ಸ್ಮಾರ್ಟ್‌ಪೋನ್ ಸ್ಪೋಟಕ್ಕೂ ಮುನ್ನದ ಲಕ್ಷಣಗಳು ಹೀಗಿರುತ್ತವೆ!?.ಅದಕ್ಕೆ ಪರಿಹಾರ!?
ಪ್ರತಿದಿನ ಸ್ಮಾರ್ಟ್‌ಫೋನ್‌ಗಳು ಬ್ಲಾಸ್ಟ್ ಆಗುತ್ತಿರುವ ಸುದ್ದಿಗಳನ್ನು ಕೇಳಿ ಸ್ಮಾರ್ಟ್‌ಫೋನ್‌ಗಳನ್ನು ಜೋಬಿನಲ್ಲಿ ಇಟ್ಟುಕೊಳ್ಳವುದೇ ಬಹುದೊಡ್ಡ ಹೆದರಿಕೆಯಾಗಿದೆ.!
ಪ್ರತಿದಿನ ಸ್ಮಾರ್ಟ್‌ಫೋನ್‌ಗಳು ಬ್ಲಾಸ್ಟ್ ಆಗುತ್ತಿರುವ ಸುದ್ದಿಗಳನ್ನು ಕೇಳಿ ಸ್ಮಾರ್ಟ್‌ಫೋನ್‌ಗಳನ್ನು ಜೋಬಿನಲ್ಲಿ ಇಟ್ಟುಕೊಳ್ಳವುದೇ ಬಹುದೊಡ್ಡ ಹೆದರಿಕೆಯಾಗಿದೆ.! ಯಾವ ಕ್ಷಣದಲ್ಲಿ ನನ್ನ ಮೊಬೈಲ್ ಕೂಡ ಬ್ಲಾಸ್ಟ್ ಆಗಿಬಿಡುತ್ತದೆಯೂ, ನನ್ನ ಫೊನ್ ಬ್ಲಾಸ್ಟ್ ಆದರೆ ಏನು ಕಥೆ? ಬ್ಲಾಸ್ಟ್ ಆಗದಂತೆ ಹೇಗೆ ತಡೆಯುವುದು? ಎಂಬ ಅನಿಸಿಕೆಗಳು ಎಲ್ಲರಲ್ಲಿಯೂ ಮೂಡುತ್ತಿವೆ.!!
ಹಾಗಾಗಿ, ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗುವ ಲಕ್ಷಣಗಳು ಯಾವುವು? ಮತ್ತು ನಾವು ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗದಂತೆ ಹೇಗೆ ಎಚ್ಚರವಹಿಸಬೇಕು?ಎಂಬುದನ್ನು ತಿಳಿಸಿಕೊಡುತ್ತೇವೆ.!! ಹಾಗಾದರೆ, ಫೋನ್ ಬ್ಲಾಸ್ಟ್ ಆಗುವಾಗ ಆಗಬಹುದಾದ ಲಕ್ಷಣಗಳೇನು ಮತ್ತು ಅದಕ್ಕೆ ಪರಿಹಾರವೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಬ್ಯಾಟರಿ ದಪ್ಪವಾಗಿದ್ದರೆ ಬ್ಲಾಸ್ಟ್ ಆಗುತ್ತದೆ!!
ನಿಮ್ಮ ಫೋನ್‌ನ ಬ್ಯಾಟರಿ ಬೇಗನೆ ಬಿಸಿಯಾಗುತ್ತಿದ್ದರೆ, ಅಥವಾ ನಿಮ್ಮ ಫೋನ್ ಹಿಂಬಾಗದಲ್ಲಿ ಬ್ಯಾಟರಿ ಊದಿಕೊಂಡತೆ ಕಾಣಿಸಿದರೆ ಅಂತಹ ಬ್ಯಾಟರಿಯನ್ನು ಕೂಡಲೇ ಬದಲಾಯಿಸಿಬಿಡಿ. ಏಕೆಂದರೆ, ಬ್ಯಾಟರಿ ಒಳಗಿನ ಸೆಲ್ಟ್ ತೀರ್ವತೆಯಿಂದ ಅದು ಯಾವಾಗ ಬೇಕಾದರು ಸ್ಪೋಟಗೊಳ್ಳಬಹುದು.!!

ಇತರೆ ಚಾರ್ಜರ್ ಬಳಕೆ ಬೇಡ.!!
ಫೋನ್‌ನಲ್ಲಿ ನೀಡಿರುವ ಚಾರ್ಜರ್ ಬಿಟ್ಟು ಇತರೆ ಚಾರ್ಜರ್ ಬಳಕೆ ಮಾಡಿದರೆ ಸ್ಮಾರ್ಟ್‌ಪೋನ್‌ಗಳು ಸ್ಪೋಟಗೊಳ್ಳುವ ಅವಕಾಶಗಳೇ ಹೆಚ್ಚು.!! ಒಂದು ಫೋನ್‌ಗೂ ಮತ್ತು ಇನ್ನೊಂದು ಫೋನ್‌ಚಾರ್ಜಿಂಗ್ ಸ್ಟ್ರೆಂತ್ ಬದಲಾಗಿರುತ್ತದೆ. ಹೆಚ್ಚು ಚಾರ್ಜ್ ಪ್ರವಹಿಸುವ ಚಾರ್ಜರ್‌ನಿಂದ ಫೋನ್ ಸ್ಪೋಟಗೊಳ್ಳುತ್ತದೆ.!!

ತಂಪಾದ ವಾತವರಣ!?
ಹೆಚ್ಚು ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಖ್ಯಾತವಾದ ಲೀಥಿಯಂ ಆಯನ್ ಬ್ಯಾಟರಿಗಳನ್ನು ಬಳಕೆ ಮಾಡಿರುತ್ತಾರೆ. ಈ ಲೀಥಿಯಂ ಆಯನ್ ಬ್ಯಾಟರಿಯನ್ನು ತುಂಬಾ ತಂಪಾದ ವಾತಾವರಣದಲ್ಲಿ ಚಾರ್ಜ್ ಮಾಡಬಾರದು ಎಂದು ಹೇಳಲಾಗುತ್ತದೆ. ಆದರೆ, ಕಂಪೆನಿ ಹೇಳಿದಂತೆ ಈ ರೀತಿಯ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದೆ.!!

ಮೊಬೈಲ್ ಕವರ್ ಬಳಕೆ ಬೇಡ!!
ಮೊಬೈಲ್ ಕಂಪೆನಿಗಳು ಸ್ಮಾರ್ಟ್‌ಫೋನ್ ತಯಾರಿಸುವಾಗ ಫೋನ್ ವಿನ್ಯಾಸದಂತೆ ಬ್ಯಾಟರಿಯನ್ನು ವಿನ್ಯಾಸ ಮಾಡಿರುತ್ತವೆ. ಆದರೆ, ಮೊಬೈಲ್ ಕವರ್‌ಗಳಿಂದಾಗಿ ಫೋನ್ ಬ್ಯಾರಿಗಳ ಮೇಲೆ ಹೆಚ್ಚು ಒತ್ತಡ ಬಿದ್ದು ಬ್ಯಾಟರಿ ಸ್ಪೋಟವಾಗುತ್ತದೆ ಎಂದು ಒಮದು ರಿಸರ್ಚ್ ಹೇಳಿದೆ.!! ಹಾಗಾಗಿ, ಇದು ಕೂಡ ನಿಮ್ಮ ಗಮನದಲ್ಲಿರಲಿ.!!

ಹೆಚ್ಚು ಚಾರ್ಜ್ ಮಾಡಬೇಡಿ!!
ಸ್ಮಾರ್ಟ್‌ಫೋನ್ ಅನ್ನು ಹೆಚ್ಚು ಹೊತ್ತು ಚಾರ್ಜ್ ಮಾಡಿದರೂ ಫೋನ್ ಬ್ಲಾಸ್ಟ್ ಆಗಬಹುದಾದ ಸಂಭವ ಹೆಚ್ಚಿರುತ್ತದೆ.!! ಮೊಬೈಲ್ ಫೋನ್‌ಗಳಲ್ಲಿ ಆಟೊಮೆಟಿಕ್ ಆಗಿ ಚಾರ್ಜ್ ಪ್ರವಹಿಸದಂತೆ ಕಾಪಾಡುವ ತಂತ್ರಜ್ಞಾನವಿರುತ್ತದೆ . ಆದರೆ, ಈ ತಂತ್ರಜ್ಞಾನವೂ ಕೆಲವೊಮ್ಮೆ ಕೈ ಕೊಡಬಹುದು ಎಂದು ವರದಿಗಳು ಹೇಳಿವೆ.


Click it and Unblock the Notifications








