4,999 ರೂ.ಗಳಿಗೆ 32 ಇಂಚಿನ ಸ್ಮಾರ್ಟ್‌ಟಿವಿ!..ಬುಕ್ ಮಾಡುವುದು ಹೇಗೆ ಗೊತ್ತಾ?
ಕಡಿಮೆ ಬೆಲೆಯಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಟಿವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಮಧ್ಯಮ ಶ್ರೇಣಿಯ ಗ್ರಾಹಕರನ್ನು ಸೆಳೆಯಲು ಬಂದಿರುವ ಸ್ವದೇಶಿ ಕಂಪೆನಿ 'ಸ್ಯಾಮಿ ಇನ್ಫರ್ಮ್ಯಾಟಿಕ್ಸ್ ಪ್ರೈವೇಟ್ ಲಿಮಿಟೆಡ್' ಮತ್ತೊಂದು ಸಿಹಿಸುದ್ದಿ ನೀಡಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ಫೀಚರ್ಸ್‌ಗಳ ಜೊತೆಗೆ ಕೇವಲ 4,999ರೂ.ಗಳಿಗೆ 32 ಇಂಚಿನ ಭಾರತದ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಟಿವಿಯನ್ನು ಶೀಘ್ರವೇ ಗ್ರಾಹಕರಿಗೆ ತಲುಪಿಸಲು ಮುಂದಾಗಿದೆ.
ಹೌದು, ಭಾರತದಲ್ಲಿ ಇದೇ ಬುಧವಾರದಂದು ಬಿಡುಗಡೆಯಾಗಿರುವ ದೇಶದ ಅತ್ಯಂತ ಕಡಿಮೆ ಬೆಲೆಯ ಹೆಚ್‌ಡಿ ರೆಡಿ ಎಲ್‌ಇಡಿ ಟಿವಿ 'ಸ್ಯಾಮಿ SM32-K5500' ಅನ್ನು ಗ್ರಾಹಕರಿಗೆ ತಲುಪಿಸಲು ದೆಹಲಿ ಮೂಲದ ಕಂಪೆನಿ ಮುಂದಾಗಿದೆ. ಆನ್‌ಲೈನ್ ಮೂಲಕ ಟಿವಿ ಬೆಲೆ 4,999 ರೂ.ಗಳು ಸೇರಿದಂತೆ ಶಿಪ್ಪಿಂಗ್ ಚಾರ್ಜ್ ಮತ್ತು ಜಿಎಸ್‌ಟಿ ಪಾವತಿಸಿದರೆ ನೇರವಾಗಿ ಮನೆಗೆ ಟಿವಿಯನ್ನು ತಲುಪಿಸುವಂತಹ ಕೆಲಸವನ್ನು ಮಾಡುವುದಾಗಿ ಸ್ಯಾಮಿ ಇನ್ಫರ್ಮ್ಯಾಟಿಕ್ಸ್ ಕಂಪೆನಿ ತಿಳಿಸಿದೆ.

ಇದಕ್ಕಾಗಿ ಗ್ರಾಹಕರು ಸ್ಯಾಮಿ ಕಂಪೆನಿಯ ಆಪ್ ಒಂದನ್ನು ಡೌನ್‌ಲೋಡ್ ಮಾಡಿಕೊಂಡು ಭಾರತದ ಅತ್ಯಂತ ಅಗ್ಗದ 32 ಇಂಚಿನ ಸ್ಮಾರ್ಟ್‌ಟಿವಿಯನ್ನು ಖರೀದಿಸಬಹುದು. ಹಾಗಾದರೆ, 'ಸ್ಯಾಮಿ ಇನ್ಫರ್ಮ್ಯಾಟಿಕ್ಸ್ ಪ್ರೈವೇಟ್ ಲಿಮಿಟೆಡ್' ಬಿಡುಗಡೆ ಮಾಡಿರುವ ಮೇಡ್ ಇನ್ ಇಂಡಿಯಾದ 'ಸ್ಯಾಮಿ SM32-K5500' ಸ್ಮಾರ್ಟ್‌ಟಿವಿ ಹೇಗಿದೆ?, 4,999 ರೂ.ಗಳಿಗೆ ಬಿಡುಗಡೆಯಾದ ಈ ಟಿವಿಯನ್ನು ಖರೀದಿಸುವುದು ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಕೇವತ 4,999 ರೂ.ಗೆ ಸ್ಮಾರ್ಟ್‌ಟಿವಿ!
ಮೇಡ್ ಇನ್ ಇಂಡಿಯಾ ಅಡಿಯಲ್ಲಿ ದೆಹಲಿ ಮೂಲದ ಸ್ಟಾರ್ಟ್‌ಅಪ್ ಕಂಪೆನಿ ಸ್ಯಾಮಿ ಇನ್ಫರ್ಮ್ಯಾಟಿಕ್ಸ್ ಪ್ರೈವೇಟ್ ಲಿಮಿಟೆಡ್ ಅತ್ಯಂತ ಕಡಿಮೆ ಬೆಲೆಗೆ 32 ಇಂಚಿನ ಸ್ಮಾರ್ಟ್‌ಟಿವಿಯನ್ನು ಬಿಡುಗಡೆ ಮಾಡಿದೆ. ಇದು ಭಾರತದಲ್ಲೇ ಅತ್ಯಂತ ಕಡಿಮೆ ಬೆಲೆಯ 32 ಇಂಚಿನ ಸ್ಮಾರ್ಟ್‌ಟಿವಿಯಾಗಿದ್ದು, ಗ್ರಾಹಕರಿಗೆ 4,999 ರೂ.ಗಳ ಬೆಲೆಯಲ್ಲಿ 'ಸ್ಯಾಮಿ SM32-K5500' ಎಂಬ ಸ್ಮಾರ್ಟ್‌ಟಿವಿಯನ್ನು ಪರಿಚಯಿಸಿ ಸ್ಯಾಮಿ ಇನ್ಫರ್ಮ್ಯಾಟಿಕ್ಸ್ ಕಂಪೆನಿ ಗಮನಸೆಳೆದಿದೆ.

ಹೇಗಿದೆ 'ಸ್ಯಾಮಿ SM32-K5500'?
ಸ್ವದೇಸಿ ಕಂಪನಿ ಸ್ಯಾಮಿ ಇನ್ಫಮ್ಯಾರ್ಟಿಕ್ಸ್ ಪ್ರೈ.ಲಿ ಸಂಸ್ಥೆ ಪರಿಚಯಿಸಿರುವ ಮೊದಲ ಸ್ಮಾರ್ಟ್‌ಟಿವಿ 'ಸ್ಯಾಮಿ SM32-K5500'32 ಇಂಚಿನದ್ದಾಗಿದೆ. 16: 9 ಆಕಾರ ಅನುಪಾತದಲ್ಲಿ 1366 × 786 ಪಿಕ್ಸೆಲ್ಸ್ ಸಾಮರ್ಥ್ಯದ ಡಿಸ್‌ಪ್ಲೇಯು 1000000: 1 ಡೈನಾಮಿಕ್ ರೇಷ್ಯೂವನ್ನು ಹೊಂದಿರುವ ಟಿವಿಯಾಗಿದೆ. ನೋಡಲು ಶೀಯೋಮಿ ಸ್ಮಾರ್ಟ್‌ಗಟಿವಿಗಳಂತೆಯೇ ವಿನ್ಯಾಸವನ್ನು ಹೊಂದಿರುವ ಈ ಟಿವಿ 10 ವ್ಯಾಟ್ ಸಾಮರ್ಥ್ಯದ ಸ್ಪೀಕರ್‌ಗಳನ್ನು ಹೊಂದಿದೆ.

'ಸ್ಯಾಮಿ SM32-K5500' ಫೀಚರ್ಸ್?
32 ಇಂಚಿನ ಆಂಡ್ರಾಯ್ಡ್ ಟಿವಿ 'ಸ್ಯಾಮಿ SM32-K5500'ನಲ್ಲಿ 512MB RAM ಮತ್ತು 4GB ಸಂಗ್ರಹವಿದೆ.ಇದು ಫೇಸ್ಬುಕ್ ಮತ್ತು ಯೂಟ್ಯೂಬ್ ಮುಂತಾದ ಪೂರ್ವ-ಸ್ಥಾಪಿತ ಅಪ್ಲಿಕೇಶನ್ಗಳೊಂದಿಗೆ ಬರುತ್ತದ್ದು, ಆಂಡ್ರಾಯ್ಡ್ 4.4 ಆಪರೇಟಿಂಗ್ ಸಿಸ್ಟಮ್‌ನಿಂದ ರನ್ ಆಗಲಿದೆ. ಸಂಪರ್ಕ ಆಯ್ಕೆಗಳ ವಿಷಯದಲ್ಲಿ, ಈ ಟಿವಿ ಎರಡು HDMI ಮತ್ತು ಎರಡು USB ಪೋರ್ಟ್ಗಳು, AV ಔಟ್ ಪೋರ್ಟ್ ಮತ್ತು ವೀಡಿಯೊ ಇನ್ಪುಟ್ ಪೋರ್ಟ್ ಅನ್ನು ಒಳಗೊಂಡಿದೆ. ಉತ್ತಮ ಧ್ವನಿ ಗುಣಮಟ್ಟಕ್ಕಾಗಿ ಎಸ್ಆರ್ಎಸ್ ಡಾಲ್ಬಿ ಡಿಜಿಟಲ್ ಮತ್ತು 5 ಬ್ಯಾಂಡ್ ಈಕ್ವಲೈಜರ್ ಅನ್ನು ಹೊಂದಿದೆ.

ಟಿವಿ ಬಗ್ಗೆ ಕಂಪೆನಿ ಹೇಳುವುದೇನು?
ಮೇಕ್ ಇನ್ ಇಂಡಿಯಾ' ಮತ್ತು 'ಸ್ಟಾರ್ಟ್ ಅಪ್ ಇಂಡಿಯಾ'ದ ಪ್ರತಿಯೊಂದು ಉದ್ದೇಶವೂ ಒಂದು ಅತ್ಯುತ್ತಮ ಉತ್ತಪನ್ನವನ್ನು ತಯಾರಿಸುವುದಾಗಿದೆ. 200 ಜನರ ತಂಡವೊಂದು ಈಗ ಕಡಿಮೆ ಆದಾಯದ ಕುಟುಂಬವು ಸ್ಮಾರ್ಟ್ ಟಿವಿಯೊಂದನ್ನು ಮನೆಗೆ ತರಿಸಿಕೊಳ್ಳುವುದು ಸುಲಭವಾಗಿದೆ. 4,999 ರೂ.ಗಳಿಗೆ ಗ್ರಾಹಕರಿಗೆ ಉನ್ನತ ಬಜೆಟ್ ಟಿವಿಯನ್ನು ಒದಗಿಸಿದ್ದೇವೆ ಎಂದು ಕ, ಸ್ಯಾಮಿ ಇನ್ಫಾರ್ಮ್ಯಾಟಿಕ್ಸ್ ಪ್ರೈ. ಲಿಮಿಟೆಡ್ ಕಂಪೆನಿ ನಿರ್ದೇಶಕ ಅವಿನಾಶ್ ಮೆಹ್ತಾ ಅವರು ಹೇಳಿದ್ದಾರೆ.

ಟಿವಿ ಬುಕ್ ಮಾಡುವುದು ಹೇಗೆ?
ಭಾರತದ ಅತ್ಯಂತ ಕಡಿಮೆ ಬೆಲೆಯ 32 ಇಂಚಿನ ಸ್ಮಾರ್ಟ್‌ಟಿವಿಯನ್ನು ಬುಕ್ ಮಾಡಲು ನೀವು ಆ (Samy) ಕಂಪೆನಿಯ ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡಲು ಹೇಳಿದೆ. ಅಪ್ಲಿಕೇಷನ್ ಮೂಲಕ ಬುಕ್ ಮಾಡಿದವರಿಗೆ ಮಾತ್ರ ಈಗ ಸ್ಮಾರ್ಟ್‌ಟಿವಿಯನ್ನು ತಲುಪಿಸಲಾಗುವುದು ಎಂದು ಕಂಪೆನಿ ತಿಳಿಸಿದೆ. 4,999 ರೂ. ಗಳಿಗೆ ಬಿಡುಗಡೆಯಾಗಿರುವ ಟಿವಿಯನ್ನು ಮನೆಗೆ ತಲುಪಿಸಲು ಕಂಪೆನಿ 1,800 ರೂ.ಗಳನ್ನು ಸಾಗಣೆ ವೆಚ್ಚವಾಗಿ ಪಡೆದುಕೊಳ್ಳಲಿರುವುದಾಗಿ ಕಂಪೆನಿ ತಿಳಿಸಿದೆ. ಇದೊಂದೇ ಮಾರ್ಗದಲ್ಲಿ ಈಗ ಈ ಟಿವಿಯನ್ನು ಖರೀದಿಸಬಹುದಾಗಿದೆ. ಆದರೆ, ಆಪ್ ರಿವ್ಯೂ ಚೆಕ್ ಮಾಡಿದರೆ ರಿವ್ಯೂ ಅಷ್ಟೇನೂ ಚೆನ್ನಾಗಿಲ್ಲ. ಖರೀದಿ ಮಾಡುವ ಮುನ್ನ ಎಚ್ಚರವಿರಲಿ.

'ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನ್ ಗ್ರಾಹಕರ ನಿದ್ದೆಗೆಡುಸುತ್ತಿದೆ.!!
ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯಾದ ಶಿಯೋಮಿ ತನ್ನ ವಿಶೇಷ ಫೀಚರ್ಸ್‌ಹೊಂದಿದ ಸ್ಮಾರ್ಟ್‌ಫೋನ್‌ಗಳನ್ನು ಗ್ರಾಹಕರಿಗೆ ಪರಿಚಯಿಸುವುದರ ಮೂಲಕ ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಇದೀಗ ಕಂಪನಿಯು 'ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿ ಸ್ಮಾರ್ಟ್‌ಫೋನ್ ಪ್ರಿಯರ ನಿದ್ದೆಗೆಡಸಿದೆ.!
ಹೌದು, ಶಿಯೋಮಿಯ ರೆಡ್ಮಿ ನೋಟ್ 7 ಪ್ರೋ ಸ್ಮಾರ್ಟ್‌ಫೋನ್ ತನ್ನ ಅತೀ ವಿಶೇಷ ಫೀಚರ್ಸ್‌ಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಶಿಯೋಮಿ ಕಂಪನಿಯು ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ಫೀಚರ್ಸ್‌ಗಳನ್ನು ನೀಡುವುದರ ಜೊತೆಗೆ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತಾ ಸಾಗಿ ಬಂದಿದೆ. ಹೀಗಾಗಿ ಸ್ಮಾರ್ಟ್‌ಫೋನ್ ಪ್ರಿಯರಿಗೆ ನೆಚ್ಚಿನ ಕಂಪನಿಯಾದೆ.
ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನ್ 48 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಹೊಂದಿದೆ ಇದರೊಂದಿಗೆ 6GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವುದು ಈ ಫೋನಿನ್ ಸ್ಪೆಷಲ್ ಸಂಗತಿ ಎನ್ನಬಹುದು. ಹಾಗಾದರೇ ಗ್ರಾಹಕರ ಗಮನವನ್ನು ತನ್ನತ್ತ ಕೇಂದ್ರಿಕರಿಸಿದ ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನ್ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಸ್ಕ್ರೋಲ್ ಮಾಡಿ ಓದಿರಿ.

ಬಿಗ್ ಡಿಸ್‌ಪ್ಲೇ!
ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 6.4 ಇಂಚಿನ ವಿಶಾಲ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿರಲಿದೆ. ಡಿಸ್‌ಪ್ಲೇ ಮೇಲ್ಭಾಗದಲ್ಲಿ ಗೊರಿಲ್ಲಾ ಗ್ಲಾಸ್ 5 ನೀಡಲಾಗಿದ್ದು, ಇದು ಸ್ಕ್ರೀನ್ ರಕ್ಷಣೆ ಒದಗಿಸುತ್ತದೆ. ಫೋನ್ ಬಾಹ್ಯವಾಗಿ ನೋಡಲು ಆಕರ್ಷಿತವಾಗಿದ್ದು, ನಾಲ್ಕೂ ಮೂಲೆಗಳಲ್ಲಿ ಕಡಿಮೆ ಅಂಚು ಹೊಂದಿದೆ ಇದು ಸ್ಮಾರ್ಟ್‌ಫೋನಿನ ಸೌಂದರ್ಯವನ್ನು ಹೆಚ್ಚಿಸಿದೆ.

ಪ್ರೊಸೆಸರ್
ಕ್ವಾಲಂ ಎಸ್‌ಡಿಎಮ್675 ಮತ್ತು ಸ್ನಾಪ್‌ಡ್ರಾಗನ್ 675 ಪವರ್ ಫುಲ್ ಪ್ರೊಸೆಸರ್ ಹೊಂದಿರುವುದು ಇದರೊಂದಿಗೆ 6GB RAM ಮತ್ತು 128GB ಆಂತರಿಕ ಶೇಖರಣಾ ಸಾಮರ್ಥ್ಯ ನೀಡಲಿರುವುದು ಈ ಸ್ಮಾರ್ಟ್‌ಫೋನಿನ ಮತ್ತೊಂದು ವಿಶೇಷ. ಉತ್ತಮ ಪ್ರೊಸೆಸರ್ ಜೊತೆಗೆ ಅತ್ಯುತ್ತಮ RAM ಸಾಮರ್ಥ್ಯ ಹೊಂದಿರುವುದರಿಂದ ಈ ಸ್ಮಾರ್ಟ್‌ಫೋನ್ ಕಾರ್ಯದಕ್ಷತೆ ವೇಗವಾಗಿರುವುದು.

ಸ್ಪೆಷಲ್ ಕ್ಯಾಮೆರಾ
ಶಿಯೋಮಿ ಇದೇ ಮೊದಲ ಭಾರಿಗೆ 48 ಮೆಗಾಪಿಕ್ಸಲ್ ಸಾಮರ್ಥ್ಯ ಹೊಂದಿರುವ ಕ್ಯಾಮೆರಾವನ್ನು ತನ್ನ ರೆಡ್ಮಿ ನೋಟ್ 7 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಪರಿಚಯಿಸುತ್ತಿದೆ. ಇನ್ನೂ ಈ ಕ್ಯಾಮೆರಾದಲ್ಲಿ ಸೋನಿಯ IMX586 ಸೆನ್ಸಾರ್ ಬಳಸಲಾಗಿದೆ ಎಂದು ಕಂಪನಿ ತಿಳಿಸಿದೆ. ಇದರೊಂದಿಗೆ ಇನ್ನೊಂದು 5 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಸಹ ನೀಡಲಾಗಿದ್ದು, ಸೆಲ್ಫೀಗಾಗಿ 13 ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗುತ್ತಿದೆ.

ಪವರ್‌ಫುಲ್ ಬ್ಯಾಟರಿ
ಮೊದಲಿನಿಂದಲೂ ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯವನ್ನು ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಪರಿಚಯಿಸುತ್ತಾ ಬಂದಿದ್ದು, ಇದೀಗ ತನ್ನ ಬಹುನಿರೀಕ್ಷಿತ ರೆಡ್ಮಿ ನೋಟ್ 7 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಸಹ 4000mAh ಸಾಮರ್ಥ್ಯ ಹೊಂದಿದ ಪವರ್‌ಫುಲ್ ಬ್ಯಾಟರಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಫಾಸ್ಟ್ ಚಾರ್ಜರ್ ಸಹ ನೀಡಲಾಗುತ್ತಿದ್ದು, ಇದರಿಂದ ಸ್ಮಾರ್ಟ್‌ಫೋನ್ ಬೇಗನೆ ಚಾರ್ಜ್ ಆಗುತ್ತದೆ.

ರಿಲೀಸ್ ಯಾವಾಗ?
ಗ್ರಾಹಕರ ಗಮನ ಸೆಳೆದಿರುವ ರೆಡ್ಮಿ ನೋಟ್ 7 ಪ್ರೋ' ಸ್ಮಾರ್ಟ್‌ಫೋನ್ ರಿಲೀಸ್ ಯಾವಾಗ ಎನ್ನುವುದು ಇನ್ನೂ ಕಂಪನಿಯಿಂದ ಅಧಿಕೃತ ದಿನಾಂಕ ಪ್ರಕಟವಾಗಿಲ್ಲ. ಆದರೆ ಇದೇ ಪೆಬ್ರವರಿ ತಿಂಗಳಲ್ಲಿ ಬಿಡುಗಡೆ ಆಗುವುದು ಪಕ್ಕಾ ಎಂದು ಹೇಳಲಾಗುತ್ತಿದೆ.


Click it and Unblock the Notifications








