Home
ಟೆಕ್ ನೌಕರಿ

ಯೂಟ್ಯೂಬ್‌ನಲ್ಲಿನ ಈ 5 ಟ್ರಿಕ್ಸ್‌ಗಳು ಖಂಡಿತ ನಿಮಗೆ ಗೊತ್ತಿಲ್ಲಾ!!..ಚಾಲೆಂಜ್?

ಇಂದಿನ ಲೇಖನದಲ್ಲಿ ಯೂಟ್ಯೂಬ್‌ನಲ್ಲಿ ನೀವು ತಿಳಿಯದೇ ಇರಬಹುದಾದ ಕೆಲವು ಟ್ರಿಕ್ಸ್‌ಗಳನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

By Bhaskar N J

ಪ್ರತಿದಿನ ಒಂದು ಜಿಬಿ ಡೇಟಾ ದೊರೆತನಂತರ ಯೂಟ್ಯೂಬ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಇವರಲ್ಲಿ ಪ್ರತಿದಿನ ಒಂದು ಜಿಬಿ ಡೇಟಾ ಹೇಗೆ ಖಾಲಿ ಮಾಡುವುದು ಎಂದೇ ಯೂಟ್ಯೂಬ್‌ಗೆ ಭೇಟಿ ನೀಡುತ್ತಿರುವವರ ಸಂಖ್ಯೆಯೇನು ಕಡಿಮೆ ಇಲ್ಲ ಎನ್ನಬಹುದು. ಹೌದಲ್ಲವೇ!? ಆದರೆ, ನಾವು ಇಂದು ನಿಮಗೆ ಹೇಳುತ್ತಿರುವ ವಿಷಯ ಇದಲ್ಲ.!!

ಹೌದು, ಪ್ರತಿದಿನ ಯುಟ್ಯೂಬ್‌ ಓಪನ್‌ ಮಾಡಿ, ವಿಡಿಯೋಗಳನ್ನು ವೀಕ್ಷಿಸುವ ನೀವು ಯೂಟ್ಯೂಬ್ ನೀಡಿರುವ ಕೆಲವು ಸವಲತ್ತುಗಳನ್ನು ಬಳಸಿಕೊಳ್ಳುವುದೇ ಇಲ್ಲ ಅಥವಾ ಅವುಗಳನ್ನು ಬಳಸಿಕೊಳ್ಳಲು ಮಾಹಿತಿಯನ್ನು ತಿಳಿಯದಿರಬಹುದು.!! ಹಾಗಾಗಿ, ಇಂದಿನ ಲೇಖನದಲ್ಲಿ ಯೂಟ್ಯೂಬ್‌ನಲ್ಲಿ ನೀವು ತಿಳಿಯದೇ ಇರಬಹುದಾದ ಕೆಲವು ಟ್ರಿಕ್ಸ್‌ಗಳನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಅವುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಯೂಟ್ಯೂಬ್‌ನಲ್ಲಿ ಜಿಐಎಫ್ ಕ್ರಿಯೇಟ್ !!

ಯೂಟ್ಯೂಬ್‌ನಲ್ಲಿ ಜಿಐಎಫ್ ಕ್ರಿಯೇಟ್ !!

ಈಗೆಲ್ಲಾ ಜಿಫ್‌ಗಳು ಫೇಮಸ್ ಆಗುತ್ತಿರುವುದು ನಿಮಗೆಲ್ಲಾ ಗೊತ್ತು ಅಲ್ಲವೇ? ಅಂತಹ ಜಿಫ್ ಅನ್ನು ಯೂಟ್ಯೂಬ್‌ನಲ್ಲಿಯೇ ಕ್ರಿಯೇಟ್ ಮಾಡಬಹುದು.!!ಬ್ರೌಸರ್‌ಟ್ಯಾಬ್‌ನಲ್ಲಿ ಯುಟ್ಯೂಬ್ ಮುಂಚೆ ಜಿಐಎಫ್ ಎಂಬ ಪದ ಸೇರಿಸಿ (gifyoutube) ವೆಬ್‌ಸೈಟ್ ತೆರೆದರೆ ಜಿಫ್ ಕ್ರಿಯೇಟ್ ಮಾಡುವ ಆಯ್ಕೆ ಕಾಣಿಸುತ್ತದೆ. ಇಲ್ಲಿ ಯಾವುದೇ ವಿಡಿಯೋದಿಂದ 15 ಸೆಕೆಂಡ್‌ ಭಾಗವನ್ನು ಸೆಲೆಕ್ಟ್ ಮಾಡಿ ಅದನ್ನು ಜಿಐಎಫ್ ಪರಿವರ್ತಿಸಬಹುದು!!

ಕರೋಕೆಯನ್ನು ನೇರವಾಗಿ ಹುಡುಕಿ!!

ಕರೋಕೆಯನ್ನು ನೇರವಾಗಿ ಹುಡುಕಿ!!

ಮ್ಯೂಸಿಕ್ ಇದ್ದರೆ ನಾವು ಹಾಡಿದರೆ ಚೆನ್ನಾಗಿರುತ್ತದೆ ಎಂದು ನಿಮಗೆ ಅನಿಸುತ್ತದೆಯೇ? ಹಾಗಾದರೆ, ನಿಮಗೆ ಯಾವ ಹಾಡಿನ ಮ್ಯೂಸಿಕ್ ಬೇಕು ಅದನ್ನು ಪಡೆಯಲು ಸಿಂಪಲ್ ಟ್ರಿಕ್ಸ್ ಇದೆ.!! ಯೂಟ್ಯೂಬ್‌ನ ಸರ್ಚ್ ಬಾಕ್ಸ್‌ನಲ್ಲಿ ಕರೋಕೆ (karaoke) ಅಂತ ಟೈಪ್‌ ಮಾಡಿ ಬಳಿಕ ನಿಮಗೆ ಬೇಕಾದ ಹಾಡಿನ ಹೆಸರನ್ನು ಟೈಪ್‌ ಮಾಡಿದರೆ ಸಾಕು. ಮಾಡಿದರೆ ಸಾಕು. ನಿಮಗೆ ಕರೋಕೆ ಸಾಂಗ್‌ ಸಿಕ್ಕು ಬಿಡುತ್ತದೆ.!!

ಡೌನ್‌ಲೋಡ್ ಮಾಡಬಹದು!!

ಡೌನ್‌ಲೋಡ್ ಮಾಡಬಹದು!!

ಯುಟ್ಯೂಬ್ ವಿಡಿಯೋ ಡೌನ್‌ಲೋಡ್‌ ಮಾಡಿಕೊಳ್ಳುವ ತೀರಾ ಸರಳ ಟ್ರಿಕ್ಸ್ ಒಂದು ಬಹುತೇಕರಿಗೆ ಇನ್ನು ಗೊತ್ತಿಲ್ಲ ಎನ್ನಬಹುದು.! ನಿಮಗೆ ಬೇಕಾದ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಯೂಟ್ಯೂಬ್ ಲಿಂಕ್‌ನಲ್ಲಿ youtube ಮುಂದೆ ss ಸೇರಿಸಿದರೆ (www.ssyoutube.com) ಸಾಕು.! ವಿಡಿಯೋ ಡೌನ್‌ಲೋಡ್‌ ಮಾಡಿಕೊಳ್ಳುವ ಆಯ್ಕೆಗೆ ನೇರವಾಗಿ ತೆರಳುತ್ತೀರಾ.!! ಅಲ್ಲಿ ನಿಮಗೆ ಬೇಕಾದ ಫಾರ್ಮೆಟ್‌ಗಳಲ್ಲಿ ವಿಡಿಯೋ ಡೌನ್‌ಲೋಡ್ ಮಾಡಬಹುದು.!!

ಜಾಹಿರಾತು ನಿಯಂತ್ರಿಸಿ!!

ಜಾಹಿರಾತು ನಿಯಂತ್ರಿಸಿ!!

ಯುಟ್ಯೂಬ್‌ನಲ್ಲಿ ಬರುವ ಜಾಹೀರಾತುಗಳು ನಿಮಗೆ ಸಾಕಷ್ಟು ಕಿರಿಕಿರಿ ಎನಿಸುತ್ತದೆ ಎಲ್ಲವೇ? ಚಿಂತಿಸಬೇಡಿ. ಅವುಗಳನ್ನು ನಿಯಂತ್ರಿಸಬಹುದು.!! ಗೂಗಲ್‌ನಲ್ಲಿ ಆಡ್‌ ಪ್ರಿಫರೆನ್ಸ್‌ಗೆ ಹೋಗಿ ಮತ್ತು ಯಾವ ರೀತಿ ಜಾಹೀರಾತುಗಳು ಬೇಡ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಆಯ್ಕೆಗೆ ಅನುಸಾರವಾಗಿ ಆ ಜಾಹೀರಾತುಗಳು ನಿಮಗೆ ಕಾಣಿಸುವುದಿಲ್ಲ.!!

ಸ್ಪೀಡ್ ಹೊಂದಿಸಿಕೊಳ್ಳಬಹುದು!!

ಸ್ಪೀಡ್ ಹೊಂದಿಸಿಕೊಳ್ಳಬಹುದು!!

ಯಾವುದೇ ವಿಡಿಯೋ ನೋಡುವಾಗ ಅದು ನಿಧಾನವಾಗಿ ಅಥವಾ ಫಾಸ್ಟ್ ಆಗಿ ನೋಡಬೇಕು ಎಂದೆನಿಸಿದರೆ ಅದಕ್ಕೂ ಯೂಟ್ಯೂಬ್ ಸಹಾಯ ಮಾಡುತ್ತದೆ. ಯುಟ್ಯೂಬ್ ಸೆಟ್ಟಿಂಗ್ಸ್‌ಗೆ ಹೋಗಿ ಅಲ್ಲಿರುವ ಸ್ಪೀಡ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡರೆ, ವಿಡಿಯೋ ಅನ್ನು ಶೇ.50 ಇಲ್ಲವೇ ಶೇ.25ರಷ್ಟು ಸ್ಲೋ ಅಥವಾ ಸ್ಪೀಡ್ ಮಾಡಿಕೊಳ್ಳುವ ಆಯ್ಕೆ ಲಭ್ಯವಾಗುತ್ತದೆ.!!

Best Mobiles in India

English summary
Today i will show you 5 hidden Youtube tipps and tricks. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+