Home
ಟೆಕ್ ನೌಕರಿ

ಮನೆಯ ವೈಫೈ ವೇಗಕ್ಕಾಗಿ ಪಾಲಿಸಬೇಕಾದ ಟಿಪ್ಸ್

By Shwetha

ಇಂಟರ್ನೆಟ್ ಯುಗದಲ್ಲಿ ಈ ಸೌಲಭ್ಯ ನಿಮಗೆ ಎಲ್ಲಾ ಕಡೆಯೂ ಲಭ್ಯವಾಗಿರಲಿ ಎಂಬ ಆಶಯವನ್ನು ನೀವು ಹೊಂದಿರುತ್ತೀರಿ ಅಲ್ಲವೇ? ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಕೆಫೆ ಕ್ಯಾಫಿಟೇರಿಯಾ, ಗ್ರಂಥಾಲಯ ಹೀಗೆ ನೀವು ಹೋದ ಕಡೆಯಲ್ಲೆಲ್ಲಾ ವೈಫೈ ತಂತ್ರಜ್ಞಾನ ನಿಮಗೆ ದೊರೆಯಬೇಕೆಂಬ ಸದುದ್ದೇಶವನ್ನು ನೀವು ಹೊಂದಿರುತ್ತೀರಿ ಅಲ್ಲವೇ? ಅದಕ್ಕೆಂದೇ ಮನೆಗಳಲ್ಲೂ ಈ ಸೌಲಭ್ಯ ಈಗ ಹೆಚ್ಚು ಜನಜನಿತವಾಗುತ್ತಿದೆ. ಮನೆಯಲ್ಲಿ ಈ ವ್ಯವಸ್ಥೆ ಇದ್ದರೂ ನೀವು ಕೆಲವೊಮ್ಮೆ ಕೆಲವೊಂದು ಸಿಗ್ನಲ್‌ಗಳ ಸಮಸ್ಯೆಯನ್ನು ಎದುರಿಸುತ್ತಿದ್ದಿರಬಹುದು

ಓದಿರಿ: FM ರೇಡಿಯೊ ಬಳಸಿ ವೈಫೈ ಸಿಗ್ನಲ್ ಸುಧಾರಿಸಿ

ಅದಕ್ಕೆಂದೇ ಇಂದಿನ ಲೇಖನದಲ್ಲಿ ಮನೆಯ ವೈಫೈ ವ್ಯವಸ್ಥೆಯನ್ನು ಸರಾಗಗೊಳಿಸುವ ಕೆಲವೊಂದು ಮಾಹಿತಿಗಳನ್ನು ನೀಡುತ್ತಿದ್ದು ಅವುಗಳ ಪ್ರಯೋಜನವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಬನ್ನಿ ಅದೇನು ಎಂಬುದನ್ನು ನೋಡೋಣ.

ರೂಟರ್ ವ್ಯವಸ್ಥೆಯನ್ನು ನೋಡಿ

ರೂಟರ್ ವ್ಯವಸ್ಥೆಯನ್ನು ನೋಡಿ

ನಿಮ್ಮ ವೈಫೈ ರೂಟರ್ ಐದು ಫೀಟ್ ಅಂತರದಲ್ಲಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅಂದರೆ ಟೇಬಲ್ ಅಥವಾ ಬುಕ್ ಶೆಲ್ಫ್ ಮೇಲೆ ಅದು ಇದೆ ಎಂಬುದನ್ನು ಗಮನಿಸಿಕೊಳ್ಳಿ.

ಮನೆಯ ಮಧ್ಯಭಾಗದಲ್ಲಿರಲಿ

ಮನೆಯ ಮಧ್ಯಭಾಗದಲ್ಲಿರಲಿ

ನಿಮ್ಮ ಮನೆಯ ಮಧ್ಯಭಾಗದಲ್ಲಿ ರೂಟರ್ ಇರುವಂತೆ ನೋಡಿಕೊಳ್ಳಿ. ರೂಟರ್ ಎಲ್ಲಾ ದಿಕ್ಕುಗಳಿಗೂ ಸಿಗ್ನಲ್‌ಗಳನ್ನು ಕಳುಹಿಸುವುದರಿಂದ ಅದನ್ನು ಆದಷ್ಟು ಮಧ್ಯಭಾಗದಲ್ಲಿರಿಸಿಕೊಳ್ಳಿ.

ನೀವು ಹೆಚ್ಚು ಬಳಸುತ್ತಿರುವ ಕಡೆ ರೂಟರ್ ಇರಲಿ

ನೀವು ಹೆಚ್ಚು ಬಳಸುತ್ತಿರುವ ಕಡೆ ರೂಟರ್ ಇರಲಿ

ನೀವು ವೈಫೈ ಅನ್ನು ಹೆಚ್ಚು ಬಳಸುತ್ತಿರುವ ಸ್ಥಳದಲ್ಲಿ ವೈಫೈ ಅನ್ನು ಇರಿಸಿಕೊಳ್ಳಿ.

ಇದಕ್ಕೆ ಅಡಚಣೆಗಳು ಇರಬಾರದು

ಇದಕ್ಕೆ ಅಡಚಣೆಗಳು ಇರಬಾರದು

ರೂಟರ್ ಅನ್ನು ಆದಷ್ಟು ತೆರೆದ ಸ್ಥಳದಲ್ಲಿ ಇರಿಸಿಕೊಳ್ಳಿ. ಕರ್ಟನ್ಸ್, ಕಪ್ ಬೋರ್ಡ್ಸ್, ಅಥವಾ ಇತರ ಯಾವುದೇ ವಸ್ತುಗಳು ಅದಕ್ಕೆ ಅಡಚಣೆಯನ್ನುಂಟು ಮಾಡುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಇಲೆಕ್ಟ್ರಾನಿಕ್ ಡಿವೈಸ್‌ಗಳಿಂದ ದೂರವಿರಿಸಿ

ಇಲೆಕ್ಟ್ರಾನಿಕ್ ಡಿವೈಸ್‌ಗಳಿಂದ ದೂರವಿರಿಸಿ

ನಿಮ್ಮ ರೂಟರ್ ಸಿಗ್ನಲ್‌ಗಳಿಗೆ ಇತರ ಇಲೆಕ್ಟ್ರಾನಿಕ್ ಡಿವೈಸ್‌ಗಳು ಅಡಚಣೆಯನ್ನುಂಟು ಮಾಡಬಹುದು. ಆದ್ದರಿಂದ ಹೆಚ್ಚು ಕಾಳಜಿ ಇರಲಿ.

ಆಂಟೆನಾ ಪೊಸಿಶನ್ ಭಿನ್ನವಾಗಿರಲಿ

ಆಂಟೆನಾ ಪೊಸಿಶನ್ ಭಿನ್ನವಾಗಿರಲಿ

ರೂಟರ್ ಆಂಟೆನಾವನ್ನು ವರ್ಟಿಕಲ್ ಮತ್ತೊಂದನ್ನು ಹಾರಿಜಾಂಟಲ್ ಪ್ರಕಾರವಾಗಿ ಇರಿಸುವುದು ಸಿಗ್ನಲ್‌ಗಳ ಹರಡುವಿಕೆಗೆ ಸಹಾಯ ಮಾಡಲಿದೆ.

ಸಿಗ್ನಲ್ ಬಲ

ಸಿಗ್ನಲ್ ಬಲ

ವೈಫೈ ಅನಾಲಿಟಿಕ್ಸ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ವೈಫೈ ಸಿಗ್ನಲ್ ಬಲವನ್ನು ಅಳತೆ ಮಾಡಿಕೊಳ್ಳಿ. ಇದು ನಿಮ್ಮ ರೂಟರ್‌ನ ಉತ್ತಮ ಪೊಸಿಶನ್‌ಗೆ ಸಹಕಾರಿ ಎಂದೆನಿಸಲಿದೆ.

ಇಂಟರ್ನೆಟ್ ಪ್ರೊವೈಡರ್ ಗಮನಿಸಿಕೊಳ್ಳಿ

ಇಂಟರ್ನೆಟ್ ಪ್ರೊವೈಡರ್ ಗಮನಿಸಿಕೊಳ್ಳಿ

ಇಂಟರ್ನೆಟ್ ಪ್ರೊವೈಡರ್ ಬಗ್ಗೆ ಹೆಚ್ಚುವರಿ ನಿಗಾ ಇರಿಸಿಕೊಳ್ಳಿ. ಸ್ಪೀಡ್ ಟೆಸ್ಟ್ ಅನ್ನು ಮಾಡಿ ಇದನ್ನು ಅರಿಯಿರಿ.

ವೈಫೈ ಕದಿಯುವವರು

ವೈಫೈ ಕದಿಯುವವರು

ಉತ್ತಮ ಭದ್ರತೆಯನ್ನು ನಿಮ್ಮ ವೈಫೈ ಸಂಪರ್ಕಕ್ಕೆ ಇರಿಸಿಕೊಳ್ಳಿ. ನಿಮ್ಮ ವೈಫೈ ಕದಿಯುವವರ ಮೇಲೆ ಹೆಚ್ಚಿನ ನಿಗಾ ಇರಲಿ.

ಅಪ್ಲಿಕೇಶನ್ ನಿಯಂತ್ರಣ

ಅಪ್ಲಿಕೇಶನ್ ನಿಯಂತ್ರಣ

ಟೊರೆಂಟ್ ಫೈಲ್ಸ್, ವೀಡಿಯೊ ಚಾಟ್, ಆನ್‌ಲೈನ್ ವೀಡಿಯೊ ಗೇಮ್ಸ್‌ಗಳನ್ನು ನೀವು ಹೆಚ್ಚು ಆಡುತ್ತಿದ್ದೀರಿ ಎಂದಾದಲ್ಲಿ ಇಂಟರ್ನೆಟ್ ನಿಧಾನಕ್ಕೆ ಇದು ಕಾರಣವಾಗಿರುತ್ತದೆ. ಕ್ಯುಒಎಸ್‌ನಂತಹ ಸೇವೆಗಳನ್ನು ಬಳಸಿಕೊಂಡು ಇವುಗಳ ಮೇಲೆ ನಿಯಂತ್ರಣವನ್ನು ಇರಿಸಿಕೊಳ್ಳಬಹುದಾಗಿದೆ.

 ರೂಟರ್ ರೀಬೂಟ್ ಹೊಂದಿಸಿಕೊಳ್ಳಿ

ರೂಟರ್ ರೀಬೂಟ್ ಹೊಂದಿಸಿಕೊಳ್ಳಿ

ದಿನಕ್ಕೆ ಒಂದು ಬಾರಿಯಾದರೂ ಸ್ವಯಂಚಾಲಿತವಾಗಿ ರೂಟರ್ ರೀಬೂಟ್ ಮಾಡಿಕೊಳ್ಳಿ. ನಿದ್ದೆ ಹೋಗುವ ಸಮಯದಲ್ಲಿ ರೂಟರ್ ಸ್ವಿಚ್ ಆಫ್ ಮಾಡಿಟ್ಟುಕೊಳ್ಳಿ.

ವೈಫೈ ಸಾಫ್ಟ್‌ವೇರ್ ಕಾನ್ಫಿಗರ್

ವೈಫೈ ಸಾಫ್ಟ್‌ವೇರ್ ಕಾನ್ಫಿಗರ್

ಸಾಫ್ಟ್‌ವೇರ್ ಕಾನ್ಫಿಗರ್ ಮಾಡಿಕೊಳ್ಳುವುದು ನಿಮ್ಮ ವೈಫೈ ನೆಟ್‌ವರ್ಕ್ ಅನ್ನು ಸುಧಾರಿಸುತ್ತದೆ. ವೆಬ್ ಬ್ರೌಸರ್‌ನಲ್ಲಿ ನಿರ್ದಿಷ್ಟ ಐಪಿ ವಿಳಾಸವನ್ನು ನಮೂದಿಸಬೇಕಾಗುತ್ತದೆ.

ರೂಟರ್ ಚಾನೆಲ್ ಬದಲಾಯಿಸಿಕೊಳ್ಳಿ

ರೂಟರ್ ಚಾನೆಲ್ ಬದಲಾಯಿಸಿಕೊಳ್ಳಿ

ವೈಫೈ ರೂಟರ್‌ಗಳು ನಿರ್ದಿಷ್ಟ ಚಾನಲ್‌ಗಳಲ್ಲಿ ಆಪರೇಟ್‌ಗೊಳ್ಳುತ್ತದೆ. ರೂಟರ್ ಅನ್ನು ನೀವು ಹೊಂದಿಸಿದಾಗ ಡೀಫಾಲ್ಟ್ ಮೂಲಕ ಇದು ನಿರ್ದಿಷ್ಟ ಚಾನಲ್ ಅನ್ನು ಆರಿಸುತ್ತದೆ.

ಅಡಾಪ್ಟರ್ ಸಾಫ್ಟ್‌ವೇರ್ ನವೀಕರಿಸಿ

ಅಡಾಪ್ಟರ್ ಸಾಫ್ಟ್‌ವೇರ್ ನವೀಕರಿಸಿ

ಆನ್ ಬೋರ್ಡ್ ಅಡಾಪ್ಟರ್‌ಗಳನ್ನು ಪರಿಶೀಲಿಸಲು, ನಿಮ್ಮ ನೆಟ್‌ವರ್ಕ್ ಸೆಟ್ಟಿಂಗ್‌ಗಳಿಗೆ ಹೋಗಿ ಅಡಾಪ್ಟರ್ ಹೆಸರನ್ನು ಹುಡುಕಿ ಇಲ್ಲಿ ಅತ್ಯಾಧುನಿಕ ಆವೃತ್ತಿಯನ್ನು ನೀವು ಪಡೆದುಕೊಂಡಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಡಿಡಿ ವಿಆರ್‌ಟಿ ಬಳಸಿ

ಡಿಡಿ ವಿಆರ್‌ಟಿ ಬಳಸಿ

ಡಿಡಿ ವಿಆರ್‌ಟಿ ಎಂಬುದು ರೂಟರ್‌ಗಳಿಗಾಗಿ ಓಪನ್ ಸೋರ್ಸ್ ಸಾಫ್ಟ್‌ವೇರ್ ಆಗಿದ್ದು ರೂಟರ್‌ಗಳ ಕಾರ್ಯಕ್ಷಮತೆಯನ್ನು ವೃದ್ಧಿಸಲು ನೆರವನ್ನು ನೀಡುತ್ತದೆ. ಟ್ರಾನ್ಸ್‌ಮೀಟಿಂಗ್ ಪವರ್ ಅನ್ನು ಕೂಡ ಇವುಗಳು ವೃದ್ಧಿಸುತ್ತವೆ.

ಸೆಕೆಂಡರಿ ರೂಟರ್ ಹೊಂದಿಸಿ

ಸೆಕೆಂಡರಿ ರೂಟರ್ ಹೊಂದಿಸಿ

ಹಳೆಯ ಸೆಕೆಂಡರಿ ರೂಟರ್ ಕೂಡ ಬಳಸಿ ಇಂಟರ್ನೆಟ್ ವೇಗವನ್ನು ವರ್ಧಿಸಬಹುದಾಗಿದೆ. ಇದಕ್ಕೆ ನೀವು ಬೇರೆ ಬೇರೆ ಐಪಿ ವಿಳಾಸವನ್ನು ನೀಡಬೇಕಾಗುತ್ತದೆ.

ರೂಟರ್‌ಗಾಗಿ ಹೊಸ ಆಂಟೆನಾಗಳು

ರೂಟರ್‌ಗಾಗಿ ಹೊಸ ಆಂಟೆನಾಗಳು

ಹೆಚ್ಚು ಗುಣಮಟ್ಟದ ಆಂಟೆನಾಗಳನ್ನು ರೂಟರ್‌ಗಳಿಗಾಗಿ ಬಳಸಿಕೊಳ್ಳಿ. ಇದು ಕೂಡ ಇಂಟರ್ನೆಟ್ ವರ್ಧನೆಗೆ ಸಹಕಾರಿಯಾಗಲಿದೆ.

ಸಿಂಗಲ್ ವೆಂಡೋರ್

ಸಿಂಗಲ್ ವೆಂಡೋರ್

ಯಾವಾಗಲೂ ಒಬ್ಬರೇ ವೆಂಡೋರ್‌ಗಳನ್ನು ಸಂಪರ್ಕಿಸಿ. ನಿಮ್ಮ ನೆಟ್‌ವರ್ಕ್ ಡಿವೈಸ್‌ಗಳನ್ನು ಒಬ್ಬರೇ ವೆಂಡೋರ್‌ಗೆ ಸೀಮಿತಗೊಳಿಸಿ.

ಹೊಸ ರೂಟರ್ ಅಗತ್ಯವಿರಬಹುದು

ಹೊಸ ರೂಟರ್ ಅಗತ್ಯವಿರಬಹುದು

ನಿಮ್ಮ ರೂಟರ್ ಹಳೆಯದಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಹೊಸ ರೂಟರ್ ಅವಶ್ಯಕ ಎಂದಾದಲ್ಲಿ ಹೊಸದನ್ನು ಖರೀದಿಸಿ ಅದರ ಸೇವೆಯನ್ನು ಪಡೆದುಕೊಳ್ಳಿ.

Best Mobiles in India

English summary
In this article we can found some tricks for better wifi connectivity. These tips are better for home wifi speed and it will help you to solve each and every wifi issues.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+