ಡಿಸೆಂಬರ್ 1ರಿಂದ ಆನ್‌ಲೈನ್‌ನಲ್ಲಿ ಸಿಮ್-ಆಧಾರ್ ಲಿಂಕ್ ಆಯ್ಕೆ!!..ಲಿಂಕ್ ಮಾಡುವುದು ಹೇಗೆ?

ಟೆಲಿಕಾಂ ಕಂಪನಿ ಅಥವಾ ಯಾವುದೇ ಟೆಲಿಕಾಂ ಔಟ್‌ಲೇಟ್‌‌ಗೆ ತೆರಳದಂತೆ ಆನ್ಲೈನ್ ಮೂಲಕ ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಬಹುದು.!!

|

ಮೊಬೈಲ್ ನಂಬರ್ ಮತ್ತು ಆಧಾರ್ ಲಿಂಕ್ ಮಾಡಲು ಸರಳವಾಗುವಂತೆ, ಆನ್ಲೈನ್ ಮೂಲಕ ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡುವ ಹೊಸ ಸೌಲಭ್ಯ ಡಿಸೆಂಬರ್ ಒಂದರಿಂದ ಜಾರಿಯಾಗಲಿದೆ. ಈ ಬಗ್ಗೆ ಟೆಲಿಕಾಂ ಕಂಪನಿಗಳು ಅಧಿಕೃತ ಹೇಳಿಕೆ ನೀಡಿದ್ದು, ಇದಕ್ಕೆ ಬೇಕಾದ ಫೀಚರ್ಸ್ ಅನ್ನು ತರಲು ಮುಂದಾಗಿವೆ.!!

ಹಾಗಾಗಿ, ಟೆಲಿಕಾಂ ಕಂಪನಿ ಅಥವಾ ಯಾವುದೇ ಟೆಲಿಕಾಂ ಔಟ್‌ಲೇಟ್‌‌ಗೆ ತೆರಳದಂತೆ ಆನ್ಲೈನ್ ಮೂಲಕ ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಬಹುದಾಗಿದ್ದು, ಆಧಾರ್ ಮತ್ತು ಮೊಬೈಲ್ ನಂಬರ್ ಲಿಂಕ್ ಮಾಡುವ ಸೌಲಭ್ಯ ಸಂಪೂರ್ಣ ಉಚಿತವಾಗಿರಲಿದೆ ಎಂದು ಟೆಲಿಕಾಂ ಕಂಪೆನಿಗಳು ತಿಳಿಸಿವೆ.!!

ಈ ಮೊದಲಿದ್ದಂತೆ ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಲು ಔಟ್‌ಲೇಟ್‌ಗಳು ಸಹ ಲಭ್ಯವಿರಲಿದ್ದು, ಹಾಗಾದರೆ, ಡಿಸೆಂಬರ್ 1ರ ನಂತರ ಆನ್‌ಲೈನ್‌ನಲ್ಲಿ ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಆಪ್‌ ಡೌನ್‌ಲೋಡ್ ಮಾಡಿಕೊಳ್ಳಿ!!

ಆಪ್‌ ಡೌನ್‌ಲೋಡ್ ಮಾಡಿಕೊಳ್ಳಿ!!

ಡಿಸೆಂಬರ್ ಒಂದರಿಂದ ಆನ್‌ಲೈನ್ ಮೂಲಕ ಆಧಾರ್ ಮೊಬೈಲ್ ನಂಬರ್ ಲಿಂಕ್ ಮಾಡಬಹುದಾಗಿದ್ದು, ನೀವು ಯಾವ ಟೆಲಿಕಾಂ ಕಂಪೆನಿ ಸಿಮ್ ಬಳಕೆ ಮಾಡುತ್ತಿದ್ದೀರಾ ಆ ಕಂಪೆನಿ ಅಧಿಕೃತ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.!!

 ಲಿಂಕ್ ಮಾಡುವ ಫೀಚರ್ ಕಾಣಿಸುತ್ತದೆ.!!

ಲಿಂಕ್ ಮಾಡುವ ಫೀಚರ್ ಕಾಣಿಸುತ್ತದೆ.!!

ಆಪ್‌ ಡೌನ್‌ಲೋಡ್ ಮಾಡಿದ ನಂತರ ನಿಮ್ಮ ಮೊಬೈಲ್ ನಂಬರ್ ಮೂಲಕ ಆಪ್‌ಗೆ ಸೈನ್‌ಅಪ್ ಆಗಿರಿ. ನಂತರ ಆಪ್‌ನಲ್ಲಿಯೇ ಆಧಾರ್ ನಂಬರ್ ಮತ್ತು ಮೊಬೈಲ್ ನಂಬರ್ ಲಿಂಕ್ ಮಾಡಲು ಆಯ್ಕೆಯೊಂದು ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.

ಆಧಾರ್ ನಂಬರ್ ನೀಡಿ!!

ಆಧಾರ್ ನಂಬರ್ ನೀಡಿ!!

ಆಧಾರ್ ನಂಬರ್ ಮತ್ತು ಮೊಬೈಲ್ ನಂಬರ್ ಲಿಂಕ್ ಮಾಡುವ ಆಯ್ಕೆ ಕಾಣಿಸಿದ ನಂತರ ನಿಮ್ಮ ಆಧಾರ್ ನಂಬರ್ ಅನ್ನು ಆ ಆಯ್ಕೆಯಲ್ಲಿ ಟೈಪಿಸಿ. ನಂತರ ನಿಮಗೆ ಒಟಿಪಿ ಸಂಖ್ಯೆ ಬರಲಿದೆ. ಆ ಒಟಿಪಿ ಸಂಖ್ಯೆಯನ್ನು ಆಪ್‌ನಲ್ಲಿ ನಮೂದಿಸಿ.!!

ಪರೀಶೀಲನೆ ನಡೆಯುತ್ತದೆ.!!

ಪರೀಶೀಲನೆ ನಡೆಯುತ್ತದೆ.!!

ಆಧಾರ್ ನಂಬರ್ ಮತ್ತು ಒಟಿಪಿ ಸಂಖ್ಯೆಯನ್ನು ನೀವು ನಮೂದಿಸಿದ ನಂತರ ನಿಮ್ಮ ಆಧಾರ್ ಮತ್ತು ನೀವು ಮೊದಲು ಖರೀದಿಸುವಾಘ ನೀಡಿದ್ದ ದಾಖಲಾತಿ ಪರಿಶೀಲನೆ ನಡೆಯುತ್ತದೆ. ಇನ್ನೊಬ್ಬರ ಮೊಬೈಲ್ ನಂಬರ್‌ಗೆ ಆಧಾರ್ ಲಿಂಕ್ ಮಾಡಲು ಪ್ರಯತ್ನಿಸಿದರೆ ಅದು ರದ್ದಾಗುತ್ತದೆ.

5000mAh ಬ್ಯಾಟರಿ ಫೋನ್ 'ಪ್ಯಾನಾಸೋನಿಕ್ ಎಲುಗ ಎ4' ಲಾಂಚ್!..ಬೆಲೆ ಕೇವಲ 12,490ರೂ.!!5000mAh ಬ್ಯಾಟರಿ ಫೋನ್ 'ಪ್ಯಾನಾಸೋನಿಕ್ ಎಲುಗ ಎ4' ಲಾಂಚ್!..ಬೆಲೆ ಕೇವಲ 12,490ರೂ.!!

Best Mobiles in India

English summary
Aadhaar Number-SIM/Mobile Number Linking: From December 1, You Can Do It Through An OTP.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X