ಮ್ಯಾಕ್ ಆಪ್ ಸ್ಟೋರ್‌ನ ಈ ಐದು ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ

By GizBot Bureau
|

2011 ರಲ್ಲಿ ಮ್ಯಾಕ್ ಆಪ್ ಸ್ಟೋರ್ ಬಿಡುಗಡೆಯಾದಾಗಿನಿಂದ ಮ್ಯಾಕ್ ಆಪ್ ನ ದೊಡ್ಡ ಕೆಟಲಾಗ್ ಆಗಿ ಇದು ಗುರುತಿಸಿಕೊಂಡಿದೆ ಮತ್ತು ಬಳಕೆದಾರರಿಗೆ ಎಲ್ಲಾ ರೀತಿಯ ಆಪ್ ಗಳು ಲಭ್ಯವಾಗುವ ದೊಡ್ಡ ಜಾಗವಾಗಿದೆ.

ಬಳಕೆದಾರರೂ ಕೂಡ ಹೊಸ ಟ್ಯಾಬ್ ಗಳಾದ ಕ್ರಿಯೇಟ್, ವರ್ಕ್, ಪ್ಲೇ ಮತ್ತು ಡೆಲವಪ್ ಎಂಬ ಟ್ಯಾಬ್ ಗಳನ್ನು ಎಕ್ಸ್ ಪ್ಲೋರ್ ಮಾಡಬಹುದು. ತಮ್ಮ ಪ್ರೊಜೆಕ್ಟ್ ಅಥವಾ ಕಾರ್ಯಕ್ಕೆ ಅನುಗುಣವಾಗಿ ಆಪ್ ಆಯ್ಕೆ ಮಾಡಿಕೊಳ್ಳಬಹುದು. ಮ್ಯೂಸಿಕ್, ವಿಡಿಯೋ, ಛಾಯಾಚಿತ್ರ, ಬ್ಯುಸಿನೆಸ್ ಸಂಬಂಧಿತ ಕಾರ್ಯಗಳು ಹೀಗೆ ಯಾವುದು ಬೇಕಿದ್ದರೂ ಅದನ್ನು ಸೆಲೆಕ್ಟ್ ಮಾಡಿಕೊಳ್ಳುವ ಅವಕಾಶ ಬಳಕೆದಾರರಿಗೆ ಇದೆ.

ಮ್ಯಾಕ್ ಆಪ್ ಸ್ಟೋರ್‌ನ ಈ ಐದು ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ

ಆದರೂ ಕೆಲವು ಸಮಸ್ಯೆಗಳು ಇದರಲ್ಲಿ ಪಾಪ್ ಆಪ್ ಆಗುತ್ತದೆ. ಆ ಸಮಸ್ಯೆಗಳ ಪಟ್ಟಿಯನ್ನು ನಾವಿಲ್ಲಿ ಮಾಡಿದ್ದು, ಅದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ಸಣ್ಣ ವಿವರವೊಂದನ್ನು ಇಲ್ಲಿ ನೀಡಲಾಗಿದೆ.

ಆಪ್ ಸ್ಟೋರ್ ನಲ್ಲಿ ಖರೀದಿಸಿರುವುದು ಕಳೆದುಹೋಗುವುದು 

ಆಪ್ ಸ್ಟೋರ್ ನಲ್ಲಿ ಖರೀದಿಸಿರುವುದು ಕಳೆದುಹೋಗುವುದು 

  • ನಿಮ್ಮ ಖರೀದಿಯ ಪರದೆಯಲ್ಲಿ ಖರೀದಿಯ ಬಗೆಗಿನ ಪಾಪ್ ಅಪ್ ಕಾಣಿಸಿಕೊಳ್ಳದೇ ಇರಲು ಕಾರಣಗಳು ಈ ಕೆಳಗಿನ ಅಂಶಗಳಾಗಿರಬಹುದು :
  • a) ಆಪಲ್ ಆಪ್ ನ್ನು ತೆಗೆದುಹಾಕಿರಬಹುದು ಯಾಕೆಂದರೆ ಅದು ಔಟ್ ಡೇಟೆಡ್ ಆಪ್ ಆಗಿದೆ ಅಥವಾ ಆಪ್ ನ ರಿವ್ಯೂ ಗೈಡ್ ಲೈನ್ ಗೆ ಸರಿಯಾಗಿ ಆಪ್ ಯಾವುದೇ ಕೆಲಸವನ್ನೂ ನಿರ್ವಹಿಸುತ್ತಿಲ್ಲ ಎಂಬುದಾಗಿರಬಹುದು

    b) ಡೆವಲಪರ್ ಆಪ್ ನ್ನು ಮಾರಾಟ ಮಾಡಲು ಉತ್ಸುಕರಾಗಿಲ್ಲ.

    c) ಒಂದು ವೇಳೆ ನೀವು ಬಹಳ ದಿನಗಳಿಂದ ಈ ಆಪ್ ನ್ನು ಇನ್ಸ್ಟಾಲ್ ಮಾಡದೇ ಇದ್ದು ಅಥವಾ ಅದರಲ್ಲಿ ಹೊಂದಾಣಿಕೆಯ ಸಮಸ್ಯೆ ಕಂಡುಬಂದಲ್ಲಿ ಸ್ವಯಂಚಾಲಿತವಾಗಿ ಆಪ್ ಸ್ಟೋರ್ ನಿಂದ ಆಪ್ ಹೈಡ್ ಆಗುತ್ತದೆ. ನೀವೇನಾದರೂ ಈ ಆಪ್ ನ್ನು ನೋಡಲು ಬಯಸಿದರೆ, ಆಪ್ ಸ್ಟೋರ್ ನ್ನು ತೆರೆಯಿರಿ . ಸ್ಟೋರ್ ನ್ನು ಟ್ಯಾಪ್ ಮಾಡಿ> ನಿಮ್ಮ ಅಕೌಂಟನ್ನು ನೋಡಿ. ಸೈನ್ ಇನ್ ಆಗಿ ಮತ್ತು ಅಕೌಂಟ್ ಮಾಹಿತಿ ಪೇಜ್ ಗೆ ಸ್ಕ್ರೋಲ್ ಡೌನ್ ಮಾಡಿ, ಹಿಡನ್ ಐಟಂ ವಿಭಾಗವನ್ನು ಹುಡಾಕಾಡಿ ಮತ್ತು ಮ್ಯಾನೇಜ್ ಬಟನ್ ನ್ನು ಟ್ಯಾಪ್ ಮಾಡಿ. ಈಗ ಅನ್ ಹೈಡ್ ನ್ನು ಟ್ಯಾಪ್ ಮಾಡಿ. ಆಗ ಎಲ್ಲಾ ಆಪ್ ಗಳು ಕಾಣಿಸುತ್ತದೆ.

    ಇನ್ಸ್ಟಾಲ್ ಆಗಿದೆ ಎಂದು ಆಪ್ ತಪ್ಪಾಗಿ ತೋರಿಸುವುದು 

    ಇನ್ಸ್ಟಾಲ್ ಆಗಿದೆ ಎಂದು ಆಪ್ ತಪ್ಪಾಗಿ ತೋರಿಸುವುದು 

    • ಕೆಲವೊಮ್ಮೆ ಸ್ಟೋರ್ ನಲ್ಲಿ ಯಾವುದೋ ಒಂದು ನಿರ್ಧಿಷ್ಟ ಆಪ್ ಡೌನ್ ಲೋಡ್ ಆಗಿದೆ ಎಂದು ತೋರಿಸುತ್ತದೆ. ಅದಕ್ಕೆ ಕಾರಣಗಳು ಈ ಕೆಳಗಿನವು:
    • a) ಸ್ಯಾಚೇ ಫೋಲ್ಡರ್ ನಲ್ಲಿರುವ ಸಮಸ್ಯೆಗಳು: ಮ್ಯಾನುವಲಿ ಸ್ಯಾಚೇ ಫೋಲ್ಡರ್ ನ್ನು ಕ್ಲಿಯರ್ ಮಾಡುವುದರಿಂದಾಗಿ ನೀವು ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಆದರೆ ನೀವು ನಿಮಗೆ ಅಗತ್ಯವಿರುವ ಮ್ಯಾಕ್ ಫೈಲ್ ಗಳನ್ನು ಬ್ಯಾಕ್ ಅಪ್ ತೆಗೆದುಕೊಂಡಿದ್ದೀರಿ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.

      b) ಇತರೆ ಡ್ರೈವ್ ಗಳಲ್ಲಿರುವ ಬೆಟಾ ಆಪ್ ಗಳು : ಈ ಸಮಸ್ಯೆಯು ಮ್ಯಾಕ್ ಓಎಸ್ ನ ಯಾವುದೇ ಭಾಗದಲ್ಲಿ ಅಥವಾ ಎಕ್ಸ್ಟರ್ನಲ್ ಡ್ರೈವ್ ನಲ್ಲಿ ಆಪ್ ನ ಬೆಟಾ ವರ್ಷನ್ ಇರುವ ಕಾರಣದಿಂದಾಗಿ ಕಾಣಿಸಿಕೊಳ್ಳಬಹುದು.

      ನೀವು ಈ ಸಮಸ್ಯೆಯನ್ನು ಪರಿಹಾರ ಮಾಡಬಹುದು. ಆಪಲ್ ಮೆನುವನ್ನು ತೆರೆಯಿರಿ, ಸಿಸ್ಟಮ್ ಪ್ರಿಫರೆನ್ಸ್ ನ್ನು ಆಯ್ಕೆ ಮಾಡಿ, ಸ್ಪಾಟ್ ಲೈನ್ ಎಂಟ್ರಿಯನ್ನು ಆಯ್ಕೆ ಮಾಡಿ ಮತ್ತು ಪ್ರೈವೆಸಿ ಟ್ಯಾಬ್ ಗೆ ಸ್ವಿಚ್ ಆಗಿ. ಪರದೆಯ ಕೆಳಗಿರುವ ಪ್ಲಸ್ ನ್ನು ಕ್ಲಿಕ್ಕಿಸಿ, Macintosh HD ಸೇರಿಸಿ ಅಥವಾ ನಿಮ್ಮ ಯಾವುದೇ ಹೆಸರನ್ನು ಆ ಪಟ್ಟಿಗೆ ಸೇರಿಸಿ ಮತ್ತು ಸಿಸ್ಟಮ್ ಪ್ರಿಫರೆನ್ಸಿ ಪರದೆಯನ್ನು ಕ್ಲೋಸ್ ಮಾಡಿ. ಪ್ರೈವೆಸಿ ಟ್ಯಾಬ್ ಗೆ ಪುನಃ ಬನ್ನಿ ಮತ್ತು "-" ಚಿಹ್ನೆಯನ್ನು ಕ್ಲಿಕ್ಕಿಸಿ ಇದರಿಂದ Macintosh HD ತೆಗೆದು ಹಾಕಬಹುದು.

      c)ಇತರೆ ಬಳಕೆದಾರ ಅಕೌಂಟ್ ನಲ್ಲಿ ಆಪ್ ಅಪ್ ಡೇಟ್ ಗಳು: ಒಂದೇ ಯ್ಯೂಸರ್ ಅಕೌಂಟ್ ನಿಂದ ನೀವು ಕಂಪ್ಯೂಟರ್ ನ್ನು ಇತರರೊಂದಿಗೆ ಹಂಚಿಕೊಂಡಿದ್ದರೆ ಈ ಸಮಸ್ಯೆ ಉದ್ಭವಿಸಬಹುದು.

      ಆಪ್ ನ ಅಪ್ ಡೇಟ್ ಮತ್ತು ಡೌನ್ ಲೋಡ್ ಗಳು ಅರ್ಧಕ್ಕೆ ನಿಲ್ಲುತ್ತದೆ. 

      ಆಪ್ ನ ಅಪ್ ಡೇಟ್ ಮತ್ತು ಡೌನ್ ಲೋಡ್ ಗಳು ಅರ್ಧಕ್ಕೆ ನಿಲ್ಲುತ್ತದೆ. 

      ಕೆಲವು ಸಂದರ್ಬಗಳಲ್ಲಿ, ಸದ್ಯ ಇರುವ ಆಪ್ ನ್ನೇ ಅಪ್ ಡೇಟ್ ಮಾಡುವಾಗ ಅಥವಾ ಹೊಸ ಆಪ್ ನ್ನು ಇನ್ಸ್ಟಾಲ್ ಮಾಡುವಾಗ ನೀವು 'Waiting' ಅಥವಾ 'Installing' ಅನ್ನುವುದನ್ನು ತುಂಬಾ ಸಮಯದವರೆಗೆ ಕಾಣುವಂತಾದರೆ, ಅಪ್ ಡೇಟ್ ಅಥವಾ ಡೌನ್ ಲೋಡ್ ಅರ್ಧಕ್ಕೆ ನಿಲ್ಲುತ್ತಿದೆ ಎಂದರ್ಥ .ಇದನ್ನು ನೀವು ಈ ಕೆಳಗಿನ ಯಾವುದೇ ವಿಧಾನ ಬಳಸಿ ಪರಿಹರಿಸಿಕೊಳ್ಳಬಹುದು.

      a) ಸ್ಯಾಚೇ ಫೋಲ್ಡರ್ ನ್ನು ಡಿಲೀಟ್ ಮಾಡುವುದು.

      b)ಅಪ್ ಡೇಟ್ ಫೋಲ್ಡರ್ ನ ಕಂಟೆಂಟ್ ಗಳನ್ನು ಡಿಲೀಟ್ ಮಾಡುವುದು.

      c)ಆಪ್ ಸ್ಟೋರ್ ನ ಕಲ್ಪ್ರಿಟ್ ನ್ನು ಸಾಯಿಸುವುದು.

      d) ಪ್ರಿಫರೆನ್ಸ್ ಫೈಲ್ ನ್ನು ಡಿಲೀಟ್ ಮಾಡಿ.

      ಬ್ಲ್ಯಾಂಕ್ ಆಗಿರುವ ಆಪ್ ಸ್ಟೋರ್ ಪೇಜ್ 

      ಬ್ಲ್ಯಾಂಕ್ ಆಗಿರುವ ಆಪ್ ಸ್ಟೋರ್ ಪೇಜ್ 

      • ಈ ರೀತಿ ‘Cannot connect to the App Store' ಎಂಬ ಮೆಸೇಜ್ ಕಾಣಿಸಿಕೊಳ್ಳಲು ಪ್ರಮುಖ ಕಾರಣ ಮತ್ತು ಅದನ್ನು ಪರಿಹರಿಸಿಕೊಳ್ಳುವ ಸುಲಭ ವಿಧಾನ ಇಲ್ಲಿದೆ:
      • a) ಆಪಲ್ ಮೆನುಗೆ ತೆರಳಿ ನಿಮ್ಮ ಅಂತರ್ಜಾಲ ಸಂಪರ್ಕವನ್ನು ಪರೀಕ್ಷಿಸಿ ಮತ್ತು ಸಿಸ್ಟಮ್ ಪ್ರಿಫರೆನ್ಸ್ ನ್ನೂ ಪರಿಕ್ಷಿಸಿ. ನೆಟ್ ವರ್ಕ್ ಐಟಂ ನ್ನು ಆಯ್ಕೆ ಮಾಡಿ ಮತ್ತು ನೆಟ್ ವರ್ಕ್ ಐಕಾನ್ ನ ಪಕ್ಕದಲ್ಲಿ ಹಸಿರು ಚಿಹ್ನೆ ಇದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

        b) ಇಷ್ಟು ಮಾಡಿದರೆ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗಿ ಬಿಡುತ್ತದೆ ಎಂದು ಹೇಳಲಾಗುವುದಿಲ್ಲ. ನೀವು ಆಪಲ್ ನ ಸಿಸ್ಟಮ್ ಪೇಜನ್ನು ಪರೀಕ್ಷೆ ಮಾಡಬಹುದು ಮತ್ತು ಆಪಲ್ ಸೇವೆಗಳಾದ ಐಕ್ಲೌಡ್, ಆಪ್ ಸ್ಟೋರ್ ಇತ್ಯಾದಿಗಳ ಬಗೆಗಿನ ಸ್ಟೇಟಸ್ ಮಾಹಿತಿಯನ್ನು ಪಡೆದುಕೊಳ್ಳುವುದು. ಒಂದು ವೇಳೆ ಇದ್ಯಾವುದೇ ಸೇವೆಯಲ್ಲಿ ಕೆಂಪು ವರ್ಣದ ಐಕಾನ್ ಕಾಣಿಸಿಕೊಂಡರೆ, ಈ ಕೆಳಗಿನ ಹಂತವನ್ನು ನೀವು ಮಾಡಬೇಕಾಗಬಹುದು,

        c) ಒಂದು ವೇಳೆ ಎಲ್ಲಾ ಮೆಸೇಜ್ ಗಳು ಹಸಿರು ವರ್ಣದ ಹೊರತಾಗಿ ಇದ್ದರೆ. ನೀವು ಸ್ಟೋರ್ > ಲಾಗ್ ಔಟ್ ಮತ್ತು ಆಪ್ ಸ್ಟೋರ್ ನಿಂದ ಹೊರಬನ್ನಿ ಮತ್ತು ಪುನಃ ರೀಲಾಂಚ್ ಮಾಡಿ ಸೈನ್ ಇನ್ ಆಗಿ.

        ಆಪ್ ಖರೀದಿಸುವಾಗ ಬರುವ ಎರರ್ ಗಳು 

        ಆಪ್ ಖರೀದಿಸುವಾಗ ಬರುವ ಎರರ್ ಗಳು 

        ನಿವು ಮ್ಯಾಕ್ ಓಎಸ್ ಅಥವಾ ಹಲವಾರು ಆಪಲ್ ಐಡಿಯನ್ನು ಅಪ್ ಡೇಟ್ ಮಾಡುವಾಗ ಈ ರೀತಿಯ ಮೆಸೇಜ್ ‘We could not complete your purchase: Unknown Error' ಬರುತ್ತದೆ ಅಂದರೆ ನಾವು ನಿಮ್ಮ ಖರೀದಿಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ: ಅಪರಿಚಿತ ಎರರ್ ಒಂದು ಕಾಣಿಸುತ್ತಿದೆ ಎಂದರ್ಥ. ಒಂದು ವೇಳೆ ಇಂತಹ ಸಮಸ್ಯೆ ಕಾಣಿಸಿಕೊಂಡರೆ, ಆಪ್ ಸ್ಟೋರ್ ಮತ್ತು ಐಟ್ಯೂನ್ಸ್ ನ್ನು ಗಮನಿಸಿ ಮತ್ತು ಎರಡರಲ್ಲೂ ಒಂದೇ ಆಪಲ್ ಐಡಿಯನ್ನು ಬಳಸಿದ್ದೀರಾ ಎಂದು ನೋಡಿ. ಒಂದು ವೇಳೆ ನೀವು ಹಲವಾರು ಐಡಿಯನ್ನು ಬಳಕೆ ಮಾಡುತ್ತಿದ್ದಲ್ಲಿ, ಆಪ್ ನಿಂದ ಲಾಗ್ ಔಟ್ ಆಗಿ ಮತ್ತು ಒಂದೇ ಆಪಲ್ ಐಡಿಯಿಂದ ಸೈನ್ ಇನ್ ಆಗಿ.

Best Mobiles in India

English summary
5 common Mac App Store problems and fixes. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X