ನಿಮ್ಮ ಸ್ಮಾರ್ಟ್‌ಫೋನ್ ಹೆಚ್ಚು ದಿನ ಬಾಳಿಕೆ ಬರಬೇಕೆ?...ಇಲ್ಲಿವೆ 5 ದಾರಿ!!

ಒಂದು ಸ್ಮಾರ್ಟ್‌ಫೋನ್ ಖರೀದಿಸಿದ ಆರು ತಿಂಗಳಿನಲ್ಲಿಯೇ ಅದರ ಆಯಸ್ಸು ಶೇ 80 ರಷ್ಟು ಮುಗಿಯುತ್ತಿದೆ ಎಂಬ ಶಾಕಿಂಗ್ ವರದಿಗೆ ಬೆಚ್ಚಿಬೀಳದೆ ಇರಲು ಸಾಧ್ಯವಿಲ್ಲ.

|

ಒಂದು ಸ್ಮಾರ್ಟ್‌ಫೋನ್ ಖರೀದಿಸಿದ ಆರು ತಿಂಗಳಿನಲ್ಲಿಯೇ ಅದರ ಆಯಸ್ಸು ಶೇ 80 ರಷ್ಟು ಮುಗಿಯುತ್ತಿದೆ ಎಂಬ ಶಾಕಿಂಗ್ ವರದಿಗೆ ಬೆಚ್ಚಿಬೀಳದೆ ಇರಲು ಸಾಧ್ಯವಿಲ್ಲ. ಏಕೆಂದರೆ, ಸಾವಿರಾರು ರೂಪಾಯಿ ಹಣತೆತ್ತು ಖರೀದಿಸಿದ ಸ್ಮಾರ್ಟ್‌ಫೋನ್ ಅಷ್ಟು ಬೇಗವೇ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ ಎಂದರೆ ಯಾರಿಗೆ ತಾನೆ ಶಾಕ್ ಆಗೊಲ್ಲಾ ಹೇಳಿ?.

ಹಾಗಾಗಿ, ಮೊಬೈಲ್ ಅನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನು ತಿಳಿದರೆ ಮೊಬೈಲ್ ಬಾಳಿಕೆ ಹೆಚ್ಚು ದಿನ ಬರಲಿದೆ ಎನ್ನುವುದು ನೂರಕ್ಕೆ ನೂರರಷ್ಟು ನಿಜ. ಏಕೆಂದರೆ, ಬಹುತೇಕರ ಮೊಬೈಲ್ ಕಾರ್ಯನಿರ್ವಹಣೆ ನೀಡಿ ಸುಸ್ತಾಗುವುದರ ಒಳಗಾಗಿ ಬಳಕೆದಾರರೆ ಅದರ ಆಯಸ್ಸನ್ನು ಮುಗಿಸುತ್ತಾರೆ ಎಂದರೆ ಮೊಬೈಲ್ ಬಳಕೆಯಲ್ಲಿ ಎಷ್ಟು ಲೋಪವಿದೆ ಎಂದು ತಿಳಿಯಬಹುದು.

ನಿಮ್ಮ ಸ್ಮಾರ್ಟ್‌ಫೋನ್ ಹೆಚ್ಚು ದಿನ ಬಾಳಿಕೆ ಬರಬೇಕೆ?...ಇಲ್ಲಿವೆ 5 ದಾರಿ!!

ಸ್ಮಾರ್ಟ್‌ಫೋನ್‌ಗಳನ್ನು ನಿರಂತರವಾಗಿ ಬಳಸುವುದರಿಂದ ಅವುಗಳು ಜಡವಾಗುತ್ತವೆ ಮತ್ತು ಅವುಗಳ ಜೀವಿತ ಅವಧಿ ಕಡಿಮೆಯಾಗುತ್ತದೆ. ಇದು ಕೇವಲ ಮೊಬೈಲ್‌ಗೆ ಮಾತ್ರವಲ್ಲದೆ, ಎಲ್ಲಾ ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೂ ಅನ್ವಯಿಸಲಿದೆ! ಹಾಗಾಗಿ, ಮೊಬೈಲ್ ಸೇರಿ ಎಲ್ಲಾ ಗ್ಯಾಜೆಟ್‌ಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಬ್ಯಾಟರಿಗಳ ಸ್ಥಿತಿ ಪರಿಶೀಲಿಸಿ!

ಬ್ಯಾಟರಿಗಳ ಸ್ಥಿತಿ ಪರಿಶೀಲಿಸಿ!

ಯಾವುದೇ ಗ್ಯಾಜೆಟ್‌ನ ಇಡೀ ಸಾಧನದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವ ಬ್ಯಾಟರಿಗಳ ಸ್ಥಿತಿಯನ್ನು ಮೊದಲು ಪರಿಶೀಲಿಸಿಕೊಳ್ಳಿ. ಬ್ಯಾಟರಿ ಸರಿಯಾಗಿ ಕೆಲಸ ಮಾಡದಿದ್ದರೆ ಹೊಸತನ್ನು ಖರೀದಿಸುವುದು ಇಲ್ಲವೇ ದುರಸ್ತಿ ಮಾಡಿಸುವುದು ಸೂಕ್ತ.!

ಸರಿಯಾಗಿ ಚಾರ್ಜ್ ಮಾಡಿ!!

ಸರಿಯಾಗಿ ಚಾರ್ಜ್ ಮಾಡಿ!!

ಹೆಚ್ಚು ಜನರು ಮೊಬೈಲ್ ಅನ್ನು ಸರಿಯಾಗಿ ಸರಿಯಾಗಿ ಚಾರ್ಜ್ ಮಾಡುವುದಿಲ್ಲ. ಇದೇ ಕಾರಣಕ್ಕಾಗಿ ಮೊಬೈಲ್‌ ತನ್ನ ಆಯಸ್ಸನ್ನು ಬೇಗ ಕಳೆದುಕೊಳ್ಳುತ್ತದೆ ಎಂಬುದು ನಿಜ! ಬ್ಯಾಟರಿ ಡೆಡ್ ಆಗುವವರೆಗೂ ಕಾದು ಮೊಬೈಲ್ ಚಾರ್ಜ್ ಮಾಡಿದರೆ ಮೊಬೈಲ್ ಬಿಡಿಭಾಗಗಳ ಮೇಲೆ ಒತ್ತಡ ಉಂಟಾಗಿ ಆಯಸ್ಸನ್ನು ಕಳೆದುಕೊಳ್ಳಲಿವೆ.!!

ಕಳಪೆ ಬಿಡಿಬಾಗ ಬಳಸಬೇಡಿ.!

ಕಳಪೆ ಬಿಡಿಬಾಗ ಬಳಸಬೇಡಿ.!

ಎಲೆಕ್ಟ್ರಾನಿಕ್ಸ್ ವಸ್ತುಗಳ ಬಿಡಿಬಾಗಗಳು ಹಾಳಾಗುವುದು ಸಹಜ ಆಗಿರುವುದರಿಂದ ಅವುಗಳ ರಿಪ್ಲೇಸ್‌ಗೆ ಕಳಪೆ ಬಿಡಿಬಾಗಗಳನ್ನು ಹಾಕಬೇಡಿ. ಕಳಪೆ ಬಿಡಿಬಾಗಗಳನ್ನು ಬಳಕೆ ಮಾಡುವುದರಿಂದ ನಿಮ್ಮ ಎಲೆಕ್ಟ್ರಾನಿಕ್ ಸಾಧನ ಸಂಪೂರ್ಣವಾಗಿ ಹಾಳಾಗುವುದರಲ್ಲಿ ಎರಡು ಮಾತಿಲ್ಲ.!!

ಸಂಗ್ರಹ ಸಾಮರ್ಥ್ಯ ನೋಡಿ!

ಸಂಗ್ರಹ ಸಾಮರ್ಥ್ಯ ನೋಡಿ!

ನೀವು ಬಳಸುವ ಯಾವುದೇ ಗ್ಯಾಜೆಟ್‌ನ ಸಂಗ್ರಹ ಸಾಮರ್ಥ್ಯದ ಕಡೆಗೆ ಗಮನಹರಿಸುವುದೂ ಒಳ್ಳೆಯದು. ಅವುಗಳಲ್ಲಿ ಶೇಖರವಾಗಿರುವ ಅನಗತ್ಯವಾದ ಅಂಶಗಳನ್ನು ತೆಗೆದುಹಾಕುವುದು ಉತ್ತಮ.ಇನ್ನು ಯಾವತ್ತೂ ನೋಡದ ಫೈಲ್‌ಗಳನ್ನು ಡಿಲೀಟ್ ಮಾಡಿದರೆ ಇನ್ನೂ ಒಳ್ಳೆಯದು.!!

How to Send Message to Multiple Contacts on WhatsApp - GIZBOT KANNADA
ಧೂಳು ಹಿಡಿಯದಂತೆ ಎಚ್ಚರ ವಹಿಸಿ!

ಧೂಳು ಹಿಡಿಯದಂತೆ ಎಚ್ಚರ ವಹಿಸಿ!

ಸ್ಮಾರ್ಟ್‌ಫೋನ್ ಸೇರಿ ನೀವು ಬಳಸುವ ಯಾವುದೇ ಸಾಧನದ ಕಡೆಗೆ ಸ್ವಲ್ಪ ಪ್ರೀತಿ ತೋರುವುದು ಉತ್ತಮ. ಕಂಪ್ಯೂಟರ್ ಸ್ಕ್ರೀನ್‌ಗಳನ್ನು ಒದ್ದೆ ಬಟ್ಟೆಯಿಂದ ಒರೆಸುವುದು, ಧೂಳು ಹಿಡಿಯದಂತೆ ಎಚ್ಚರ ವಹಿಸುವುದು ಮುಖ್ಯ. ಈ ರೀತಿಯ ಕೆಲಸಗಳನ್ನು ಕನಿಷ್ಠ ಮೂರು ತಿಂಗಳಿಗೊಮ್ಮೆ ಮಾಡಿದರೆ ಅವುಗಳು ವರ್ಷಗಟ್ಟಲೆ ಉತ್ತಮವಾಗಿ ಕೆಲಸ ಮಾಡುತ್ತವೆ.!!

Best Mobiles in India

English summary
Let's start with external threats. Get a Case. There's nothing worse than dropping your phone and shattering the screen. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X