ಫ್ಲ್ಯಾಶ್‌ಸೇಲ್‌ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸಲು 8 ಸಲಹೆಗಳು ನಿಮಗಾಗಿ!
ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳಾದ ಶಿಯೋಮಿ, ಒನ್ ಪ್ಲಸ್, ಆಸೂಸ್ ಗಳು ತಮ್ಮ ಫೋನ್ ಗಳನ್ನು ಫ್ಲ್ಯಾಶ್ ಸೇಲ್ ನಲ್ಲಿ ಮಾರಾಟ ಮಾಡುತ್ತದೆ. ಈ ಕಂಪೆನಿಗಳು ಕೆಲವೇ ಕೆಲವು ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸಿ ಕೆಲವೇ ನಿಮಿಷಗಳಲ್ಲಿ ಅವುಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಿರುತ್ತದೆ.
ಉದಾಹರಣೆಗೆ, ಶಿಯೋಮಿ ಹೇಳುವಂತೆ ಅದು ರೆಡ್ಮಿ ನೋಟ್ 5 ಪ್ರೋ ದ ಮೊದಲ ಸ್ಟಾಕ್ ನ್ನು ಕೇವಲ 3 ನಿಮಿಷದ ಅವಧಿಯಲ್ಲಿ ಮಾರಾಟ ಮಾಡಿದೆ. ಆಸೂಸ್ ಹೇಳುವಂತೆ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1 ಸ್ಮಾರ್ಟ್ ಫೋನ್ ಕೇವಲ 30 ಸೆಕೆಂಟ್ ನಲ್ಲಿ ಔಟ್ ಆಫ್ ಸ್ಟಾಕ್ ಆಗಿತ್ತು.

ಹಾಗಾಗಿ ಕೆಲವು ಪ್ರಸಿದ್ಧ ಸ್ಮಾರ್ಟ್ ಫೋನ್ ಗಳನ್ನು ಫ್ಲ್ಯಾಶ್ ಸೇಲ್ ನಲ್ಲಿ ಖರೀದಿ ಮಾಡುವುದು ಅಷ್ಟು ಸುಲಭದ ಮಾತಲ್ಲ. ಹಾಗಾಗಿ ಕೆಲವು ಸರಳವಾದ ಮತ್ತು ಸುಲಭವಾದ ಟ್ರಿಕ್ಸ್ ಗಳನ್ನು ಬಳಸಿ ಸ್ಮಾರ್ಟ್ ಫೋನ್ ನ್ನು ಖರೀದಿಸಬಹುದಾದ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳಿ. ಆ ಕೆಲವು ಸಿಂಪಲ್ 8 ಪ್ರಮುಖ ಸಲಹೆಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ.
ನಿಮ್ಮ ಅಂತರ್ಜಾಲ ಸಂಪರ್ಕ ಸರಿಯಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.
ಮೊದಲ ವಿಚಾರ ನೀವು ಗಮನದಲ್ಲಿ ಇಡಬೇಕಾಗಿರುವು ವೇಗವಾದ ಮತ್ತು ಸರಿಯಾದ ಅಂತರ್ಜಾಲ ಸೇವೆ ನಿಮ್ಮಲ್ಲಿ ಲಭ್ಯವಿದೆಯೇ ಎಂಬುದು. ಅಂತರ್ಜಾಲ ವೇಗವಾಗಿದ್ದಾಗ ವೇಗವಾಗಿ ವೆಬ್ ಪೇಜ್ ನಿಮ್ಮಲ್ಲಿ ಲೋಡ್ ಆಗುತ್ತದೆ. ಇದು ಒಟ್ಟಾರೆ ಖರೀದಿಯ ಕೆಲಸವನ್ನು ವೇಗವಾಗಿ ಪೂರ್ಣಗೊಳಿಸಲು ನೆರವಾಗುತ್ತದೆ.
ಬಣ್ಣ, ಸ್ಟೋರೇಜ್ / ಯಾವ ಮೆಮೊರಿಯ ಫೋನ್ ಖರೀದಿಸಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಂಡಿರಿ.
ನೀವು ಖರೀದಿಸಬೇಕು ಎಂದುಕೊಂಡಿರುವ ಸ್ಮಾರ್ಟ್ ಫೋನ್ ಕಲರ್, ಸ್ಟೋರೇಜ್ ಮತ್ತು ಮೆಮೊರಿ ಆಯ್ಕೆಯ ಬಗ್ಗೆ ಖಾತ್ರಿಯಿರಲಿ. ಈ ಬಗೆಗಿನ ವಿವರಗಳನ್ನು ಮೊದಲೆ ಖಾತ್ರಿ ಪಡಿಸಿಕೊಂಡು ನಿರ್ಧಾರ ಮಾಡಿಕೊಂಡಿರಿ. ಸೇಲ್ ಸಮಯದಲ್ಲಿ ಇದನ್ನು ನಿರ್ಧಾರ ಮಾಡುತ್ತಾ ಸಾಗಿದರೆ ಖಂಡಿತ ನಿಮಗೆ ಫೋನ್ ದಕ್ಕುವುದು ಕಷ್ಟವಾಗುತ್ತದೆ.
ಫ್ಲ್ಯಾಶ್ ಸೇಲ್ ಪ್ರಾರಂಭವಾಗುವ 10 ನಿಮಿಷ ಮೊದಲೇ ಲಾಗಿನ್ ಆಗಿರಿ .
ಫ್ಲ್ಯಾಶ್ ಸೇಲ್ ಆರಂಭವಾಗುವುದಕ್ಕೂ ಸುಮಾರು 5 ರಿಂದ 10 ನಿಮಿಷ ಮೊದಲೇ ವೆಬ್ ಸೈಟ್ ಗೆ ಲಾಗಿನ್ ಆಗಿರಿ. ಇದು ಪ್ರಾಥಮಿಕ ಹಂತದ ಪ್ರೊಸೆಸ್ ನ್ನು ಪೂರ್ಣಗೊಳಿಸಲು ನಿಮಗೆ ಸಮಯ ನೀಡುತ್ತದೆ.
ಆಟೋ ಬುಯ್ ಬ್ರೌಸರ್ ಎಕ್ಸ್ ಟೆಷನ್ ಬಳಕೆ ಮಾಡಿ.
ನಿಮ್ಮ ಖರೀದಿಯ ಪ್ರೊಸೆಸ್ ನ ವೇಗವನ್ನು ಹೆಚ್ಚಿಸಲು ಹಲವಾರು ಎಕ್ಸ್ ಟೆಷನ್ ಗಳು ಬೇರೆಬೇರೆ ಬ್ರೌಸರ್ ಗಳಲ್ಲಿ ಲಭ್ಯವಿರುತ್ತದೆ.ಅವುಗಳು ಆಟೋ ಫ್ಲ್ಯಾಶ್, ಆಟೋ ಫಿಲ್ ಪೇಮೆಂಟ್ ಡೀಟೇಲ್ಸ್ ಇತ್ಯಾದಿಗಳನ್ನು ಹೊಂದಿರುತ್ತದೆ.
ನೀವು ಖರೀದಿಸಬೇಕು ಎಂದುಕೊಂಡಿರುವ ವಸ್ತುವಿನ ಪೇಜ್ ನ್ನು ರಿಫ್ರೆಶ್ ಮಾಡುತ್ತಿರಿ.
ಫ್ಲ್ಯಾಶ್ ಸೇಲ್ ನಲ್ಲಿ ನೀವು ಈಗಾಗಲೇ ಪ್ರೊಡಕ್ಟ್ ಪೇಜ್ ನಲ್ಲಿ ಇರುವುದರಿಂದಾಗಿ ಆಗಾಗ ಆ ಪೇಜನ್ನು ರಿಫ್ರೆಶ್ ಮಾಡುತ್ತಾ ಇರಿ, ಫ್ಲ್ಯಾಶ್ ಸ್ಮಾರ್ಟ್ ಆಗುವ 30 ಸೆಕೆಂಡ್ ಗೂ ಮುನ್ನವೇ ರಿಫ್ರೆಶ್ ಮಾಡುತ್ತಾ ಇರಿ. ಇದು ಪ್ರೊಡಕ್ಟ್ ನಿಮಗೆ ಕಾಣಿಸಿದ ಕೂಡಲೇ ಬುಯ್ ನೌ ಆಯ್ಕೆಯನ್ನು ಒತ್ತಲು ಇದು ನೆರವು ನೀಡುತ್ತದೆ.
ಖರೀದಿಸುವ ಬಟನ್ ಮೇಲೆ ನಿಮ್ಮ ಮೌಸ್ ಪಾಯಿಂಟರ್ ನ್ನು ಇಟ್ಟುಕೊಂಡಿರಿ .
ಸಾಮಾನ್ಯ ವಿಚಾರ ಆದರೆ ಇದು ಖಂಡಿತ ಕೆಲಸ ಮಾಡುತ್ತದೆ.ನಿಮ್ಮ ಮೌಸ್ ಪಾಯಿಂಟರ್ ನ್ನು ಬುಯ್ ನೈ ಬಟನ್ ಮೇಲೆ ಇಟ್ಟುಕೊಂಡಿರಿ.ಇದು ನಿಮಗೆ ನಿಮ್ಮ ಖರೀದಿಯನ್ನು ಕಾರ್ಟ್ ಗೆ ಹಾಕಲು ಅನುಕೂಲಕರವಾಗುತ್ತದೆ ಮತ್ತು ಮುಂದಿನ ಹಂತಕ್ಕೆ ಹೋಗಲು ನೆರವಾಗುತ್ತದೆ.
ವೇಗದ ಚೆಕ್ ಔಟ್ ಹಾಗಿ ಕ್ಯಾಷ್ ಆನ್ ಡೆಲಿವರಿ ಆಯ್ಕೆಯನ್ನು ಬಳಕೆ ಮಾಡಿ.
ಕ್ಯಾಷ್-ಆನ್-ಡೆಲವರಿ ಆಯ್ಕೆಯನ್ನು ಪೇಮೆಂಟ್ ಮೋಡ್ ನಲ್ಲಿ ಆಯ್ಕೆ ಮಾಡುವುದರಿಂದಾಗಿ ಪ್ರೊಡಕ್ಟ್ ನ ಲಭ್ಯತೆಯ ಸಾಧ್ಯತೆ ಅಧಿಕಗೊಳ್ಳುತ್ತದೆ. ಕಾರ್ಡ್ ಡಿಟೇಲ್ಸ್ ಹಾಕುವುದು, ಓಟಿಪಿ ಎಂಟರ್ ಮಾಡುವುದು ಇತ್ಯಾದಿ ಸಮಯವನ್ನು ಇದು ಉಳಿಸುತ್ತದೆ.
ಪೇಮೆಂಟ್ ಡೀಟೇಲ್ಸ್ ನ್ನು ಸೇವ್ ಮಾಡಿಕೊಂಡಿರಿ.
ಒಂದು ವೇಳೆ ಕ್ಯಾಷ್ ಆನ್ ಡೆಲವರಿ ಆಯ್ಕೆ ನಿಮ್ಮ ಸ್ಥಳಕ್ಕೆ ಲಭ್ಯವಿಲ್ಲದೇ ಇದ್ದರೆ,ನೀವು ನಿಮ್ಮಕ್ರೆಡಿಟ್ ಕಾರ್ಡ್ , ಡೆಬಿಟ್ ಕಾರ್ಡ್ ಬಳಸಲೇ ಬೇಕಾದ ಅನಿವಾರ್ಯತೆ ಇದ್ದಲ್ಲಿ ಸೇಲ್ ಸ್ಟಾರ್ಟ್ ಆಗುವ ಮುನ್ನವೇ ನಿಮ್ಮ ಕಾರ್ಡ್ ಡೀಲೇಟ್ಸ್ ನ್ನು ಅಕೌಂಟಲ್ಲಿ ಸೇವ್ ಮಾಡಿ ಇಡಿ. ಇದು ಪೇಮೆಂಟ್ ಪ್ರೊಸೆಸ್ ನ್ನು ವೇಗವಾಗಿಸಲು ನೆರವಾಗುತ್ತದೆ.


Click it and Unblock the Notifications








