ನಿಮ್ಮ ಸ್ಮಾರ್ಟ್‌ಫೋನ್ ಹೆಚ್ಚು ಸುರಕ್ಷಿತವಾಗಿರಲು 10 ಟಿಪ್ಸ್!

|

ಇಂದಿನ ಆನ್‌ಲೈನ್ ಯುಗದಲ್ಲಿ ಸ್ಮಾರ್ಟ್‌ಫೋನಿನ ಅಗತ್ಯ ಮತ್ತು ಬಳಕೆ ಒಂದನ್ನೊಂದು ಬೆಸೆದುಕೊಂಡಿವೆ. ಆದರೆ, ಇವೆರಡನ್ನೂ ಬೆಸೆದುಕೊಂಡಿರುವುದು ಸ್ಮಾರ್ಟ್‌ಫೋನ್ ಆಧಾರಿತ ವಂಚನೆ ಎಂಬ ಅಸ್ತ್ರ.! ಹೌದು, ನಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕ್‌ ಖಾತೆ, ಇಮೇಲ್‌ ಮುಂತಾದ ಎಲ್ಲಾ ಅತ್ಯಗತ್ಯ ಸುರಕ್ಷಿತ ದಾಖಲೆಗಳೆಲ್ಲವೂ ಈಗ ಸ್ಮಾರ್ಟ್‌ಫೋನ್‌ ಎಂಬ ಮಾಯಾ ಪೆಟ್ಟಿಗೆಯಲ್ಲಿ ಬೀಡುಬಿಟ್ಟಿವೆ. ಇದರಿಂದ ವಂಚಕರು ಸ್ಮಾರ್ಟ್‌ಫೋನಿಗೆ ಕನ್ನಹಾಕಿದರಷ್ಟೇ ಸಾಕಾಗುತ್ತದೆ.

ನಿಮ್ಮ ಸ್ಮಾರ್ಟ್‌ಫೋನ್ ಹೆಚ್ಚು ಸುರಕ್ಷಿತವಾಗಿರಲು 10 ಟಿಪ್ಸ್!

ಬ್ಯಾಂಕ್ ಖಾತೆಗಳು, ಆನ್‌ಲೈನ್ ಡೀಟೇಲ್ಸ್, ಫೋಟೊ, ವೀಡಿಯೊ, ಡಾಕ್ಯುಮೆಂಟ್‌ಗಳು ಮುಂತಾದ ಖಾಸಗಿ ಫೈಲುಗಳು ಕೂಡ ಸೇರಿಕೊಂಡು ಸ್ಮಾರ್ಟ್‌ಪೋನ್ ಈಗ ನಮ್ಮ ಪ್ರತಿರೂಪ. ಹಾಗಾಗಿ, ವಂಚಕರಿಗೆ ನಮ್ಮ ಸ್ಮಾರ್ಟ್‌ಫೋನ್ ಒಂದು ಅಸ್ತ್ರವಾಗಿ ಕಾಣುತ್ತಿದೆ. ಹಾಗೆಂದ ಮಾತ್ರಕ್ಕೆ ಅವರು ನಮ್ಮ ಸ್ಮಾರ್ಟ್‌ಫೋನ್ ಅನ್ನು ಕದಿಯಬೇಕಿಲ್ಲ. ಬದಲಾಗಿ, ನಮ್ಮ ಸ್ಮಾರ್ಟ್‌ಫೋನಿನ ಒಳಗಿರುವ ಮಾಹಿತಿಯನ್ನಷ್ಟೇ ಕದ್ದರೂ ಸಹ ಅವರು ಸುಲಭವಾಗಿ ವಂಚನೆ ನಡೆಸಿಬಿಡುತ್ತಾರೆ.

ಹಾಗಾಗಿ, ಇಂದು ಸ್ಮಾರ್ಟ್‌ಪೋನ್ ಸುರಕ್ಷತೆ ಕೂಡ ನಮ್ಮ ಮೂಲಭೂತ ಕರ್ತವ್ಯಗಳಲ್ಲಿ ಒಂದು ಎಂದೆನ್ನಬಹುದು. ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್‌ ಸುರಕ್ಷತೆಯ ಮೂಲ ವ್ಯವಸ್ಥೆ ಮತ್ತು ಅದರ ವಿಧಗಳ ಕುರಿತಾದ ಮಾಹಿತಿಗಳನ್ನು ನೀಡುವ ಪ್ರಯತ್ನ ನಮ್ಮದಾಗಿದ್ದು, ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಅಡಗಿರುವ ಸಾಮಾನ್ಯ ವೈಶಿಷ್ಟ್ಯಗಳಿಂದ ಹಿಡಿದು, ಅತ್ಯುತ್ತಮವಾಗಿರುವ ಸ್ಮಾರ್ಟ್‌ಫೋನ್ ಸುರಕ್ಷತಾ ಅಂಶಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಸುಲಭ ಪಾಸ್‌ವರ್ಡ್ ನೀಡದಿರಿ.

ಸುಲಭ ಪಾಸ್‌ವರ್ಡ್ ನೀಡದಿರಿ.

ಸುಲಭವಾಗಿ ನೆನಪಿನಲ್ಲಿರಲಿ ಎನ್ನುವ ಕಾರಣಕ್ಕೆ ಬಹಳ ಸುಲಭವಾದ ಪಾಸ್‌ವರ್ಡ್‌ನ್ನು ಬಳಸುವವರೇ ಹೆಚ್ಚಿದ್ದಾರೆ. ಇದರಿಂದ ಸೈಬರ್ ಕ್ರಿಮಿನಲ್‌ಗಳಿಗೆ ಫೋನನ್ನು ಕ್ರಾಕ್ ಮಾಡಲು ಕ್ಷಣ ಮಾತ್ರದಲ್ಲಿ ಸಾಧ್ಯವಾಗುತ್ತದೆ. ಹಾಗಾಗಿ 111111, 22222222, 33333333, 44444444, 55555555, 66666666, 77777777, 0987654321, 987654321 ಇಂತಹ ಪಾಸ್‌ವರ್ಡ್‌ ಬಳಸಬೇಡಿ.

ಮಾಲ್‌ವೇರ್‌ ಬೈಟ್ಸ್

ಮಾಲ್‌ವೇರ್‌ ಬೈಟ್ಸ್

ವಿಶ್ವದಲ್ಲಿ ಅತಿ ಹೆಚ್ಚು ಮಂದಿ ಬ್ರೌಸರ್ ಸುರಕ್ಷತೆಗಾಗಿ ಇನ್‌ಸ್ಟಾಲ್ ಮಾಡಿಕೊಂಡಿರುವ ಟೂಲ್‌ಬಾರ್‌ಎಕ್ಸ್‌ಟೆನ್ಷನ್ಸ್ ಮಾಲ್‌ವೇರ್‌ ಬೈಟ್ಸ್ (Malwarebytes Anti-Exploit)ವೈರಸ್‌ ಮತ್ತು ಇತರೆ ಸೈಬರ್‌ ದಾಳಿಗಳಿಂದ ರಕ್ಷಣೆ ಒದಗಿಸುತ್ತಿದೆ. ಆದರೆ, ಟ್ರಯಲ್ ವರ್ಷನ್‌ನಲ್ಲಿರುವ ಪಾಪ್‌-ಅಪ್ ಬ್ಲಾಕರ್‌ಗಳು ಅನಿಮೇಟೆಡ್ ಮತ್ತು ಫ್ಲೋಟಿಂಗ್‌ ಆಡ್‌ಗಳನ್ನು ತಡೆಯಲಾರವು.

ನಿಮ್ಮ ಓಎಸ್ ನವೀಕರಿಸುತ್ತಿರಿ.

ನಿಮ್ಮ ಓಎಸ್ ನವೀಕರಿಸುತ್ತಿರಿ.

ನಿಮ್ಮ ಫೋನಿನ ಆಪರೇಟಿಂಗ್ ಸಿಸ್ಟಮ್ ಮತ್ತು ಅಪ್ಲಿಕೇಶನ್ ನವೀಕರಣಗಳನ್ನು ನಿರ್ಲಕ್ಷಿಸುವುದರಿಂದ ಹ್ಯಾಕರ್ ದಾಳಿಗೆ ತುತ್ತಾಗಬಹುದು. ಏಕೆಂದರೆ, ಹ್ಯಾಕರ್‌ಗಳಿಗೆ ದೋಷಗಳನ್ನು ಹೇಗೆ ಗುರುತಿಸುವುದು ಮತ್ತು ಬಳಸಿಕೊಳ್ಳುವುದು ತಿಳಿದಿರುತ್ತದೆ. ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನನ್ನು ನಿಯಮಿತವಾಗಿ ನವೀಕರಿಸುತ್ತಿದ್ದರೆ ಸಿಸ್ಟಮ್ ದೌರ್ಬಲ್ಯಗಳನ್ನು ನಿವಾರಿಸಬಹುದು.

 ಪಾಸ್‌ವರ್ಡ್ ಕದಿಯಲ್ಪಟ್ಟಿದೆಯಾ ತಿಳಿಯಿರಿ.

ಪಾಸ್‌ವರ್ಡ್ ಕದಿಯಲ್ಪಟ್ಟಿದೆಯಾ ತಿಳಿಯಿರಿ.

ನಿಮ್ಮ ಪಾಸ್‌ವರ್ಡ್ ಕದಿಯಲ್ಪಟ್ಟಿದೆಯಾ ಅಥವಾ ಇಲ್ಲವಾ ತಿಳಿಯೋದು ಹೇಗೆ ಎಂಬ ಗೊಂದಲ ನಿಮ್ಮನ್ನು ಕಾಡುತ್ತಿದ್ದರೆ, ನಿಮ್ಮ ಈ ಸಮಸ್ಯೆಗೆ ಪರಿಹಾರವಿದೆ. ಪಾಸ್ ಪ್ರೊಟೆಕ್ಟ್ ಎಂಬ ಪ್ಲಗ್ ಇನ್‌ನಲ್ಲಿ ನೀವು ನೀಡಿದ ಈ ಪಾಸ್ ವರ್ಡ್ ಬಳಸುವುದು ನಿಮಗೆ ಹಿತವಲ್ಲದಿದ್ದರೆ ಡಾಟಾ ಬ್ರೀಚ್ ನಲ್ಲಿ ಈ ಪಾಸ್‌ವರ್ಡ್ ಗೋಚರಿಸಿರುವ ಬಗ್ಗೆ ಸಂದೇಶ ನೀಡುತ್ತದೆ.

ಆಪ್ ಡೌನ್‌ಲೋಡ್ ಹುಷಾರು.

ಆಪ್ ಡೌನ್‌ಲೋಡ್ ಹುಷಾರು.

ಗೂಗಲ್ ಆಪ್‌ಸ್ಟೋರ್‌ನಲ್ಲಿರುವ ಆಪ್‌ಗಳ ಬಗ್ಗೆ ಎಚ್ಚರವಿರಲಿ. ಏಕೆಂದರೆ ಆಪ್‌ಸ್ಟೋರ್‌ನಲ್ಲಿರುವ ಶೇಕಡ 3 ಪರ್ಸೆಂಟ್ ಆಪ್‌ಗಳು ನಂಬಿಕೆಗೆ ಅರ್ಹವಾಗಿಲ್ಲ. ಆದರೆ, ಗೂಗಲ್ ಮಾತ್ರ ಇಂತಹ ಆಪ್‌ಗಳನ್ನು ಕಂಡುಹಿಡಿದು ನಿಷೇಧಿಸಲು ಸಾಧ್ಯವಿಲ್ಲ. ಹಾಗಾಗಿ, ಯಾವುದೇ ಆಪ್ ಡೌನ್‌ಲೋಡ್ ಮಾಡಬೇಕಾದರೆ ನೀವೆ ಎಚ್ಚರಿಕೆಯಿಂದರಬೇಕು..

ಇ-ಮೇಲ್ ಲಿಂಕ್ ಕ್ಲಿಕ್ ಮಾಡದಿರಿ.

ಇ-ಮೇಲ್ ಲಿಂಕ್ ಕ್ಲಿಕ್ ಮಾಡದಿರಿ.

ಯಾವುದೋ ಗೊತ್ತಿಲ್ಲದ ಇ-ಮೇಲ್ ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮನ್ನು ಸೈಬರ್ ಕ್ರಿಮಿನಲ್‌ಗಳು ಸಂಪರ್ಕಿಸಲು ಸಾಧ್ಯ. ಇದರಿಂದ ನಿಮ್ಮ ಮಾಹಿತಿ ಅವರ ಪಾಲಾಗುವುದು ಕ್ಷಣಮಾತ್ರದಲ್ಲಿ ಸಾಧ್ಯ. ಹಾಗಾಗಿ, ಅಪರಿಚಿತರು ಕಳುಹಿಸಿರುವ ತಿಳಿಯದ ಇ-ಮೇಲ್ ಲಿಂಕ್ ಕ್ಲಿಕ್ ಮಾಡದಿರಿ ಎಂದು ಗೂಗಲ್ ಹೇಳಿದೆ.

ಪೋರ್ನ್ ನೋಡುವಾಗ ಎಚ್ಚರ!

ಪೋರ್ನ್ ನೋಡುವಾಗ ಎಚ್ಚರ!

ಜನರೆ ಮುಗಿಬಿದ್ದು ಭೇಟಿ ನೀಡುತ್ತುರವ ವೆಬ್‌ಸೈಟ್‌ಗಳೆಂದರೆ ಅವು ಪಾರ್ನ್‌ಸೈಟ್. ಇದನ್ನೇ ಎನ್‌ಕ್ಯಾಶ್ ಮಾಡಿಕೊಂಡು ಜನರಿಗೆ ಮೋಸಗೊಳಿಸುವ ಸಾಧ್ಯತೆ ಹೆಚ್ಚು. ಕೆಲವೊಂದು ಪೋರ್ನ್‌ಸೈಟ್‌ಳನ್ನು ಬಿಟ್ಟರೆ, ಉಳಿದ ಬಹುತೇಕ ಪಾರ್ನ್‌ಸೈಟ್‌ಗಳು ಮೋಸದ ಜಾಲದಲ್ಲಿ ತೊಡಗಿವೆ ಹುಷಾರು.

ಪ್ರೈವೇಟ್/ ಪೋರ್ನ್ ವಿಂಡೋ?

ಪ್ರೈವೇಟ್/ ಪೋರ್ನ್ ವಿಂಡೋ?

ಇಂಟರ್‌ನೆಟ್ ಬಳಕೆದಾರರ ಖಾಸಾಗಿತನವನ್ನು ಕಾಪಾಡುವ ವ್ಯವಸ್ಥೆಗೆ ಪ್ರೈವೇಟ್/ ಪೋರ್ನ್ ವಿಂಡೋ ಎಂದು ಕರೆಯುತ್ತಾರೆ. ಪ್ರೈವೇಟ್/ ಪೋರ್ನ್ ವಿಂಡೋ ತೆರೆದು ಇಂಟರ್‌ನೆಟ್ ಬಳಕೆ ಮಾಡಿದರೆ ನಿಮ್ಮ ಜಾಲತಾಣವನ್ನು ಇನ್ನೊಬ್ಬರು ನೋಡಲು ಸಾಧ್ಯವಿಲ್ಲ. ಅಂದರೆ ಗೂಗಲ್ ಕೂಡ ನಿಮ್ಮನ್ನು ಟ್ರ್ಯಾಕ್ ಮಾಡಲು ಸಾಧ್ಯವಿಲ್ಲಾ.

ಸಾಮಾನ್ಯ ವೈಶಿಷ್ಟ್ಯಗಳು!

ಸಾಮಾನ್ಯ ವೈಶಿಷ್ಟ್ಯಗಳು!

ನಮ್ಮ ಸ್ಮಾರ್ಟ್‌ಫೋನಿನಲ್ಲಿಯೇ ಸ್ಕ್ರೀನ್ ಲಾಕ್‌ ಮಾಡಲು ಪಿನ್‌, ಪಾಸ್‌ವರ್ಡ್‌, ಪ್ಯಾಟ್ರಾನ್, ಫಿಂಗರ್‌ಪ್ರಿಂಟ್‌ ಮುಂತಾದ ಸ್ಮಾರ್ಟ್‌ಫೋನ್ ಅನ್‌ಲಾಕಿಂಗ್‌ ಮುಂತಾದ ತಂತ್ರಜ್ಞಾನ ವೈಶಿಷ್ಟ್ಯಗಳು ಇವೆ. ಇದು ಹೆಚ್ಚಿನವರಿಗೆ ತಿಳಿದಿದೆಯಾದರೂ, ಹೆಚ್ಚಿನ ಮಾಹಿತಿ ಜೊತೆಗೆ ಈ ಮಾಹಿತಿಗಳನ್ನು ಸಹ ಮತ್ತೊಮ್ಮೆ ತಿಳಿಸಿಕೊಡುವುದರಲ್ಲಿ ತಪ್ಪೇನಿಲ್ಲ ಅಲ್ಲವೇ.?

'ಸೆಕ್ಯುರಿಟಿ ಆಂಡ್‌ ಲೊಕೇಶನ್‌'!

'ಸೆಕ್ಯುರಿಟಿ ಆಂಡ್‌ ಲೊಕೇಶನ್‌'!

ನಿಮ್ಮ ಸ್ಮಾರ್ಟ್‌ಫೋನ್ ತೆರೆದರೆ ಸೆಟ್ಟಿಂಗ್ಸ್ ತೆರೆದರೆ, 'ಸೆಕ್ಯುರಿಟಿ ಆಂಡ್‌ ಲೊಕೇಶನ್‌' ಎಂಬ ವಿಭಾಗವಿದೆ. 'ಡಿವೈಸ್‌ ಸೆಕ್ಯುರಿಟಿ' ಎಂಬಲ್ಲಿ 'ಸ್ಕ್ರೀನ್ ಲಾಕ್‌' ವಿಭಾಗಕ್ಕೆ ಹೋದರೆ, ಸ್ಕ್ರೀನ್ ಲಾಕ್‌ ಬೇಡ, ಸ್ವೈಪ್, ಎಂಬ ಆಯ್ಕೆಗಳಿರುತ್ತವೆ. ಇವುಗಳಿಂದ ಫೋನ್ ಲಾಕ್ ರಕ್ಷಣೆ ಸಾಧ್ಯವಿಲ್ಲದಿದ್ದರೂ, ಪಿನ್‌, ಪಾಸ್‌ವರ್ಡ್‌, ಪ್ಯಾಟರ್ನ್, ಫಿಂಗರ್‌ಪ್ರಿಂಟ್‌ ಆಯ್ಕೆಗಳು ನಿಮಗೆ ಸಹಾಯಕ.

Most Read Articles
Best Mobiles in India

English summary
Most people are guilty of postponing or ignoring operating system updates and app updates, but doing so on a regular basis can open you up to a data breach. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more