ಆಂಡ್ರಾಯ್ಡ್ ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದಾಗ ಪತ್ತೆ ಹೇಗೆ?
ನಿಮ್ಮ ಫೋನ್ ಸೈಲೆಂಟ್ ಮೋಡ್‌ನಲ್ಲಿದೆ ಆದರೆ ಇದನ್ನು ಪತ್ತೆಹಚ್ಚುವುದು ಹೇಗೆ ಎಂಬುದು ನಿಮ್ಮ ಸಮಸ್ಯೆಯಾಗಿದ್ದರೆ ಅದಕ್ಕೆ ಪರಿಹಾರ ನಮ್ಮ ಇಂದಿನ ಲೇಖನದಲ್ಲಿದೆ. ಫೋನ್ ಎಲ್ಲಿಯಾದರೂ ಇದ್ದಾಗ ಅದೂ ಧ್ವನಿ ಕೇಳುತ್ತಿದೆ ಎಂದಾದಲ್ಲಿ ಅದನ್ನು ಹೇಗಾದರೂ ಮಾಡಿ ಪತ್ತೆಹಚ್ಚಬಹುದು. ಆದರೆ ಸಂಪೂರ್ಣ ಸೈಲೆಂಟ್ ಮೋಡ್‌ನಲ್ಲಿರುವ ಡಿವೈಸ್ ಅನ್ನು ಕಂಡುಹಿಡಿಯುವುದು ಹೇಗೆ ಎಂಬುದನ್ನು ಸರಳವಾಗಿ ಕೆಲವು ಹಂತಗಳ ಮೂಲಕ ನಾವು ನೀಡಿದ್ದೇವೆ.

ಮನೆಯ ವೈಫೈ ನೆಟ್‌ವರ್ಕ್‌ಗೆ ಸಂಪರ್ಕವನ್ನು ಪಡೆದುಕೊಂಡಿದೆ
ನಿಮ್ಮ ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದಾಗ ಮನೆಯ ವೈಫೈ ನೆಟ್‌ವರ್ಕ್‌ಗೆ ಸಂಪರ್ಕವನ್ನು ಪಡೆದುಕೊಂಡಿದೆ ಎಂಬುದನ್ನು ಖಾತ್ರಿಪಡಿಸಿ.

ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಅಪ್ಲಿಕೇಶನ್
ನಿಮ್ಮ ಕಂಪ್ಯೂಟರ್‌ನಲ್ಲಿ ಯಾವುದೇ ಬ್ರೌಸರ್ ತೆರೆಯಿರಿ, ಮತ್ತು ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಅಪ್ಲಿಕೇಶನ್‌ಗೆ ಹೋಗಿ

ಜಿಮೇಲ್ ಖಾತೆ
ನಿಮ್ಮ ಜಿಮೇಲ್ ಖಾತೆಯೊಂದಿಗೆ ಲಾಗಿನ್ ಮಾಡಿ, ಆಂಡ್ರಾಯ್ಡ್ ಡಿವೈಸ್‌ನೊಂದಿಗೆ ಇದು ಸಂಯೋಗಗೊಂಡಿದೆ ಎಂಬುದು ಗಮನದಲ್ಲಿರಲಿ

ಡಿವೈಸ್‌ಗಳ ಪಟ್ಟಿ
ಲಾಗಿನ್ ಮಾಡಿದ ನಂತರ, ನಿಮ್ಮ ಖಾತೆಯೊಂದಿಗೆ ಸಂಪರ್ಕವನ್ನು ಹೊಂದಿರುವ ಡಿವೈಸ್‌ಗಳ ಪಟ್ಟಿ ಕಂಡುಬರುತ್ತದೆ.

ಕಳೆದು ಹೋಗಿರುವ ಡಿವೈಸ್ ಆರಿಸಿ
ಕಳೆದು ಹೋಗಿರುವ ಡಿವೈಸ್ ಆರಿಸಿ ಮತ್ತು ರಿಂಗ್, ಲಾಕ್, ಹಾಗೂ ಇರೇಸ್ ಆಪ್ಶನ್ ಕಾಣಸಿಗುತ್ತದೆ

ರಿಂಗ್ ಬಟನ್
ಇದೀಗ ರಿಂಗ್ ಬಟನ್ ಕ್ಲಿಕ್ ಮಾಡಿ ಮತ್ತು ದೃಢೀಕರಣ ಬಾಕ್ಸ್ ಅನ್ನು ದೃಢೀಕರಿಸಿ.


Click it and Unblock the Notifications