TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಗೂಗಲ್ ಹೇಳುವಂತೆ ಫೋನ್ ಚಾರ್ಜ್ ಹೇಗೆ ಮಾಡಬೇಕು?
ನಮ್ಮ ಸ್ಮಾರ್ಟ್‌ಫೋನ್‌ಗಳನ್ನು ನಾವು ಸಾಕಷ್ಟು ಬಳಸುತ್ತೇವೆ. ಈ ಡಿವೈಸ್‌ನ ಒಳಭಾಗದಲ್ಲಿರುವುದು ಹೆಚ್ಚು ಸೂಕ್ಷ್ಮವಾಗಿರುವಂತಹದ್ದು ಅದುವೇ ಬ್ಯಾಟರಿ. ಕೆಲವೊಮ್ಮೆ ಅಂತೆಯೇ ಹೆಚ್ಚು ವೇಗವಾಗಿ ಇದು ಬರಿದಾಗುತ್ತದೆ ಅಲ್ಲವೇ? ಚಾರ್ಜ್ ಮಾಡುವಾಗ ಇದು ತುಂಬಾ ಬಿಸಿಯಾಗುತ್ತದೆ ಫೋನ್‌ನಲ್ಲಿ ಬ್ಯಾಟರಿಗಿರುವ ಆಯಸ್ಸು ಎಷ್ಟು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆಯುವುದು ತುಂಬಾ ಕಷ್ಟವಾಗಿದೆ. ಫೋನ್ ಅನ್ನು ನೀವು ಬಳಸುವ ವ್ಯವಸ್ಥೆಯನ್ನು ಆಧರಿಸಿ ಬ್ಯಾಟರಿ ಕಾರ್ಯಕ್ಷಮತೆ ಕಾರ್ಯನಿರ್ವಹಿಸುತ್ತದೆ
ಇಂದಿನ ಲೇಖನದಲ್ಲಿ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುವ ಸರಿಯಾದ ವಿಧಾನವನ್ನು ಇಲ್ಲಿ ತಿಳಿಸುತ್ತಿದ್ದೇವೆ. ಗೂಗಲ್ ನಿಮ್ಮ ಫೋನ್ ಅನ್ನು ಹೇಗೆ ಚಾರ್ಜ್ ಮಾಡಬೇಕು ಎಂಬುದನ್ನು ತಿಳಿಸುತ್ತಿದೆ. ಹಾಗಿದ್ದರೆ ಬನ್ನಿ ಆ ವಿಧಾನಗಳೇನು ಎಂಬುದನ್ನು ಅರಿತುಕೊಳ್ಳೋಣ.
#1
ನಿಮ್ಮ ಫೋನ್‌ನೊಡನೆ ಬಂದಿರುವ ಚಾರ್ಜರ್ ಅನ್ನು ಬಳಸಿ. ಇತರ ಚಾರ್ಜರ್‌ಗಳು ನಿಧಾನವಾಗಿ ಫೋನ್ ಅನ್ನು ಚಾರ್ಜ್ ಮಾಡಬಹುದು, ಆದರೆ ನಿಮ್ಮ ಡಿವೈಸ್ ಅಥವಾ ಬ್ಯಾಟರಿಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ ಎಂಬುದು ಗೂಗಲ್ ಮಾತಾಗಿದೆ.
#2
ನೀವು ಹೊಸ ಫೋನ್ ಖರೀದಿಸಿದಾಗ, ಅದರ ಬ್ಯಾಟರಿಯನ್ನು ಮೌಲ್ಯಮಾಪನ ಮಾಡಬೇಕು ಎಂಬುದಾಗಿ ಹೇಳಲಾಗಿದೆ. ಗೂಗಲ್ ಹೇಳುತ್ತದೆ ಇದು ಸುಳ್ಳು ಎಂದು. ನಿಮ್ಮ ಡಿವೈಸ್‌ಗೆ ಬ್ಯಾಟರಿ ಸಾಮರ್ಥ್ಯವನ್ನು ನೀವು ತಿಳಿಸಬೇಕಾಗಿಲ್ಲ ಇದು ಚಾರ್ಜ್ ಆಗಿರಲಿ ಅಥವಾ ಬ್ಯಾಟರಿ ಖಾಲಿಯಾಗಿಯೇ ಇರಲಿ ಎಂಬುದಾಗಿ ಕಂಪೆನಿ ಹೇಳಿದೆ.
#3
ಬಿಸಿಯು ಬ್ಯಾಟರಿಯ ಶತ್ರುವಾಗಿದೆ. ಇದು ಬ್ಯಾಟರಿಯನ್ನು ವೇಗವಾಗಿ ಮುಗಿಸಿಬಿಡುತ್ತದೆ ಮತ್ತು ಬ್ಯಾಟರಿ ಸಾಮರ್ಥ್ಯವನ್ನು ಹೀರಿಬಿಡುತ್ತದೆ. ಗೂಗಲ್ ಹೇಳುವಂತೆ, ನಿಮ್ಮ ಫೋನ್ ಅತಿಯಾಗಿ ಬಿಸಿಯಾಗುವುದನ್ನು ತಪ್ಪಿಸಿ ಎಂದಾಗಿದೆ. ಫೋನ್ ಬಿಸಿಯಾದಾಗ ಬ್ಯಾಟರಿ ಬೇಗನೇ ಮುಗಿಯುತ್ತದೆ ನೀವು ಅದನ್ನು ಬಳಸದೇ ಇದ್ದಾಗಲೂ ಕೂಡ, ಇದು ನಿಮ್ಮ ಬ್ಯಾಟರಿಗೆ ಹಾನಿಯನ್ನುಂಟು ಮಾಡುವುದು ಖಂಡಿತ. ಫೋನ್ ಅನ್ನು ಚಾರ್ಜ್ ಮಾಡುತ್ತಿರುವಾಗ ಅದು ಬಿಸಿಯಾಗುತ್ತದೆ, ಆದ್ದರಿಂದ ಸದಾ ಸಮಯ ಫೋನ್ ಚಾರ್ಜ್ ಮಾಡುವುದನ್ನು ತಪ್ಪಿಸಿ ಎಂಬುದಾಗಿ ಕಂಪೆನಿ ಹೇಳಿದೆ.
#4
ನಿಮ್ಮ ಬ್ಯಾಟರಿಯನ್ನು ಅರ್ಧದಷ್ಟು ಇರಿಸಿಕೊಳ್ಳಲು ಪ್ರಯತ್ನಿಸಿ. ಗೂಗಲ್ ಹೇಳುವಂತೆ, ಉತ್ತಮ ಬ್ಯಾಟರಿ ದೀರ್ಘತೆಗಾಗಿ, ಸಾಧ್ಯವಾದಷ್ಟು ನಿಮ್ಮ ಫೋನ್‌ನಲ್ಲಿ 50 ಶೇಕಡಾದಷ್ಟು ಚಾರ್ಜ್ ಅನ್ನು ಉಳಿಸಿಕೊಳ್ಳಿ ಎಂದಾಗಿದೆ.
#5
ವೈದ್ಯರು ಹೇಳುವಂತೆ ಅತಿಯಾಗಿ ಆಹಾರ ಸೇವನೆ ದೇಹಕ್ಕೆ ಹಾನಿಕರವಾಗಿರುವಂತೆಯೇ ನಿಮ್ಮ ಬ್ಯಾಟರಿಯನ್ನೂ ಅತಿಯಾಗಿ ಚಾರ್ಜ್ ಮಾಡಬೇಡಿ. ಸ್ವಲ್ಪ ಸ್ವಲ್ಪ ಚಾರ್ಜ್ ಮಾಡಿ ಇದರಿಂದ ಬ್ಯಾಟರಿ ಆರೋಗ್ಯ ಉತ್ತಮವಾಗಿರುತ್ತದೆ. ಸೊನ್ನೆಯಿಂದ ಸಂಪೂರ್ಣವಾಗಿ ನೀವು ಫೋನ್ ಚಾರ್ಜ್ ಮಾಡುತ್ತೀರಿ ಎಂದಾದಲ್ಲಿ ಬ್ಯಾಟರಿ ಸಂಪೂರ್ಣವಾಗಿ ಡ್ರೈನ್ ಆಗುತ್ತದೆ ಎಂದಾಗಿದೆ.
#6
ಆದ್ದರಿಂದಲೇ ಫೋನ್‌ನಲ್ಲಿ ಅರ್ಧದಷ್ಟು ಬ್ಯಾಟರಿ ಇರಬೇಕೆಂದು ಗೂಗಲ್ ಹೇಳುತ್ತದೆ ಮತ್ತು ಫೋನ್‌ನ ಜೀವಿತಕ್ಕೆ ಇದು ಅತ್ಯುತ್ತಮ ಎಂಬುದು ಸರ್ಚ್ ದೈತ್ಯನ ಅಂಬೋಣವಾಗಿದೆ.
ಗಿಜ್‌ಬಾಟ್ ಲೇಖನಗಳು
ಚಾರ್ಜರ್ ಇಲ್ಲದೇ ಫೋನ್ ಚಾರ್ಜ್ ಮಾಡುವ 9 ಸರಳ ವಿಧಾನಗಳು
ಈ ಟ್ರಿಕ್ಸ್ಗಳನ್ನು ಬಳಸಿ ಶರವೇಗದಲ್ಲಿ ಫೋನ್ ಚಾರ್ಜ್ ಮಾಡಿ
ದೇಹದ ಉಷ್ಣತೆ ಬಳಸಿ ಫೋನ್ ಚಾರ್ಜ್ ಮಾಡಿ
ವೇಗವಾಗಿ ಫೋನ್ ಚಾರ್ಜ್ ಮಾಡುವುದು ಹೇಗೆ?
ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ
ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ