ಸ್ಮಾರ್ಟ್‌ಫೋನ್‌ ಬಳಸುವಾಗ ಈ ರೀತಿ ಮಾಡಲೇಬೇಡಿ..! ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ..!

By Avinash
|

ಸ್ಮಾರ್ಟ್‌ಫೋನ್‌ಗಳು ಮಾನವನ ಸದ್ಯದ ಅಗತ್ಯಗಳಾಗಿವೆ. ದಿನದಿಂದ ದಿನಕ್ಕೆ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ನಿಮ್ಮ ನಮ್ಮೆಲ್ಲರ ಬಳಿ ಸ್ಮಾರ್ಟ್‌ಫೋನ್ ಇದ್ದೇ ಇದೆ. ಸ್ಮಾರ್ಟ್‌ಫೋನ್ ಇಲ್ಲದ ಸದ್ಯದ ಜಗತ್ತನ್ನು ಊಹಿಸಲು ಅಸಾಧ್ಯವಾಗಿದೆ. ಆದರೆ, ಸ್ಮಾರ್ಟ್‌ಫೋನ್‌ ಅಥವಾ ಮೊಬೈಲ್‌ ಬಳಸುವಾಗ ನಾವು ಅನೇಕ ಪ್ರಮಾದಗಳನ್ನು ಎಸಗುತ್ತಿದ್ದೇವೆ. ಇದರಿಂದ ನಮ್ಮ ಜೀವಕ್ಕೆ ಕುತ್ತು ಬಂದರೂ ಬರಬಹುದು.

ಸ್ಮಾರ್ಟ್‌ಫೋನ್‌ ಬಳಸುವಾಗ ಈ ರೀತಿ ಮಾಡಲೇಬೇಡಿ..! ಇಲ್ಲದಿದ್ದರೆ ಅಪಾಯ ಖಂಡಿತ..!

ಹೌದು, ಇತ್ತೀಚೆಗೆ ತಾನೇ ಮಲೇಷಿಯಾದ ಒಬ್ಬ ಸಿಇಒ ಸ್ಮಾರ್ಟ್‌ಫೋನ್‌ ಬ್ಲಾಸ್ಟ್‌ ಆಗಿ ತೀರಿಕೊಂಡಿದ್ದು ಗೊತ್ತೆ ಇದೆ. ಅದಲ್ಲದೇ ಪಕ್ಕದ ಆಂಧ್ರಪ್ರದೇಶದಲ್ಲಿ ಬಾಲಕ ಸ್ಮಾರ್ಟ್‌ಫೋನ್‌ನಲ್ಲಿ ಹೆಡ್‌ಫೋನ್ ಹಾಖಿಕೊಂಡು ಹಾಡು ಕೇಳುತ್ತಿರುವಾಗ ವಿದ್ಯುತ್ ಸಂಚರಿಸಿ ಮೃತಪಟ್ಟಿದ್ದು ಕಣ್ಣ ಮುಂದೆಯೇ ಇದೆ. ಆದ್ದರಿಂದ ಇಂತಹ ಅವಘಡಗಳನ್ನು ತಪ್ಪಿಸಲು ಒಂದಿಷ್ಟು ಜಾಗ್ರತೆಯನ್ನು ಅನುಸರಿಸಿ ನಿಮ್ಮ ಪ್ರೀತಿ ಪಾತ್ರರಿಗಾಗುವ ನಷ್ಟ ತಪ್ಪಿಸಿ...

ನಿಮ್ಮ ಸ್ಮಾರ್ಟ್‌ಫೋನ್ ಒವರ್‌ಚಾರ್ಜ್‌ ಮಾಡಬೇಡಿ

ನಿಮ್ಮ ಸ್ಮಾರ್ಟ್‌ಫೋನ್ ಒವರ್‌ಚಾರ್ಜ್‌ ಮಾಡಬೇಡಿ

ಅನೇಕ ಗಂಟೆಗಳ ಕಾಲ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವ ಅಭ್ಯಾಸವನ್ನು ಬಿಟ್ಟು ಬೀಡಿ. ಒವರ್‌ಚಾರ್ಜ್‌ ಮಾಡುವುದರಿಂದ ಸ್ಮಾರ್ಟ್‌ಫೋನ್ ಹೆಚ್ಚು ಬಿಸಿಯಾಗುತ್ತದೆ. ಸಂಪೂರ್ಣವಾಗಿ ಸ್ಮಾರ್ಟ್‌ಫೋನ್ ಚಾರ್ಜ್ ಆದ ತಕ್ಷಣ ಚಾರ್ಜರ್‌ ಅನ್‌ಪ್ಲಗ್‌ ಮಾಡುವುದನ್ನು ಮರೆಯಬೇಡಿ.

ಶರ್ಟ್‌ ಜೇಬಲ್ಲಿ ಸ್ಮಾರ್ಟ್‌ಫೋನ್ ಇಟ್ಟುಕೊಳ್ಳಬೇಡಿ

ಶರ್ಟ್‌ ಜೇಬಲ್ಲಿ ಸ್ಮಾರ್ಟ್‌ಫೋನ್ ಇಟ್ಟುಕೊಳ್ಳಬೇಡಿ

ಅನೇಕ ಪರಿಣಿತರು ಶರ್ಟ್‌ ಜೇಬಲ್ಲಿ ಸ್ಮಾರ್ಟ್‌ಫೋನ್ ಇಟ್ಟುಕೊಳ್ಳಬೇಡಿ ಎಂದು ಹೇಳುತ್ತಾರೆ. ಏಕೆಂದರೆ ಸ್ಮಾರ್ಟ್‌ಫೋನ್ ತರಂಗಗಳಿಂದ ಹೃದಯದ ಒತ್ತಡ ಹೆಚ್ಚಾಗುತ್ತದೆ. ಅನೇಕ ಆರೋಗ್ಯ ಕಾರಣಗಳಿಂದ ಶರ್ಟ್‌ ಜೇಬಲ್ಲಿ ಸ್ಮಾರ್ಟ್‌ಫೋನ್ ಇಟ್ಟುಕೊಳ್ಳುವುದನ್ನು ಬಿಡಿ.

ಚಾರ್ಜ್‌ ಮಾಡುತ್ತಿರುವಾಗ ಇಯರ್‌ಫೋನ್ ಹಾಕಿ ಸಂಗೀತ ಕೇಳಬೇಡಿ

ಚಾರ್ಜ್‌ ಮಾಡುತ್ತಿರುವಾಗ ಇಯರ್‌ಫೋನ್ ಹಾಕಿ ಸಂಗೀತ ಕೇಳಬೇಡಿ

ಇತ್ತೀಚೆಗೆ ಈ ಬಗ್ಗೆ ಅನೇಕ ಸುದ್ದಿಗಳನ್ನು ಓದಿದ್ದಿರಿ, ಸ್ಮಾರ್ಟ್‌ಫೋನ್‌ನ್ನು ಚಾರ್ಜ್‌ ಹಾಕಿ ಇಯರ್‌ಫೋನ್‌ನಿಂದ ಹಾಡುಗಳನ್ನು ಕೇಳುವುದರಿಂದ ವಿದ್ಯುತ್‌ ಸಂಚರಿಸುವುದಕ್ಕೆ ಅವಕಾಶ ಉಂಟಾಗುತ್ತದೆ. ಈ ವರ್ಷ ಈ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಸಾವುಗಳಾಗಿರುವುದನ್ನು ನೋಡಬಹುದು. ಆದ್ದರಿಂದ ಚಾರ್ಜಿಂಗ್ ಸಮಯದಲ್ಲಿ ಇಯರ್‌ಫೋನ್ ಹಾಕಿ ಸಂಗೀತ ಕೇಳುವ ಅಭ್ಯಾಸವಿದ್ದರೆ ಬಿಟ್ಟುಬಿಡಿ.

ಸೂರ್ಯನ ನೇರ ಕಿರಣಗಳಿಗೆ ನಿಮ್ಮ ಸ್ಮಾರ್ಟ್‌ಫೋನ್ ಒಡ್ಡಬೇಡಿ

ಸೂರ್ಯನ ನೇರ ಕಿರಣಗಳಿಗೆ ನಿಮ್ಮ ಸ್ಮಾರ್ಟ್‌ಫೋನ್ ಒಡ್ಡಬೇಡಿ

ನಿಮ್ಮ ಸ್ಮಾರ್ಟ್‌ಫೋನ್‌ನ್ನು ಸೂರ್ಯನ ನೇರ ಕಿರಣಗಳು ಬೀಳುವ ಅಥವಾ ಅಧಿಕ ಉಷ್ಣಾಂಶವಿರುವ ಪ್ರದೇಶದಲ್ಲಿ ಇಡಬೇಡಿ. ಚಾರ್ಜಿಂಗ್ ಸಮುಯದಲ್ಲಂತೂ ಈ ಪ್ರಮಾದವನ್ನು ಎಸಗಬೇಡಿ. ಇದರಿಂದ ಫೋನ್ ಹೆಚ್ಚು ಬಿಸಿಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ 0 ದಿಂದ 45 ಡಿಗ್ರಿ ಸೆಂಟಿಗ್ರೆಡ್ ಉಷ್ಣಾಂಶದಲ್ಲಿ ಸ್ಮಾರ್ಟ್‌ಫೋನ್ ಇಡಬಹುದು.

ನಿಮ್ಮ ಸ್ಮಾರ್ಟ್‌ಫೋನ್ ಹತ್ತಿರದಲ್ಲಿ ಮಲಗಬೇಡಿ

ನಿಮ್ಮ ಸ್ಮಾರ್ಟ್‌ಫೋನ್ ಹತ್ತಿರದಲ್ಲಿ ಮಲಗಬೇಡಿ

ಎಲ್ಲರೂ ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ ಪಕ್ಕದಲ್ಲಿಟ್ಟುಕೊಂಡು ಮಲಗುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ, ಈ ಅಭ್ಯಾಸ ಖಂಡಿತವಾಗಿಯೂ ಸರಿಯಲ್ಲ. ಇದಕ್ಕಿಂತ ತಲೆದಿಂಬಿನ ಕೆಳಗೆ ಫೋನ್‌ ಇಟ್ಟು ಮಲಗುವುದು ಇನ್ನು ಕೆಟ್ಟದ್ದಾಗಿದೆ. ಈ ಅಭ್ಯಾಸ ಕೇವಲ ಅಪಾಯಕಾರಿ ಅಷ್ಟೇ ಅಲ್ಲ. ನಿಮ್ಮ ಮೆದುಳಿನ ಜತೆ ಸ್ಮಾರ್ಟ್‌ಫೋನ್ ತರಂಗಗಳು ಸಮ್ಮಿಲಿನಗೊಂಡು ನಿಮ್ಮ ನಿದ್ದೆಯನ್ನು ಕೆಡಿಸುತ್ತದೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.

ಸ್ಮಾರ್ಟ್‌ಫೋನ್‌ನ್ನು ಸಮನಾಂತರವಲ್ಲದ ಜಾಗದಲ್ಲಿ ಚಾರ್ಜ್‌ ಹಾಕಬೇಡಿ

ಸ್ಮಾರ್ಟ್‌ಫೋನ್‌ನ್ನು ಸಮನಾಂತರವಲ್ಲದ ಜಾಗದಲ್ಲಿ ಚಾರ್ಜ್‌ ಹಾಕಬೇಡಿ

ಬಹಳಷ್ಟು ಜನ ಸಮನಾಂತರ ಜಾಗದಲ್ಲಿ ಚಾರ್ಜ್‌ ಹಾಕುವುದರಿಂದ ಯಾವುದೇ ತೊಂದರೆಯಿಲ್ಲ ಎಂದು ಅದನ್ನೇ ಮುಂದುವರೆಸುತ್ತಿದ್ದಾರೆ. ಅದಲ್ಲದೇ ದಿಂಬಿನ ಕೆಳಗೆ ಸ್ಮಾರ್ಟ್‌ಫೋನ್ ಚಾರ್ಜ್‌ ಹಾಕುವುದನ್ನು ನೋಡಬಹುದು. ಇದರಿಂದ ಸ್ಮಾರ್ಟ್‌ಫೋನ್ ಹೆಚ್ಚು ಬಿಸಿಯಾಗಿ ಬ್ಲಾಸ್ಟ್‌ ಆಗುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಸ್ಮಾರ್ಟ್‌ಫೋನ್‌ನ್ನು ಸಮನಾಂತರ ಸ್ಥಳದಲ್ಲಿಯೇ ಚಾರ್ಜ್‌ ಹಾಕಿ.

ಸ್ಮಾರ್ಟ್‌ಫೋನ್ ಮೇಲೆ ಹೆಚ್ಚಿನ ಒತ್ತಡ ಹಾಕಬೇಡಿ

ಸ್ಮಾರ್ಟ್‌ಫೋನ್ ಮೇಲೆ ಹೆಚ್ಚಿನ ಒತ್ತಡ ಹಾಕಬೇಡಿ

ಸ್ಮಾರ್ಟ್‌ಫೋನ್ ಮೇಲೆ ಒತ್ತಡ ಹಾಕುವುದನ್ನು ತಪ್ಪಿಸಿ. ಇದರಿಂದ ಸ್ಮಾರ್ಟ್‌ಫೋನ್ ಹೆಚ್ಚು ಬಿಸಿಯಾಗಿ ಹಾಳಾಗಬಹುದು. ಬ್ಯಾಗ್‌ನಲ್ಲಿ ಅಥವಾ ಜೇಬಲ್ಲಿ ಮೊಬೈಲ್ ಇಡುವಾಗ ಭಾರದ ವಸ್ತುಗಳನ್ನು ಕೆಳಗಿಟ್ಟು, ಮೊಬೈಲ್ ಮೇಲ್ಭಾಗದಲ್ಲಿಡಿ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್ ಮೇಲೆ ಒತ್ತಡ ಬೀಳುವುದು ತಪ್ಪುತ್ತದೆ.

ಪವರ್‌ ಸ್ಟ್ರೀಪ್‌ ಎಕ್ಸಟೆನ್ಷನ್ ಅಥವಾ ಮಲ್ಟಿ ಪ್ಲಗ್‌ನಲ್ಲಿ ಚಾರ್ಜ್‌ ಹಾಕಬೇಡಿ

ಪವರ್‌ ಸ್ಟ್ರೀಪ್‌ ಎಕ್ಸಟೆನ್ಷನ್ ಅಥವಾ ಮಲ್ಟಿ ಪ್ಲಗ್‌ನಲ್ಲಿ ಚಾರ್ಜ್‌ ಹಾಕಬೇಡಿ

ನಿಮ್ಮ ಸ್ಮಾರ್ಟ್‌ಫೋನ್‌ನ್ನು ಮುಂಜಾಗ್ರತೆಯ ಸಲುವಾಗಿ ಯಾವುದೇ ಪವರ್‌ಸ್ಟ್ರೀಪ್, ಎಕ್ಸಟೆನ್ಷನ್‌, ಮಲ್ಟಿ ಪ್ಲಗ್‌ನಲ್ಲಿ ಚಾರ್ಜ್ ಹಾಕಬೇಡಿ. ಏಕೆಂದರೆ, ಯಾವುದಾದರೂ ಸಾಕೇಟ್‌ ಕೆಟ್ಟಿದ್ದರೆ ನಿಮ್ಮ ಸ್ಮಾರ್ಟ್‌ಫೋನ್ ಸಹ ಕೆಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ ನೇರವಾದ ಪ್ಲಗ್‌ನಲ್ಲಿಯೇ ಚಾರ್ಜ್‌ ಹಾಕಿ.

ಅನಧಿಕೃತ ಸರ್ವಿಸ್ ಸೆಂಟರ್‌ಗಳಲ್ಲಿ ರಿಪೇರಿ ಮಾಡಿಸಬೇಡಿ

ಅನಧಿಕೃತ ಸರ್ವಿಸ್ ಸೆಂಟರ್‌ಗಳಲ್ಲಿ ರಿಪೇರಿ ಮಾಡಿಸಬೇಡಿ

ಇದನ್ನು ಮಾತ್ರ ನೀವು ಫಾಲೋ ಮಾಡಲೇಬೇಕು. ಯಾವಾಗಲೂ ನಿಮ್ಮ ಸ್ಮಾರ್ಟ್‌ಫೋನ್‌ನ್ನು ಅಧಿಕೃತ ಸರ್ವಿಸ್ ಸೆಂಟರ್‌ಗಳಲ್ಲಿಯೇ ರಿಪೇರಿ ಮಾಡಿಸಿ. ಯಾಕೆಂದರೆ ಅಧಿಕೃತ ಸರ್ವಿಸ್ ಸೆಂಟರ್‌ಗಳಲ್ಲಿ ಸ್ಮಾರ್ಟ್‌ಫೋನ್‌ ಸರ್ಕ್ಯೂಟರಿ ಹಾಗೂ ನೈಜ ಭಾಗಗಳಿಗೆ ಹಾನಿ ಆಗುವುದಿಲ್ಲ. ಅದಲ್ಲೇ ಅನಧಿಕೃತ ಸರ್ವಿಸ್‌ ಸೆಂಟರ್‌ಗಳು ನಿಮ್ಮ ಮಾಹಿತಿಯನ್ನು ಕದಿಯಬಹುದು ಅಥವಾ ನಿಮಗೆ ಗೊತ್ತಿಲ್ಲದೆ ಯಾವುದಾದರೂ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿ ನಿಮ್ಮನ್ನು ತೊಂದರೆಗೆ ಸಿಲುಕಿಸುವ ಸಾಧ್ಯತೆ ಹೆಚ್ಚಿರುತ್ತದೆ.

ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್‌ ಮಾಡಲು ಕನಿಷ್ಟ ಗುಣಮಟ್ಟದ ಅಡಾಪ್ಟರ್‌ ಬಳಸಬೇಡಿ

ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್‌ ಮಾಡಲು ಕನಿಷ್ಟ ಗುಣಮಟ್ಟದ ಅಡಾಪ್ಟರ್‌ ಬಳಸಬೇಡಿ

ನಿಮ್ಮ ಸ್ಮಾರ್ಟ್‌ಫೋನ್ ಜತೆ ಬಂದಿರುವ ಚಾರ್ಜ್‌ರ್‌ ಮತ್ತು ಅಡಾಪ್ಟರ್‌ನಿಂದಲೇ ಚಾರ್ಜ್‌ ಮಾಡುವುದು ಬಹಳ ಉತ್ತಮ ಕೆಲಸ. ಚಾರ್ಜರ್ ಕಳೆದರೆ ಅಥವಾ ಕೆಟ್ಟರೆ ಯಾವಾಗಲೂ ಅದೇ ಕಂಪನಿಯ ಚಾರ್ಜರ್ ಬಳಸಿ. ಯಾಕೆಂದರೆ ನಕಲಿ ಅಥವಾ ಬ್ರಾಂಡ್‌ ಅಲ್ಲದ ಚಾರ್ಜ್‌ರ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ನ್ನು ಹಾನಿಗೀಡು ಮಾಡುತ್ತವೆ.

ಚಾರ್ಜಿಂಗ್ ಮಾಡುವಾಗ ಸ್ಮಾರ್ಟ್‌ಫೋನ್ ಬ್ಯಾಕ್‌ಕೇಸ್ ತೆಗೆಯುವುದು ಮರೆಯದಿರಿ

ಚಾರ್ಜಿಂಗ್ ಮಾಡುವಾಗ ಸ್ಮಾರ್ಟ್‌ಫೋನ್ ಬ್ಯಾಕ್‌ಕೇಸ್ ತೆಗೆಯುವುದು ಮರೆಯದಿರಿ

ಇದು ಯಾವಾಗಲು ಸಾಧ್ಯವಾಗದಿರಬಹುದು. ಆದರೆ, ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಕ್‌ಕೇಸ್ ತೆಗೆದು ಚಾರ್ಜ್‌ ಹಾಕುವುದು ಉತ್ತಮ ಕೆಲಸ. ಇದರಿಂದ ಚಾರ್ಜಿಂಗ್‌ ಸಮಯದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಹೆಚ್ಚು ಬಿಸಿಯಾಗುವುದು ತಪ್ಪುತ್ತೆ.

ಚಾರ್ಜಿಂಗ್‌ ಸಮಯದಲ್ಲಿ ಕರೆ ಮಾಡುವುದು ಮತ್ತು ಗೇಮ್‌ ಆಡುವುದು ಬೇಡ

ಚಾರ್ಜಿಂಗ್‌ ಸಮಯದಲ್ಲಿ ಕರೆ ಮಾಡುವುದು ಮತ್ತು ಗೇಮ್‌ ಆಡುವುದು ಬೇಡ

ಚಾರ್ಜ್‌ ಹಾಕಿದ ಸಮಯದಲ್ಲಿ ಗೇಮ್ ಆಡುವುದು ಅಥವಾ ಕಾಲ್ ಮಾಡುವುದು, ವಿಡಿಯೋಗಳನ್ನು ನೋಡುವ ಅಭ್ಯಾಸವನ್ನು ಖಂಡಿತ ಬಿಡಬೇಕು. ಇದರಿಂದ ಫೋನ್ ಅತಿ ಹೆಚ್ಚು ಬಿಸಿಯಾಗುತ್ತದೆ. ಅದಲ್ಲದೇ ಎಲೆಕ್ಟ್ರೋಕ್ಯೂಷನ್ ಆಗುವುದಕ್ಕೂ ಕಾರಣವಾಗುತ್ತದೆ.

ಫೋನ್ ಒದ್ದೆಯಾದಾಗ ಇಯರ್‌ಫೋನ್‌ ಅಥವಾ ಚಾರ್ಜ್‌ರ್‌ ಪ್ಲಗ್ ಮಾಡಬೇಡಿ

ಫೋನ್ ಒದ್ದೆಯಾದಾಗ ಇಯರ್‌ಫೋನ್‌ ಅಥವಾ ಚಾರ್ಜ್‌ರ್‌ ಪ್ಲಗ್ ಮಾಡಬೇಡಿ

ಇದು ಸಾಮಾನ್ಯ ಜ್ಞಾನವಾಗಿದ್ದು, ನಿಮ್ಮ ಸ್ಮಾರ್ಟ್‌ಫೋನ್ ಒದ್ದೆಯಾಗಿದ್ದರೆ, ಇಯರ್‌ಫೋನ್‌ ಅಥವಾ ಯುಎಸ್‌ಬಿ ಅಥವಾ ಚಾರ್ಜಿಂಗ್‌ ಪ್ಲಗ್‌ ಹಾಕಬೇಡಿ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್ ಹಾಳಾಗುವ ಸಾಧ್ಯತೆಯೇ ಹೆಚ್ಚು.

Most Read Articles
Best Mobiles in India

English summary
13 things you should avoid doing with your smartphones. to know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more