ಸ್ಮಾರ್ಟ್‌ಫೋನ್‌ನಿಂದ ಕಣ್ಣುಗಳನ್ನು ಕಾಪಾಡಿಕೊಳ್ಳಿ..! ಇಲ್ಲದಿದ್ರೇ ಅಪಾಯ ಕಟ್ಟಿಟ್ಟ ಬುತ್ತಿ..!

|

ಜಗತ್ತು ಆಧುನಿಕತೆಗೆ ತೆರೆದುಕೊಳ್ಳುತ್ತಿರುವಾಗ ಎಲ್ಲರೂ ಸ್ಮಾರ್ಟ್‌ಫೋನ್‌ ಬಳಸುವುದು ಹೆಚ್ಚಾಗಿದೆ. ಸ್ಮಾರ್ಟ್‌ಫೋನ್‌ ಅಥವಾ ಮೊಬೈಲ್‌ ಬಳಕೆಯಿಂದ ಮಾನವನ ಆರೋಗ್ಯದಲ್ಲಿ ಏರು-ಪೇರಾಗುತ್ತಿರುವುದು ನಿಜ. ಮೊಬೈಲ್‌ ವಿಕಿರಣಗಳಿಂದ ಕ್ಯಾನ್ಸರ್‌ ಸಂಬಂಧಿತ ಹಾಗೂ ಮೆದುಳು ಸಂಬಂಧಿತ ರೋಗಗಳು ಮನುಷ್ಯನನ್ನು ಆವರಿಸಿಕೊಳ್ಳುತ್ತಿರುವುದು ನಿಜವಾಗಿದೆ. ಅದರಂತೆ ಹೆಚ್ಚಿನ ಸ್ಮಾರ್ಟ್‌ಫೋನ್‌ ಬಳಕೆಯಿಂದ ಕಣ್ಣಿಗೂ ಬಹಳಷ್ಟು ನಕಾರಾತ್ಮಕ ಪ್ರಭಾವ ಬೀರುತ್ತಿರುವುದು ರುಜುವಾತಾಗಿದೆ.

ಸ್ಮಾರ್ಟ್‌ಫೋನ್‌ನಿಂದ ಕಣ್ಣುಗಳನ್ನು ಕಾಪಾಡಿಕೊಳ್ಳಿ..!

ಆದ್ದರಿಂದ, ನಿಮ್ಮ ಕಣ್ಣುಗಳನ್ನು ಸ್ಮಾರ್ಟ್‌ಫೋನ್‌ ಒತ್ತಡದಿಂದ ದೂರ ಮಾಡಲು ಒಂದಿಷ್ಟು ಕ್ರಮಗಳಿವೆ. ಸ್ಮಾರ್ಟ್‌ಫೋನ್‌ ಬಳಕೆಯನ್ನು ಕಡಿಮೆ ಮಾಡಿ ಎನ್ನುವುದು ಸಾಮಾನ್ಯ ಕ್ರಮವಾದರೂ, ಅದನ್ನು ಬಿಟ್ಟು ಇನ್ನೊಂದಿಷ್ಟು ಪರಿಣಾಮಕಾರಿ ಕ್ರಮಗಳನ್ನು ನೀವು ಅನುಸರಿಸಿದರೆ ಸ್ಮಾರ್ಟ್‌ಫೋನ್‌ನಿಂದ ಕಣ್ಣಿನ ಮೇಲೆ ಉಂಟಾಗುತ್ತಿರುವ ಒತ್ತಡವನ್ನು ನಿಯಂತ್ರಿಸಬಹುದು. ನಿಮ್ಮ ಕಣ್ಣಿನ ಆರೋಗ್ಯಕ್ಕಾಗಿ ಕೆಳಗೆ ನೀಡಿರುವ ಕ್ರಮಗಳನ್ನು ಅನುಸರಿಸಿ.

ಕಣ್ಣುಗಳನ್ನು ನಿರಂತರವಾಗಿ ಮಿಟುಕಿಸಿ

ಕಣ್ಣುಗಳನ್ನು ನಿರಂತರವಾಗಿ ಮಿಟುಕಿಸಿ

ಸ್ಮಾರ್ಟ್‌ಫೋನ್‌ ಬಳಸುವಾಗ ನಿಮ್ಮ ಕಣ್ಣುಗಳನ್ನು ನಿರಂತರವಾಗಿ ಮಿಟುಕಿಸುತ್ತಲೆ ಇರಿ. ಕಣ್ಣುಗಳನ್ನು ಮಿಟುಕಿಸುವುದರಿಂದ ಕಣ್ಣಿನ ಆದ್ರತೆ ಹೆಚ್ಚಾಗಿ ಕಿರಿಕಿರಿ ಕಡಿಮೆಯಾಗುತ್ತದೆ. ಸ್ಮಾರ್ಟ್‌ಫೋನ್‌ ಬಳಸುವಾಗ ಬಹಳ ಹತ್ತಿರದಿಂದ ನೋಡುವುದರಿಂದ ಕಣ್ಣಿನಲ್ಲಿನ ನೀರಿನಂಶ ಕಡಿಮೆಯಾಗುತ್ತದೆ. ಆದ್ದರಿಂದ ಪ್ರತಿ 20 ನಿಮಿಷಕ್ಕೊಮ್ಮೆ 10 ಬಾರಿ ಕಣ್ಣು ಮಿಟುಕಿಸುವ ಮೂಲಕ ಕಣ್ಣುಗಳನ್ನು ತೇವವಾಗಿಸುತ್ತದೆ. ಇದರಿಂದ ನಿಮ್ಮ ಕಣ್ಣಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

ಗ್ಲೇರ್  ಕಡಿಮೆ ಮಾಡಿ

ಗ್ಲೇರ್ ಕಡಿಮೆ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಂಟಿ-ಗ್ಲೇರ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಅಥವಾ ಮ್ಯಾಟ್ ಸ್ಕ್ರೀನ್ ಪ್ರೊಟೆಕ್ಟರ್‌ ಬಳಸುತ್ತಿದ್ದರೆ ಕಣ್ಣಿಗೆ ಅಷ್ಟೇನು ಒತ್ತಡ ಉಂಟಾಗುವುದಿಲ್ಲ. ಒಂದು ವೇಳೆ ಆಂಟಿ ಗ್ಲೇರ್‌ ಸ್ಕ್ರೀನ್ ಪ್ರೊಟೆಕ್ಟರ್ ಇಲ್ಲದಿದ್ದರೆ, ಆಂಟಿ ಗ್ಲೇರ್ ರಿಫ್ಲೆಕ್ಟಿಂಗ್ ಲೇಪನವನ್ನು ಸ್ಮಾರ್ಟ್‌ಫೋನ್‌ಗೆ ಅಳವಡಿಸಿ. ಇದರಿಂದ ಕಣ್ಣಿನ ಆರೋಗ್ಯ ಉತ್ತಮವಾಗುವುದಲ್ಲದೇ ಫಿಂಗರ್‌ಪ್ರಿಂಟ್‌ಗಳನ್ನು ಮೂಡದಂತೆ ನೋಡಿಕೊಳ್ಳುತ್ತದೆ.

ಬ್ರೇಕ್‌ ತೆಗೆದುಕೊಳ್ಳಿ

ಬ್ರೇಕ್‌ ತೆಗೆದುಕೊಳ್ಳಿ

ಇದು ನಿಮಗೆ ಆತಂಕ ಉಂಟುಮಾಡಬಹುದು. ಆದರೆ, ನಿಮ್ಮ ಕಣ್ಣುಗಳು ನಿಮಗೆ ಧನ್ಯವಾದಗಳನ್ನು ಹೇಳುತ್ತವೆ. ನೀವು ಬಹುಶಃ 20-20-20 ನಿಯಮದ ಬಗ್ಗೆ ಕೇಳಿದ್ದೀರಿ. ಅದೇನೆಂದರೆ ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ಕಾಲ 20 ಅಡಿ ಅಂತರದ ವಸ್ತುವನ್ನು ನೋಡುವ ಮೂಲಕ ವಿರಾಮ ತೆಗೆದುಕೊಳ್ಳಿ. ಈ ಕ್ರಮದಿಂದ ನಿಮ್ಮ ಕಣ್ಣಿನ ಸ್ನಾಯುಗಳು ಸಡಿಲಗೊಳ್ಳುತ್ತವೆ. ಇದರಿಂದ ನಿಮ್ಮ ಮೊದಲಿನ ಲವಲವಿಕೆ ಮತ್ತೆ ಬರುತ್ತದೆ.

ಬ್ರೈಟ್‌ನೆಸ್‌ ಹೊಂದಿಸಿ

ಬ್ರೈಟ್‌ನೆಸ್‌ ಹೊಂದಿಸಿ

ನಿಮ್ಮ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ತುಂಬಾ ಬ್ರೈಟ್‌ ಆಗಿದ್ದರೂ, ಡಾರ್ಕ್‌ ಆಗಿದ್ದರೂ ನಿಮ್ಮ ಕಣ್ಣಿಗೆ ಹೆಚ್ಚಿನ ಒತ್ತಡವುಂಟಾಗುತ್ತದೆ. ಇದರಿಂದ ಕಣ್ಣುಗಳು ಫೋಕಸ್‌ ಮಾಡುವ ಸಮಸ್ಯೆಗೆ ಸಿಲುಕಬಹುದು. ಆದ್ದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಬ್ರೈಟ್‌ನೆಸ್‌ನ್ನು ಸುತ್ತಲೂ ಇರುವ ವಾತಾವಾರಣದ ಬೆಳಕಿಗೆ ತಕ್ಕಂತೆ ಹೊಂದಿಸಿ. ಗಮನಿಸಿ ಮಲಗುವಾಗ ನಿಮ್ಮ ಸ್ಮಾರ್ಟ್‌ಫೋನ್‌ ಡಾರ್ಕ್‌ಮೋಡ್‌ನಲ್ಲಿ ಬಳಸುತ್ತಿದ್ದರೆ ನಿದ್ರಾಹೀನತೆ ಮತ್ತು ಲೈಂಗಿಕ ಸಮಸ್ಯೆಗೂ ಕಾರಣವಾಗುವ ಸಾಧ್ಯತೆಯಿದೆ.

ಅಕ್ಷರ ಗಾತ್ರ ಬದಲಾಯಿಸಿ

ಅಕ್ಷರ ಗಾತ್ರ ಬದಲಾಯಿಸಿ

ಸ್ಮಾರ್ಟ್‌ಫೋನ್‌ನಲ್ಲಿನ ಅಕ್ಷರದ ಗಾತ್ರ ಹಾಗೂ ಕಾಂಟ್ರಾಸ್ಟ್‌ನ್ನು ಬದಲಾಯಿಸಿ, ಹಾಗೂ ನಿಮಗೆ ಬೇಕಾದ ರೀತಿಗೆ ಹೊಂದಿಸಿಕೊಳ್ಳಿ. ವೆಬ್ ಕಂಟೆಂಟ್‌, ಇಮೇಲ್, ಮೇಸೆಜ್‌ಗಳನ್ನು ಓದುವಾಗ ಕಣ್ಣಿಗೆ ಸ್ವಲ್ಪ ಆರಾಮ ಸಿಗುತ್ತದೆ.

ಡಿಸ್‌ಪ್ಲೇಯನ್ನು ಸ್ವಚ್ಛವಾಗಿಟ್ಟುಕೊಳ್ಳಿ

ಡಿಸ್‌ಪ್ಲೇಯನ್ನು ಸ್ವಚ್ಛವಾಗಿಟ್ಟುಕೊಳ್ಳಿ

ನಿಮ್ಮ ಸ್ಮಾರ್ಟ್‌ಫೋನ್‌ ಸ್ಕ್ರೀನ್‌ನ್ನು ಯಾವಾಗಲೂ ಒಣಗಿದ ಬಟ್ಟೆಯಿಂದ ಸ್ವಚ್ಛಗೊಳಿಸುತ್ತೀರಿ. ಧೂಳು, ಫಿಂಗರ್‌ಪ್ರಿಂಟ್‌ ಗುರುತುಗಳನ್ನು ಅಳಿಸಿ ಸ್ಕ್ರೀನ್ ಸ್ವಚ್ಛವಾಗಿಡಿ. ಇದರಿಂದ ಕಣ್ಣಿಗೆ ಹೆಚ್ಚಿನ ಒತ್ತಡ ಉಂಟಾಗುವುದಿಲ್ಲ.

ಸ್ಮಾರ್ಟ್‌ಫೋನ್‌ ದೂರವಿರಲಿ

ಸ್ಮಾರ್ಟ್‌ಫೋನ್‌ ದೂರವಿರಲಿ

ಸ್ಮಾರ್ಟ್‌ಫೋನ್‌ನ್ನು ಬಳಸುವಾಗ ದೂರವಿಟ್ಟುಕೊಳ್ಳಿ, ಎಲ್ಲಾ ಸಮಯದಲ್ಲೂ ನಿಮ್ಮನ್ನು ಹೀಗೆ ಮಾಡಿ ಎಂದು ಹೇಳಲ್ಲ. ಸಾಮಾನ್ಯವಾಗಿ ಎಲ್ಲರೂ ಸೆಲ್‌ಫೋನ್‌ಗಳನ್ನು 8 ಇಂಚು ಅಂತರದಿಂದ ಬಳಸುತ್ತಾರೆ. ಆದ್ದರಿಂದ ಕನಿಷ್ಠ 16 ರಿಂದ 18 ಇಂಚುಗಳಷ್ಟು ದೂರದಲ್ಲಿ ಸ್ಮಾರ್ಟ್‌ಫೋನ್‌ ಬಳಸಿ. ಮೊದಲಿಗೆ ಇದು ತಮಾಷೆಯಾದರೂ, ಕಣ್ಣನ್ನು ಉತ್ತಮವಾಗಿಟ್ಟುಕೊಳ್ಳಬಹುದು.

Best Mobiles in India

English summary
7 Easy Ways to Save Your Eyes From Smartphone Strain. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X