ಸ್ಮಾರ್ಟ್‌ಫೋನ್‌ನಲ್ಲಿ ಫೋಟೋ ಕ್ಲಿಕ್ಕಿಸುವಾಗ ಈ 6 ತಪ್ಪು ಮಾಡಬೇಡಿ..!
ಒಂದು ಅಂದಾಜು ಲೆಕ್ಕಾಚಾರದ ಪ್ರಕಾರ ಒಂದು ವರ್ಷಕ್ಕೆ ಟ್ರಿಲಿಯನ್ ಗೂ ಅಧಿಕ ಫೋಟೋಗಳು ಕ್ಲಿಕ್ ಆಗುತ್ತವೆಯಂತೆ. ನಾವು ಕೆಲವರು ಹಾಕಿದ ಫೋಟೋ, ಸೆಲ್ಫೀ ನೋಡಿ ವಾವ್ ಎಷ್ಟು ಚೆನ್ನಾಗಿದೆ ಅಂದುಕೊಳ್ತೀವಿ. ನಾವು ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋದರೆ ಹಾಗೆ ಬರುವುದೇ ಇಲ್ಲವಲ್ಲ ಅಂದುಕೊಳ್ಳುತ್ತೇವೆ. ಆದರೆ ಈ ರೀತಿ ಫೋಟೋ ಕ್ಲಿಕ್ಕಿಸುವುದು ಕೂಡ ಒಂದು ಕಲೆ.

ಕೇವಲ ಉತ್ತಮವಾದ, ದುಬಾರಿ ಸ್ಮಾರ್ಟ್ ಫೋನ್ ಗಳಲ್ಲಿ ಮಾತ್ರ ಉತ್ತಮ ಕ್ವಾಲಿಟಿಯ ಫೋಟೋಗಳು ಬರಲು ಸಾಧ್ಯ ಅಂದುಕೊಳ್ಳಬೇಡಿ. ಸಾಧಾರಣ ಸ್ಮಾರ್ಟ್ ಫೋನ್ ಗಳೂ ಕೂಡ ಅತ್ಯುತ್ತಮ ಫೋಟೋಗಳನ್ನು ಕ್ಲಿಕ್ಕಿಸಬಲ್ಲವು. ಆದರೆ ನೀವು ಫೋಟೋ ಕ್ಲಿಕ್ಕಿಸುವಾಗ ಕೆಲವು ತಪ್ಪುಗಳನ್ನು ಮಾಡಬಾರದು ಅಷ್ಟೇ. ಈ ಕೆಲವು ಸರಳ ತಪ್ಪುಗಳನ್ನು ಮಾಡದೇ ಇದ್ದರೆ ನೀವು ಕ್ಲಿಕ್ಕಿಸುವ ಫೋಟೋ ಕೂಡ ಅತ್ಯತ್ಭುತವಾಗಿ ಇರುತ್ತದೆ.

ಯಾವಾಗ ಅಗತ್ಯವಿಲ್ಲವೋ ಆಗ ಫ್ಲ್ಯಾಶ್ ಬಳಕೆ ಮಾಡಬೇಡಿ
ಸೂರ್ಯನ ಬೆಳಕು ಚೆನ್ನಾಗಿ ಇರುವ ಜಾಗದಲ್ಲಿ ಫ್ಲ್ಯಾಶ್ ಲೈಟ್ ಗಳನ್ನು ಕೆಲವರು ಬಳಕೆ ಮಾಡಿ ಬಿಡುತ್ತಾರೆ. ಆದರೆ ನಿಜಕ್ಕೂ ಹೇಳಬೇಕೆಂದರೆ ಹೀಗೆ ಮಾಡುವುದು ಸರಿಯಲ್ಲ. ಇದರಿಂದಾಗಿ ಫೋಟೋಗಳಲ್ಲಿ ಕಣ್ಣುಗಳು ಕೆಂಪಾಗುವುದು, ಫೋಟೋದಲ್ಲಿ ಬಿಳಿಯ ಚುಕ್ಕಿ ಕಾಣಿಸಿಕೊಂಡಿರುವುದು, ಒಟ್ಟಾರೆ ಫೋಟೋ ನೈಸರ್ಗಿಕವಾಗಿದೆ ಎಂದು ಅನ್ನಿಸುವುದೇ ಇಲ್ಲ. ಬದಲಾಗಿ ಏನೋ ತಪ್ಪಾಗಿದೆ ಎಂಬಂತ ಫೋಟೋ ಕ್ಲಿಕ್ಕಿಸಿದಂತಾಗುತ್ತದೆ. ತುಂಬಾ ನೆನಪಿನಲ್ಲಿ ಇಡಬೇಕಾಗಿರುವ ಅಂಶವೇನೆಂದರೆ ಫ್ಲ್ಯಾಶ್ ಲೈಟ್ ನ್ನೇ ಕೇಂದ್ರೀಕರಿಸಿ ಯಾವುದೇ ಫೋಟೋವನ್ನು ಕ್ಲಿಕ್ಕಿಸಬಾರದು, ಇದು ಅಗತ್ಯಬಿದ್ದಾಗ ಒಂದು ಪೂರಕ ಬೆಳಕಿನ ವ್ಯವಸ್ಥೆಗಾಗಿ ಮಾತ್ರ ಬಳಸಬೇಕು. ಹೆಚ್ಚಿನ ಸ್ಮಾರ್ಟ್ ಫೋನ್ ಗಳು ಕಡಿಮೆ ಬೆಳಕಿನ ಕಂಡೀಷನ್ ನಲ್ಲೂ ಕೂಡ ಅತ್ಯುತ್ತಮ ಫೋಟೋವನ್ನು ಕ್ಲಿಕ್ಕಿಸಬಲ್ಲವು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಫೋಟೋ ಕ್ಲಿಕ್ಕಿಸಿದರೆ ನಿಮ್ಮ ಫೋಟೋ ಕೂಡ ವಾವ್ ಅನ್ನಿಸುವಂತೆ ಇರುತ್ತದೆ.

ಮ್ಯಾನ್ಯುವಲ್ ಮೋಡ್ ನ ಬಳಕೆ
ಹೆಚ್ಚಿನ ಎಲ್ಲಾ ಕ್ಯಾಮರಾಗಳು ಕೂಡ ಮ್ಯಾನುವಲ್ ಮೋಡ್ ಗೆ ಸೆಟ್ ಆಗಿಯೇ ಇರುತ್ತದೆ ಮತ್ತು ಹೆಚ್ಚಿನ ಬಳಕೆದಾರರು ಆದಕ್ಕೆ ಫಿಕ್ಸ್ ಆಗಿರುತ್ತಾರೆ. ಅವರು ಆಟೋ ಸೆಟ್ಟಿಂಗ್ಸ್ ನ ಬಳಕೆಯನ್ನು ಮಾಡುವುದೇ ಇಲ್ಲ. ಕ್ಯಾಮರಾ ಉತ್ತಮ ಅವಕಾಶಗಳನ್ನು ನೀಡುತ್ತಿದ್ದರೂ ಕೂಡ ಅದನ್ನು ಬಳಸಿಕೊಂಡು ಫೋಟೋ ಕ್ಲಿಕ್ಕಿಸುವುದೇ ಇಲ್ಲ. ಡೀಫಾಲ್ಟ್ ಸೆಟ್ಟಿಂಗ್ ಗಳನ್ನು ಹೊರತು ಪಡಿಸಿ ಮ್ಯಾನ್ಯುವಲ್ ಕಂಟ್ರೋಲ್ ಗಳಿಗೆ ನಿಮ್ಮ ಫೋನ್ ನಲ್ಲಿ ಅವಕಾಶಗಳಿರುವಾಗ ಅದನ್ನು ಬಳಸಿಕೊಂಡು ಫೋಟೋ ಕ್ಲಿಕ್ಕಿಸಿ. ಉದಾಹರಣೆಗೆ ISO (ಫೋಟೋ ಬ್ರೈಟ್ ಮಾಡಿ ಕ್ಲಿಕ್ಕಿಸಿಕೊಳ್ಳುವುದು), ವೈಟ್ ಬ್ಯಾಲೆನ್ಸ್(ಸುತ್ತಲಿನ ವಾತಾವರಣ ತಣ್ಣಿಗಿದೆ ಅಥವಾ ಬಿಸಿಯಾಗಿದೆ ಎಂಬಂತ ಎಫೆಕ್ಟ್ ಬಳಸಿ ಕ್ಲಿಕ್ಕಿಸುವುದು), ಶಟರ್ ಸ್ಪೀಡ್ (ಎಷ್ಟು ಬೆಳಕು ಕ್ಯಾಮರಾ ಲೆನ್ಸ್ ನ್ನು ತಲುಪಬೇಕು ಎಂಬುದನ್ನು ಹೊಂದಿಸುವುದು) ಹೀಗೆ ಇತ್ಯಾದಿ ಕೆಲವು ವೈಶಿಷ್ಟ್ಯತೆಗಳನ್ನು ಬಳಕೆ ಮಾಡಿ ಫೋಟೋ ಕ್ಲಿಕ್ಕಿಸಿ. ಈ ಸೆಟ್ಟಿಂಗ್ಸ್ ಗಳು ನಿಮ್ಮ ಫೋಟೋ ಮೇಲೆ ಒಂದು ಹಿಡಿತವನ್ನು ಸಾಧಿಸಿರುತ್ತವೆ ಮತ್ತು ನಿಜಕ್ಕೂ ಬೆಸ್ಟ್ ಫೋಟೋ ಹೊರಬರುತ್ತದೆ. ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದನ್ನು ಬಳಸಿಕೊಳ್ಳುವುದು ಕೂಡ ಬಹಳ ಮುಖ್ಯ.

ಡಿಜಿಟಲ್ ಝೂಮ್ ಬಳಕೆ
ಇದು ಫ್ಲ್ಯಾಶ್ ನಂತೆಯೇ ಅಗತ್ಯಬಿದ್ದಾಗ ಮಾತ್ರ ಬಳಸಿಕೊಳ್ಳಬೇಕಾಗಿರುವ ಮತ್ತೊಂದು ವೈಶಿಷ್ಟ್ಯತೆ.ಸ್ಮಾರ್ಟ್ ಫೋನ್ ಗಳಲ್ಲಿ ಡಿಜಿಟಲ್ ಝೂಮ್ ಸೆಟ್ಟಿಂಗ್ ಇರುತ್ತದೆ.ಡಿಎಸ್ಎಲ್ಆರ್ ಕ್ಯಾಮರಾಗಳು ಆಪ್ಟಿಕಲ್ ಝೂಮ್ ನ್ನು ಹೊಂದಿರುತ್ತದೆ. ಡಿಜಿಟಲ್ ಝೂಮ್ ಚಿತ್ರದ ಕ್ವಾಲಿಟಿಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಯಾವುದೇ ವಸ್ತುವಿನ ಫೋಟೋ ಕ್ಲಿಕ್ಕಿಸುವಾಗ ಆದಷ್ಟು ಹತ್ತಿರದಿಂದಲೇ ಕ್ಲಿಕ್ಕಿಸಿ ಮತ್ತು ನಂತರ ನಿಮ್ಮ ಕಂಪ್ಯೂಟರ್ ಟೂಲ್ ಗಳ ಮೂಲಕ ಎಡಿಟ್ ಮಾಡಿಕೊಳ್ಳುವುದು ಸೂಕ್ತ.

ನಿಮ್ಮ ಫೋನಿನ ಲೆನ್ಸ್ ನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೇ ಇರುವುದು
ನಾವು ನಮ್ಮ ಸ್ಮಾರ್ಟ್ ಫೋನ್ ನ್ನು ಕಿಸೆಯಲ್ಲೋ, ಬ್ಯಾಗ್ ನಲ್ಲೋ, ಕಾಫಿ ಟೇಬಲ್ ಮೇಲೋ ಇಲ್ಲೋ ಇನ್ನೋಲ್ಲೋ ಇಟ್ಟಿರುತ್ತೇವೆ. ಆದರೆ ಧೂಳಿನ ಸಣ್ಣ ಕಣ ನಿಮ್ಮ ಕ್ಯಾಮರಾ ಲೆನ್ಸ್ ಮೇಲೆ ಇದ್ದರೂ ಕೂಡ ಫೋಟೋ ಕ್ವಾಲಿಟಿ ಹಾಳಾಗುತ್ತದೆ. ಹಾಗಾಗಿ ನಿಯಮಿತವಾಗಿ ನಿಮ್ಮ ಕ್ಯಾಮರಾ ಲೆನ್ಸ್ ನ್ನು ಸ್ವಚ್ಛಗೊಳಿಸುತ್ತಿರಿ. ಆಗ ನಿಮ್ಮ ಚಿತ್ರಗಳು ನಿಜಕ್ಕೂ ಬೆಸ್ಟ್ ಆಗಿರುತ್ತದೆ. ಲೆನ್ಸ್ ಕ್ಲೀನರ್ ನ್ನು ಒಂದು ಸಣ್ಣ ಹತ್ತಿತುಂಡಿಗೆ ಹಾಕಿಕೊಂಡು ನಿಧಾನವಾಗಿ ಲೆನ್ಸ್ ಮೇಲೆ ಉಜ್ಜಿ ಸ್ವಚ್ಛಗೊಳಿಸಬಹುದು.

ಫೋಟೋ ಫ್ರೇಮ್ ಕಣ್ಣಿಗೆ ಸುಂದರವಾಗಿ ಕಾಣುವಂತೆ ಇರಲಿ
ಹೆಚ್ಚಿನವರು ಯಾವುದರ ಫೋಟೋ ಕ್ಲಿಕ್ಕಿಸಬೇಕು ಅಂದುಕೊಳ್ಳುತ್ತಾರೋ ಆ ವಸ್ತು ಅಥವಾ ವ್ಯಕ್ತಿಯನ್ನೇ ಫೋಟೋ ಫ್ರೇಮ್ ನ ಕೇಂದ್ರಬಿಂದುವಾಗಿಸಿದರೆ ಫೋಟೋ ಚೆನ್ನಾಗಿ ಬರುತ್ತದೆ ಎಂದು ಭಾವಿಸಿದ್ದಾರೆ. ಆದರೆ ಅದು ಸತ್ಯಕ್ಕೆ ಹತ್ತಿರವಾದುದ್ದಲ್ಲ. ಫೋಟೋ ಉತ್ತಮವಾಗಬೇಕು ಅಂದರೆ ನೀವು ನಿಮ್ಮ ಫೋಟೋವನ್ನು ಎರಡು ಫ್ರೇಮ್ ಗಳಲ್ಲಿ ವಿಭಾಗಿಸಿಕೊಳ್ಳಬೇಕು. ಒಂದು ಸಮತಲ ಮತ್ತು ಮತ್ತೊಂದು ಲಂಬ ರೇಖೆಗಳಲ್ಲಿ ವಿಭಾಗಿಸಿಕೊಂಡು, ಯಾವುದರ ಫೋಟೋ ಕ್ಲಿಕ್ಕಿಸಬೇಕೋ ಅದು ಫ್ರೇಮಿನ ಕೇಂದ್ರಬಿಂದುವಿನ ಹತ್ತಿರವಿರುವಂತೆ ನೋಡಿಕೊಳ್ಳಿ. ಆಂಡ್ರಾಯ್ಡ್ ಬಳಕೆದಾರರು ಕ್ಯಾಮರಾ ಆಪ್ ನ ಸೆಟ್ಟಿಂಗ್ಸ್ ನಲ್ಲಿ ಟಾಗಲ್ ಫಾರ್ ಗ್ರಿಡ್ ಆಯ್ಕೆಯನ್ನು ಆನ್ ಮಾಡಿ ಇದನ್ನು ಸಾಧಿಸಿಕೊಳ್ಳಬಹುದು ಇನ್ನು ಐಓಎಸ್ ಬಳಕೆದಾರರು ಕ್ಯಾಮರಾ ಟ್ಯಾಪ್ ಮಾಡಿ ಗ್ರಿಡ್ ಟಾಗಲ್ ನ್ನು ಅನೇಬಲ್ ಮಾಡಿಕೊಳ್ಳಿ. ಆಗ ಅತ್ಯುತ್ತಮ ಫೋಟೋಗಳು ನಿಮ್ಮದಾಗುತ್ತದೆ.

ಫೋಟೋ ಕ್ಲಿಕ್ಕಿಸುವುದಕ್ಕೂ ಮುನ್ನ ಸ್ಮಾರ್ಟ್ ಫೋನ್ ನ್ನು ರೆಡಿಯಾಗಿ ಇಟ್ಟುಕೊಳ್ಳಿ
ಇಮೇಜ್ ಸ್ಟೆಬಿಲೈಸೇಷನ್ ಸಮಸ್ಯೆಯು ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಗಳಲ್ಲಿ ಕಂಡುಬರುವುದಿಲ್ಲ ಯಾಕೆಂದರೆ ಪ್ಲಾಗ್ ಶಿಪ್ ಸ್ಮಾರ್ಟ್ ಫೋನ್ ಗಳು ಡಿಫಾಲ್ಟ್ ಆಗಿ ಆಪ್ಟಿಕಲ್ ಸ್ಟೆಬಿಲೈಸೇಷನ್ ವೈಶಿಷ್ಟ್ಯವನ್ನು ಹೊಂದಿರುತ್ತದೆ ಮತ್ತು ಕೈ ಅಲುಗಾಡಿಸಿ ಕ್ಲಿಕ್ಕಿಸಿದ ಫೋಟೋಗಳು ಕೂಡ ಚೆನ್ನಾಗಿಯೇ ಬರುತ್ತದೆ. ಉತ್ತಮ ಟ್ರೈಪಾಡ್ ಗಳು ಈ ಸಮಸ್ಯೆಗೆ ಪರಿಹಾರವಾಗುತ್ತದೆ ಆದರೆ ಅದನ್ನು ಯಾವಾಗಲೂ ನಮ್ಮೊಡನೆ ಹೊತ್ತುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಹಾಗಾಗಿ ಶೇಕ್ ಆಗುವುದನ್ನು ನಿಲ್ಲಿಸಲು ಫೋನಿನ ಒಂದು ಬದಿಯಲ್ಲಿ ಕ್ಲಿಕ್ ಮಾಡುವ ಬಟನ್ ಇದ್ದರೆ ಸೂಕ್ತವಾಗುತ್ತದೆ. ಆದರೆ ಕ್ಯಾಮರಾ ಟೈಮರ್ ಬಳಸಿ ಫೋಟೋ ಕ್ಲಿಕ್ಕಿಸುವ ವಿಧಾನವನ್ನೂ ಕೂಡ ನೀವು ಬಳಕೆ ಮಾಡಬಹುದು.


Click it and Unblock the Notifications








