ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದಾಗ ಪತ್ತೆಹಚ್ಚುವುದು ಹೇಗೆ?
ನಿಮ್ಮ ಫೋನ್ ಸೈಲೆಂಟ್ ಮೋಡ್‌ನಲ್ಲಿದೆ ಆದರೆ ಇದನ್ನು ಪತ್ತೆಹಚ್ಚುವುದು ಹೇಗೆ ಎಂಬುದು ನಿಮ್ಮ ಸಮಸ್ಯೆಯಾಗಿದ್ದರೆ ಅದಕ್ಕೆ ಪರಿಹಾರ ನಮ್ಮ ಇಂದಿನ ಲೇಖನದಲ್ಲಿದೆ. ಫೋನ್ ಎಲ್ಲಿಯಾದರೂ ಇದ್ದಾಗ ಅದೂ ಧ್ವನಿ ಕೇಳುತ್ತಿದೆ ಎಂದಾದಲ್ಲಿ ಅದನ್ನು ಹೇಗಾದರೂ ಮಾಡಿ ಪತ್ತೆಹಚ್ಚಬಹುದು. ಆದರೆ ಸಂಪೂರ್ಣ ಸೈಲೆಂಟ್ ಮೋಡ್‌ನಲ್ಲಿರುವ ಡಿವೈಸ್ ಅನ್ನು ಕಂಡುಹಿಡಿಯುವುದು ಹೇಗೆ ಎಂಬುದನ್ನು ಸರಳವಾಗಿ ಕೆಲವು ಹಂತಗಳ ಮೂಲಕ ನಾವು ನೀಡಿದ್ದೇವೆ. ಹಾಗಿದ್ದರೆ ಆ ವಿಧಾನಗಳೇನು ಎಂಬುದನ್ನು ತಿಳಿಯಲು ಕೆಳಗಿನ ಸ್ಲೈಡರ್ ಕ್ಲಿಕ್ ಮಾಡಿ.

#1
ನಿಮ್ಮ ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದಾಗ ಮನೆಯ ವೈಫೈ ನೆಟ್‌ವರ್ಕ್‌ಗೆ ಸಂಪರ್ಕವನ್ನು ಪಡೆದುಕೊಂಡಿದೆ ಎಂಬುದನ್ನು ಖಾತ್ರಿಪಡಿಸಿ.

#2
ನಿಮ್ಮ ಕಂಪ್ಯೂಟರ್‌ನಲ್ಲಿ ಯಾವುದೇ ಬ್ರೌಸರ್ ತೆರೆಯಿರಿ, ಮತ್ತು ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಅಪ್ಲಿಕೇಶನ್‌ಗೆ ಹೋಗಿ

#3
ನಿಮ್ಮ ಜಿಮೇಲ್ ಖಾತೆಯೊಂದಿಗೆ ಲಾಗಿನ್ ಮಾಡಿ, ಆಂಡ್ರಾಯ್ಡ್ ಡಿವೈಸ್‌ನೊಂದಿಗೆ ಇದು ಸಂಯೋಗಗೊಂಡಿದೆ ಎಂಬುದು ಗಮನದಲ್ಲಿರಲಿ

#4
ಲಾಗಿನ್ ಮಾಡಿದ ನಂತರ, ನಿಮ್ಮ ಖಾತೆಯೊಂದಿಗೆ ಸಂಪರ್ಕವನ್ನು ಹೊಂದಿರುವ ಡಿವೈಸ್‌ಗಳ ಪಟ್ಟಿ ಕಂಡುಬರುತ್ತದೆ.

#5
ಕಳೆದು ಹೋಗಿರುವ ಡಿವೈಸ್ ಆರಿಸಿ ಮತ್ತು ರಿಂಗ್, ಲಾಕ್, ಹಾಗೂ ಇರೇಸ್ ಆಪ್ಶನ್ ಕಾಣಸಿಗುತ್ತದೆ

#6
ಇದೀಗ ರಿಂಗ್ ಬಟನ್ ಕ್ಲಿಕ್ ಮಾಡಿ ಮತ್ತು ದೃಢೀಕರಣ ಬಾಕ್ಸ್ ಅನ್ನು ದೃಢೀಕರಿಸಿ.

#7
ಐಫೋನ್‌ನಲ್ಲಿ ಇದೇ ಸಮಸ್ಯೆ ಎದುರಾಯಿತು ಎಂದಾದಲ್ಲಿ ಎಂಬುದಕ್ಕೆ ಕೆಳಗಿನ ವಿಧಾನ ಅನುಸರಿಸಿ

#8
www.icloud.Com ಗೆ ಹೋಗಿ ಮತ್ತು ನಿಮ್ಮ ಖಾತೆಯೊಂದಿಗೆ ಸೈನ್ ಇನ್ ಮಾಡಿ

#9
ಫೈಂಡ್ ಮೈ ಐಫೋನ್ ಐಕಾನ್‌ಗೆ ಕ್ಲಿಕ್ ಮಾಡಿ

#10
ಕೇಂದ್ರ ಮಧ್ಯ ಭಾಗದಲ್ಲಿ "ಆಲ್ ಡಿವೈಸಸ್" ಕ್ಲಿಕ್ ಮಾಡಿ ಮತ್ತು ನೀವು ಹುಡುಕಬೇಕೆಂದಿರುವ ಕಳೆದು ಹೋಗಿರುವ ಡಿವೈಸ್ ಆಯ್ಕೆಮಾಡಿ. ಪ್ಲೇ ಸೌಂಡ್" ಬಟನ್‌ಗೆ ಕ್ಲಿಕ್ ಮಾಡಿ.

#11
ಫೋನ್ ಮನೆಯ ವೈಫೈ ಅಥವಾ 3ಜಿಯ ಸಂಪರ್ಕದಲ್ಲಿರುವಾಗ ಈ ವಿಧಾನದ ಮೂಲಕ ಸೈಲೆಂಟ್ ಮೋಡ್‌ನಲ್ಲಿರುವ ಫೋನ್ ಅನ್ನು ಪತ್ತೆಹಚ್ಚಬಹುದಾಗಿದೆ. ಗೂಗಲ್ ಡ್ಯಾಶ್‌ಬೋರ್ಡ್ ನಕ್ಷೆಯಲ್ಲಿ ಅದಕ್ಕೆ ತಿಳಿದಿರುವ ಫೋನ್ ಇರುವ ಸ್ಥಳವನ್ನು ನಿಮಗೆ ತಿಳಿಸುತ್ತದೆ. ಇದನ್ನು ಆಕ್ಟಿವೇಟ್ ಮಾಡಲು ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಸೆಕ್ಯುರಿಟಿ ಸೆಟ್ಟಿಂಗ್ಸ್ ತೆರೆಯಿರಿ ಮತ್ತು ಡಿವೈಸ್ ಮ್ಯಾನೇಜರ್ ಒತ್ತಿ.

#12
ನಿಮ್ಮ ಫೋನ್ ಇಂಟರ್ನೆಟ್‌ಗೆ ಕನೆಕ್ಟ್ ಆಗದೇ ಇದ್ದರೂ ರಿಂಗ್ ಮೈ ಡ್ರಾಯ್ಡ್ ಅಪ್ಲಿಕೇಶನ್ ಬಳಸಿಕೊಂಡು ಸೈಲೆಂಟ್ ಮೋಡ್‌ನಲ್ಲಿರುವ ಡಿವೈಸ್ ಅನ್ನು ಪತ್ತೆಹಚ್ಚಬಹುದು. ಇದನ್ನು ನಿಮ್ಮ ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಬೇಕು, ಎಸ್‌ಎಮ್‌ಎಸ್ ಸ್ವರೂಪದಲ್ಲಿ ಸೆಟ್ಟಿಂಗ್ಸ್ ಸೇವ್ ಮಾಡಿಕೊಳ್ಳಿ. ನಿಮ್ಮ ಸ್ನೇಹಿತರ ಫೋನ್ ಪಡೆದುಕೊಂಡು ಅಪ್ಲಿಕೇಶನ್‌ಗೆ ಎಸ್‌ಎಮ್‌ಎಸ್ ಕಳುಹಿಸಿ. ಒಳಬರುವ ಸಂದೇಶವನ್ನು ಅಪ್ಲಿಕೇಶನ್ ಡಿಟೆಕ್ಟ್ ಮಾಡಿ ನಿಮ್ಮ ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದರೂ ಅದು ರಿಂಗ್ ಆಗುವಂತೆ ಈ ಅಪ್ಲಿಕೇಶನ್ ಮಾಡುತ್ತದೆ. ಈ ಎಸ್‌ಎಮ್‌ಎಸ್ ಸ್ವರೂಪವನ್ನು ಗೌಪ್ಯವಾಗಿರಿಸಿಕೊಳ್ಳಿ.

#13
ಫೋನ್ ಫ್ಲೈಟ್ ಮೋಡ್‌ನಲ್ಲಿದ್ದಾಗ ನಿಮ್ಮ ಒಂದು ಚಪ್ಪಾಳೆ ಫೋನ್ ಅನ್ನು ಪತ್ತೆಹಚ್ಚಲು ನೆರವನ್ನು ನೀಡಲಿದೆ. ಕ್ಲಾಪ್ ಟು ಫೈಂಡ್ ಅಪ್ಲಿಕೇಶನ್ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿ. ಇದನ್ನು ಇನ್‌ಸ್ಟಾಲ್ ಮಾಡಿದ ಸಂದರ್ಭದಲ್ಲಿ ಅಪ್ಲಿಕೇಶನ್ ಚಪ್ಪಾಳೆ ಹೊಡೆಯಲು ನಿಮ್ಮನ್ನು ಕೇಳಬಹುದು ರಿಂಗ್, ವೈಬ್ರೇಟ್, ಫ್ಲ್ಯಾಶ್ ಲೈಟ್ ಆನ್ ಮಾಡುವುದು ಮೊದಲಾದ ಕ್ರಿಯೆಗಳನ್ನು ಅಪ್ಲಿಕೇಶನ್ ಬಳಸಿ ನಿರ್ವಹಿಸಬಹುದಾಗಿದೆ.



Click it and Unblock the Notifications








