ಇಲ್ಲಿ ಕೇಳಿ..! ಆಧಾರ್ ಅಪ್ಡೇಟ್‌ಗೆ ಇದೇ ಲಾಸ್ಟ್ ಡೇಟ್! ಉಚಿತವಾಗಿ ಅಪ್ಡೇಟ್ ಮಾಡುವುದು ಹೇಗೆ?
ಇಲ್ಲಿ ಕೇಳಿ.. ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಇದೇ ಕೊನೆಯ ದಿನಾಂಕ. ಈ ಬಾರಿ ನಿರ್ಲಕ್ಷಿಸಬೇಡಿ..! ಹೌದು, ಆಧಾರ್ ಕಾರ್ಡ್ ಅಪ್ಡೇಟ್ (Free Aadhaar Update) ಮಾಡಿಸುವವರಿಗೆ ಇದು ಪ್ರಮುಖ ಮಾಹಿತಿ. UIDAI (ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ) ಉಚಿತ ಆಧಾರ್ (Aadhaar Card) ಅಪ್ಡೇಟ್ ಗಡುವನ್ನು ಡಿಸೆಂಬರ್ 14ರವರೆಗೆ ವಿಸ್ತರಿಸಿದೆ. ಈಗ ಹೆಸರು ಬದಲಾವಣೆಗೆ ಗೆಜೆಟ್ ಕಡ್ಡಾಯವಾಗಿದೆ. ವಂಚನೆಗಳನ್ನು ತಡೆಯಲು ಯುಐಡಿಎಐ ಈ ಕ್ರಮ ಕೈಗೊಂಡಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಜೂನ್ ತಿಂಗಳಲ್ಲಿ ಬಳಿಕ ಎರಡನೇ ಬಾರಿ ಉಚಿತ ಆಧಾರ್ ಅಪ್ಡೇಟ್ ಗಡುವನ್ನು ವಿಸ್ತರಿಸಲಾಗಿದೆ. 6 ಹಂತಗಳಲ್ಲಿ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಬಹುದು. ಇದು UIDAIನ ಆನ್‌ಲೈನ್ ಪೋರ್ಟಲ್ ಮೂಲಕ ಮಾತ್ರ ಲಭ್ಯವಿದೆ. ಆದರೆ, ಬಯೋಮೆಟ್ರಿಕ್ ವಿವರಗಳನ್ನು ಅಪ್ಡೇಟ್ ಮಾಡಲು ಉಚಿತ ಆಯ್ಕೆ ಲಭ್ಯವಿಲ್ಲ. ನೀವು ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ, ಬಯೋಮೆಟ್ರಿಕ್ಸ್ ಅಪ್ಡೇಟ್ ಮಾಡಿಸಬೇಕು ಮತ್ತು ಶುಲ್ಕ ಪಾವತಿಸಬೇಕು. ಬನ್ನಿ, ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವುದು ಹೇಗೆ? ಏನೆಲ್ಲಾ ಅಪ್ಡೇಟ್ ಮಾಡಬೇಕು? ಎನ್ನುವುದನ್ನು ತಿಳಿಯೋಣ.

ಆಧಾರ್ ಅಪ್ಡೇಟ್‌ಗೆ ಯಾವ ದಾಖಲೆಗಳು ಬೇಕು?
UIDAI ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಲು ಡಿಸೆಂಬರ್ 14 ರವರೆಗೆ ಗಡುವು ನೀಡಿದೆ. ನೀವು, ಈ ಕೊನೆಯ ದಿನಾಂಕದ ಒಳಗೆ ಆಧಾರ್ ಕಾರ್ಡ್ ಅಪ್ಡೇಟ್‌ಗೆ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಬಹುದು. UIDAI ನೀಡಿದ ಗಡುವಿನೊಳಗೆ ನೀವು ಈ ಕಾರ್ಯವನ್ನು ಪೂರ್ಣಗೊಳಿಸಬೇಕು. ಐಡಿ ಪ್ರೂಪ್, ವಿಳಾಸ ಪುರಾವೆಯ ಮಾಹಿತಿಯನ್ನು ಡಿಸೆಂಬರ್ 14ರವರೆಗೆ ಅಪ್ಲೋಡ್ ಮಾಡಬಹುದು.
ಹೆಸರು ಬದಲಾವಣೆಗೆ ಗೆಜೆಟ್ ಕಡ್ಡಾಯ
ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಗೆಜೆಟ್ ಅಗತ್ಯವಿದೆ. ಈ ಕುರಿತು ಯುಐಡಿಎಐ ಹೊಸ ನಿರ್ಧಾರ ಕೈಗೊಂಡಿದೆ. ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗಿದೆ. ವಂಚನೆಗೆ ಕಡಿವಾಣ ಹಾಕಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗ ಹೆಸರು ಬದಲಾಯಿಸಬೇಕಾದರೆ ಗೆಜೆಟ್ ಪೇಪರ್ ಕೊಡಬೇಕು. ಇತರೆ ಬದಲಾವಣೆಗಳನ್ನೂ ಸಹ ಮಾಡಬಹುದು. ಆದರೆ, ಅದಕ್ಕಾಗಿ ನೀವು ಅಗತ್ಯ ದಾಖಲೆಗಳನ್ನು ನೀಡಬೇಕು.
ಆಧಾರ್‌ನಲ್ಲಿ ಏನೆಲ್ಲಾ ಅಪ್ಡೇಟ್ ಮಾಡಬೇಕು?
ಯುಐಡಿಎಐ ನೀಡುವ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಮನೆಯ ವಿಳಾಸ, ಫೋನ್ ಸಂಖ್ಯೆ, ಹೆಸರು, ಇಮೇಲ್ ಐಡಿ ಇತ್ಯಾದಿ ಪ್ರಮುಖ ಮಾಹಿತಿಗಳನ್ನು ಅಪ್ಡೇಟ್ ಮಾಡಬಹುದು. ಜೊತೆಗೆ ಫೋಟೋ, ಬಯೋಮೆಟ್ರಿಕ್, ಐರಿಸ್‌ನಂತಹ ಮಾಹಿತಿಯನ್ನು ಸಹ ಅಪ್ಡೇಟ್ ಮಾಡಬಹುದು. ಆದರೆ, ನೀವು ಈ ಪ್ರಕ್ರಿಯೆಯನ್ನು ನೇರವಾಗಿ ಆನ್‌ಲೈನ್‌ನಲ್ಲಿ ಮಾಡಲು ಸಾಧ್ಯವಿಲ್ಲ. ಆಧಾರ್ ನೋಂದಣಿ ಕೇಂದ್ರಕ್ಕೆ ತೆರಳಿ ಅಪ್ಡೇಟ್ ಮಾಡಿಸಬಹುದು. ಇದಕ್ಕೆ ನೀವು 50 ರೂ. ಶುಲ್ಕವನ್ನು ಪಾವತಿಸಬೇಕಾಗಿದೆ.

ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವುದು ಹೇಗೆ?
ಹಂತ 1: ಮೊದಲು https://uidai.gov.in/ ಅಧಿಕೃತ ವೆಬ್‌ಸೈಟ್‌ಗೆ (myAadhaar ಪೋರ್ಟಲ್) ಹೋಗಿ.
ಹಂತ 2: ಅಪ್ಡೇಟ್ ಆಧಾರ್ ಕಾರ್ಡ್ ಆಯ್ಕೆಯನ್ನು ಆರಿಸಿ. Enter ಆಯ್ಕೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆ, ಕ್ಯಾಪ್ಚ ಕೋಡ್ ನಮೂದಿಸಿ. ಸೆಂಡ್ OTP ಆಯ್ಕೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಿ. ಆಧಾರ್ ಅಪ್ಡೇಟ್ ಆಯ್ಕೆಯನ್ನು ಕ್ಲಿಕ್ಕಿಸಿ.
ಹಂತ 3: ಬಳಿಕ ಡಾಕ್ಯುಮೆಂಟ್ ಅಪ್ಡೇಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. (ಉದಾಹರಣೆಗೆ, ಫೋಟೋ, ಮೊಬೈಲ್ ಸಂಖ್ಯೆ, ವಿಳಾಸವನ್ನು ಬದಲಾಯಿಸಬೇಕಿದ್ದರೆ ಆ ಆಯ್ಕೆಯನ್ನು ಆರಿಸಿ).
ಹಂತ 4: ಸೂಚನೆಗಳನ್ನು ಓದಿದ ನಂತರ 'ಆಧಾರ್ ಅಪ್ಡೇಟ್ ಮಾಡಲು ಮುಂದುವರಿಯಿರಿ' ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 5: ಅಪ್ಡೇಟ್ ಮಾಡಿದ ಆಯ್ಕೆಗೆ ಸಂಬಂಧಿಸಿದ ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿ. ಎಲ್ಲವೂ ಸರಿ ಇದ್ದರೆ ಒಪ್ಪಿಗೆ ನೀಡಬಹುದು.
ಹಂತ 6: ಬಳಿಕ ನಿಮಗೆ ಒಂದು ವಿನಂತಿ ಸಂಖ್ಯೆಯನ್ನು ರಚಿಸಲಾಗುತ್ತದೆ. ಈ ನಂಬರ್ ಸೇವ್ ಮಾಡಿ ಇಟ್ಟುಕೊಳ್ಳಿ. ಇಷ್ಟು ಮಾಡಿದರೆ ಸಾಕು. ಇದರ ನಂತರ, ನಿಮ್ಮ ಆಧಾರ್ ಕಾರ್ಡ್ 7 ದಿನಗಳಲ್ಲಿ ಅಪ್ಡೇಟ್ ಆಗುತ್ತದೆ.
ಕೆಲವರು 10 ವರ್ಷಗಳಿಂದ ಆಧಾರ್ ಅಪ್ಡೇಟ್ ಮಾಡಿರುವುದಿಲ್ಲ. ಬಹುತೇಕರು ಆಧಾರ್ ಕಾರ್ಡ್ ಮಾಡಿಸಿದಾಗಿನಿಂದ ಅಪ್ಡೇಟ್ ಮಾಡಿಸಿರುವುದಿಲ್ಲ. ಅವರು ಈ ಕೆಲಸ ಮಾಡಬೇಕು. ನಿಮ್ಮ ಆಧಾರ್ ಕಾರ್ಡ್ ಪ್ರೊಫೈಲ್‌ನಲ್ಲಿ ಯಾವುದೇ ಮಾಹಿತಿ ಬದಲಾವಣೆ ಇಲ್ಲದಿದ್ದರೂ, ಅದನ್ನು ನಮೂದಿಸಿ ಅಪ್ಡೇಟ್ ಮಾಡಬಹುದು.


Click it and Unblock the Notifications








