ಆನ್‌ಲೈನ್‌ನಲ್ಲಿಯೇ ಇಷ್ಟದ ಕೆಲಸ ಮಾಡಿ..! ಗಂಟೆಗೆ ಸಾವಿರ ಸಾವಿರ ಗಳಿಸಿ..!

|

ನೀವು ಸದ್ಯ ನಿರ್ವಹಿಸುತ್ತಿರುವ ಕೆಲಸ ಇಷ್ಟವಾಗುತ್ತಿಲ್ಲವಾ..? ಇಷ್ಟವಿದ್ದರೂ ಕೈ ತುಂಬಾ ವೇತನ ಸಿಗುತ್ತಿಲ್ಲವಾ..? ಅಥವಾ ನಿಮ್ಮ ಕೌಶಲ ಮತ್ತು ಪ್ರತಿಭೆಗೆ ತಕ್ಕ ಉದ್ಯೋಗವಲ್ಲವಾ..? ಆಗಿದ್ರೇ ಯಾಕೇ ಯೋಚನೆ ಮಾಡ್ತಿರಿ. ಆನ್‌ಲೈನ್‌ ಜಗತ್ತು ವಿಶಾಲವಾಗಿ ಬೆಳೆದಿದೆ. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಮೂಲಕ ಕೆಲಸ ಮಾಡುವ ಟ್ರೆಂಡ್ ಹೆಚ್ಚುತ್ತಿದೆ. ಅದರಂತೆ ಪಾರ್ಟ್‌ಟೈಂ ಕೆಲಸಗಳು ಕೂಡ ಸೃಷ್ಟಿಯಾಗುತ್ತಿದ್ದು, ನಿಮ್ಮ ಪ್ರತಿಭೆ, ಕೌಶಲಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುವ ಅವಕಾಶವು ಸೃಷ್ಟಿಯಾಗಿದೆ.

ಆನ್‌ಲೈನ್‌ನಲ್ಲಿಯೇ ಇಷ್ಟದ ಕೆಲಸ ಮಾಡಿ..! ಗಂಟೆಗೆ ಸಾವಿರ ಸಾವಿರ ಗಳಿಸಿ..!

ಹೌದು, ಆನ್‌ಲೈನ್‌ ಜಗತ್ತು ಬೆಳೆದಂತೆಲ್ಲ ಮನುಷ್ಯನ ಜೀವನಶೈಲಿಯು ಬದಲಾಗುತ್ತಾ ಸಾಗಿದೆ. ಮೊದಲೆಲ್ಲಾ ಕೆಲಸ ಮಾಡಬೇಕೆಂದರೆ ಒಂದು ನಿರ್ದಿಷ್ಟ ಸ್ಥಳದಲ್ಲಿ ಸೇರಬೇಕಾಗಿತ್ತು. ಇಂತಿಷ್ಟೇ ಗಂಟೆ ಕಾರ್ಯನಿರ್ವಹಿಸಬೇಕು ಎಂಬುದು ನಿಯಮವಾಗಿತ್ತು. ಇಂಟರ್‌ನೆಟ್‌ ಎಲ್ಲರಿಗೂ ದೊರೆತ ನಂತರವಂತೂ ಉದ್ಯೋಗದ ಪರಿಕಲ್ಪನೆಯೇ ಬದಲಾಗಿ ಹೋಗಿದೆ. ಆದರೆ, ಅಂತರ್ಜಾಲ ಎಂಬ ಅದ್ಭುತ ಮಾಯಾಜಗತ್ತು ಕೈ ತುಂಬಾ ಹಣ ಗಳಿಸುವ ಹಲವಾರು ಅವಕಾಶಗಳನ್ನು ತೆರದಿಟ್ಟಿದೆ.

ಇಲ್ಲಿ ನೀವು ಎಷ್ಟು ಹೊತ್ತು? ಹೇಗೆ? ಕಾರ್ಯನಿರ್ವಹಿಸುತ್ತೀರಿ ಎಂಬುದರ ಆಧಾರದಲ್ಲಿ ನಿಮ್ಮ ಸಂಪಾದನೆಯು ನಿರ್ಧಾರವಾಗುತ್ತದೆ. ನಿಮಗೆ ಸಹಾಯವಾಗಲಿ ಎಂದೇ ಆನ್‌ಲೈನ್‌ನಲ್ಲಿ ಏನೆಲ್ಲಾ ಕೆಲಸ ಮಾಡಿ ಕೈ ತುಂಬಾ ಹಣ ಗಳಿಸಬಹುದು ಎಂಬುದನ್ನು ಇಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದೇವೆ. ಅಗತ್ಯವಿದ್ದಾಗ ಒಂದು ಬಾರಿ ಪ್ರಯತ್ನಿಸಿ...

ಭಾಷಾಂತರ

ಭಾಷಾಂತರ

ಪ್ರಸ್ತುತ ಭಾಷಾಂತರಕಾರರಿಗೆ ಬಹಳಷ್ಟು ಬೇಡಿಕೆ ಇದೆ. ಒಂದಕ್ಕಿಂತ ಹೆಚ್ಚು ಭಾಷೆಗಳು ನಿಮಗೆ ಗೊತ್ತಿದ್ದರೆ ಭಾಷಾಂತರಕಾರರಾಗಿ ಕಾರ್ಯನಿರ್ವಹಿಸಬಹುದು. ಇಂಗ್ಲಿಷ್ ಭಾಷೆಯಲ್ಲಿ ಹಿಡಿತ ಹಾಗೂ ಒಂದೇರಡು ಪ್ರಾದೇಶಿಕ ಭಾಷೆಗಳ ಬಗ್ಗೆ ಉತ್ತಮ ಜ್ಞಾನ ನಿಮ್ಮಲಿದ್ದರೆ ಈ ಕೆಲಸ ಉತ್ತಮ. ಜತೆಗೆ ಯಾವುದಾದರೊಂದು ಭಾಷೆಯಲ್ಲಿ ತರಬೇತಿ ಪಡೆದು, ಪ್ರಾವಿಣ್ಯತೆ ಹೊಂದಿದ್ದರೆ ಹೆಚ್ಚಿನ ಗಳಿಕೆ ಮಾಡಬಹುದು. ಉತ್ತಮ ಭಾಷಾಂತರ ಕಲೆ ನಿಮ್ಮಲ್ಲಿದ್ದರೆ ಬಹಳಷ್ಟು ಅಂತಾರಾಷ್ಟ್ರೀಯ ಕಂಪನಿಗಳು, ವಿದ್ವಾಂಸರು, ಲೇಖಕರು ನಿಮ್ಮ ಸೇವೆಯನ್ನು ಪಡೆಯಬಹುದು. ಭಾಷಾಂತರಕಾರರಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹಾಗೂ ಆಸಕ್ತಿ ನಿಮ್ಮಲಿದ್ದರೆ fiverr.com ಮತ್ತು upwork.com ನಂತಹ ವೆಬ್‌ಸೈಟ್‌ಗಳಲ್ಲಿ ನಿಮ್ಮ ಭಾಷಾ ಕೌಶಲವನ್ನು ನೀಡಿ ಸೈನ ಅಪ್ ಮಾಡಿ.

ಬ್ಲಾಗಿಂಗ್‌

ಬ್ಲಾಗಿಂಗ್‌

ಆನ್‌ಲೈನ್‌ ಮೂಲಕ ಹಣ ಗಳಿಸುವ ಮತ್ತೊಂದು ಪ್ರಮುಖ ಮಾರ್ಗವೆಂದರೆ ಬ್ಲಾಗಿಂಗ್. ಬ್ಲಾಗ್ ಬರೆಯುವ ಮತ್ತು ನಿರ್ವಹಿಸುವ ಪರಿಣಿತಿ ಹೊಂದಿದ್ದರೆ ನೀವು ಹಣವನ್ನು ಸಂಪಾದಿಸಬಹುದು. ನಿಮ್ಮ ಬ್ಲಾಗ್‌ನ್ನು ಗೂಗಲ್‌ ಆಡ್‌ಸೆನ್ಸ್‌ ಜತೆ ಟೈಅಪ್‌ ಮಾಡಿಕೊಂಡರೆ ನಿಮ್ಮ ಬ್ಲಾಗ್‌ನಲ್ಲಿ ಗೂಗಲ್ ಜಾಹೀರಾತುಗಳನ್ನು ನೀಡುತ್ತದೆ. ನಿಮ್ಮ ಬ್ಲಾಗ್ ಏನಾದರೂ ಗೂಗಲ್‌ ಆಡ್‌ಸೆನ್ಸ್‌ ಅನುಮೋದಿಸಿದರೆ ನಿರಂತರ ಹಣವನ್ನು ಗಳಿಸಬಹುದು. ಅದಲ್ಲದೇ, ಅಮೆಜಾನ್‌ ಮತ್ತಿತರ ವೆಬ್‌ಸೈಟ್‌ಗಳು ಜಾಹೀರಾತುಗಳನ್ನು ನೀಡುತ್ತವೆ. ಬ್ಲಾಗ್‌ನಲ್ಲಿನ ಜಾಹೀರಾತುಗಳನ್ನು ಎಷ್ಟು ಬಾರಿ ಕ್ಲಿಕ್ ಮಾಡಲಾಗಿದೆ ಹಾಗೂ ಎಷ್ಟು ಬಾರಿ ವೀಕ್ಷಿಸಲಾಗಿದೆ ಎಂಬ ಆಧಾರದಲ್ಲಿ ಗೂಗಲ್ ಹಣ ಪಾವತಿಸುತ್ತದೆ.

ಯೂಟ್ಯೂಬ್ ವಿಡಿಯೋ

ಯೂಟ್ಯೂಬ್ ವಿಡಿಯೋ

ಸದ್ಯ ಯೂಟ್ಯೂಬ್ ಅತ್ಯಂತ ಜನಪ್ರಿಯ ವಿಡಿಯೋ ಮಾಧ್ಯಮವಾಗಿದೆ. ವಿಡಿಯೋಗ್ರಾಫಿಯಲ್ಲಿ ಉತ್ತಮ ಜ್ಞಾನವಿದ್ದರೆ ಯೂಟ್ಯೂಬ್‌ ಮೂಲಕ ನೀವು ಸಂಪಾದಿಸಬಹುದು. ಜಗತ್ತಿನಲ್ಲಿ ಹೆಚ್ಚು ಜನಕ್ಕೆ ಇಷ್ಟವಾಗುವ ಮತ್ತು ಅವರು ಬಯಸುವ, ಹುಡುಕಾಡುವ ಹಾಗೂ ಕುತೂಹಲಕಾರಿ ವಿಷಯದ ವಿಡಿಯೋಗಳನ್ನು ಮಾಡಿ, ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಿ. ಅಡುಗೆ ರೆಸಿಪಿಗಳಿಂದ ಹಿಡಿದು ರಾಜಕೀಯ ಸಂದರ್ಶನಗಳವರೆಗೆ ಹಲವಾರು ವಿಷಯಗಳು ಜನರನ್ನು ಸೆಳೆಯುತ್ತವೆ. ನಿಮ್ಮ ಚಾನೆಲ್‌ನ ವೀಕ್ಷಕರು ಹಾಗೂ ಚಂದಾದಾರರ ಸಂಖ್ಯೆಯ ಆಧಾರದಲ್ಲಿ ಹಣ ಬಂದು ನಿಮ್ಮ ಕೈ ಸೇರುತ್ತದೆ.

ಕಂಟೆಂಟ್ ರೈಟಿಂಗ್

ಕಂಟೆಂಟ್ ರೈಟಿಂಗ್

ಹವ್ಯಾಸಿ ಕೆಲಸಗಳಲ್ಲಿ ಕಂಟೆಂಟ್ ರೈಟಿಂಗ್ ಕೂಡ ಒಂದು. ಇದು ಅತ್ಯಂತ ಜನಪ್ರಿಯವಾಗಿದ್ದು, ಸಂಶೋಧನಾತ್ಮಕ ಹಾಗೂ ಉತ್ತಮ ಶೈಲಿಯಲ್ಲಿ ಬರೆಯುವ ವೆಬ್ ಕಂಟೆಂಟ್‌ಗೆ ಭಾರೀ ಬೇಡಿಕೆ ಇದೆ. ವೆಬ್ ರಿಕ್ರ್ಯೂಟರ್‌ಗಳು ಹೆಚ್ಚು ಸಂಖ್ಯೆಯಲ್ಲಿ ಓದುಗರನ್ನು ಸೆಳೆಯಬಲ್ಲ, ವಿನೂತನ ಕಂಟೆಂಟ್ ಬರೆಯುವವರ ಶೋಧನೆಯಲ್ಲಿರುತ್ತಾರೆ. Fiverr.com, Upwork.com, Freelancer.com, Elance.com Worknhire.com ಮತ್ತು Lekhaka.com ನಂತಹ ಅನೇಕ ವೆಬ್‌ಸೈಟ್‌ಗಳಲ್ಲಿ ರಿಜಿಸ್ಟರ್ ಆಗುವ ಮೂಲಕ ಕಂಟೆಂಟ್ ರೈಟಿಂಗ್ ಕೆಲಸ ಆರಂಭಿಸಬಹುದು.

ಡೇಟಾ ಎಂಟ್ರಿ

ಡೇಟಾ ಎಂಟ್ರಿ

ತಂತ್ರಜ್ಞಾನದ ಅಭಿವೃದ್ಧಿಯಿಂದ ಡೇಟಾ ಎಂಟ್ರಿ ಕೆಲಸಗಳು ಕಡಿಮೆಯಾಗುತ್ತಿದ್ದರೂ ಭಾರತದಲ್ಲಿ ಹಲವಾರು ರೀತಿಯ ಡೇಟಾ ಎಂಟ್ರಿ ಕೆಲಸಗಳು ಲಭ್ಯವಿವೆ. ಇಂಟರ್‌ನೆಟ್ ಮೂಲಕ ಮಾಡಬಹುದಾದ ಅತಿ ಸುಲಭದ ಕೆಲಸವಾಗಿದ್ದು, ವಿಶೇಷ ಕೌಶಲಗಳೇನೂ ಬೇಕಾಗಿಲ್ಲ. ಒಂದು ಕಂಪ್ಯೂಟರ್, ಇಂಟರ್‌ನೆಟ್ ಸಂಪರ್ಕ ಇದ್ದು, ವಿವರಗಳನ್ನು ಸರಿಯಾಗಿ ಗ್ರಹಿಸುವ ಸಾಮರ್ಥ್ಯ ಹಾಗೂ ವೇಗವಾಗಿ ಟೈಪಿಂಗ್ ಮಾಡುವ ಶಕ್ತಿ ಇದ್ದರೆ ಸಾಕು.

ವೆಬ್ ಡೆವಲಪಮೆಂಟ್

ವೆಬ್ ಡೆವಲಪಮೆಂಟ್

ನೀವು ವೆಬ್ ಡಿಸೈನ್ ಹಾಗೂ ಕೋಡಿಂಗ್ ಜ್ಞಾನ ಹೊಂದಿದ್ದರೆ ನಿಮ್ಮ ಮನೆಯಿಂದಲೇ ವೆಬ್ ಡಿಸೈನರ್ ಆಗಿ ಕಾರ್ಯನಿರ್ವಹಿಸಬಹುದು. ಕಂಪನಿಗಳು ಸಾಮಾನ್ಯವಾಗಿ ವೆಬ್ ಡಿಸೈನ್ ಕೆಲಸವನ್ನು ಹೊರ ಗುತ್ತಿಗೆಯಲ್ಲಿ ಮಾಡಿಸಿಕೊಳ್ಳುವುದರಿಂದ ಈ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ನೀವು ವೆಬ್‌ ಡಿಸೈನ್‌ ಕಲಿಯುವವರಾಗಿದ್ದರೂ ಸಹ ಅನೇಕ ಆನ್‌ಲೈನ್ ಟ್ಯುಟೋರಿಯಲ್‌ಗಳ ಮೂಲಕ ನೀವು ಪರಿಣಿತಿ ಸಾಧಿಸಬಹುದು.

ಆನ್‌ಲೈನ್‌ ಟ್ಯೂಷನ್ಸ್‌

ಆನ್‌ಲೈನ್‌ ಟ್ಯೂಷನ್ಸ್‌

ನೀವು ಶಿಕ್ಷಕರಾಗಿದ್ದರೆ ಅಥವಾ ನಿರ್ದಿಷ್ಟ ವಿಷಯವನ್ನು ಕಲಿಸುವ ನೈಪುಣ್ಯತೆ ಹೊಂದಿದ್ದರೆ ಆನ್‌ಲೈನ್‌ ಟ್ಯೂಷನ್‌ ಆರಂಭಿಸಬಹುದು. MyPrivateTutor.com, BharatTutors.com, tutorindia.net ನಂತಹ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ, ಆನ್‌ಲೈನ್‌ ಆನ್ಲೈನ್ ಟ್ಯೂಟರ್ ಆಗಿ ನೊಂದಣಿ ಮಾಡಿಕೊಳ್ಳಿ. ನಿಮ್ಮ ಕೌಶಲಗಳು, ಪ್ರಾವೀಣ್ಯತೆ ಹೊಂದಿರುವ ವಿಷಯಗಳು, ಅನುಭವ, ವಿದ್ಯಾರ್ಹತೆ ಮುಂತಾದ ವಿವರಗಳನ್ನು ನಮೂದಿಸಬೇಕಾಗುತ್ತದೆ.

ಆನ್‌ಲೈನ್‌ ಮೂಲಕ ವಸ್ತುಗಳ ಮಾರಾಟ

ಆನ್‌ಲೈನ್‌ ಮೂಲಕ ವಸ್ತುಗಳ ಮಾರಾಟ

ಆನ್‌ಲೈನ್‌ ಮೂಲಕ ನಿಮ್ಮದೇ ವಸ್ತುಗಳನ್ನು ಮಾರಿ ಹಣ ಗಳಿಸಬಹುದು. ಮೊದಲು ಯಾವ ವಸ್ತುಗಳನ್ನು ಮಾರಬೇಕೆಂದು ನಿರ್ಧರಿಸಿ, ಅವುಗಳನ್ನು ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳಿ. ನಂತರ ಅವುಗಳಿಗೆ ದರ ನಿಗದಿಪಡಿಸಿ ನಿಮ್ಮ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಿ. ಇಲ್ಲವೆಂದರೆ ಅಮೆಜಾನ್, ಇಬೇಯಂತಹ ಪೋರ್ಟಾಲ್‌ಗಳಲ್ಲಿ ನೊಂದಣಿ ಮಾಡಿಕೊಂಡು ಉತ್ಪನ್ನಗಳನ್ನು ಮಾರಬಹುದು. ನಿಮ್ಮ ವಸ್ತುಗಳನ್ನು ವೆಬ್‌ಸೈಟ್‌ನಲ್ಲಿ ಲಿಸ್ಟಿಂಗ್ ಮಾಡಲು ಸಣ್ಣ ಮೊತ್ತದ ಶುಲ್ಕ ಪಾವತಿಸಬೇಕಾಗುತ್ತದೆ. ನಿಮ್ಮ ವಸ್ತುಗಳ ಗುಣಮಟ್ಟ ಹಾಗೂ ದರ ಆಧರಿಸಿ ನಿಮ್ಮ ಗಳಿಕೆ ಆರಂಭವಾಗುತ್ತದೆ.

ವರ್ಚ್ಯುವಲ್ ಅಸಿಸ್ಟಂಟ್‌ (Virtual assistant)

ವರ್ಚ್ಯುವಲ್ ಅಸಿಸ್ಟಂಟ್‌ (Virtual assistant)

ಒಂದು ಕಂಪನಿಯ ದಿನನಿತ್ಯದ ಕೆಲಸಗಳನ್ನು ಆನ್‌ಲೈನ್‌ ಮೂಲಕ ಮಾಡುವುದು ವರ್ಚ್ಯುವಲ್ ಅಸಿಸ್ಟಂಟ್‌ನ ಕೆಲಸ ಆಗಿರುತ್ತದೆ. ಮೀಟಿಂಗ್‌ ಆಯೋಜಜನೆ, ಗ್ರಾಹಕರು ಹಾಗೂ ಹೂಡಿಕೆದಾರರ ಜತೆ ಉತ್ತಮ ಸಂಪರ್ಕ ಸಾಧನೆ, ಆರ್ಡರ್‌ ಫಾಲೋಅಪ್‌, ಪವರ್‌ ಪಾಯಿಂಟ್ ಮತ್ತು ಎಕ್ಸೆಲ್ ಶೀಟ್‌ಗಳ ಮೂಲಕ ಬಿಸಿನೆಸ್ ಡಾಕ್ಯೂಮೆಂಟ್ ತಯಾರಿ, ಬ್ಲಾಗ್ ಮತ್ತು ವೆಬ್‌ಸೈಟ್‌ಗಳ ನಿರ್ವಹಣೆ ಸೇರಿ ಅನೇಕ ಕೆಲಸಗಳನ್ನು ವರ್ಚ್ಯುವಲ್‌ ಅಸಿಸ್ಟಂಟ್‌ ಕೆಲಸ ಒಳಗೊಂಡಿದೆ. ಎಲ್ಲಾ ಕೆಲಸಗಳಿಗೆ ಒಬ್ಬೊಬ್ಬರನ್ನು ನೇಮಿಸಿದರೆ ಕಂಪನಿಗೆ ಅಧಿಕ ವೆಚ್ಚವಾಗುತ್ತದೆ. ಅದಕ್ಕಾಗಿಯೇ ಕೆಲಸಗಳನ್ನು ವಿಂಗಡಿಸಿ ಹೀಗೆ ವರ್ಚ್ಯುವಲ್ ಅಸಿಸ್ಟಂಟ್‌ಗಳ ಮೂಲಕ ಮಾಡಿಸುತ್ತಾರೆ.

ವರ್ಚ್ಯುವಲ್ ಅಸಿಸ್ಟಂಟ್‌ ಆಗಿ ಕಾರ್ಯನಿರ್ವಹಿಸಲು ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಹಾಗೂ ತರಬೇತಿ ಕೆಲವೊಮ್ಮೆ ಅವಶ್ಯಕವಾಗುತ್ತದೆ. ಉತ್ತಮ ಸಂವಹನ ಕೌಶಲ ಹಾಗೂ ಎಂಎಸ್ ಆಫೀಸ್ನಂತಹ ಇತರೆ ಸಾಫ್ಟ್‌ವೇರ್‌ಗಳ ಬಗ್ಗೆ ಅರಿವಿರಬೇಕಾಗುತ್ತದೆ. elance.com ಮತ್ತು zirtual.com ನಂತಹ ವೆಬ್‌ಸೈಟ್‌ಗಳಲ್ಲಿ ಲಾಗ್‌ಇನ್‌ ಆಗುವ ಮೂಲಕ ವರ್ಚ್ಯುವಲ್ ಅಸಿಸ್ಟಂಟ್‌ ಕೆಲಸವನ್ನು ಆರಂಭಿಸಬಹುದು.

Most Read Articles
Best Mobiles in India

English summary
9 online jobs that offer up to Rs 4,000 per hour. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more