ವಿಂಡೋಸ್ 7 ಅನ್ನು ಹಿಂದಿಕ್ಕಿ ಕೊನೆಗೂ ವಿಂಡೋಸ್ 10 ಅತ್ಯಂತ ಜನಪ್ರಿಯ ವಿಂಡೋಸ್ ಆವೃತ್ತಿ ಎನಿಸಿದೆ. ಎನಲಿಟಿಕ್ಸ್ ಸಂಸ್ಥೆಯಾದ ಸ್ಟ್ಯಾಟ್ಕೌಂಟರ್ ನ ವರದಿಗಳ ಪ್ರಕಾರ ವಿಂಡೋಸ್ 10 ಡೆಸ್ಕ್ಟಾಪ್ ಓಎಸ್ ಮಾರುಕಟ್ಟೆಯ 42.78% ಪಾಲನ್ನು ಪಡೆದರೆ ವಿಂಡೋಸ್ 7 41.86% ನಷ್ಟು ಪಾಲನ್ನು ಮಾತ್ರ ಪಡೆಯಲು ಸಫಲವಾಗಿದೆ.ಹಾಗಾಗಿ ವಿಂಡೋಸ್ 10 ಡೆಸ್ಕ್ಟಾಪ್ ಓಎಸ್ ಮಾರುಕಟ್ಟೆಯ ಸಧ್ಯದ ದೊರೆಯೆನಿಸಿದೆ.

ಕಳೆದ ನವಂಬರ್ನಲ್ಲಿ ಮೈಕ್ರೋಸಾಫ್ಟ್ ಸಂಸ್ಥೆಯು ವಿಂಡೋಸ್ 10 600 ಮಿಲಿಯನ್ ಗೂ ಅಧಿಕ ಸಾಧನಗಳಲ್ಲಿ ಬಳಕೆಯಾಗುತ್ತಿರುವುದಾಗಿ ವರದಿ ಮಾಡಿತ್ತು. ಡೆಸ್ಕ್ಟಾಪ್ಗಳು, ಟ್ಯಾಬ್ಲೆಟ್ ಗಳು, Xಬಾಕ್ಸ್ ಒನ್ ಕನ್ಸೋಲ್ಗಳು, ಹೋಲೊ ಲೆನ್ಸ್ ಹೆಡ್ಸೆಟ್ಗಳು, ಮತ್ತು ಸರ್ಫೇಸ್ ಹಬ್ ಸಾಧನಗಳು ಮೊದಲಾದ ಸಾಧನಗಳಲ್ಲಿ ವಿಂಡೋಸ್ 10 ಬಳಕೆಯಾಗುತ್ತಿದೆ. ನಿಮ್ಮ ಲ್ಯಾಪ್ಟಾಪ್ ಮತ್ತು ಡೆಸ್ಕ್ಟಾಪ್ಗಳು ಕೂಡ ವಿಂಡೋಸ್ 10 ಅನ್ನೇ ಬಳಸುತ್ತಿರಬಹುದು. ಆದರೆ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ನೀಡುವ ಎಲ್ಲಾ ಫೀಚರ್ಗಳ ಅರಿವು ನಿಮಗಿರಲಿಕ್ಕಿಲ್ಲ.
ಉದಾಹರೆಣೆಗೆ ಮೈಕ್ರೋಸಾಫ್ಟ್ ವಿಂಡೋಸ್ 10 ಹಲವು ಟಚ್ಪ್ಯಾಡ್ ಗೆಸ್ಚರ್ಗಳನ್ನು ಹೊಂದಿದೆ.ನೀವು ತಿಳಿದಿರಬೇಕಾದ 7 ಗೆಸ್ಚರ್ಗಳನ್ನು ಇಲ್ಲಿ ನೀಡಿದ್ದೇವೆ. ಇಲ್ಲಿ ತಿಳಿಸಿರುವ ಕೆಲವು ಗೆಸ್ಚರ್ ಗಳು ಕೇವಲ ಪ್ರಿಸಿಶನ್ ಟಚ್ಪ್ಯಾಡ್ ಗಳಲ್ಲಿ ಕೆಲಸಮಾಡುತ್ತದೆ. ಹಾಗಾಗಿ ಆ ಗೆಸ್ಚರ್ ನಿಮ್ಮ ಸಾಧನದಲ್ಲಿ ಕೆಲಸ ಮಾಡದಿದ್ದರೆ ನಿರಾಶರಾಗಬೇಡಿ.
ಸ್ಕ್ರೋಲ್
ಟಚ್ಪ್ಯಾಡ್ ಮೇಲೆ ಎರಡು ಬೆರಳುಗಳನ್ನಿರಿಸಿ ಅದನ್ನು ಅಡ್ಡವಾಗಿ ಅಥವಾ ಲಂಬವಾಗಿ ಸ್ಲೈಡ್ ಮಾಡಿ
ಝೂಮ್ ಇನ್ ಅಥವಾ ಝೂಮ್ ಔಟ್
ಪರದೆಯ ಮೇಲಿರುವುದನ್ನು ಹಿರಿದಾಗಿಸಲು ಅಥವಾ ಕಿರಿದಾಗಿಸಲು ನಿಮ್ಮ ಎರಡು ಬೆರಳುಗಳನ್ನು ಟಚ್ಪ್ಯಾಡ್ ಮೇಲಿರಿಸಿ, ನಂತರ ಬೆರಳುಗಳನ್ನು ಹತ್ತಿರ ತರುವ ಅಥವಾ ದೂರ ಸರಿಸುವ ಮೂಲಕ ಝೂಮ್ ಇನ್ ಅಥವಾ ಝೂಮ್ ಔಟ್ ಮಾಡಬಹುದು.
ಹೆಚ್ಚಿನ ಕಮಾಂಡ್ ತೋರಿಸಲು( ರೈಟ್-ಕ್ಲಿಕ್ ನಂತೆ)
ಈ ಫೀಚರ್ ಪಡೆಯಲು ಟಚ್ಪ್ಯಾಡ್ ಮೇಲೆ ಎರಡು ಬೆರಳುಗಳಿಂದ ಟ್ಯಾಪ್ ಮಾಡಿ ಅಥವಾ ಟಚ್ಪ್ಯಾಡ್ ನ ಕೆಳಭಾಗದಲ್ಲಿ ಬಲಬದಿಯಲ್ಲಿ ಒತ್ತಿ
ವಾಟ್ಸ್ಆಪ್ ಮೂಲಕ ಹಣ ಸೆಂಡ್ ಮಾಡುವುದು ಹೇಗೆ ಗೊತ್ತಾ?!
ಎಲ್ಲಾ ತೆರೆದ ವಿಂಡೋಗಳನ್ನು ನೋಡಲು
ನಿಮ್ಮ ಮೂರು ಬೆರಳುಗಳನ್ನು ಟಚ್ಪ್ಯಾಡ್ ಮೇಲಿರಿಸಿ ಅದನ್ನು ನಿಮ್ಮಿಂದ ದೂರಕ್ಕೆ ಸ್ವೈಪ್ ಮಾಡಿ
ಕೊರ್ಟಾನಾ ತೆರೆಯಲು
ಮೈಕ್ರೋಸಾಫ್ಟ್ ನ ವಿಶ್ಯುವಲ್ ಅಸಿಸ್ಟೆಂಟ್ ಆದ ಕೊರ್ಟಾನಾ ತೆರೆಯಲು ಟಚ್ಪ್ಯಾಡ್ ಮೇಲೆ ಮೂರು ಬೆರಳುಗಳನ್ನು ಟ್ಯಾಪ್ ಮಾಡಿ
ತೆರೆದಿರುವ ವಿಂಡೋಗಳ ಮಧ್ಯೆ ಸ್ವಿಚ್ ಮಾಡಲು
ಈಗಾಗಲೇ ತೆರೆದಿರುವ ವಿಂಡೋಗಳ ಮಧ್ಯೆ ಸ್ವಿಚ್ ಮಾಡಲು, ಅಂದರೆ ಒಂದು ವಿಂಡೋ ಇಂದ ಇನ್ನೊಂದು ವಿಂಡೋ ಗೆ ಬದಲಾಯಿಸಲು, ಟಚ್ಪ್ಯಾಡ್ ಮೇಲೆ ಮೂರು ಬೆರಳುಗಳನ್ನಿರಿಸಿ ಬಲಕ್ಕೆ ಅಥವಾ ಎಡಕ್ಕೆ ಸ್ವೈಪ್ ಮಾಡಿ
ವರ್ಚ್ಯುವಲ್ ಡೆಸ್ಕ್ಟಾಪ್ ಮಧ್ಯೆ ಸ್ವಿಚ್ ಮಾಡಲು
ವರ್ಚ್ಯುವಲ್ ಡೆಸ್ಕ್ಟಾಪ್ ಗಳ ಮಧ್ಯೆ ಸ್ವಿಚ್ ಮಾಡಲು ಟಚ್ಪ್ಯಾಡ್ ಮೇಲೆ ನಾಲ್ಕು ಬೆರಳುಗಳನ್ನಿರಿಸಿ ಬಲಕ್ಕೆ ಅಥವಾ ಎಡಕ್ಕೆ ಸ್ವೈಪ್ ಮಾಡಿ
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.