ಆಧಾರ್ ಕೇಂದ್ರಕ್ಕೆ ಹೋಗುವ ಅಗತ್ಯವಿಲ್ಲ: ಹೆಸರು ಬದಲಾವಣೆ ಈಗ ಆನ್‌ಲೈನ್‌ನಲ್ಲಿ!
ಇಂದಿನ ಕಾಲದಲ್ಲಿ ಆಧಾರ್ ಕಾರ್ಡ್ ಅತ್ಯಂತ ಮುಖ್ಯವಾದ ಗುರುತು ಪತ್ರವಾಗಿದೆ. ಸರ್ಕಾರಿ ಯೋಜನೆಗಳಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವುದು, ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದು, ಮಕ್ಕಳ ಪ್ರವೇಶ ಪ್ರಕ್ರಿಯೆ ಸೇರಿದಂತೆ ಹಲವಾರು ಸೇವೆಗಳಿಗೆ ಇದು ಅಗತ್ಯವಾಗಿದೆ. ಆದರೆ ಹೆಸರಿನಲ್ಲಿ ಒಂದೇ ಅಕ್ಷರದ ತಪ್ಪಾದರೂ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ, ಇಂದಿನ ಲೇಖನದಲ್ಲಿ ಮನೆಯಲ್ಲೇ ಕುಳಿತು ಆಧಾರ್ ಕಾರ್ಡ್‌ನಲ್ಲಿ ತಪ್ಪಾಗಿರುವ ಹೆಸರನ್ನು ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿಯೋಣ. ಈಗ UIDAI ಒದಗಿಸಿರುವ ಆನ್‌ಲೈನ್ ವ್ಯವಸ್ಥೆಯಿಂದ ನೀವು ಮನೆಯಿಂದಲೇ ಹೆಸರಿನ ತಿದ್ದುಪಡಿ ಮಾಡಿಕೊಳ್ಳಬಹುದು. ಈ ಮೊದಲಿನಂತೆ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಅವಶ್ಯಕತೆ ಇಲ್ಲ.
ಆನ್‌ಲೈನಿನಲ್ಲಿ ಆಧಾರ್ ಹೆಸರನ್ನು ಸರಿಪಡಿಸುವ ಹಂತ ಹಂತದ ವಿಧಾನ
UIDAI ಅಧಿಕೃತ ವೆಬ್‌ಸೈಟ್ uidai.gov.in ತಾಣಕ್ಕೆ ಭೇಟಿ ನೀಡಿ.
ಮೊದಲು 'My Aadhaar' ವಿಭಾಗದಲ್ಲಿ 'Update Aadhaar' ಆಯ್ಕೆಮಾಡಿ.
ನಂತರ ನಿಮ್ಮ 12 ಅಂಕೆಯ ಆಧಾರ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ನಂಬರ್ ನಮೂದಿಸಿ.
ನಿಮ್ಮ ಮೊಬೈಲ್‌ಗೆ ಬರುವ OTP ನಮೂದಿಸಿದ ನಂತರ ಲಾಗಿನ್ ಆಗಬಹುದು.
ಲಾಗಿನ್ ಆದ ಮೇಲೆ 'Update Demographics Data' ಆಯ್ಕೆ ಮಾಡಿ.
ಇಲ್ಲಿ ಹೆಸರು, ಜನ್ಮದಿನಾಂಕ ಅಥವಾ ವಿಳಾಸ ತಿದ್ದುಪಡಿ ಆಯ್ಕೆ ಮಾಡಬಹುದು.
ಹೆಸರಿನ ತಿದ್ದುಪಡಿ ಮಾಡುವಾಗ ಸರಿಯಾದ ಸ್ಪೆಲ್ಲಿಂಗ್ ನಮೂದಿಸುವುದು ಅತ್ಯಂತ ಮುಖ್ಯ.

ಕಡ್ಡಾಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು
ಹೆಸರಿನ ಬದಲಾವಣೆಗೆ ಮಾನ್ಯ ದಾಖಲೆ ಸಲ್ಲಿಕೆ ಕಡ್ಡಾಯ. ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಪಾಸ್‌ಪೋರ್ಟ್ ಮುಂತಾದ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಬೇಕು. ಮಾಹಿತಿ ತುಂಬಿದ ಬಳಿಕ ಪರಿಶೀಲಿಸಿ, ನಂತರ ವಿನಂತಿಯನ್ನು ಸಲ್ಲಿಸಬೇಕು.
ತಿದ್ದುಪಡಿ ಸ್ಥಿತಿಯನ್ನು ಹೇಗೆ ತಿಳಿಯುವುದು?
ವಿನಂತಿ ಸಲ್ಲಿಸಿದ ತಕ್ಷಣ UIDAI ಒಂದು SRN (Service Request Number) ನೀಡುತ್ತದೆ. ಈ ಸಂಖ್ಯೆಯ ಮೂಲಕ ನಿಮ್ಮ ಅಪ್ಡೇಟ್ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಟ್ರ್ಯಾಕ್ ಮಾಡಬಹುದು.
ನೀವು ಪಾಲಿಸಬೇಕಾದ ನಿಯಮಗಳು
UIDAI ನಿಯಮ ಪ್ರಕಾರ ಹೆಸರಿನ ಬದಲಾವಣೆ ಜೀವನದಲ್ಲಿ ಗರಿಷ್ಠ ಎರಡು ಬಾರಿ ಮಾತ್ರ ಸಾಧ್ಯ. ಆದ್ದರಿಂದ ಮೊದಲ ಬಾರಿಗೆ ತಪ್ಪಿಲ್ಲದೆ ಸರಿಯಾದ ಮಾಹಿತಿಯನ್ನು ಸಲ್ಲಿಸುವುದು ಅಗತ್ಯ. ಸರಿಯಾದ ದಾಖಲೆಗಳನ್ನೇ ಬಳಸಬೇಕು, ಇಲ್ಲವಾದರೆ ವಿನಂತಿ ತಿರಸ್ಕೃತವಾಗಬಹುದು.
ಮನೆಯಲ್ಲೇ ಪೂರ್ತಿಯಾಗುವ ಪ್ರಕ್ರಿಯೆ
ಈ ವ್ಯವಸ್ಥೆಯಿಂದ ಆಧಾರ್ ಕೇಂದ್ರಗಳಿಗೆ ಹೋಗುವ ಅಗತ್ಯವಿಲ್ಲ. ಮನೆಯಿಂದಲೇ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಆಧಾರ್ ಹೆಸರಿನ ತಿದ್ದುಪಡಿ ಮಾಡಿಕೊಳ್ಳಬಹುದು. ಇದು ಸಮಯವನ್ನು ಉಳಿಸುವುದರ ಜೊತೆಗೆ ಸರಳ ಹಾಗೂ ಸುರಕ್ಷಿತ ವಿಧಾನವಾಗಿದೆ. ಆಧಾರ್ ಕಾರ್ಡ್‌ನಲ್ಲಿ ಹೆಸರು ಸರಿಪಡಿಸಬೇಕೆಂದಿದ್ದರೆ, UIDAI ವೆಬ್‌ಸೈಟ್‌ನ ಈ ಆನ್‌ಲೈನ್ ಸೇವೆ ನಿಮಗೆ ಅತ್ಯಂತ ಉಪಯುಕ್ತವಾಗಲಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ ಮತ್ತು ಈ ಲೇಖನವನ್ನು ಶೇರ್ ಮಾಡಿ.


Click it and Unblock the Notifications








