ಸ್ಮಾರ್ಟ್‌ಫೋನ್ ಸ್ಪೇಸ್ ಹೆಚ್ಚಿಸಿಕೊಳ್ಳುವುದು ಹೇಗೆ!? ಇಲ್ಲಿದೇ ಸಿಂಪಲ್ ಟಿಪ್ಸ್!!!
ಇಂದು ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಅಬ್ಬರವೂ ಜೋರಾಗಿದೆ. ಆದರೆ ಎಷ್ಟೆ ದೊಡ್ಡ ಸಾಮಾರ್ಥ್ಯದ ಸ್ಮಾರ್ಟ್ ಫೋನ್ ಗಳನ್ನು ಕೊಂಡರೂ ಸಹ ಅದರಲ್ಲಿ ಇರುವ ಮೆಮೊರಿಯೂ ಸಾಲುವುದಿಲ್ಲ ಎನ್ನುವ ಮಾತುಗಳನ್ನು ನಾವು ಕೇಳಬಹುದಾಗಿದೆ.

ಈ ಹಿನ್ನಲೆಯಲ್ಲಿ ಇಂದಿನ ಲೇಖನದಲ್ಲಿ ನೀವು ಆಂಡ್ರಾಯ್ಡ್ ಫೋನ್ ಮತ್ತು ಐಫೋನ್ ಗಳನ್ನು ಇಂಟರ್ನಲ್ ಮೆಮೊರಿಯನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಎನ್ನುವುದನ್ನು ತಿಳಿಸುವ ಪ್ರಯತ್ನವು ಇದಾಗಿದೆ. ಈ ಕೆಳಗಿನ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ಸ್ಮಾರ್ಟ್ ಫೋನ್ ಇಂಟರ್ನಲ್ ಮೆಮೊರಿಯನ್ನು ಅಧಿಕ ಮಾಡಿಕೊಳ್ಳಬಹುದಾಗಿದೆ.

ಬೇಡದಿರುವ ಆಪ್ ಗಳನ್ನು ತೆಗೆದು ಹಾಕಿ
ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಇರುವ ಬೇಡದಿರಿರುವ ಆಪ್ ಗಳನ್ನು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳದ ಆಪ್ ಗಳನ್ನು ಡಿಲೀಟ್ ಮಾಡಿರಿ, ಇದರಿಂದಾಗಿ ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಹೆಚ್ಚಿನ ಪ್ರಮಾಣದ ಜಾಗವೂ ನಿಮಗೆ ದೊರೆಯಲಿದೆ.

ಫ್ರಿ ಸ್ಟೇಸ್ ಆಯ್ಕೆ ಬಳಕ ಮಾಡಿ
ನಿಮ್ಮ ಸ್ಮಾರ್ಟ್ ಫೋನಿನಲ್ಲಿರುವ ಫ್ರೀ ಸ್ಟೇಸ್ ಆಯ್ಕೆಯನ್ನು ಬಳಕೆ ಮಾಡಿಕೊಳ್ಳಿ. ಇದರಿಂದಾಗಿ ನಿಮ್ಮ ಫೋನಿನಲ್ಲಿ ಹೆಚ್ಚಿನ ಪ್ರಮಾಣದ ಜಾಗವನ್ನು ಆಕ್ರಮಿಸಿಕೊಂಡಿರುವ ಆಪ್ ಮತ್ತು ಫೈಲ್ ಗಳನ್ನು ಗುರುತಿಸಿ ಅವುಗಳನ್ನು ಡಿಲೀಟ್ ಮಾಡಬಹುದಾಗಿದೆ.

ಡಿಲೀಟ್ ಮಲ್ಟಿ ಮೀಡಿಯಾ ಕಂಟೆಟ್
ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಅತೀ ಹೆಚ್ಚಿನ ಜಾಗವನ್ನು ಮಲ್ಟಿ ಮೀಡಿಯಾ ಕಂಟೆಟ್ ಗಳು (ಅಂದರೆ, ಫೋಟೋಗಳು, ವಿಡಿಯೋಗಳು) ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ನಿಮ್ಮ ಫೋನಿನಲ್ಲಿ ಹೆಚ್ಚಿನ ಜಾಗ ವೆಸ್ಟ್ ಆಗುತ್ತದೆ. ಇದರಿಂದಾಗಿ ನೀವು ಮಲ್ಟಿ ಮೀಡಿಯಾ ಕಂಟೆಟ್ ಡಿಲೀಟ್ ಮಾಡುವುದು ಉತ್ತಮ.

ಕ್ಲೌಡ್ ಬಳಕೆ ಮಾಡಿ
ಇದಲ್ಲದೇ ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಡೇಟಾವನ್ನು ಸೇವ್ ಮಾಡುವ ಸಲುವಾಗಿ ಕ್ಲೌಡ್ ಸೇವೆಯನ್ನು ಬಳಕೆ ಮಾಡಿಕೊಳ್ಳಿ. ಇದರಿಂದಾಗಿ ನಿಮಗೆ ಹೆಚ್ಚಿನ ಸ್ಪೇಸ್ ಬಳಕೆಗೆ ದೊರೆಯಲಿದೆ ಎನ್ನಲಾಗಿದೆ.

ಕ್ಯಾಚ್ ಕ್ಲಿನ್ ಮಾಡಿ
ಇದಲ್ಲದೇ ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಹೆಚ್ಚಿನ ಜಾಗವನ್ನು ಕ್ಯಾಚ್ ಗಳು ಆಕ್ರಮಿಸುವುದು. ಇದನ್ನು ಆಗಿಂದ್ದಾಗೆ ಕ್ಲಿಯರ್ ಮಾಡಿದರೆ ಹೆಚ್ಚಿನ ಪ್ರಮಾಣದ ಸ್ಪೇಸ್ ಬಳಕೆಗೆ ದೊರೆಯಲಿದೆ ಎನ್ನಲಾಗಿದೆ.

ರಿಸೆಟ್ ಮಾಡಿ
ಇದಲ್ಲದೇ ಮಾಡಿಯೂ ಹೆಚ್ಚಿನ ಜಾಗ ದೊರೆಯಲಿಲ್ಲ ಎನ್ನುವುದಾದರೆ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಒಮ್ಮೆ ರಿಸೆಟ್ ಮಾಡಿ. ಇದರಿಂದ ಹೆಚ್ಚಿನ ಜಾಗವೂ ಬಳಕಗೆ ದೊರೆಯಲಿದೆ.


Click it and Unblock the Notifications








