Subscribe to Gizbot

ಇನ್‌ಸ್ಟಾಗ್ರಾಂನಲ್ಲಿ ಫೋಟೊಗೆ ಹೆಚ್ಚು ಲೈಕ್ಸ್ ಪಡೆಯಲು 5 ಟ್ರಿಕ್ಸ್!!

Written By:

ಫೇಸ್‌ಬುಕ್‌ನಲ್ಲಿ ಯಾವುದೇ ಫೋಟೊ ಹಾಕಿದ ತಕ್ಷಣ ನೂರಾರು ಲೈಕುಗಳನ್ನು ಪಡೆಯುವವರಿಗೆ ಸಾಮಾಜಿಕ ತಾಣಗಳಲ್ಲೊಂದಾದ ಇನ್‌ಸ್ಟಾಗ್ರಾಂನಲ್ಲಿ ಮಾತ್ರ ತಮ್ಮ ಪೋಟೊಗೆ ಹೆಚ್ಚು ಲೈಕ್ಸ್ ಪಡೆಯಲು ಸಾಧ್ಯವಾಗುವುದಿಲ್ಲ. ಇನ್‌ಸ್ಟಾಗ್ರಾಂನಲ್ಲಿ ಫೋಟೊ ಶೇರ್ ಮಾಡಿದಷ್ಟು ಸುಲಭವಾಗಿ ಲೈಕ್ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ.!!

ಇನ್‌ಸ್ಟಾಗ್ರಾಂನಲ್ಲಿ ಫೋಟೊಗೆ ಹೆಚ್ಚು ಲೈಕ್ಸ್ ಪಡೆಯಲು 5 ಟ್ರಿಕ್ಸ್!!

ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಸಕ್ರೀಯವಾಗಿರದ ಗೆಳೆಯರು ಇರುವುದರಿಂದ ನಮ್ಮ ಫೋಟೊಗೆ ಲೈಕ್ ಸಿಕ್ಕಿರುವುದಿಲ್ಲ ಎಂಬುದು ನಿಜವಾದರೂ, ಹೆಚ್ಚು ಲೈಕ್ ಪಡೆಯದೇ ಇರಲು ನಾನಾ ಕಾರಣಗಳಿವೆ. ಹಾಗಾದರೆ, ಸಾಮಾಜಿಕ ತಾಣ ಇನ್‌ಸ್ಟಾಗ್ರಾಂನಲ್ಲಿ ಫೋಟೊಗೆ ಹೆಚ್ಚು ಲೈಕ್ ಗಿಟ್ಟಿಸಿಕೊಳ್ಳುವುದು ಹೇಗೆ? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್ ಜತೆ ಲಿಂಕ್ ಮಾಡಿ

ಫೇಸ್‌ಬುಕ್ ಜತೆ ಲಿಂಕ್ ಮಾಡಿ

ಫೇಸ್‌ಬುಕ್‌ನಲ್ಲಿ ನಿಮಗೆ ಸಿಕ್ಕಾಪಟ್ಟೆ ಲೈಕ್ ಸಿಗುತ್ತಿದ್ದರೂ ಇನ್‌ಸ್ಟಾಗ್ರಾಂನಲ್ಲಿ ಲೈಕ್ ಸಿಗುವುದಿಲ್ಲ ಎಂದರೆ, ನಿಮ್ಮ ಇನ್‌ಸ್ಟಾಗ್ರಾಂ ಅಕೌಂಟ್ ಅನ್ನು ಫೇಸ್‌ಬುಕ್ ಜತೆ ಲಿಂಕ್ ಮಾಡಿ. ಇದರಿಂದ ನಿಮ್ಮ ಇನ್‌ಸ್ಟಾಗ್ರಾಂ ಖಾತೆ ಬಗ್ಗೆ ನಿಮ್ಮ ಫೇಸ್‌ಬುಕ್ ಸ್ನೇಹಿತರಿಗೂ ತಿಳಿಯುತ್ತದೆ.

ನೀವು ಲೈಕ್, ಕಾಮೆಂಟ್ ಮಾಡಿ!

ನೀವು ಲೈಕ್, ಕಾಮೆಂಟ್ ಮಾಡಿ!

ನೀವು ಇನ್ನೊಬ್ಬರಿಗೆ ಲೈಕ್ ಮಾಡಿದರೆ ಮಾತ್ರ ಅವರೂ ನಿಮ್ಮ ಪೋಸ್ಟ್‌ಗಳಿಗೆ ಲೈಕ್ ಒತ್ತುತ್ತಾರೆ. ನಿಮಗೆ ಲೈಕ್ ಬರುವುದು ನಿಮ್ಮನ್ನು ಫಾಲೋ ಮಾಡುವವರಿಂದ ಎಂಬುದು ನೆನಪಿರಲಿ. ನಮಗೆ ಮಾತ್ರ ಲೈಕ್, ಕಾಮೆಂಟ್ ಬರಲ್ಲ ಎಂದು ಹೇಳುವ ನಾವು ಇತರರನ್ನು ಲೈಕ್ ಮಾಡದಿದ್ದರೆ ಹೇಗೆ.?
ನೀವು ಇನ್ನೊಬ್ಬರಿಗೆ ಲೈಕ್ ಮಾಡಿದರೆ ಮಾತ್ರ ಅವರೂ ನಿಮ್ಮ ಪೋಸ್ಟ್‌ಗಳಿಗೆ ಲೈಕ್ ಒತ್ತುತ್ತಾರೆ. ನಿಮಗೆ ಲೈಕ್ ಬರುವುದು ನಿಮ್ಮನ್ನು ಫಾಲೋ ಮಾಡುವವರಿಂದ ಎಂಬುದು ನೆನಪಿರಲಿ. ನಮಗೆ ಮಾತ್ರ ಲೈಕ್, ಕಾಮೆಂಟ್ ಬರಲ್ಲ ಎಂದು ಹೇಳುವ ನಾವು ಇತರರನ್ನು ಲೈಕ್ ಮಾಡದಿದ್ದರೆ ಹೇಗೆ.?

ಹ್ಯಾಶ್‌ಟ್ಯಾಗ್ ಬಳಸಿ!!

ಹ್ಯಾಶ್‌ಟ್ಯಾಗ್ ಬಳಸಿ!!

ಇನ್‌ಸ್ಟಾಗ್ರಾಂನಲ್ಲಿ ಹ್ಯಾಶ್‌ಟ್ಯಾಗ್ ತುಂಬಾ ಮಹತ್ತರ ಪಾತ್ರ ವಹಿಸುತ್ತದೆ. ಪ್ರತಿಯೊಂದು ಫೋಟೊ ಜತೆ ಅದಕ್ಕೆ ತಕ್ಕ ಹ್ಯಾಶ್‌ಟ್ಯಾಗ್ ಮತ್ತು ಜನಪ್ರಿಯ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದರೆ ನಿಮ್ಮ ಪೋಸ್ಟ್ ಹೆಚ್ಚು ಮಂದಿಯನ್ನು ತಲುಪುತ್ತದೆ. ಇನ್‌ಸ್ಟಾಗ್ರಾಂನಲ್ಲಿ ನೀವು ನೀಡಿದ ಹ್ಯಾಶ್‌ಟ್ಯಾಗ್ ಅನ್ನು ಹೆಚ್ಚು ಜನರು ಬಳಸುವಂತಿದ್ದರೆ ಒಳ್ಳೆಯದು.

ಪೋಸ್ಟ್ ಮಾಡುವ ಸಮಯ!

ಪೋಸ್ಟ್ ಮಾಡುವ ಸಮಯ!

ಜನರು ಬಿಡುವಿನ ವೇಳೆ ಮಾತ್ರ ಸಾಮಾಜಿಕ ತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಹಾಗಾಗಿ, ನೀವು ಯಾವ ಸಮಯದಲ್ಲಿ ಪೋಸ್ಟ್ ಮಾಡುತ್ತೀರಿ ಎಂಬುದೂ ಇಲ್ಲಿ ಮುಖ್ಯವಾಗಿರುತ್ತದೆ. ಇನ್‌ಸ್ಟಾಗ್ರಾಂನಲ್ಲಿ ಜನರು ಸಕ್ರಿಯವಾಗಿರುವ ಮಧ್ಯಾಹ್ನ ಅಥವಾ ಸಂಜೆ ಹೊತ್ತಿಗೆ ಇನ್‌ಸ್ಟಾಗ್ರಾಂ ಪೋಸ್ಟ್ ಮಾಡಿ.

ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?
ಒಂದೇ ರೀತಿಯ ಫೋಟೊ ಬೇಡ!

ಒಂದೇ ರೀತಿಯ ಫೋಟೊ ಬೇಡ!

ಯಾವುದಾದರೂ ಒಂದು ಪೋಟೊ ಚೆನ್ನಾಗಿದ್ದರೆ, ಆ ಫೊಟೊವನ್ನೇ ಹತ್ತು ಬಾರಿ ಇನ್‌ಸ್ಟಾಗ್ರಾಂನಲ್ಲಿ ಫೋಸ್ಟ್ ಮಾಡಬೇಡಿ. ಗಮನ ಸೆಳೆಯುವಂತಹ ಗುಣಮಟ್ಟದ ಚಿತ್ರಗಳನ್ನು ಮಾತ್ರ ಶೇರ್ ಮಾಡಿ. ದಿನಕ್ಕೆ ಹೆಚ್ಚೆಂದರೆ 2 ರಿಂದ 3 ಫೋಟೊಗಳನ್ನು ಶೇರ್ ಮಾಡಿದರೆ ಹೆಚ್ಚು ಲೈಕ್ ಗಿಟ್ಟಿಸಿಕೊಳ್ಳುತ್ತೀರಾ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Be an active member of the Instagram community to receive likes and comments.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot