ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಈ 10 ಮಾರ್ಗಗಳಿಂದ ಸೂಪರ್ ಸ್ಪೀಡ್ ಆಗುತ್ತದೆ..!
ಆಂಡ್ರಾಯ್ಡ್ ಫೋನ್ ಗಳು ಇತ್ತೀಚೆಗೆ ಪ್ರೊಸೆಸರ್., RAM, ಮತ್ತು ಅಧಿಕ ಸ್ಟೋರೆಜ್ ಸಾಮರ್ಥ್ಯದಿಂದಾಗಿ ಫಾಸ್ಟ್ ಆಗಿ ವರ್ಕ್ ಆಗುತ್ತವೆ. ಆದರೆ ನಮ್ಮಲ್ಲಿ ಹಲವರು ಸ್ಮಾರ್ಟ್ ಫೋನ್ ನಲ್ಲಿ cached ಡಾಟಾ, ಅಗತ್ಯವಿಲ್ಲದ ಫೈಲ್ ಗಳು, ಫೋಲ್ಡರ್ ಗಳನ್ನು ತುಂಬಿಸಿಕೊಂಡು ಅದು ವೇಗವಾಗಿ ಕೆಲಸ ಮಾಡದಂತೆ ಮಾಡಿಕೊಂಡು ಬಿಡುತ್ತಾರೆ.
ಅದಕ್ಕೆ ಪರಿಹಾರವಾಗಿ ಹೆಚ್ಚಿನವರು ಆಂಡ್ರಾಯ್ಡ್ ಆಂಟಿ ವೈರಸ್ ಆಪ್ ನ್ನು ಡೌನ್ ಲೋಡ್ ಮಾಡಿಕೊಂಡು ಬಿಡುತ್ತಾರೆ. ಒಂದೇ ಟ್ಯಾಪ್ ನಲ್ಲಿ ಸುಲಭದ ಪರಿಹಾರ ಇದು ಎಂದು ಅವರು ಅಂದುಕೊಂಡಿರುತ್ತಾರೆ. ಆದರೆ ನಾವು ನಿಮಗೆ ಇದನ್ನು ಹೊರತು ಪಡಿಸಿ ಅನೇಕ ಹಲವು ವಿಧಾನಗಳಿಂದಾಗಿ ನಿಮ್ಮ ಸ್ಮಾರ್ಟ್ ಪೋನ್ ನ್ನು ಇನ್ನಷ್ಟು ವೇಗ ಗೊಳಿಸಿಕೊಳ್ಳಬಹುದು ಎಂದು ಹೇಳಿದರೆ ನಿಮಗೆ ನಂಬಿಕೆ ಇದಿಯಾ...? ಹಾಗಾದರೆ ಏನು ಮಾಡಬೇಕು ಎಂದು ಕೇಳುತ್ತಿದ್ದೀರಾ.. ಮುಂದೆ ಓದಿ..


1. ಹೋಮ್ ಸ್ಕ್ರೀನ್ ಸ್ವಚ್ಛಗೊಳಿಸಿ
ಹೋಮ್ ಸ್ಕ್ರೀನ್ ನಲ್ಲಿ ತುಂಬಿಸಿಕೊಳ್ಳುವುದು ಸರಿಯಲ್ಲ. ಪ್ರತಿಯೊಂದು ಆಪ್ ಗಳ ಶಾರ್ಟ್ ಕಟ್ ಗಳನ್ನು ಹೋಮ್ ಸ್ಕ್ರೀನ್ ನಲ್ಲಿ ತುಂಬಿಸಿಕೊಳ್ಳಬೇಡಿ. ವಾತಾವರಣ, ವಾರ್ತೆಗಳು ಇವೆಲ್ಲವೂ ಯಾವಾಗಲೂ ಅಪ್ ಡೇಟ್ ಆಗುತ್ತಲೇ ಇರುವ ಆಪ್ ಗಳಾಗಿರುತ್ತವೆ. ಇವುಗಳು ಹೋಮ್ ಸ್ಕ್ರೀನ್ ನಲ್ಲಿ ಇರುವುದರಿಂದ ನೀವು ಹೋಮ್ ಸ್ಕ್ರೀನ್ ಅನ್ ಲಾಕ್ ಮಾಡಿದಾಗಲೆಲ್ಲ ಇವು ಅಪ್ ಡೇಟ್ ಆಗಬೇಕಾಗುತ್ತದೆ. ಆಗ ಸಹಜವಾಗಿ ನಿಮ್ಮ ಫೋನ್ ಸ್ಲೋ ಆದಂತೆ ನಿಮಗೆ ಭಾಸವಾಗುತ್ತೆ. ಆದಷ್ಟು ಹೋಮ್ ಸ್ಕ್ರೀನ್ ನಲ್ಲಿ ಇವುಗಳನ್ನು ಇಟ್ಟುಕೊಳ್ಳಬೇಡಿ.

2. ಡಾಟಾ ಸೇವರ್ ಮೋಡ್ ಎನೇಬಲ್ ಮಾಡಿ
ಕ್ರೋಮ್ ಬ್ರೌಸರ್ ನಲ್ಲಿ ಡಾಟಾ ಸೇವರ್ ಮೋಡ ನ್ನು ಅನೇಬಲ್ ಮಾಡಿ ಇರಿ. ಯಾಕೆಂದರೆ ಇದು ನಿಮ್ಮ ಪೇಜನ್ನು ಕಂಪ್ರೆಸ್ ಮಾಡುತ್ತದೆ. ಕಡಿಮೆ ಡಾಟಾದಲ್ಲಿ ಪೇಜ್ ಗಳು ಲೋಡ್ ಆಗಿ ಫಾಸ್ಟ್ ಆಗುತ್ತದೆ. ಆದ್ರೆ ಸ್ವಲ್ಪ ಇಮೇಜ್ ಮತ್ತು ವೀಡಿಯೋ ಕ್ವಾಲಿಟಿಯಲ್ಲಿ ನೀವು ಸ್ವಲ್ಪ ಕಾಂಪ್ರಮೈಜ್ ಆಗಬೇಕಾಗುತ್ತದೆ ಮತ್ತು ಡಾಟಾ ಸ್ಪೀಡ್ ನಲ್ಲೂ ಸ್ವಲ್ಪ ನೀವು ಸಹಿಸಿಕೊಳ್ಳಬೇಕಾಗಬಹುದು.

3. ಆಟೋ ಸಿಂಕ್ ಆಫ್ ಮಾಡಿ
ಇತ್ತೀಚೆಗಿನ ಹೆಚ್ಚಿನ ಸ್ಮಾರ್ಟ್ ಫೋನ್ ಗಳಲ್ಲಿ ಸೆಟ್ಟಿಂಗ್ಸ್ ನಲ್ಲಿ ಈ ಆಯ್ಕೆ ಇದ್ದೇ ಇರುತ್ತೆ. ನೀವು ಜಸ್ಟ್ ಅಲ್ಲಿಗೆ ಹೋದರೆ ಸಾಕು, ನಿಮ್ಮ ಆಪ್ ಗಳು ಬ್ಯಾಕ್ ಗ್ರೌಂಡ್ ನಲ್ಲಿ ಹೇಗೆ ಆಟೋ ಸಿನ್ಕ್ರೋನೈಜೇಷನ್ ಆಗಬೇಕು ಎಂಬುದು ತಿಳಿಯುತ್ತದೆ.ನೀವು ಯಾವ ಆಪ್ ಗೆ ಆಟೋ ಸಿನ್ಕ್ರೋನೈಜೇಷನ್ ಬೇಕಾಗಿಲ್ಲ ಎಂದು ಬಯಸುತ್ತೀರೋ ಅದನ್ನು ಸ್ವಿಚ್ ಆಪ್ ಮಾಡಬಹುದು.

4. ಟಾಸ್ಕ್ ಕಿಲ್ಲರ್ಸ್ ಗಳು ನಿಮ್ಮ ಆಪ್ ಗಳನ್ನು ನಿಧಾನಗೊಳಿಸುತ್ತೆ
ಎಸ್ , ನೀವು ಇದನ್ನು ಕೇಳಿರಬಹುದು. ಟಾಸ್ಕ್ ಕಿಲ್ಲಿಂಗ್ ಆಪ್ ಗಳು ಆಪ್ ಆರಂಭವಾಗುವುದನ್ನು ನಿಧಾನಗೊಳಿಸುತ್ತೆ. ಇದು ಯಾಕೆಂದರೆ ಕೆಲವು ಆಪ್ ಗಳನ್ನು. ಅವು ಯಾವಾಗಲಾದರೂ ಬ್ಯಾಕ್ ಗ್ರೌಂಡ್ ನಲ್ಲಿ ಸ್ಥಗಿತಗೊಂಡರೆ ಆಂಡ್ರಾಯ್ಡ್ ಗಳು ಮ್ಯಾನೇಜ್ ಮಾಡುತ್ತಿರುತ್ತೆ, ಯಾವಾಗ ಟಾಸ್ಕ್ ಕಿಲ್ಲರ್ಸ್ ಗಳು ಬ್ಯಾಕ್ ಗ್ರೌಂಡ್ ನಲ್ಲಿ ರನ್ ಆಗುವ ಆಪ್ ನ್ನು ಶಟ್ಡೌನ್ ಮಾಡಿದಾಗ, ಪುನಃ ಮೊದಲಿನಿಂದ ಬೂಟ್ ಮಾಡಲು ಸಮಯ ತೆಗೆದುಕೊಳ್ಳುತ್ತೆ. ಕೇವಲ ಸಮಯ ಮಾತ್ರವಲ್ಲ ಹೆಚ್ಚು ಬ್ಯಾಟರಿಯನ್ನು ಬಯಸುತ್ತೆ.

5. ಸ್ಮಾರ್ಟ್ ಫೋನ್ ಪ್ರೊಸೆಸರ್ ಅನ್ನು ಓವರ್ ಲಾಕ್ ಮಾಡಿ
ಒಂದು ವೇಳೆ ನಿಮಗೆ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನನ್ನು ರೂಟ್ ಮಾಡುವುದು ಹೇಗೆ ಎಂದು ತಿಳಿದಿದ್ದರೆ ಮತ್ತು ನಿಮ್ಮಲ್ಲಿ ಒಳ್ಳೆಯ ಓವರ್ ಕ್ಲಾಕಿಂಗ್ ಆಪ್ ಇದ್ದರೆ, snappier UI ಅನುಭವ ಪಡೆಯಲು ನೀವು ಸಿದ್ಧರಾಗಿರಿ.,. ಇಂತಹ ಕೆಲವು ವಿಚಾರಗಳ ನಿಮ್ಮ ಮೊಬೈಲನ್ನು ಹೆಚ್ಚು ಬಿಸಿಯಾಗುವಂತೆ ಮಾಡಬಹುದು ಮತ್ತು ಬೇಗನೆ ಬ್ಯಾಟರಿ ಖಾಲಿಯಾಗುವಂತೆಯೂ ಮಾಡಬಹುದು.

6. cached ಡಾಟಾ ಕ್ಲೀನ್ ಮಾಡಿ
ಇದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ಮೆಥೆಡ್ ಆಗಿದೆ. ನಿಮ್ಮ ಫೋನಿನಲ್ಲಿರುವ ಜಂಕ್ ಫೈನ್ ಗಳನ್ನು ರಿಮೂವ್ ಮಾಡಿ,. ಇದು ನಿಮ್ಮ ಸಾರ್ಟ್ ಫೋನ್ ಕೆಲವು ಟಾಸ್ಕ್ ಗಳನ್ನು ವೇಗವಾಗಿ ಮಾಡಲು ನೆರವು ನೀಡುತ್ತೆ. ಇದಕ್ಕಾಗಿ ನಿಮಗೆ ಹಲವು ಬಿಲ್ಟ್ ಇನ್ ಆಪ್ ಗಳು ಲಭ್ಯವಾಗುತ್ತೆ.

7. ಬ್ಯಾಕ್ ಗ್ರೌಂಡ್ ನಲ್ಲಿ ಆಪ್ಸ್ ರನ್ ಆಗುವುದನ್ನು ನಿಲ್ಲಿಸಿ
ನಿಮ್ಮ ಫೋನಿನ ಬ್ಯಾಕ್ ಗ್ರೌಂಡ್ ನಲ್ಲಿ ರನ್ ಆಗುವ ಕೆಲವು ಆಪ್ ಗಳನ್ನು ಡಿಆಕ್ಟಿವೇಟ್ ಮಾಡಿ. ನೀವು ಪದೇ ಪದೇ ಬಳಸದೇ ಇರುವ ಆಪ್ ಗಳನ್ನು ಕ್ಲಿಯರ್ ಮಾಡಿ., ಇದು RAM ನ್ನು ಫ್ರೀ ಆಗಿರುತ್ತೆ ಮತ್ತು ಪ್ರೊಸೆಸರ್ ಗೆ ಲೋಡ್ ಆಗುವುದು ತಪ್ಪುತ್ತೆ. ಇದು ಇತರೆ ಆಪ್ ಗಳು ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡುತ್ತೆಯ. ಇದಕ್ಕಾಗಿ ನಿಮಗೆ ಹಲವು ಥರ್ಡ್ ಪಾರ್ಟಿ ಆಪ್ ಗಳೂ ಕೂಡ ಲಭ್ಯವಾಗುತ್ತೆ.

8. ನಿಮ್ಮದೇ ಆದ ROM ಇನ್ಸ್ಟಾಲ್ ಮಾಡಲು ಪ್ರಯತ್ನಿಸಿ
ನೀವು ಒಂದು ವೇಳೆ ಪ್ರೊಗ್ರಾಮರ್ ಆಗಿದ್ದು, ನಿಮಗೆ ರೂಟಿಂಗ್ ನಲ್ಲಿ ಉತ್ತಮ ಅನುಭವವಿದ್ದರೆ, ಕಸ್ಟಮ್ rom ಇನ್ಸ್ಟಾಲ್ ಮಾಡಲು ಪ್ರಯತ್ನಿಸಿ. ಇದರಿಂದಾಗಿ ನೀವು ಕೇವಲ ಹೊಸ ವೈಶಿಷ್ಟ್ಯಗಳ ಬಗ್ಗೆ ಹೋಲ್ಡ್ ಇಟ್ಟುಕೊಳ್ಳುವುದು ಮಾತ್ರವಲ್ಲ, ಒಂದು ವೇಳೆ ನಿಮ್ಮ ಆಂಡ್ರಾಯ್ಡ್ ಬೆಂಬಲಿಸದೇ ಇದ್ದರೂ ಕೂಡ ಹೊಸ ಆಂಡ್ರಾಯ್ಡ್ ವರ್ಷನ್ ನಿಮಗೆ ಲಭ್ಯವಾಗುತ್ತೆ.

9. OS ಅನ್ನು ಅಪ್ ಟು ಡೇಟ್ ಇಟ್ಟಿರಿ
ನಿಮ್ಮ ಸ್ಮಾರ್ಟ್ ಫೋನ್ ಇನ್ನೂ ಕೂಡ os ಅಪ್ ಗ್ರೇಡ್ ಸೈಕಲ್ ನಲ್ಲೇ ಇದ್ದರೆ. ಲೇಟೆಸ್ಟ್ ವರ್ಷನ್ನು ಬಿಡುಗಡೆಗೊಂಡ ಕೂಡಲೇ ಅಪ್ ಡೇಟ್ ಮಾಡಿ. ಇದು ನಿಮ್ಮ ಹಳೆಯ ವರ್ಷನ್ ನ ಬಗ್ ಗಳಿಂದ ದೂರವಿರಿಸುತ್ತೆ ಮತ್ತು ಸ್ಮಾರ್ಟ್ ಫೋನ್ ನ್ನು ಹೊಸತರಂತೆ ಮಾಡ, ಹಲವು ಸಮಸ್ಯೆಗಳನ್ನು ಪರಿಹರಿಸಿ, ನಿಮಗೆ ಹೆಚ್ಚು ಆರಾಮ ಒದಗಿಸಿ, ಬಳಕೆ ಯೋಗ್ಯವಾಗುವಂತೆ ಮಾಡುತ್ತೆ.

10. ಯಾವುದೂ ವರ್ಕ್ ಆಗದೇ ಇದ್ದರೆ, ಫ್ಯಾಕ್ಟರಿ ರಿಸೆಟ್ ಮಾಡುವ ಮಾರ್ಗವಿದೆ.
ಇದು ನಿಮ್ಮ ಕೊನೆಯ ಪ್ರಯತ್ನವಾಗಬಹುದು. ನೀವು ರೂಟಿಂಗ್ ನಲ್ಲಿ ಅಪರಿಚಿತರಾಗಿದ್ದರೆ, ನಿಮ್ಮ ಆಂಡ್ರಾಯ್ಡ್ ಅಫೀಶಿಯಲ್ ಆಗಿಲ್ಲದೇ os ಅಪ್ ಡೇಟ್ ಸೈಕಲ್ ಇಲ್ಲದೇ ಇದ್ದರೆ ,ಥರ್ಡ್ ಪಾರ್ಟಿ ಆಪ್ ಗಳನ್ನು ನಿಮ್ಮ ಡಾಟಾ ಕ್ಲಿಯರೆನ್ಸ್ ಗೆ ನೀವು ಬಳಸಲು ಇಚ್ಛಿಸದೇ ಇದ್ದರೆ, ನಿಮಗಿರುವ ಕೊನೆಯ ಆಯ್ಕೆ ಫ್ಯಾಕ್ಟರಿ ರಿಸೆಟ್. ನಿಮ್ಮ ಸೆಟ್ಟಿಂಗ್ಸ್ ಪೇಜಿನಲ್ಲಿ ನೀವಿದನ್ನು ಗಮನಿಸಬಹುದು.. ಇದನ್ನು ಮಾಡುವ ಮುನ್ನ ನಿಮ್ಮ ಡಾಟಾ ಬ್ಯಾಕ್ ಅಪ್ ಪಡೆದುಕೊಂಡಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಂಡಿರಿ ಅಷ್ಟೇ..


Click it and Unblock the Notifications








