ಸ್ಮಾರ್ಟ್‌ಫೋನ್ ಹೆಚ್ಚು ಬಿಸಿಯಾಗದಂತೆ ತಡೆಯಲು 5 ಟಿಪ್ಸ್‌!!

ಕೆಲವೊಮ್ಮೆ ನಮ್ಮ ಸ್ಮಾರ್ಟ್ಫೋನ್ ಅಧಿಕವಾಗಿ ಬಿಸಿ ಆಗಿಬಿಡುತ್ತದೆ. ಇದರಿಂದ ಮೊಬೈಲ್ ಹ್ಯಾಂಗ್ ಆಗುವುದು, ಸ್ವಿಚ್ ಆಫ್ ಆಗುವುದು ಕೊನೆಗೆ ಬ್ಲಾಸ್ಟ್ ಆಗುವಂತಹ ತೊಂದರೆಗಳು ಎದುರಾಗುತ್ತದೆ.

|

ಕೆಲವೊಮ್ಮೆ ನಮ್ಮ ಸ್ಮಾರ್ಟ್ಫೋನ್ ಅಧಿಕವಾಗಿ ಬಿಸಿ ಆಗಿಬಿಡುತ್ತದೆ. ಇದರಿಂದ ಮೊಬೈಲ್ ಹ್ಯಾಂಗ್ ಆಗುವುದು, ಸ್ವಿಚ್ ಆಫ್ ಆಗುವುದು ಕೊನೆಗೆ ಬ್ಲಾಸ್ಟ್ ಆಗುವಂತಹ ತೊಂದರೆಗಳು ಎದುರಾಗುತ್ತದೆ. ಹಾಗಾಗಿ, ಫೋನ್ ಬಳಕೆದಾರರ ಸಾಮಾನ್ಯ ಪ್ರಶ್ನೆ "ಮೊಬೈಲ್ ಬಿಸಿಯಾಗದಂತೆ ತಡೆಯುವುದು ಹೇಗೆ" ಎಂಬುದು.!!

ಸ್ಮಾರ್ಟ್‌ಫೋನ್ ಹೆಚ್ಚು ಬಿಸಿಯಾಗದಂತೆ ತಡೆಯಲು 5 ಟಿಪ್ಸ್‌!!

ಹೌದು, ಇದು ಒಬ್ಬರ ಸಮಸ್ಯೆಯಲ್ಲ. ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರು ಈ ಸಮಸ್ಯೆ ಎದುರಿಸುತ್ತಿದ್ದಾರೆ.! ಹಾಗಾಗಿ, ಮೊಬೈಲ್ ಬಿಸಿಯಾಗುವುದು ಏಕೆ ಎಂಬುದನ್ನು ತಿಳಿದರೆ ಮೊಬೈಲ್ ಬಿಸಿಯಾಗದಂತೆ ತಡೆಯುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಕೂಡ ದೊರೆಯುವುದರಿಂದ ಇಂದಿನ ಲೇಖನದಲ್ಲಿ ಮೊಬೈಲ್ ಬಿಸಿಯಾಗಲು ಕಾರಣಗಳು ಮತ್ತು ಅದಕ್ಕೆ ಪರಿಹಾರಗಳು ಯಾವುವು ಎಂಬುದನ್ನು ತಿಳಿಯೋಣ!!

ಕೂಲಿಂಗ್ ಫ್ಯಾನ್ ಇರಲ್ಲದಿರುವುದು!!

ಕೂಲಿಂಗ್ ಫ್ಯಾನ್ ಇರಲ್ಲದಿರುವುದು!!

ಬಿಸಿ ಆಗುವ ಈ ಸಮಸ್ಯೆ ಕೇವಲ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಹೆಚ್ಚಾಗಿರುತ್ತದೆ. ಏಕೆಂದರೆ, ಕಂಪ್ಯೂಟರ್ , ಲ್ಯಾಪ್‌ಟಾಪ್ ಅಥವಾ ಇನ್ನಿತರ ದೊಡ್ಡ ದೊಡ್ಡ ಡಿವೈಸ್‌ಗಳಲ್ಲಿ ಕೂಲಿಂಗ್ ಫ್ಯಾನ್ ಅಳವಡಿಸಲಾಗಿರುತ್ತದೆ. ಆದರೆ ಫೋನ್‌ಗೆ ಆ ಸೌಲಭ್ಯವಿಲ್ಲದೆ ಇರುವುದರಿಂದ ಸ್ಮಾರ್ಟ್‌ಫೋನ್‌ ಹೆಚ್ಚು ಬಿಸಿಯಾಗುತ್ತದೆ.! ಈ ತೊಂದರೆಗೆ ಪರಿಹಾರವಿಲ್ಲ.!!

ಕಳಪೆ ಚಾರ್ಜರ್ ಬಳಕೆ ಮಾಡಿದರೆ!!

ಕಳಪೆ ಚಾರ್ಜರ್ ಬಳಕೆ ಮಾಡಿದರೆ!!

ಸ್ಮಾರ್ಟ್‌ಫೋನ್ ಬ್ಯಾಟರಿಗೆ ವಿದ್ಯುತ್ ಪೂರೈಕೆ ಮಾಡುವ ಚಾರ್ಜರ್ ಕೂಡ ಅತ್ಯುತ್ತಮದ್ದಾಗಿರಬೇಕು. ಇಲ್ಲವಾದರೆ, ಸರಿಯಾದ ವಿಧ್ಯುತ್ ಪ್ರವಾಹವಿಲ್ಲದೇ ಸ್ಮಾರ್ಟ್‌ಫೋನ್ ಬ್ಯಾಟರಿ ಸೆಲ್‌ಗಳು ಹೆಚ್ಚು ಸಂಕುಚಿತ ಅಥವಾ ವಿಕಸಿತಗೊಂಡು ಫೋನ್ ಬಿಸಿಯಾಗುತ್ತದೆ. ಹಾಗಾಗಿಯೇ, ಉತ್ತಮ ಚಾರ್ಜರ್ ಆದರೂ ಸ್ವಿಚ್ ಆಫ್ ಮಾಡಿ ಚಾರ್ಜ್ ಮಾಡಿ ಎಂದು ಮೊಬೈಲ್ ತಜ್ಞರು ಹೇಳುವುದು.!!

ಮೊಬೈಲ್ ಕವರ್ ಬಳಕೆ!!

ಮೊಬೈಲ್ ಕವರ್ ಬಳಕೆ!!

ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಹೆಚ್ಚು ಉಪಯೋಗಕಾರಿಯಾಗಿರುವ ಮೊಬೈಲ್ ಕವರ್ ಬಳಕೆಯೂ ಕೂಡ ಸ್ಮಾರ್ಟ್‌ಫೋನ್ ಬಿಸಿಯಾಗಲು ಕಾರಣವಾಗಿದೆ. ಹಾಗಾಘಿ, ಮೊಬೈಲ್ ಕವರ್ ಇಲ್ಲದೇ ಬಳಕೆ ಮಾಡಿದರೆ ಸ್ಮಾರ್ಟ್‌ಫೋನ್ ಬಿಸಿಯಾಗುವುದನ್ನು ತಪ್ಪಿಸಬಹುದಾಗಿದೆ.!!

ಸ್ವಯಂಚಾಲಿತ ಅಪ್ಲಿಕೇಶನ್!!

ಸ್ವಯಂಚಾಲಿತ ಅಪ್ಲಿಕೇಶನ್!!

ಆಪ್‌ಗಳನ್ನು ತೆರೆದು ಅದರ ಬಳಕೆಯನ್ನು ಪೂರ್ಣವಾಗಿ ರಿಮೂವ್ ಮಾಡದಿರುವುದರಿಂದ ಫೋನ್‌ನಲ್ಲಿ ಬ್ಯಾಗ್ರೌಂಡಿನಲ್ಲಿ ಸ್ವಯಂಚಾಲಿತ ಅಪ್ಲಿಕೇಶನ್ ರನ್ ಆಗುತ್ತಿರುತ್ತದೆ.!! ಹಾಗಾಗಿ, ಯಾವುದೇ ಅಪ್ಲಿಕೇಶನ್ ಬಳಸಿದ ಮೇಲೆ ಅದನ್ನು ಪೂರ್ಣವಾಗಿ ಕ್ಲೀನ್ ಮಾಡದಿದ್ದರೆ ಫೋನ್ ಬಿಸಿಯಾಗುತ್ತದೆ.!!

ಹಾಟ್‌ಸ್ಪಾಟ್ ಹೆಚ್ಚು ಬಳಕೆ!!

ಹಾಟ್‌ಸ್ಪಾಟ್ ಹೆಚ್ಚು ಬಳಕೆ!!

ನಾವು ಬಹಳ ಸಮಯ Wi-Fi ಮತ್ತು ಹಾಟ್‌ಸ್ಪಾಟ್ ಬಳಸಿದರೆ ನಮ್ಮ ಮೊಬೈಲ್ ಬಿಸಿಯಾಗುವ ಸಂಭವ ಹೆಚ್ಚಿರುತ್ತದೆ.! ಈ ಎರಡೂ ಫೀಚರ್‌ಗಳಿಂದ ಮೊಬೈಲ್ ಹೊರಗೆ ಹೆಚ್ಚು ರೇಡಿಯೇಷನ್‌ಗಳು ಬಿಡುಗಡೆಯಾಗುವುದರಿಂದ ಮೊಬೈಲ್ ಬಿಸಿಯಾಗಲು ಕಾರಣವಾಗಿದೆ. ಹಾಗಾಗಿ, ಹಾಟ್‌ಸ್ಪಾಟ್ ಬಳಕೆ ಕಡಿಮೆ ಇರಲಿ.!!

Aadhaar-ಬಾಂಕ್ ಲಿಂಕ್ ಆಗಿದೆಯೇ-ಇಲ್ಲವೇ ಚೆಕ್‌ ಮಾಡಿ..!
ನೆಟ್ವರ್ಕ್ ಇಲ್ಲದೇ ಇದ್ದಾಗ!!

ನೆಟ್ವರ್ಕ್ ಇಲ್ಲದೇ ಇದ್ದಾಗ!!

ನೆಟ್‌ವರ್ಕ್ ಇಲ್ಲದಕ್ಕೂ ಮೊಬೈಲ್ ಬಿಸಿಯಾಗುವುದಕ್ಕೂ ಎಲ್ಲಿಯ ಸಂಬಂಧ ಎನ್ನುವ ಪ್ರಶ್ನೆ ಬರುತ್ತದೆ ಅಲ್ಲವೇ? ನಮ್ಮ ಫೋನಿನಲ್ಲಿ ನೆಟ್ ವರ್ಕ್ ಇಲ್ಲದಿದ್ದಾಗ , ನಮ್ಮ ಫೋನಿನ ಸಾಧನಗಳು ನೆಟ್‌ವರ್ಕ್ ಹುಡುಕಲು ಕಾರ್ಯವನ್ನು ಹೆಚ್ಚಿಸುತ್ತವೆ. ಆ ಸಮಯದಲ್ಲಿ ಮೊಬೈಲ್ ಕಂಡಿತವಾಗಿಯು ಬಿಸಿ ಆಗುತ್ತದೆ.! ಇಂತಹ ಸಮಯದಲ್ಲಿ ಏರೋಪ್ಲೇನ್ ಮೊಡ್ ಉಪಯೋಗಕಾರಿ.!!

ಫೆಬ್ರವರಿ 26ಕ್ಕೆ ಶಿಯೋಮಿ ಫೆಬ್ರವರಿ 26ಕ್ಕೆ ಶಿಯೋಮಿ "ಮೈ ಮಿಕ್ಸ್ 2ಎಸ್" ರಿಲೀಸ್!..ವಿಶ್ವ ಮೊಬೈಲ್ ಮಾರುಕಟ್ಟೆಗೆ ಈಗಲೇ ನಡುಕ!!

Best Mobiles in India

English summary
With smartphones increasingly adding processing power and packing large batteries with fast-charging technology.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X