Home
ಟೆಕ್ ನೌಕರಿ

ಪೋಟೋ ಗುಣಮಟ್ಟ ಹೆಚ್ಚಿಸಲು ಇಲ್ಲಿವೆ ಸಲಹೆಗಳು..!

By Gizbot Bureau

ಫೋಟೋ ತೆಗೆಯುವುದು ಒಂದು ಕಲೆ. ನಾವು ತೆಗೆದುಕೊಳ್ಳುವ ಎಲ್ಲಾ ಫೋಟೋಗಳು ಉತ್ತಮ ಛಾಯಾಚಿತ್ರಗಳೇ ಆಗಿರುವುದಿಲ್ಲ. ಅದಕ್ಕೆ ಕಾರಣಗಳು ಹಲವಾರು. ಒಂದು ಡಿವೈಸಿನ ವೈಶಿಷ್ಟ್ಯತೆಗಳು ಮಾತ್ರ ಉತ್ತಮ ಫೋಟೋವನ್ನು ತೆಗೆಯಬಲ್ಲವು ಎಂದು ಭಾವಿಸಬೇಡಿ. ಕೇವಲ ದುಬಾರಿ ಫೋನ್ ಗಳಿಂದ ಮಾತ್ರ ಉತ್ತಮ ಛಾಯಾಚಿತ್ರ ಬರುವುದಿಲ್ಲ.

ಬದಲಾಗಿ ಉತ್ತಮ ಗುಣಮಟ್ಟದ ಫೋಟೋಗಳನ್ನು ಪಡೆಯಲು ಕೆಲವು ಸೂತ್ರಗಳನ್ನು ಅನುಸರಿಸಿಕೊಳ್ಳಬೇಕು ಅಂದರೆ ನಿಮ್ಮ ಕ್ಯಾಮರಾದ ಕೆಲವು ಸೆಟ್ಟಿಂಗ್ಸ್ ಗಳನ್ನು ಗಮನದಲ್ಲಿ ಇಟ್ಟುಕೊಂಡು ಫೋಟೋ ಕ್ಲಿಕ್ಕಿಸಿಕೊಳ್ಳಬೇಕು.

ಪೋಟೋ ಗುಣಮಟ್ಟ ಹೆಚ್ಚಿಸಲು ಇಲ್ಲಿವೆ ಸಲಹೆಗಳು..!

ನೀವು ಬಳಸುವ ಕ್ಯಾಮರಾ ಅಥವಾ ಫೋನ್ ಯಾವುದೇ ಇರಲಿ, ಈ ಪ್ರಮುಖ ಅಂಶಗಳ ಬಗ್ಗೆ ಜಾಗೃತಿ ವಹಿಸಿದರೆ ನೀವು ಕ್ಲಿಕ್ಕಿಸುವ ಫೋಟೋ ಅತ್ಯುತ್ತಮ ಗುಣಮಟ್ಟದ ಫೋಟೋ ಆಗಿರಲು ಸಾಧ್ಯವಿದೆ. ಹತ್ತು ಫೋಟೋಗಳಲ್ಲಿ ಕೇವಲ ಒಂದು ಫೋಟೋ ಚೆನ್ನಾಗಿ ಬಂದರೆ ಸಾಲದು, 10 ಫೋಟೋ ಕ್ಲಿಕ್ಕಿಸಿದಾಗ ಕೊನೆಪಕ್ಷ ಎಂಟು ಫೋಟೋಗಳಾದರೂ ಉತ್ತಮ ಫೋಟೋಗಳಾಗಿರಬೇಕು.

ಹಾಗೆ ನೀವು ತೆಗೆಯುವ ಎಲ್ಲಾ ಫೋಟೋಗಳು ಉತ್ತಮವಾಗಿರಬೇಕು ಎಂದರೆ ನಿಮ್ಮ ಕ್ಯಾಮರಾದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು. ಆಗ ಯಾವುದೇ ಕ್ಯಾಮರಾ ಪರಿಣಿತರಿಗೂ ಮಿಗಿಲಾಗುವಂತೆ ಫೋಟೋ ಕ್ಲಿಕ್ಕಿಸಲು ಸಾಧ್ಯವಾಗುತ್ತದೆ. ಹಾಗಾದ್ರೆ ಏನೆಲ್ಲ ಅಂಶಗಳು ನಿಮ್ಮ ಗಮನದಲ್ಲಿ ಇರಬೇಕು, ಯಾವ ಬದಲಾವಣೆಗಳನ್ನು ಮಾಡಬೇಕು ಎಂಬ ಪ್ರಮುಖ 5 ಅಂಶಗಳ ಪಟ್ಟಿಯನ್ನು ನಾವು ಈ ಲೇಖನದಲ್ಲಿ ವಿವರಿಸಿದ್ದೇವೆ. ಮುಂದೆ ಓದಿ.

ಐಎಸ್ಓ ಕಡಿಮೆ ಮಾಡಿ 

ಐಎಸ್ಓ ಕಡಿಮೆ ಮಾಡಿ 

ಐಎಸ್ಓ ಎನ್ನುವುದು ನಿಮ್ಮ ಕ್ಯಾಮರಾ ಸಂವೇದನೆಯ ಬೆಳಕನ್ನು ಸೂಚಿಸುವ ಒಂದು ಮಾನದಂಡವಾಗಿದೆ. ಐಎಸ್ಓನ್ನು ಬದಲಾಯಿಸುವುದು ಎಂದರೆ ನೀವು ನಿಮ್ಮ ಕ್ಯಾಮರಾ ಸೆನ್ಸರ್ ಮೂಲಕ ಹರಿಯುವ ಬೆಳಕಿನ ಪ್ರಮಾಣವನ್ನು ಕಂಟ್ರೋಲ್ ಮಾಡುವುದು ಎಂದರ್ಥ.

ಒಂದು ವೇಳೆ ಹೆಚ್ಚು ಐಎಸ್ಓ ಹೊಂದಿದ್ದರೆ ಅದು ನಿಮ್ಮ ಚಿತ್ರದಲ್ಲಿ ಹೆಚ್ಚಿನ ಡಿಜಿಟಲ್ ಶಬ್ದವನ್ನು ಉಂಟುಮಾಡುತ್ತದೆ ಮತ್ತು ಚಿತ್ರದ ಶಾರ್ಪ್ ನೆಸ್ ನ್ನು ಕಡಿಮೆ ಮಾಡಿ ಚಿತ್ರದ ಗುಣಮಟ್ಟದ ಮೇಲೆ ಪರಿಣಾಮವಾಗುತ್ತದೆ.ಒಂದು ಸಾಮಾನ್ಯ ನಿಯಮವೇನೆಂದರೆ, ಐಎಸ್ಓವನ್ನು ಕಡಿಮೆಯಾಗಿ ಹೊಂದಾಣಿಕೆ ಮಾಡಿದರೆ, ನೀವು ಅತ್ಯಂತ ಉತ್ತಮ ಗುಣಮಟ್ಟದ ಫೋಟೋವನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ಎಂತಹ ಫೋಟೋವನ್ನು ತೆಗೆಯುತ್ತಿದ್ದೀರಿ ಎಂಬ ಆಧಾರದ ಮೇಲೆ ಐಎಸ್ಓವನ್ನು ಸೆಟ್ ಮಾಡಿಕೊಳ್ಳಲು ಸಲಹೆ ನೀಡಲಾಗುತ್ತದೆ.

ದ್ಯುತಿರಂಧ್ರ ಹೆಚ್ಚಿಸುವುದು 

ದ್ಯುತಿರಂಧ್ರ ಹೆಚ್ಚಿಸುವುದು 

ಮಸೂರಗಳ ಯಾಂತ್ರಿಕ ವಿನ್ಯಾಸದ ಕಾರಣದಿಂದಾಗಿ ದ್ಯುತಿರಂಧ್ರದ ತುದಿಗಳಲ್ಲಿ ದೈಹಿಕ ನ್ಯೂನತೆಗಳು ಉಂಟಾಗುತ್ತದೆ. ಸರಳವಾಗಿ ಹೇಳುವುದಾದರೆ ಒಂದು ಕ್ಯಾಮರಾದ ದ್ಯುತಿರಂಧ್ರ ಸರಿಯಾಗಿ ಇಲ್ಲದೇ ಇದ್ದರೆ ಉತ್ತಮ ಗುಣಮಟ್ಟದ ಫೋಟೋವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ನೀವು f/1.4 ಇರುವ ದ್ಯುತಿರಂದ್ರವನ್ನು ಬಳಸುತ್ತಿದ್ದೀರಿ ಎಂದುಕೊಳ್ಳೋಣ, ಆಗ ಆ ದ್ಯುತಿರಂಧ್ರದ ಮೂಲಕ ಹೆಚ್ಚು ಬೆಳಕು ಪ್ರವಹಿಸಲ್ಪಡುತ್ತದೆ. ಆಗ ಇದು ಐಎಸ್ಓ ಕಡಿಮೆಗೊಳಿಸಲು ಸಾಕಷ್ಟು ಸಮಯ ಹಿಡಿ.ತ್ತದೆ. ಅತೀ ಅಗಲವಾದ ದ್ಯುತಿರಂಧ್ರವನ್ನು ಬಳಕೆ ಮಾಡಿದರೆ ಚಿತ್ರದ ಶಾರ್ಪ್ ನೆಸ್ ಕಡಿಮೆಯಾಗುತ್ತದೆ. ದ್ಯುತಿರಂದ್ರವನ್ನು ಕಡಿಮೆ ಮಾಡಿ ಅಂದರೆ ಸುಮಾರು f/2.8 ಅಥವಾ f/3.5 ಮಾಡಿದರೆ ಆಗ ಚಿತ್ರದ ಶಾರ್ಪ್ ನೆಸ್ ಹೆಚ್ಚಿರುತ್ತದೆ.

ಹಾಗಂದ ಮಾತ್ರಕ್ಕೆ ಸಣ್ಣ ದ್ಯುತಿರಂಧ್ರವಿರುವ ಕ್ಯಾಮರಾ ಬಳಕೆಯಿಂದ ಕಡಿಮೆ ಬೆಳಕು ಮಸೂರದ ಒಳಗೆ ಪ್ರವೇಶಿಸಿ ಚಿತ್ರದ ತೀಕ್ಷ್ಣತೆಯ ಮೇಲೆ ಪರಿಣಾಮ ಬೀರುತ್ತದೆ ಎಂತರ್ಥವಲ್ಲ. ಇತರೆ ಅಂಶಗಳೂ ಕೂಡ ಇದರ ಜೊತೆ ಸೇರಿಕೊಳ್ಳುತ್ತದೆ ಎಂಬುದು ಅಷ್ಟೇ ನಿಜ. ಈ ಸಮಸ್ಯೆಯು ಎಲ್ಲಾ ಮಸೂರಗಳಲ್ಲಿ ಮತ್ತು ಮೊಬೈಲ್ ತಯಾರಿಕೆಗಳಲ್ಲಿ ಜೊತೆಗೆ ಅದರ ಬೆಲೆಯಲ್ಲಿ ಪ್ರಭಾವ ಬೀರುವ ಒಂದು ಅಂಶವಾಗಿರುತ್ತದೆ. ಹಾಗಾಗಿ ಆದಷ್ಟು ಮಧ್ಯಮ ಶ್ರೇಣಿಯ ದ್ಯುತಿರಂಧ್ರ ಅಂದರೆ f/3.5 ಅಥವಾ f/8 ಇರುವುದನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಉತ್ತಮ ಚಿತ್ರಗಳನ್ನು ಪಡೆಯಲು ಸಹಕರಿಸುತ್ತದೆ.

ಟ್ರೈಪಾಡ್ ಬಳಸಿ /ಶಟರ್ ವೇಗ ಹೆಚ್ಚಿಸಿ 

ಟ್ರೈಪಾಡ್ ಬಳಸಿ /ಶಟರ್ ವೇಗ ಹೆಚ್ಚಿಸಿ 

ಒಂದು ವೇಳೆ ನೀವು ಹ್ಯಾಂಡೆಲ್ಡ್ ಕ್ಯಾಮರಾವನ್ನು ಬಳಸುತ್ತಿದ್ದರೆ ಅದು ದೀರ್ಘವಾದ ಶಟರ್ ವೇಗವನ್ನು ಹೊಂದಿರುತ್ತದೆ. ಅಂದರೆ,ನಿಮ್ಮ ಕೈಗಳನ್ನು ಅಲುಗಾಡಿಸಿ ಅಥವಾ ಯಾವುದೇ ಚಲಿಸುತ್ತಿರುವ ವಸ್ತುವಿನ ಫೋಟೋ ಕ್ಲಿಕ್ಕಿಸಿದರೆ ಅದು ಬ್ಲರ್ ಆಗಿ ಬರುತ್ತದೆ. ಕೈ ಅಲುಗಾಡಿಸದೇ ತೆಗೆದಿದ್ದೇನೆ ಎಂದು ನೀವು ಭಾವಿಸಿದರೂ ಕೂಡ ಚಿತ್ರದ ಗುಣಮಟ್ಟ ಹಾಳಾಗಿರುತ್ತದೆ. ಶಟರ್ ವೇಗ ಅಧಿಕವಾಗಿದ್ದರೆ ಫೋಟೋ ಹೀಗೆ ಹಾಳಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಅಥವಾ ಇದೆಲ್ಲದಕ್ಕಿಂದ ಉತ್ತಮ ಉಪಾಯವೆಂದರೆ ಅದು ಟ್ರೈಪಾಡ್ ಬಳಕೆ ಮಾಡುವುದಾಗಿದೆ.

ನಿಮ್ಮ ಫೋಕಸ್ ಮಾಡುವ ತಂತ್ರಗಾರಿಕೆ ವೃದ್ಧಿಸಿಕೊಳ್ಳಿ 

ನಿಮ್ಮ ಫೋಕಸ್ ಮಾಡುವ ತಂತ್ರಗಾರಿಕೆ ವೃದ್ಧಿಸಿಕೊಳ್ಳಿ 

ಶಟರ್ ಸ್ಪೀಡ್ ನ್ನು ಸರಿಪಡಿಸಿಕೊಂಡರೆ, ಮತ್ತೊಂದು ಪ್ರಮುಖ ಅಂಶ ನಿಮ್ಮ ಚಿತ್ರದಲ್ಲಿ ಬ್ಲರ್ ಆಗುವಂತೆ ಮಾಡುವುದೆಂದರೆ ಅದು ಫೋಕಸ್ ಮಾಡುವಿಕೆ. ಯಾವುದರ ಚಿತ್ರವನ್ನು ಕ್ಲಿಕ್ಕಿಸಬೇಕು ಅಂದುಕೊಂಡಿದ್ದೀರೋ ಅದನ್ನು ಸರಿಯಾಗಿ ಫೋಕಸ್ ಮಾಡದೇ ಇದ್ದರೆ, ಚಿತ್ರದ ಗುಣಮಟ್ಟ ಹಾಳಾಗುತ್ತದೆ. ನಿಮ್ಮ ಕ್ಯಾಮರಾವನ್ನು ಅಧ್ಯಯನ ಮಾಡುವುದು ಮತ್ತು ಅದು ಹೇಗೆ ಕೆಲಸ ನಿರ್ವಹಿಸುತ್ತದೆ ಎಂದು ತಿಳಿದುಕೊಂಡಿರುವುದು ಬಹಳ ಮುಖ್ಯ ವಿಚಾರವಾಗಿರುತ್ತದೆ. ಯಾವುದೇ ಚಿತ್ರವನ್ನು ಕ್ಲಿಕ್ಕಿಸುವ ಮುನ್ನ ನೀವು ಕ್ಯಾಮರಾ ಫೋಕಸ್ ಮಾಡುವುದು ಬಹಳ ಪ್ರಮುಖವಾದುದ್ದಾಗಿದೆ. ನಿಮ್ಮ ಫೋಕಸ್ ಸರಿಯಿದ್ದರೆ ಉತ್ತಮ ಗುಣಮಟ್ಟದ ಫೋಟೋ ನಿಮ್ಮದಾಗಿಸಿಕೊಳ್ಳಬಹುದು.

ವೈಟ್ ಬ್ಯಾಲೆನ್ಸ್ ಸರಿಪಡಿಸಿಕೊಳ್ಳಿ 

ವೈಟ್ ಬ್ಯಾಲೆನ್ಸ್ ಸರಿಪಡಿಸಿಕೊಳ್ಳಿ 

ವೈಟ್ ಬ್ಯಾಲೆನ್ಸ್ ಅಂದರೆ ಸುಂದರವಾದ ನೈಸರ್ಗಿಕ ಬಣ್ಣಗಳು ಮತ್ತು ಚಿತ್ರದಲ್ಲಿ ಬರುವ ವಿಚಿತ್ರ ಬಣ್ಣಗಳ ನಡುವಿನ ವ್ಯತ್ಯಾಸವಾಗಿರುತ್ತದೆ. ಹಿಮದಲ್ಲಿ ತೆಗೆದ ಚಿತ್ರಗಳು ನೀಲಿ ಬಣ್ಣದಲ್ಲಿ ಮತ್ತು ಯಾವುದಾದರೂ ಪ್ರದೇಶದ ಒಳಗೆ ತೆಗೆದ ಚಿತ್ರವು ಸ್ವಲ್ಪ ಮಟ್ಟಿನ ಹಳದಿ ಬಣ್ಣದಲ್ಲಿ ಗೋಚರಿಸುತ್ತದೆ. ಫೋಟೋದಲ್ಲಿ ಈ ಸಮಸ್ಯೆಯಾಗಬಾರದು ಆದಷ್ಟು ನೈಸರ್ಗಿಕ ಬಣ್ಣವೇ ಬರಬೇಕು ಎಂದರೆ ನೀವು ನಿಮ್ಮ ಕ್ಯಾಮರಾದ ವೈಟ್ ಬ್ಯಾಲೆನ್ಸ್ ನ್ನು ಸರಿಪಡಿಸಿಕೊಳ್ಳಬೇಕು.

Best Mobiles in India

English summary
5 ways to enhance the quality of photos. To know more this visit Kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+