Home
ಟೆಕ್ ನೌಕರಿ

ಹಬ್ಬದ ಸೀಸನ್‌ನ ಆನ್‌ಲೈನ್ ಶಾಪಿಂಗ್‌ನಲ್ಲಿ ಹೆಚ್ಚು ಹಣ ಉಳಿಸಿ..!

ಹಬ್ಬದ ಸೀಸನ್ ಸೇಲ್ ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಹೆಚ್ಚಿನ ಎಲ್ಲಾ ಆನ್ ಲೈನ್ ಪೋರ್ಟಲ್ ಗಳಲ್ಲಿ ಫೇಸ್ಟೀವ್ ಸೀಸನ್ ಸೇಲ್ ನ್ನು ಆಯೋಜಿಸಲಾಗಿದೆ. ಫ್ಲಿಪ್ ಕಾರ್ಟ್, ಅಮೇಜಾನ್, ಪೇಟಿಎಂ ಮಾಲ್ ಮತ್ತು ಸ್ನ್ಯಾಪ್ ಡೀಲ್ ಗಳು ಭರ್ಜರಿ ಆಫರ್ ಗಳನ್ನು ಹಬ್ಬದ ಸೀಸನ್ ನಲ್ಲಿ ನೀಡುವ ನಿರೀಕ್ಷೆಯನ್ನು ಗ್ರಾಹಕರು ಇಟ್ಟುಕೊಂಡಿದ್ದಾರೆ.

ಹಬ್ಬದ ಸೀಸನ್‌ನ ಆನ್‌ಲೈನ್ ಶಾಪಿಂಗ್‌ನಲ್ಲಿ ಹೆಚ್ಚು ಹಣ ಉಳಿಸಿ..!

ಆದರೆ ನೀವು ಹಬ್ಬದ ಸೀಸನ್ ಸೇಲ್ ನಲ್ಲಿ ಖರೀದಿ ಮಾಡುವ ಮುನ್ನ ಕೆಲವು ಟ್ರಿಕ್ಸ್ ಗಳನ್ನು ಮತ್ತು ಟಿಪ್ಸ್ ಗಳನ್ನು ತಿಳಿದಿರಬೇಕು. ಈ ಟಿಪ್ಸ್ ಗಳು ನಿಮ್ಮ ಹೆಚ್ಚುವರಿ ಹಣವನ್ನು ಹಬ್ಬದ ಸೀಸನ್ ನಲ್ಲಿ ಉಳಿತಾಯ ಮಾಡುವ ಯೋಜನೆಗಳಾಗಿವೆ. ಹಾಗಾದ್ರೆ ಏನು ಮಾಡಬೇಕು ಎಂದು ಕೇಳುತ್ತಿದ್ದೀರಾ? ಮುಂದೆ ಓದಿ. ಖಂಡಿತ ಈ ಕೊನೆಯ ಕ್ಷಣದ ಸಲಹೆಗಳು ನಿಮಗೆ ಉಪಯೋಗವಾಗಲಿದೆ. ಹೆಚ್ಚು ಹಣವನ್ನು ಉಳಿತಾಯ ಮಾಡಲು ಸಹಾಯ ಮಾಡಲಿದೆ. ಈ ಸಮಯದಲ್ಲಿ ಇ-ಕಾಮರ್ಸ್ ಸೈಟ್ ನಲ್ಲಿ ಭರ್ಜರಿ ರಿಯಾಯಿತಿಗಳಿರುತ್ತದೆ. ಸ್ಪೆಷಲ್ ಆಫರ್ ಗಳಿರುತ್ತದೆ.

ಬೆಲೆಯನ್ನು ಹೋಲಿಕೆ ಮಾಡುವುದು

ಬೆಲೆಯನ್ನು ಹೋಲಿಕೆ ಮಾಡುವುದು

ನಿಮ್ಮ ಇಷ್ಟದ ವಸ್ತುವನ್ನು ಕೇವಲ ಒಂದೇ ಆನ್ ಲೈನ್ ವೆಬ್ ಸೈಟ್ ಮಾರಾಟ ಮಾಡುತ್ತಿರುವುದಿಲ್ಲ. ಎಕ್ಸ್ ಕ್ಲೂಸೀವ್ ಸ್ಮಾರ್ಟ್ ಫೋನ್ ಅಥವಾ ಟಿವಿಯಾಗಿದ್ದರೆ ಮಾತ್ರ ಹೀಗಾಗುತ್ತದೆ.ಹೆಚ್ಚಿನ ವಸ್ತುಗಳು ಬೇರೆಬೇರೆ ವೆಬ್ ಸೈಟ್ ಗಳಲ್ಲೂ ಲಭ್ಯವಿರುತ್ತದೆ. ಹಾಗಾಗಿ ಎಲ್ಲಾ ಸೈಟ್ ಗಳಲ್ಲಿ ನೀವು ಖರೀದಿಸಬೇಕು ಎಂದುಕೊಳ್ಳುವ ವಸ್ತುವನ್ನು ಹೋಲಿಸಿ ನೋಡಿ. ಪ್ರೈಸ್ ದೇಕೋ ಮತ್ತು ಕಂಪ್ಯಾರ್ ರಾಜಾದಂತ ಆನ್ ಟೂಲ್ ಗಳೂ ಕೂಡ ಇದಕ್ಕಾಗಿ ಲಭ್ಯವಿದೆ. ಇವುಗಳನ್ನು ನಿಮ್ಮ ಇಷ್ಟದ ವಸ್ತುಗಳನ್ನು ಬೇರೆಬೇರೆ ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿರುವ ಬೆಲೆಯ ಜೊತೆಗೆ ಹೋಲಿಕೆ ಮಾಡಿ ವಿವರವನ್ನು ತಿಳಿಸುತ್ತದೆ.

ಬ್ಯಾಂಕ್ ಆಫರ್ ಗಳನ್ನು ಸರಿಯಾಗಿ ತಿಳಿದುಕೊಳ್ಳುವುದು

ಬ್ಯಾಂಕ್ ಆಫರ್ ಗಳನ್ನು ಸರಿಯಾಗಿ ತಿಳಿದುಕೊಳ್ಳುವುದು

ಈ ವರ್ಷ ಅಮೇಜಾನ್ ಎಸ್ ಬಿಐ ಜೊತೆ ಕೈಜೋಡಿಸಿದ್ದು ಶೇ.10 ರ ರಿಯಾಯಿತಿಯನ್ನು ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ನೀಡುತ್ತಿದೆ. ಫ್ಲಿಪ್ ಕಾರ್ಟ್ ಹೆಚ್ ಡಿಎಫ್ ಸಿ ಬ್ಯಾಂಕ್ ಜೊತೆಗೆ ಕೈಜೋಡಿಸಿದ್ದು ಶೇ.10 ರ ರಿಯಾಯಿತಿಯನ್ನು ಬಿಗ್ ಬಿಲಿಯನ್ ಡೇ ದಿನ ನೀಡುತ್ತಿದೆ. ಇದು ಒಂದು ಪೋರ್ಟಲ್ ನಿಂದ ಇನ್ನೊಂದು ಪೋರ್ಟಲ್ ಗೆ ವಿಭಿನ್ನವಾಗಿರುತ್ತದೆ. ಎಲ್ಲಾ ಬ್ಯಾಂಕ್ ಲಭ್ಯತೆಯನ್ನು ಪರೀಕ್ಷಿಸಿ ಮತ್ತು ಯಾವುದರಲ್ಲಿ ಹೆಚ್ಚು ಮೊತ್ತವನ್ನು ಉಳಿಸಲು ಸಾಧ್ಯ ಎಂಬುದನ್ನು ಗಮನಿಸಿ.

ವ್ಯಾಲೆಟ್ ಮತ್ತು ಕ್ಯಾಷ್ ಬ್ಯಾಕ್ ಆಫರ್ ಗಳನ್ನು ತಿಳಿಯಿರಿ

ವ್ಯಾಲೆಟ್ ಮತ್ತು ಕ್ಯಾಷ್ ಬ್ಯಾಕ್ ಆಫರ್ ಗಳನ್ನು ತಿಳಿಯಿರಿ

ಒಂದು ವೇಳೆ ನಿಮ್ಮ ಬ್ಯಾಂಕ್ ಯಾವುದೇ ಆಫರ್ ನ್ನೂ ನೀಡುತ್ತಿಲ್ಲವಾದರೆ ಚಿಂತಿಸಬೇಡಿ. ವ್ಯಾಲೆಟ್ ಆಫರ್ ಗಳು ಮತ್ತು ಕ್ಯಾಷ್ ಬ್ಯಾಕ್ ಗಳೂ ಕೂಡ ಇರುತ್ತದೆ.ಆನ್ ಲೈನ್ ಪೇಮೆಂಟ್ ಗೇಟ್ ವೇಗಳ ಮೂಲಕ ಪಾವತಿ ಮಾಡುವವರಿಗೆ ಇನ್ಸ್ಟೆಂಟ್ ಕ್ಯಾಷ್ ಬ್ಯಾಕ್ ನ್ನು ವ್ಯಾಲೆಟ್ ಗೆ ನೀಡುವ ವಿಶೇಷ ಆಫರ್ ಗಳನ್ನು ನೀಡುತ್ತದೆ. ಪೇಟಿಎಂ ಮಾಲ್ ಪೇಟಿಎಂ ವ್ಯಾಲೆಟ್ ಮೂಲಕ ಕ್ಯಾಷ್ ಬ್ಯಾಕ್ ನೀಡುತ್ತದೆ, ಅಮೇಜಾನ್ ಅಮೇಜಾನ್ ಪೇ ಮೂಲಕ ಕ್ಯಾಷ್ ಬ್ಯಾಕ್ ನೀಡುತ್ತದೆ, ಫ್ಲಿಪ್ ಕಾರ್ಟ್ ಫೋನ್ ಪೇ, ಸ್ನ್ಯಾಪ್ ಡೀಲ್ ಫ್ರೀಚಾರ್ಜ್ ಮೂಲಕ ಹೀಗೆ ಬೇರೆಬೇರೆ ಸೈಟ್ ಗಳು ಬೇರೆಬೇರೆ ಪೇಮೆಂಟ್ ಗೇಟ್ ವೇ ಮೂಲಕ ಕ್ಯಾಷ್ ಬ್ಯಾಕ್ ನೀಡುತ್ತದೆ. ಇದನ್ನು ಗ್ರಾಹಕರು ಪಡೆದರೆ ಹೆಚ್ಚು ಲಾಭ ಗಳಿಸಬಹುದು.

ಎಕ್ಸ್ ಚೇಂಜ್ ಆಫರ್ ಗಳನ್ನು ಪರೀಕ್ಷಿಸಿ

ಎಕ್ಸ್ ಚೇಂಜ್ ಆಫರ್ ಗಳನ್ನು ಪರೀಕ್ಷಿಸಿ

ನಾವು ನಮ್ಮ ಹಳೆಯ ಫೋನ್ ಒಎಲ್ಎಕ್ಸ್ ಅಥವಾ ಕ್ಯಾಷಿಫೈ ಮೂಲಕ ಮಾರಾಟ ಮಾಡಲು ಯತ್ನಿಸುತ್ತೇವೆ. ಆದರೆ ಇ-ಕಾಮರ್ಸ್ ಕಂಪೆನಿಗಳು ದೊಡ್ಡ ಮೊತ್ತ ಡಿಸ್ಕೌಂಟ್ ನ್ನು ಎಕ್ಸ್ ಚೇಂಜ್ ಆಫರ್ ಮೂಲಕ ನೀಡಲು ಫೇಸ್ಟೀವ್ ಸೀಸನ್ ನಲ್ಲಿ ರೆಡಿಯಾಗಿದೆ. ಉದಾಹರಣೆಗೆ ಅಮೇಜಾನ್ ನೋಟ್ 9 ಗೆ 5000 ರೂಪಾಯಿ ವರೆಗೆ ಎಕ್ಸ್ ಚೇಂಜ್ ಆಫರ್ ನೀಡುತ್ತಿದೆ. ಫ್ಲಿಪ್ ಕಾರ್ಟ್ ಆಸೂಸ್ ಝೆನ್ಫೋನ್ 5ಝಡ್ ಗೆ 3000 ರೂಪಾಯಿವರೆಗಿನ ಎಕ್ಸ್ ಚೇಂಜ್ ಆಫರ್ ನ್ನು ನೀಡುತ್ತಿದೆ. ಹಾಗಾಗಿ ಎಕ್ಸ್ ಚೇಂಜ್ ಆಫರ್ ನ್ನು ಪರೀಕ್ಷಿಸುವುದನ್ನು ಮರೆಯಬೇಡಿ.

ಡೀಲ್ ಟೈಮಿಂಗ್ಸ್

ಡೀಲ್ ಟೈಮಿಂಗ್ಸ್

ಇ ಕಾಮರ್ಸ್ ಸೈಟ್ ಗಳು ಬೇರೆಬೇರೆ ಪ್ರೊಡಕ್ಟ್ ಗಳಿಗೆ ಬೇರೆಬೇರೆ ಸಮಯದಲ್ಲಿ ವಿಭಿನ್ನ ಆಫರ್ ಗಳನ್ನು ನೀಡುತ್ತದೆ. ಅದು ಘಂಟೆಗಳಲ್ಲಿ ಬದಲಾಗುತ್ತಿರುತ್ತದೆ. ನಿಮ್ಮ ಫೇವರೆಟ್ ಪ್ರೊಡಕ್ಟ್ ಯಾವ ಸಮಯಕ್ಕೆ ಸೇಲ್ ಗೆ ಇರುತ್ತದೆ ಎಂಬ ಬಗ್ಗೆ ರಿಮೈಂಡರ್ ಇಟ್ಟುಕೊಳ್ಳಿ ಮತ್ತು ಅದೇ ಸಮಯಕ್ಕೆ ಖರೀದಿಸಿದರೆ ಹೆಚ್ಚಿನ ರಿಯಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ.ಫೇಸ್ಟೀವ್ ಸೇಲ್ ನಲ್ಲಿ ಸಮಯ ಪ್ರಜ್ಞೆಯು ಬಹಳ ಮುಖ್ಯವಾಗಿ ಬೇಕಾಗುತ್ತದೆ. ಕೆಲವು ವಸ್ತುಗಳು ಕೆಲವು ಸಮಯದಲ್ಲಿ ಮಾತ್ರ ಆಫರ್ ನಲ್ಲಿ ಇರುತ್ತದೆ.

ಫ್ಲ್ಯಾಶ್ ಸೇಲ್ ಮತ್ತು ಇನ್ಸೆಂಟ್ ಡಿಸ್ಕೌಂಟ್

ಫ್ಲ್ಯಾಶ್ ಸೇಲ್ ಮತ್ತು ಇನ್ಸೆಂಟ್ ಡಿಸ್ಕೌಂಟ್

ಬ್ಯಾಂಕ್ ಆಫರ್ ಗಳು, ಹೊಸದಾಗಿ ಬಿಡುಗಡೆಗೊಳ್ಳುವ ಸ್ಮಾರ್ಟ್ ಫೋನ್ ಗಳನ್ನು ಕಡಿಮೆ ಬೆಲೆಗೆ ಖರೀದಿಸಲು ಸಾಧ್ಯ. ಉದಾಹರಣೆಗೆ ರಿಯಲ್ ಮಿ 2 ಪ್ರೋ ಅಥವಾ ರಿಯಲ್ ಮಿ ಸಿ1 ಯಾವುದೇ ಹೆಚ್ಚುವರಿ ಸ್ಪೆಷಲ್ ರಿಯಾಯಿತಿಗಳು ಇದಕ್ಕೆ ನಿಮಗೆ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಲಭ್ಯವಾಗದೇ ಇರಬಹುದು. ಆದರೆ ಹೆಚ್ ಡಿಎಫ್ ಸಿ ಬ್ಯಾಂಕ್ ಕಾರ್ಡ್ ಬಳಸಿ ಮತ್ತು ಫೋನ್ ಪೇ ಬಳಸಿ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ನಿಮ್ಮ ಪೇಮೆಂಟ್ ಡೀಟೇಲ್ಸ್ ನ್ನು ಮೊದಲೇ ಸೇವ್ ಮಾಡಿ ಇಟ್ಟುಕೊಳ್ಳಿ, 10 ನಿಮಿಷ ಮುಂಚೆಯೇ ಸೈನ್ ಇನ್ ಆಗಿ ಖರೀದಿಸಲು ತಯಾರಾಗಿರಿ. ಅಂದರೆ ಫ್ಲ್ಯಾಶ್ ಸೇಲ್ ಗಳಲ್ಲೂ ಹೆಚ್ಚು ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

ವೇಗದ ಚೆಕ್ ಔಟ್

ವೇಗದ ಚೆಕ್ ಔಟ್

ಫ್ಲ್ಯಾಶ್ ಸೇಲ್ ಗಳಿಗೆ ಮುಖ್ಯವಾಗಿ ಬೇಕಾಗಿರುವುದು ವೇಗದ ಇಂಟರ್ನೆಟ್ ಕನೆಕ್ಷನ್ ಮತ್ತು ಪ್ರೀ ಸೇವ್ ಆಗಿರುವ ವಿವರಗಳು. ನಿಮ್ಮ ಅಡ್ರೆಸ್, ಪೇಮೆಂಟ್ ವಿವರಗಳು, ಇತರೆ ಅಗತ್ಯ ಮಾಹಿತಿಗಳನ್ನು ಮೊದಲೇ ಸೇವ್ ಮಾಡಿ ಇಟ್ಟುಕೊಳ್ಳಿ. ನೀವು ರೆಡಿಯಾಗಿ ಇಲ್ಲದೇ ಇದ್ದರೆ, 30 ರಿಂದ 40 ಸೆಕೆಂಡ್ ಗಳಲ್ಲಿ ಖರೀದಿಸಲು ಖಂಡಿತ ಸಾಧ್ಯವಾಗುವುದಿಲ್ಲ. ವೈಫೈ ಉತ್ತಮ ಸ್ಪೀಡ್ ನಲ್ಲಿದ್ದರೆ ವೇಗವಾಗಿ ಚೆಕ್ ಔಟ್ ಮಾಡಲು ಸಾಧ್ಯವಾಗುತ್ತದೆ. ಖರೀದಿಯಲ್ಲಿ ರಿಯಾಯಿತಿ ಪಡೆಯುವುದಕ್ಕೂ ಸಾಧ್ಯವಾಗುತ್ತದೆ.

Best Mobiles in India

English summary
7 Tips To Save Extra Money On Festive Sales: Flipkart, Amazon, Paytm & More!. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+