Home
ಟೆಕ್ ನೌಕರಿ

ಆಧಾರ್- ಪಾನ್ ಲಿಂಕಿಂಗ್ ಇನ್ನೂ ಮಾಡಿಲ್ಲವೇ?

By Gizbot Bureau

ಈ ವರ್ಷದ ಸೆಪ್ಟೆಂಬರ್ ನಲ್ಲಿ, ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದಕ್ಕೆ ನೀಡಲಾಗಿದ್ದ ಸೆಪ್ಟೆಂಬರ್ 30 ರ ಗಡುವನ್ನು ಡಿಸೆಂಬರ್ 31 ರ ವರೆಗೆ ವಿಸ್ತರಿಸಿ ಹಣಕಾಸು ಸಚಿವಾಲಯವು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದೆ. ಹಾಗಾಗಿ ಇನ್ನು ಕೇವಲ 20 ದಿನಗಳು ಮಾತ್ರವೇ ಬಾಕಿ ಉಳಿದಿರುವುದರಿಂದಾಗಿ ಆದಷ್ಟು ಬೇಗ ಇದುವರೆಗೂ ಈ ಕಾರ್ಯವನ್ನು ಮಾಡಿ ಮುಗಿಸದೇ ಇದ್ದವರು ಮುಗಿಸಿಕೊಳ್ಳುವುದು ಒಳ್ಳೆಯದು. ಹಾಗಾದ್ರೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ನ್ನು ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ನೋಡಿ ಇದರ ಪರಿಹಾರ.

ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಇರುವ ಮಾರ್ಗಗಳು

1. ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ನೊಂದಾಯಿಸಿಕೊಂಡಿರುವ ವ್ಯಕ್ತಿಗಳು:

1. ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ನೊಂದಾಯಿಸಿಕೊಂಡಿರುವ ವ್ಯಕ್ತಿಗಳು:

ಒಂದು ವೇಳೆ ನೀವು ಆದಾಯ ತೆರಿಗೆಯನ್ನು ಸಲ್ಲಿಸುತ್ತಿದ್ದು ಈಗಾಗಲೇ ಆಧಾರ್ ನಂಬರ್ ನ್ನು ಐಟಿಆರ್ ನಲ್ಲಿ ನೀಡಿದ್ದರೆ ಪಾನ್ ಮತ್ತು ಆಧಾರ್ ಈಗಾಗಲೇ ಲಿಂಕ್ ಆಗಿರುವ ಸಾಧ್ಯತೆ ದಟ್ಟವಾಗಿದೆ. ಯಾಕೆಂದರೆ ಆದಾಯ ತೆರಿಗೆ ಇಲಾಖೆಯು ಈ ಎರಡೂ ಐಡಿಗಳಲ್ಲಿರುವ ಮಾಹಿತಿಗಳು ಸಮವಾಗಿದ್ದಲ್ಲಿ ಈಗಾಗಲೇ ಅದನ್ನು ಲಿಂಕ್ ಮಾಡಿರುವ ಸಾಧ್ಯತೆ ಇದೆ.

ಆಧಾರ್ ಮತ್ತು ಪಾನ್ ಲಿಂಕ್ ಆಗಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳುವುದಕ್ಕಾಗಿ ನೀವು ಇ-ಫೈಲಿಂಗ್ ವೆಬ್ ಸೈಟ್ www.incometaxindiaefiling.gov.in ಗೆ ಭೇಟಿ ನೀಡಿ.

2. ಇ-ಫೈಲಿಂಗ್ ಪೋರ್ಟಲ್ ನಲ್ಲಿ ನೊಂದಾಯಿಸಿಕೊಳ್ಳದ ವ್ಯಕ್ತಿಗಳು:

2. ಇ-ಫೈಲಿಂಗ್ ಪೋರ್ಟಲ್ ನಲ್ಲಿ ನೊಂದಾಯಿಸಿಕೊಳ್ಳದ ವ್ಯಕ್ತಿಗಳು:

ಒಂದು ವೇಳೆ ನೀವು ಇ-ಫೈಲಿಂಗ್ ಪೋರ್ಟಲ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳದೇ ಇರುವ ವ್ಯಕ್ತಿಗಳಾಗಿದ್ದರೆ ಅಥವಾ ಮೇಲಿನ ವಿಧಾನದಲ್ಲಿ ಹೋಗಲು ಇಚ್ಛಿಸದೇ ಇದ್ದಲ್ಲಿ 'Link Aadhaar' ಟ್ಯಾಬ್ ನ್ನು ಕ್ಲಿಕ್ಕಿಸಬಹುದು. ಎಡಭಾಗದಲ್ಲಿ ಕ್ವಿಕ್ ಲೈನ್ಸ್ ನ ಅಡಿಯಲ್ಲಿರುವ ಮೊದಲ ಲಿಂಕ್ ಇದಾಗಿರುತ್ತದೆ. ಈ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ನಿಮ್ಮನ್ನು ಹೊಸ ಪುಟಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ನೀವು ಎಲ್ಲಾ ಅಗತ್ಯ ಮಾಹಿತಿಗಳನ್ನು ನೀಡಬೇಕಾಗುತ್ತದೆ.

ಪಾನ್ ನಂಬರ್, ಆಧಾರ್ ನಂಬರ್ , ಆಧಾರ್ ಕಾರ್ಡ್ ನಲ್ಲಿ ನಮೂದಿಸಿದಂತೆಯೇ ನಿಮ್ಮ ಹೆಸರು, ಒಂದು ವೇಳೆ ವರ್ಷವನ್ನು ಆಧಾರ್ ಕಾರ್ಡ್ ನಲ್ಲಿ ನಮೂದಿಸಿದ್ದರೆ ಅದನ್ನು ಕೂಡ ಲಿಂಕ್ ಮಾಡುವ ಮೂಲಕ ನೀವು ಎಂಟರ್ ಮಾಡಬೇಕಾಗುತ್ತದೆ. ನಂತರ ಇಮೇಜ್ ನಲ್ಲಿ ಕಾಣುವ ಕ್ಯಾಪ್ಚಾ ಎಂಟರ್ ಮಾಡಿ. ನೋಟದಲ್ಲಿ ಸಮಸ್ಯೆ ಇರುವವರು ಓಟಿಪಿ ಪಡೆದು ಕೂಡ ಮಾಡಬಹುದು. ಕೊನೆಯದಾಗಿ ಲಿಂಕ್ ಆಧಾರ್ ಆಯ್ಕೆಯನ್ನು ಕ್ಲಿಕ್ಕಿಸಿ. ಪಾನ್ ಮತ್ತು ಆಧಾರ್ ಕಾರ್ಡ್ ಯಶಸ್ವಿಯಾಗಿ ಲಿಂಕ್ ಆಗಿರುವ ಬಗ್ಗೆ ನಿಮಗೆ ಸಂದೇಶ ಲಭ್ಯವಾಗುತ್ತದೆ.

ಆಧಾರ್ ಮತ್ತು ಪಾನ್ ಕಾರ್ಡ್ ನ್ನು ನೀವು ಯಾಕೆ ಲಿಂಕ್ ಮಾಡಿಕೊಳ್ಳಬೇಕು?

ಆಧಾರ್ ಮತ್ತು ಪಾನ್ ಕಾರ್ಡ್ ನ್ನು ನೀವು ಯಾಕೆ ಲಿಂಕ್ ಮಾಡಿಕೊಳ್ಳಬೇಕು?

ಒಂದು ವೇಳೆ ನೀವು ಆದಾಯ ತೆರಿಗೆ ಮರುಪಾವತಿಗೆ ಅರ್ಜಿ ಸಲ್ಲಿಸುವುದಾದರೆ ಎರಡೂ ಐಡಿಗಳು ಕೂಡ ಅಗತ್ಯವಾಗಿ ಬೇಕಾಗುತ್ತದೆ. ಅಂದರೆ ಪಾನ್ ಮತ್ತು ಆಧಾರ್ ಕಾರ್ಡ್ ಇಲ್ಲದೆ ಆದಾಯ ತೆರಿಗೆಯನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಇದು ಈ ಹಣಕಾಸು ವರ್ಷದಿಂದಲೇ 2019-20 ರಿಂದಲೇ ಆರಂಭವಾಗುತ್ತದೆ. ಕೆಲವು ನಿರ್ಧಿಷ್ಟ ಕೇಸ್ ಗಳನ್ನು ಹೊರತು ಪಡಿಸಿದರೆ 2019-20 ಹಣಕಾಸು ವರ್ಷದಿಂದ ಆದಾರ್ ಮತ್ತು ಪಾನ್ ಲಿಂಕ್ ಆಗಿದ್ದರೆ ಮಾತ್ರವೇ ತೆರಿಗೆ ಮರುಪಾವತಿ ಸಾಧ್ಯವಾಗುತ್ತದೆ.

ಪಾನ್ ಕಡ್ಡಾಯವಾಗಿರುವ ಸ್ಥಳಗಳಲ್ಲಿ ಒಂದು ವೇಳೆ ಆಧಾರ್ ಉಲ್ಲೇಖಿಸುವುದನ್ನು ಪರಿಗಣಿಸಿದರೆ ಇವೆರಡರ ಲಿಂಕ್ ಅಗತ್ಯವಾಗಿರುತ್ತದೆ. ಲಿಂಕ್ ಆಗದೇ ಇದ್ದಾಗ ನೀವು ಸೆಕೆಂಡ್ ಪಾನ್ ನ್ನು ನೀಡಿದ್ದೇ ಆದಲ್ಲಿ ಅದು ಕಾನೂನು ಬಾಹಿರವಾಗುತ್ತದೆ.2019 ರ ಬಜೆಟ್ ನಲ್ಲಿ ಪಾನ್ ಕಡ್ಡಾಯವಾಗಿರುವ ಕಡೆಗಳಲ್ಲಿ ಆಧಾರ್ ಕಾರ್ಡ್ ನೀಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಅದು ಎರಡೂ ಐಡಿಗಳು ಲಿಂಕ್ ಆಗಿದ್ದಾಗ ಮಾತ್ರವೇ ಕಾನೂನು ರೀತಿಯಾಗಿರುತ್ತದೆ.

ಸಿಬಿಡಿಟಿ

ಅಗಸ್ಟ್ ಅಂತ್ಯದಲ್ಲಿ ಸಿಬಿಡಿಟಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಪಾನ್ ಇಲ್ಲದ ವ್ಯಕ್ತಿಗಳು ತಮ್ಮ ಹಣಕಾಸು ವ್ಯವಹಾರಕ್ಕಾಗಿ ಆಧಾರ್ ಕಾರ್ಡ್ ನೀಡಿದ್ದಲ್ಲಿ ಇಲಾಖೆಯು ಅದನ್ನು ಆಟೋ ಅಪ್ಲಿಕೇಷನ್ ಎಂದು ಪರಿಗಣಿಸುತ್ತದೆ ಮತ್ತು ವ್ಯಕ್ತಿಗೆ ಅದನ್ನು ಹಂಚಿಕೆ ಮಾಡಲಾಗುತ್ತದೆ. ಆದರೆ ವಿಸ್ತರಿಸಿದ ಅವಧಿಯಲ್ಲಿ ನೀವು ಆಧಾರ್ ಮತ್ತು ಪಾನ್ ನ್ನು ಲಿಂಕ್ ಮಾಡದೇ ಇದ್ದಲ್ಲಿ ಸದ್ಯ ಇರುವ ನಿಯಮದ ಪ್ರಕಾರ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಹಾಗಾಗಿ ಒಂದು ವೇಳೆ ಇದುವರೆಗೂ ನೀವು ಪಾನ್ ಮತ್ತು ಆಧಾರ್ ನ್ನು ಲಿಂಕ್ ಮಾಡಿಲ್ಲದೇ ಇದ್ದಲ್ಲಿ ಕೂಡಲೇ ಡಿಸೆಂಬರ್ 31 ರ ಒಳಗೆ ಲಿಂಕ್ ಮಾಡಿಕೊಳ್ಳುವುದನ್ನು ಮರೆಯಬೇಡಿ.

Best Mobiles in India

English summary
Aadhaar Pan Linking Deadline Is Almost Here: What Should You Do?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+