ಎಚ್ಚರ: ಈ ಕಂಪ್ಯೂಟರ್ ತಪ್ಪುಗಳು ನಿಮ್ಮಿಂದಲೂ ನಡೆಯಬಹುದು
ಯಾವ ವಿಷಯದಲ್ಲೂ ಯಾರೂ ಪರಿಣಿತರಲ್ಲ ಎಂಬ ಮಾತು ಕಂಪ್ಯೂಟರ್ ಕ್ಷೇತ್ರಕ್ಕೂ ಅನ್ವಿಸುತ್ತದೆ. ಕಂಪ್ಯೂಟರ್ ಬಳಕೆಯಲ್ಲೂ ನಾವು ಕನಿಷ್ಟ ತಪ್ಪುಗಳನ್ನು ಮಾಡುತ್ತಿದ್ದು ಇದೇನೂ ಪರಿಹಾರ ಕಾಣದೇ ಇರುವ ಸಮಸ್ಯೆ ಏನಲ್ಲ. ಇಂತಹ ಸಂದರ್ಭಗಳಲ್ಲಿ ನೀವು ಸಿಲುಕಿದ್ದೀರಿ ಎಂದಾದಲ್ಲಿ ಇದಕ್ಕೆ ಪರಿಹಾರವನ್ನು ಆನ್‌ಲೈನ್‌ನಲ್ಲಿ ನೀವು ಕಂಡುಕೊಂಡಿರುತ್ತೀರಿ ಅಂತೆಯೇ ಇದನ್ನು ನಗಣ್ಯವಾಗಿಸಿರುವ ಪ್ರಸಂಗಗಳು ಇದ್ದಿರಬಹುದು.

ಇಂದಿನ ಲೇಖನದಲ್ಲಿ ಇಂತಹುದೇ ಕಂಪ್ಯೂಟರ್ ತಪ್ಪುಗಳನ್ನು ನಾವು ನೀಡುತ್ತಿದ್ದು ಆ ತಪ್ಪುಗಳನ್ನು ನೀವು ಮಾಡುತ್ತಿದ್ದಿರಬಹುದು. ಅದನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ಕಂಡುಕೊಳ್ಳಿ.

ಪೂರ್ವ ನಿಯೋಜಿತ ಉಚಿತ ಅಪ್ಲಿಕೇಶನ್‌ಗಳ ಬಳಕೆ
ಪೂರ್ವ ನಿಯೋಜಿತ ಉಚಿತ ಅಪ್ಲಿಕೇಶನ್‌ಗಳನ್ನು ಈಗ ಸಾಕಷ್ಟು ಡಿವೈಸ್‌ಗಳು ಒಳಗೊಂಡಿರುತ್ತವೆ. ಈ ಎಲ್ಲಾ ಅಪ್ಲಿಕೇಶನ್‌ಗಳು ಉತ್ತಮವಾಗಿರುವುದಿಲ್ಲ. ಆದರೆ ಇವುಗಳು ಬಳಕೆಯಲ್ಲಿ ಇಲ್ಲದೇ ಹೋದರೂ ಅವುಗಳನ್ನು ತೆಗೆಯುವ ಕೆಲಸವನ್ನು ನಾವು ಮಾಡದೇ ಇರುವುದಿಲ್ಲ. ಇದೂ ಒಂದು ತಪ್ಪು ಎಂಬುದಾಗಿ ನಾವು ತಿಳಿಸಬಹುದಾಗಿದೆ.

ಡೀಫಾಲ್ಟ್ ಇನ್‌ಸ್ಟಾಲೇಶನ್
ಉಚಿತವಾಗಿ ದೊರೆಯುತ್ತಿರುವುದನ್ನು ಯಾರಾದರೂ ಬಿಡುತ್ತಾರೆಯೇ? ಉಚಿತ ಸಾಫ್ಟ್‌ವೇರ್ ಜಾಹೀರಾತು ಬೆಂಬಲಿತವಾಗಿದ್ದು ಇದು ನಿಮ್ಮ ಕಂಪ್ಯೂಟರ್ ಚಟುವಟಿಕೆಯನ್ನು ನಿರ್ಬಂಧಿಸುತ್ತದೆ. ವಿಂಡೋಸ್ ಫ್ರಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದಾಗ ಕಸ್ಟಮ್ ಇನ್‌ಸ್ಟಾಲ್ ಅನ್ನು ಮಾಡಿಕೊಳ್ಳಲು ಮರೆಯದಿರಿ.

ರಿಜಿಸ್ಟರಿ ಕ್ಲೀನಿಂಗ್
ರಿಜಿಸ್ಟರಿ ಕ್ಲೀನಿಂಗ್ ನಿಮ್ಮ ಕಂಪ್ಯೂಟರ್ ವೇಗವನ್ನು ವರ್ಧಿಸುವುದಿಲ್ಲ ಎಂಬ ಮಾತಿದೆ ಆದರೆ ಇಂಟರ್ನೆಟ್ ಪೇಂಟಿಂಗ್ಸ್ ಭಿನ್ನ ಚಿತ್ರವನ್ನು ನೀಡುತ್ತದೆ. ಬಹುಶಃ ಈ ಪ್ರಕ್ರಿಯೆ ನಿಮ್ಮ ಕಂಪ್ಯೂಟರ್ ಅನ್ನು ನಿಧಾನವಾಗಿಸಬಹುದು.

ಡಿ - ಫ್ರಾಗ್‌ಮೆಂಟೇಶನ್
ಹಿನ್ನಲೆಯಲ್ಲಿ ವಿಂಡೋಸ್ ನಿಮ್ಮ ಡ್ರೈವ್ ಅನ್ನು ಡಿಫ್ರಾಗ್‌ಮೆಂಟ್ ಮಾಡುತ್ತದೆ. ಇದಕ್ಕಾಗಿ ಹೆಚ್ಚಿನವರು ಹಾರ್ಡ್ ಡಿಸ್ಕ್ ಅನ್ನು ಹಸ್ತಚಾಲಿತವಾಗಿ ಡಿಫ್ರಾಗ್‌ಮೆಂಟ್ ಮಾಡುವುದಿಲ್ಲ.

ಕಂಪ್ಯೂಟರ್ ರೀಸ್ಟಾರ್ಟ್ ಮಾಡದೇ ಇರುವುದು
ಒಮ್ಮೊಮ್ಮೆ ನಿಮ್ಮ ಕಂಪ್ಯೂಟರ್ ವಿಚಿತ್ರವಾಗಿ ವರ್ತಿಸಬಹುದು. ಆ ಸಂದರ್ಭದಲ್ಲಿ ನಿಮ್ಮ ಸಿಸ್ಟಮ್ ಅನ್ನು ರೀಬೂಟ್ ಮಾಡಬೇಕು ನಂತರ ಸಮಸ್ಯೆ ನಿವಾರಣೆಯಾಯಿತೇ ಎಂಬುದನ್ನು ಕಂಡುಕೊಳ್ಳಬೇಕಾಗುತ್ತದೆ.

ಡೇಟಾ ಬ್ಯಾಕಪ್ ಮಾಡಲು ವಿಫಲ
ಡೇಟಾ ನಷ್ಟವಾಗುವುದು ಹಲವಾರು ಕಾರಣಗಳಿಗಾಗಿ ಸಂಭವಿಸುತ್ತಿರುತ್ತದೆ, ಆ ಸಂದರ್ಭದಲ್ಲಿ ನಿಮ್ಮ ಅತ್ಯಮೂಲ್ಯ ಡೇಟಾವನ್ನು ನೀವು ಬ್ಯಾಕಪ್ ಮಾಡಿಡುವುದು ಹೆಚ್ಚು ಉತ್ತಮವಾಗಿರುತ್ತದೆ. ಬಾಹ್ಯ ಡ್ರೈವ್‌ಗೆ ಬ್ಯಾಕಪ್ ಮಾಡುವುದು ಅಥವಾ ಕ್ಲೌಡ್ ಸ್ಟೋರೇಜ್ ಸರ್ವೀಸ್ ಅನ್ನು ಬಳಸಿಕೊಳ್ಳಿ.

ಸಾಫ್ಟ್‌ವೇರ್ ಅಪ್‌ಡೇಟ್ ಮಿಸ್ ಮಾಡಿಕೊಳ್ಳುವುದು
ಬಗ್ ಫಿಕ್ಸ್ ಮಾಡುವುದು, ಹೊಸ ಫೀಚರ್ ಬಿಡುಗಡೆ, ಸಿಸ್ಟಮ್ ಭದ್ರತೆ ಹೀಗೆ ಹಲವಾರು ಕಾರ್ಯಗಳಿಗಾಗಿ ಅಪ್‌ಡೇಟ್ ನಡೆಯುತ್ತಿರುತ್ತದೆ. ಈ ಅಪ್‌ಡೇಟ್‌ಗಳನ್ನು ಎಂದಿಗೂ ಮಿಸ್ ಮಾಡಿಕೊಳ್ಳದೇ ಬಳಸಿ.


Click it and Unblock the Notifications








