿ ಹೆಚ್ಚಿನ ಭದ್ರತೆಯನ್ನು ಅನುಸರಿಸುವುದು ಅತೀ ಮುಖ್ಯವಾಗಿದೆ.

ಮೊಬೈಲ್ ಭದ್ರತೆ ಅಪ್ಲಿಕೇಶನ್ ಬಳಸಿ

#6

ನಿಮ್ಮ ಹೆಚ್ಚಿನ ಭದ್ರತಾ ಸಮಸ್ಯೆಗಳನ್ನು ಇಂತಹ ಅಪ್ಲಿಕೇಶನ್ ಸುಲಭವಾಗಿ ನಿರ್ವಹಿಸುತ್ತದೆ. ಅವಾಸ್ತ್ ಮೊಬೈಲ್ ಸೆಕ್ಯುರಿಟಿ ಮೊದಲಾದ ಅಪ್ಲಿಕೇಶನ್‌ಗಳನ್ನು ಬಳಸಿ.

ಬಹು ಬಳಕೆದಾರ ಖಾತೆ

#7

ನೀವು ಟ್ಯಾಬ್ಲೆಟ್ ಅನ್ನು ಹೊಂದಿದ್ದೀರಿ ಎಂದಾದಲ್ಲಿ ನಿಮ್ಮ ಸಹೋದರಿಯರು, ಮಕ್ಕಳು, ಪತ್ನಿ ಮುಂತಾದವರ ಬಹು ಖಾತೆಗಳಿಗೆ ನಿಮ್ಮ ಮುಖ್ಯ ಮಾಹಿತಿಗಳನ್ನು ಹಂಚಿಕೊಳ್ಳಿ. ಇದರಿಂದ ನಿಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳಬಹುದು.

ನಿಮ್ಮ ಡೇಟಾದ ಬ್ಯಾಕಪ್ ಸಿದ್ಧಪಡಿಸಿ

#8

ನಿಮ್ಮೆಲ್ಲಾ ಮಾಹಿತಿಗಳ ಇನ್ನೊಂದು ಪ್ರತಿಯನ್ನು ನೀವು ಬೇರೆ ಕಡೆ ಹೊಂದಿರುವುದು ಅಗತ್ಯವಾಗಿದೆ. ಇದರಿಂದ ನಿಮ್ಮ ಫೋನ್ ಕಳುವಾದ ಅಥವಾ ನಷ್ಟಗೊಂಡ ಸಂದರ್ಭದಲ್ಲಿ ಮುಖ್ಯ ಮಾಹಿತಿಗಳಿಗೆ ಯಾವುದೇ ಹಾನಿಯುಂಟಾಗುವುದಿಲ್ಲ.

ಕಳೆದು ಹೋದ ಡಿವೈಸ್ ಅನ್ನು ಟ್ರ್ಯಾಕ್ ಮಾಡುವುದು

#9

ನೀವು ಈಗಗಲೇ ಬ್ಯಾಕಪ್ ಅನ್ನು ಹೊಂದಿದ್ದರೂ ನಿಮ್ಮ ಕಳೆದು ಹೋಗಿರುವ ಡಿವೈಸ್ ಅನ್ನು ಪಡೆದುಕೊಳ್ಳುವುದು ನಿಮ್ಮ ಆವಶ್ಯಕತೆಯಾಗಿರುತ್ತದೆ. ಜಿಪಿಎಸ್ ಮೂಲಕ ನಿಮ್ಮ ಫೋನ್ ಅನ್ನು ಟ್ರ್ಯಾಕ್ ಮಾಡಬಹುದು. ಡಿವೈಸ್ ಟ್ರ್ಯಾಕಿಂಗ್ ಅಪ್ಲಿಕೇಶನ್‌ಗಳು ಸಾಕಷ್ಟಿದ್ದು ಇವುಗಳ ಮೂಲಕ ನಿಮ್ಮ ಫೋನ್‌ ಇರುವ ಸ್ಥಳವನ್ನು ಪತ್ತೆ ಹಚ್ಚಬಹುದು.

ರಿಮೋಟ್ ವೈಫ್ ಸಕ್ರಿಯಗೊಳಿಸಿ

#10

ನೀವು ಫೋನ್ ಟ್ರ್ಯಾಕ್ ಮಾಡುವ ಅಪ್ಲಿಕೇಶನ್ ಅನ್ನು ಪಡೆದುಕೊಂಡಿದ್ದರೂ ನಿಮ್ಮ ಡಿವೈಸ್‌ಗೆ ಬೇಕಾಗಿರುವ ರಿಮೋಡ್ ವೈಫ್ ಅನ್ನು ಸಕ್ರಿಯಗೊಳಿಸಬೇಕಾಗುತ್ತದೆ.
3CX Mobile Device Manager ಎಂಬ ಉಚಿತ ರಿಮೋಟ್ ವೈಪ್ ನಿಮ್ಮ ಕಳೆದು ಹೋಗಿರುವ ಫೋನ್‌ನ ಜೀವರಕ್ಷಕನಾಗಿ ಕೆಲಸ ಮಾಡುತ್ತದೆ. ಇಲ್ಲಿ ನೀವು ಸೈನ್ ಇನ್ ಮಾಡಬೇಕಾಗುತ್ತದೆ ಮತ್ತು ಖಾತೆಯನ್ನು ರಚಿಸಬೇಕಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 Usefull tips To Tighten Security On Your Android Device..
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot