ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಫೋಟೋ ಸರಿಬಂದಿಲ್ವಾ?..ಕೂಡಲೇ ಬದಲಾಯಿಸಲು ಹೀಗೆ ಮಾಡಿ
ಆಧಾರ್ ಕಾರ್ಡ್‌ನಲ್ಲಿರುವ ಫೋಟೋ ಚೆನ್ನಾಗಿ ಕಾಣ್ತಾ ಇಲ್ಲ, ಚೇಂಜ್ ಮಾಡಿಸಬೇಕು ಅಂತಾ ಅನಿಸ್ತಾ ಇದ್ದೀಯಾ. ಹೊಸದಾಗಿ ಪ್ರಸ್ತುತ ಫೋಟೋ ಅಪ್ಡೇಟ್ ಮಾಡಿಸುವುದಕ್ಕೆ ಮುಂದಾಗಿದ್ದೀರಾ? ಇದಕ್ಕೆ ಅವಕಾಶವಿದೆಯಾ ಇಲ್ಲವೇ ಅನ್ನೋ ಯೋಚನೆಯಲ್ಲಿದ್ದೀರಾ. ಯೋಚನೆ ಬೇಡಾ, ಆಧಾರ್ ಕಾರ್ಡ್ ಫೋಟೋ ಬದಲಾಯಿಸುವುದಕ್ಕೆ ಖಂಡಿತ ಅವಕಾಶವಿದೆ.
ಹೌದು, ಆಧಾರ್ ಕಾರ್ಡ್‌ನಲ್ಲಿ (Aadhaar card) ನಿಮ್ಮ ಫೋಟೋವನ್ನು ಬದಲಾಯಿಸುವುದಕ್ಕೆ ಅವಕಾಶವಿದೆ. ನಿಮ್ಮ ಮೊಬೈಲ್ ನಂಬರ್, ಇಮೇಲ್ ಅಡ್ರೆಸ್, ವಿಳಾಸವನ್ನು ಅಪ್ಡೇಟ್ ಮಾಡಿದಂತೆ ಫೋಟೋವನ್ನು ಕೂಡ ಅಪ್ಡೇಟ್ ಮಾಡಬಹುದು. ಆದರೆ ಇದಕ್ಕಾಗಿ ನೀವು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಾವಣೆಗೆ ಅವಕಾಶವಿದೆ ನಿಜ. ಆದರೆ ನಿಮ್ಮ ಆಧಾರ್ ಕಾರ್ಡ್ ಫೋಟೋವನ್ನು ಆನ್‌ಲೈನ್ ಮೂಲಕ ಅಪ್‌ಡೇಟ್ ಮಾಡುವುದಕ್ಕೆ ಅವಕಾಶ ನೀಡಿಲ್ಲ. ನೀವು ಆಧಾರ್ ಫೋಟೀ ಅಪ್ಡೇಟ್ ಮಾಡಬೇಕಾದರೆ ಆಧಾರ್ ಸೇವಾ ಕೇಂದ್ರಕ್ಕೆ ಬೇಟಿ ನೀಡುವುದು ಕಡ್ಡಾಯವಾಗಿದೆ. ಆದರೆ ಇದಕ್ಕೂ ಮೊದಲು ಆನ್‌ಲೈನ್ ಮೂಲಕ ಆಧಾರ್ ಫೋಟೋ ಅಪ್ಡೇಟ್ ಮಾಡುವುದಕ್ಕೆ ಅರ್ಜಿ ಸಲ್ಲಿಸಬೇಕು.
ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಫೋಟೋ ಅಪ್ಡೇಟ್ ಮಾಡಲು ಹೀಗೆ ಮಾಡಿ
* ಮೊದಲಿಗೆ ಆಧಾರ್‌ನ ಅಧಿಕೃತ ವೆಬ್‌ಸೈಟ್ https://uidai.gov.in/ ಕ್ಲಿಕ್ ಮಾಡಿ
* ಇದರಲ್ಲಿ ಆಧಾರ್ ನೋಂದಣಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿರಿ
* ಇದರಲ್ಲಿ ನಿಮ್ಮ ಆಧಾರ್ ಫೋಟೋ ಅಪ್ಡೇಟ್‌ಗೆ ಸಂಬಂಧಿಸಿದ ಅಪ್ಲಿಕೇಶನ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ
* ಅಗತ್ಯ ವಿವರ ಭರ್ತಿ ಮಾಡಿದ ನಂತರ ಆಧಾರ್ ನೋಂದಣಿ ಕೇಂದ್ರದಲ್ಲಿ ಫಾರ್ಮ್ ಅನ್ನು ಸಲ್ಲಿಸಿರಿ
* ಆಧಾರ್ ಸೇವಾ ಕೇಂದ್ರದಲ್ಲಿ ಬಯೋಮೆಟ್ರಿಕ್ ಪರಿಶೀಲನೆಯ ಮೂಲಕ ನಿಮ್ಮ ವಿವರಗಳನ್ನು ದೃಡೀಕರಿಸಿ
* ಇದೀಗ ಹೊಸದಾಗಿ ನಿಮ್ಮ ಫೋಟೋವನ್ನು ತೆಗೆಯಲಾಗುತ್ತದೆ ಮತ್ತು ಅಪ್ಡೇಟ್ ಮಾಡಲಾಗುತ್ತದೆ
* ಆಧಾರ್ ಫೋಟೋ ಅಪ್ಡೇಟ್ ಸರ್ವಿಸ್‌ಗಾಗಿ GST ಸೇರಿದಂತೆ 25ರೂ. ಶುಲ್ಕವನ್ನು ವಿಧಿಸಲಾಗುತ್ತದೆ
* ಫೋಟೋ ಅಪ್ಡೇಟ್ ನಂತರ ನಿಮಗೆ URN ರಶೀದಿಯನ್ನು ನೀಡಲಾಗುತ್ತದೆ
* ನಿಮ್ಮ ಫೋಟೋ ಅಪ್ಡೇಟ್ ಸ್ಟೇಟಸ್ ಹೇಗಿದೆ ಅನ್ನೊದನ್ನ URN ಸಂಖ್ಯೆಯ ಮೂಲಕ ಟ್ರ್ಯಾಕ್ ಮಾಡಬಹುದಾಗಿದೆ.

ಕಳೆದು ಹೋಗಿರುವ ನಿಮ್ಮ ಆಧಾರ್ ಕಾರ್ಡ್ ಮರಳಿ ಪಡೆಯಲು ಹೀಗೆ ಮಾಡಿ
* ಮೊದಲಿಗೆ UIDAI ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
* ಇದರಲ್ಲಿ 'ಆಧಾರ್ ಸರ್ವಿಸ್' ಪೇಜ್‌ನಲ್ಲಿ 'ಮೈ ಆಧಾರ್' ಆಯ್ಕೆ ತೆರೆಯಿರಿ
* ಇದೀಗ, 'ರಿಟ್ರೈವ್ ಲಾಸ್ಟ್ / ಯುಐಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.
* ನಂತರ ನಿಮ್ಮ ಹೆಸರು, ಇಮೇಲ್ ಐಡಿ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
* ಇದೀಗ ಕಾಣಿಸುವ ಕ್ಯಾಪ್ಚಾವನ್ನು ಎಂಟ್ರಿ ಮಾಡಿ
* ನಂಯತರ 'ಸೆಂಡ್ ಒಟಿಪಿ' ಆಯ್ಕೆಯನ್ನು ಟ್ಯಾಪ್ ಮಾಡಿ.
* ನಿಮ್ಮ ಮೊಬೈಲ್ ನಂಬರ್‌ಗೆ ಬರುವ ಒಟಿಪಿ ನಮೂದಿಸಿ
* ನೀವು ರಿಕ್ವೆಸ್ಟ್ ಮಾಡಲಾದ ಯುಐಡಿ / ಇಐಡಿ ನಂಬರ್ ಎಸ್‌ಎಂಎಸ್ ರೂಪದಲ್ಲಿ ನಿಮ್ಮ ಮೊಬೈಲ್ ನಂಬರ್‌ಗೆ ಬರಲಿದೆ
* ಇದನ್ನು ಬಳಸಿಕೊಂಡು ಇ-ಆಧಾರ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಹೀಗೆ ಮಾಡುವ ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ಇ- ಆಧಾರ್ ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದಲ್ಲದೆ ಆಧಾರ್ ಪಿವಿಸಿ ಕಾರ್ಡ್‌ಗೆ ಕೂಡ ಅಪ್ಲೈ ಮಾಡಬಹುದಾಗಿದೆ. ಅಲ್ಲದೆ ಆಧಾರ್ ಪಿವಿಸಿ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.


Click it and Unblock the Notifications








