ಆಧಾರ್ ಕಾರ್ಡ್‌ನಲ್ಲಿನ ತಪ್ಪುಗಳನ್ನು ಆನ್‌ಲೈನಿನಲ್ಲೇ ಸರಿಪಡಿಸುವುದು ಹೇಗೆ?
ಆಧಾರ್ ಕಾರ್ಡ್ ನಿಮ್ಮ ಇತರೆ ದಾಖಲೆಗಳಿಗೆ ಸರಿಯಾಗಿ ತಾಳೆ ಆಗದಿದ್ದಲ್ಲಿ ನೀವು ಪಡೆಯಬೇಕಿರುವ ಸೌಲಭ್ಯಗಳು ನಿಮ್ಮನ್ನು ತಲುಪುವುದಿಲ್ಲ.! ಹಾಗಾಗಿ, ನೀವು ಆಧಾರ್‌ನಲ್ಲಿನ ತಪ್ಪುಗಳನ್ನು ಬಹುಬೇಗ ಸರಿಪಡಿಸಿಕೊಳ್ಳಬೇಕು!!
ಸರ್ಕಾರದ ಎಲ್ಲಾ ವ್ಯವಹಾರ ಮತ್ತು ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಇಂದು ಕಡ್ಡಾಯವಾಗಿದೆ, ಆದರೆ, ಆಧಾರ್ ಕಾರ್ಡ್ ಪಡೆದಿದ್ದರೂ ಸಹ ಕೆಲವೊಮ್ಮೆ ಹೆಸರು, ವಿಳಾಸ ಅಥವಾ ಇನ್ಯಾವುದೋ ಮಾಹಿತಿ ತಪ್ಪಾಗಿ ನಮೂದಾಗಿರುತ್ತದೆ. ಇಂತಹ ಸಮಯದಲ್ಲಿ ತಪ್ಪುಗಳನ್ನು ತಿದ್ದಿಕೊಳ್ಳುವುದು ಬಹಳ ಮುಖ್ಯ.
ಏಕೆಂದರೆ ಕೆಲವು ಸಮಯದಲ್ಲಿ ಆಧಾರ್ ಕಾರ್ಡ್ ನಿಮ್ಮ ಇತರೆ ದಾಖಲೆಗಳಿಗೆ ಸರಿಯಾಗಿ ತಾಳೆ ಆಗದಿದ್ದಲ್ಲಿ ನೀವು ಪಡೆಯಬೇಕಿರುವ ಸೌಲಭ್ಯಗಳು ನಿಮ್ಮನ್ನು ತಲುಪುವುದಿಲ್ಲ.! ಇದರಿಂದ ನೀವು ಹಲವು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ, ನೀವು ಆಧಾರ್‌ನಲ್ಲಿನ ತಪ್ಪುಗಳನ್ನು ಬಹುಬೇಗ ಸರಿಪಡಿಸಿಕೊಳ್ಳಬೇಕು!!

ಓದಿರಿ: ಗೂಗಲ್ಗೆ ಇಪ್ಪತ್ತರ ಸಂಭ್ರಮ..ಚಕ್ರಾಧಿಪತ್ಯ ಸಾಧಿಸಿದ ಕಂಪೆನಿಯ ರೋಚಕ ವಿಷಯಗಳು!!
ಹಾಗಾಗಿ, ಬಹಳ ಸುಲಭವಾಗಿ ಆನ್‌ಲೈನ್‌ಲ್ಲಿಯೇ ಆಧಾರ್ ಕಾರ್ಡ್‌ನಲ್ಲಿ ನಮೂದಾಗಿರುವ ತಪ್ಪುಗಳನ್ನು ಹೇಗೆ ಸರಿಪಡಿಸಿಕೊಳ್ಳುವುದು? ಮತ್ತು ಆನ್‌ಲೈನ್‌ನಲ್ಲಿಯೇ ಎಡಿಟ್ ಆದ ಆಧಾರ್ ಅನ್ನು ಹೇಗೆ ಡೌನ್‌ಲೋಡ್ ಮಾಡಿಕೊಳ್ಳುವುದು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಭಾರತದ ಗುರುತು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ತೆರೆಯಿರಿ.
ನೀವು ಆನ್‌ಲೈನ್ ಮೂಲಕ ಆಧಾರ್ ಕಾರ್ಡ್ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಭಾರತ ಸರ್ಕಾರದ ವಿಶಿಷ್ಟ ಗುರುತು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ತೆರೆಯಬೇಕು. ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ (https://uidai.gov.in/) ಕ್ಲಿಕ್ ಮಾಡಿದರೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ತೆರೆಯುತ್ತದೆ.

ಆಧಾರ್ ಅಪ್‌ಡೇಟ್ ಆಯ್ಕೆ ಮಾಡಿ.
ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ತೆರೆದ ನಂತರ "ಆಧಾರ್ ಅಪ್‌ಡೇಟ್" ಎನ್ನುವ ಸಬ್‌ಹೆಡ್‌ಲೈನ್ ಕಾಣಿಸುತ್ತದೆ. ಅದರರಲ್ಲಿ " ಅಪ್‌ಡೇಟ್ಸ್ ಆಧಾರ್ ಡೀಟೆಲ್ಸ್" ಎಂಬ ಆಯ್ಕೆಯನ್ನು ಒತ್ತಿರಿ. ನಂತರ ಮತ್ತೊಂದು ವೆಬ್‌ಸೈಟ್ ತೆರೆದುಕೊಳ್ಳುತ್ತದೆ. ಮುಂದುವರೆಯಿರಿ.

ನಿಮ್ಮ ಆಧಾರ್ ನಂಬರ್ ಎಂಟರ್ ಮಾಡಿ.
ಇದೀಗ ನಿಮ್ಮ ಆಧಾರ್ ಕಾರ್ಡ್ ಎಡಿಟ್ ಮಾಡಲು ಹೊಸ ವೆಬ್‌ಸೈಟ್ ತೆರದುಕೊಂಡಿದೆ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಮತ್ತು ಆಧಾರ್‌ಗೆ ರಿಜಿಸ್ಟರ್ ಆಗಿರುವ ನಿಮ್ಮ ಮೊಬೈಲ್ ನಂಬರ್ ನಮೂದಿಸಿ. ನಿಮಗೆ ಒನ್‌ಟೈಮ್ ಪಾಸ್‌ವರ್ಡ್ ಬರುತ್ತದೆ ಅದನ್ನು ತುಂಬಿ "ಕ್ಲಿಕ್ ಹಿಯರ್" ಆಯ್ಕೆಯನ್ನು ಒತ್ತಿರಿ.

ಡಾಕ್ಯುಮೆಂಟ್ಸ್ ಸಲ್ಲಿಸಿ.
ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ನೀಡಿದ ನಂತರ ಅಪ್‌ಡೇಟ್ ಮಾಡಬೇಕಾದ ಆಧಾರ್ ಪುಟ ತೆರೆದುಕೊಳ್ಳುತ್ತದೆ. ಆಧಾರ್ ಕಾರ್ಡ್‌ನಲ್ಲಿ ತಪ್ಪಾಗಿ ನಮೂದಿಸಿರುವ ಮಾಹಿತಿಯನ್ನು ಅಪ್‌ಡೇಟ್ ಮಾಡಲು, ಬದಲಾವಣೆ ಆಗಬೇಕಿರುವ ಸರಿಯಾದ ಡಾಕ್ಯುಮೆಂಟ್ಸ್‌ಗಳನ್ನು ಆನ್‌ಲೈನ್ ಮೂಲಕ ಅಪ್‌ಡೇಟ್ ಮಾಡಿ.

ಮಾಹಿತಿಯನ್ನು ಅಪ್‌ಡೇಟ್ ಮಾಡಿ,
ಡಾಕ್ಯುಮೆಂಟ್ಸ್‌ಗಳನ್ನು ಆನ್‌ಲೈನ್ ಮೂಲಕ ಅಪ್‌ಡೇಟ್ ಮಾಡಿದ ನಂತರ, ನಿಮ್ಮ ಆಧಾರ್ ಕಾರ್ಡ್‌ನಲ್ಲಿ ತಪ್ಪಾಗಿ ನಮೂದಿಸಿರುವ ಮಾಹಿತಿಯನ್ನು ಆಧಾರ್ ಪುಟದಲ್ಲಿ ನಮೂದಿಸಿ. ನಂತರ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ. ಈ ಎಲ್ಲಾ ಮಾಹಿತಿಗಳನ್ನು ತುಂಬಿದ ನಂತರ BPO service provider ಎಲ್ಲಿ ಎಂದು ಸೆಲೆಕ್ಟ್ ಮಾಡಿ.

ಅಪ್‌ಡೇಟ್ ಯಶಸ್ವಿ
ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿದ ನಂತರ ನಿಮಗೆ ಅಪ್ಡೇಟ್ ರಿಕ್ವೆಸ್ಟ್ ನಂಬರ್(URN) ಜನರೇಟ್ ಆಗುತ್ತದೆ. ನಂತರ ನಿಮಗೆ ಈ ಬಗ್ಗೆ ಸಂದೇಶ ಬರುತ್ತದೆ. ನಂತರ ಕಲವುದಿನಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ತಪ್ಪು ಸರಿಯಾಗಿ ಅಪ್‌ಡೆಟ್ ಆಗಿರುತ್ತದೆ. ನಂತರ ಆನ್‌ಲೈನ್‌ನಲ್ಲಿಯೇ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿ.


Click it and Unblock the Notifications








