Home
ಟೆಕ್ ನೌಕರಿ

ಹಲವು ಆಧಾರ್ ಕೆಲಸಗಳಿಗೆ ಇನ್ನು ಕೇಂದ್ರಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ!

2025ರ ಕೊನೆಯಲ್ಲಿ UIDAI ನಿಂದ ಅಧಿಕೃತ ಆಧಾರ್ ಮೊಬೈಲ್ ಅಪ್ಲಿಕೇಶನ್ ಬಿಡುಗಡೆಯಾಗಿತ್ತು. ಈ ಹೊಸ ಆಪ್ ಹಿಂದಿನ mAadhaar ಅಪ್ಲಿಕೇಶನ್‌ಗೆ ಬದಲಾಗಿ ತರಲಾಗಿದ್ದು, ಹೆಚ್ಚಿದ ಭದ್ರತೆ, ಬಹು-ಪ್ರೊಫೈಲ್ ಬೆಂಬಲ ಮತ್ತು ನೇರ ಆಧಾರ್ ಸೇವೆಗಳ ಪ್ರವೇಶವನ್ನು ಒದಗಿಸುತ್ತದೆ. ಡಿಜಿಟಲ್ ಇಂಡಿಯಾ ಉದ್ದೇಶಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಿದ ಈ ಆಪ್, ಸಾಮಾನ್ಯ ನಾಗರಿಕರ ದಿನನಿತ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡಿದರುವಂತಿದೆ. ಇದೀಗ ಈ ಆಪ್‌ನಿಂದಾಗಿ ಆಧಾರ್ ಸಂಬಂಧಿತ ಹಲವು ಕೆಲಸಗಳಿಗೆ ಈಗ ಕೇಂದ್ರಗಳಿಗೆ ಭೇಟಿ ನೀಡುವ ಅಗತ್ಯವೇ ಇಲ್ಲ.!

ಹೌದು, ಹೊಸ ಆಧಾರ್ ಆಪ್‌ನ ಪ್ರಮುಖ ವಿಶೇಷತೆ ಎಂದರೆ, ಆಧಾರ್ ಸಂಬಂಧಿತ ಹಲವು ಕೆಲಸಗಳಿಗೆ ಈಗ ಕೇಂದ್ರಗಳಿಗೆ ಭೇಟಿ ನೀಡುವ ಅಗತ್ಯವೇ ಇಲ್ಲ. ಮೊಬೈಲ್ ಸಂಖ್ಯೆಯ ನವೀಕರಣ, ಮಾಹಿತಿ ಪರಿಶೀಲನೆ, ಕುಟುಂಬ ಸದಸ್ಯರ ಆಧಾರ್ ನಿರ್ವಹಣೆಯಂತಹ ಹಲವಾರು ಪ್ರಮುಮುಖ ಒಂದೇ ಆಪ್‌ನಲ್ಲೇ ಸಾಧ್ಯ. ಆಂಡ್ರಾಯ್ಡ್ ಹಾಗೂ iOS ಬಳಕೆದಾರರಿಗೆ ಲಭ್ಯವಿರುವ ಈ ಉಚಿತ ಆಪ್, ಬಯೋಮೆಟ್ರಿಕ್ ಭದ್ರತೆ ಮತ್ತು ಆಫ್‌ಲೈನ್ ಬಳಕೆಯನ್ನು ಬೆಂಬಲಿಸುವುದರಿಂದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲೂ ಉಪಯುಕ್ತವಾಗಿದೆ.

ಹೊಸ ಆಪ್ ಅನ್ನು ಆರಂಭಿಸುವುದು ತುಂಬಾ ಸರಳ. ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಲ್ಲಿ UIDAI ಅಧಿಕೃತ "Aadhaar" ಆಪ್ ಅನ್ನು ಡೌನ್‌ಲೋಡ್ ಮಾಡಿ. ಆಪ್ ತೆರೆಯುತ್ತಿದ್ದಂತೆ ಭಾಷೆ ಆಯ್ಕೆ ಮಾಡಿ, 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಬಹುದು ಅಥವಾ ಕಾರ್ಡ್‌ನಲ್ಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು. ನಂತರ ಮುಖ ಗುರುತಿಸುವಿಕೆ ಅಥವಾ OTP ಮೂಲಕ ಪರಿಶೀಲನೆ ಪೂರ್ಣಗೊಳಿಸಿ, 4 ಅಂಕಿಯ ಪಾಸ್‌ಕೋಡ್ ರಚಿಸಿದರೆ ಆಪ್ ಸಕ್ರಿಯವಾಗುತ್ತದೆ.

ಹಲವು ಆಧಾರ್ ಕೆಲಸಗಳಿಗೆ ಇನ್ನು ಕೇಂದ್ರಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ!

ಈ ಹೊಸ ಆಪ್‌ನಲ್ಲಿ ಮೊಬೈಲ್ ಸಂಖ್ಯೆ ನವೀಕರಣ ಪ್ರಕ್ರಿಯೆ ಅತ್ಯಂತ ವೇಗವಾಗಿದೆ. ಲಾಗಿನ್ ಆದ ನಂತರ "Services" ವಿಭಾಗದಲ್ಲಿ "Update Mobile Number" ಆಯ್ಕೆ ಮಾಡಿ, ಹೊಸ ಸಂಖ್ಯೆಯನ್ನು ನಮೂದಿಸಬೇಕು. ಹಳೆಯ ಸಂಖ್ಯೆಗೆ ಬರುವ OTP ಮೂಲಕ ದೃಢೀಕರಣ ಮಾಡಿದ ಬಳಿಕ, ಅಗತ್ಯವಿದ್ದರೆ UPI ಮೂಲಕ ನಾಮಮಾತ್ರ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯ ಸ್ಥಿತಿಯನ್ನು ಆಪ್‌ನಲ್ಲೇ ತಕ್ಷಣ ಪರಿಶೀಲಿಸಬಹುದಾಗಿದೆ. ಇದರಿಂದ ಆಧಾರ್ ಕೇಂದ್ರಗಳಿಗೆ ಹೋಗುವ ತೊಂದರೆ ತಪ್ಪುತ್ತದೆ.

ಕುಟುಂಬ ನಿರ್ವಹಣೆಯ ದೃಷ್ಟಿಯಿಂದಲೂ ಈ ಆಪ್ ದೊಡ್ಡ ಬದಲಾವಣೆ ತಂದಿದೆ. ಒಂದೇ ಮೊಬೈಲ್‌ನಲ್ಲಿ ಗರಿಷ್ಠ ಐದು ಕುಟುಂಬ ಸದಸ್ಯರ ಆಧಾರ್ ಪ್ರೊಫೈಲ್‌ಗಳನ್ನು ಸೇರಿಸಬಹುದು. "Add User" ಆಯ್ಕೆಯ ಮೂಲಕ ಸಂಬಂಧಿಸಿದ ಸದಸ್ಯರ ಆಧಾರ್ ಸಂಖ್ಯೆಯನ್ನು ನಮೂದಿಸಿ, OTP ಅಥವಾ ಮುಖ ಪರಿಶೀಲನೆಯ ಮೂಲಕ ದೃಢೀಕರಿಸಿದರೆ ಸಾಕು. ನಂತರ ಪ್ರೊಫೈಲ್‌ಗಳ ನಡುವೆ ಸುಲಭವಾಗಿ ಬದಲಾಯಿಸಬಹುದು, ಇದು ಹಿರಿಯ ನಾಗರಿಕರು ಮತ್ತು ಮಕ್ಕಳ ಆಧಾರ್ ನಿರ್ವಹಣೆಗೆ ವಿಶೇಷವಾಗಿ ಸಹಾಯಕವಾಗಿದೆ.

ಇಂಟರ್ನೆಟ್ ಲಭ್ಯವಿಲ್ಲದ ಸಂದರ್ಭಗಳಲ್ಲೂ ಗುರುತಿನ ಪರಿಶೀಲನೆ ಸಾಧ್ಯವಾಗುವಂತೆ, ಆಪ್‌ನಲ್ಲಿ ಆಫ್‌ಲೈನ್ QR ಕೋಡ್ ವ್ಯವಸ್ಥೆಯನ್ನು ನೀಡಲಾಗಿದೆ. ಬಳಕೆದಾರರು ಆಫ್‌ಲೈನ್ QR ಅಥವಾ ಮಾಸ್ಕ್ಡ್ ಆಧಾರ್ ಅನ್ನು ರಚಿಸಿ, ಬ್ಯಾಂಕ್‌ಗಳು, ವ್ಯಾಪಾರ ಸಂಸ್ಥೆಗಳು ಅಥವಾ ಸರ್ಕಾರಿ ಸೇವೆಗಳಲ್ಲಿ ಇಂಟರ್ನೆಟ್ ಇಲ್ಲದೇಲೇ ಬಳಸಬಹುದು. ಹೆಚ್ಚುವರಿ ಭದ್ರತೆಗೆ ಬಯೋಮೆಟ್ರಿಕ್ ಲಾಕ್ ಆಯ್ಕೆಯೂ ಲಭ್ಯವಿದೆ.

ಇದರ ಜೊತೆಗೆ, ಅಗತ್ಯವಿರುವ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳುವ ಸೆಲೆಕ್ಟಿವ್ ಶೇರಿಂಗ್, ಆಪ್ ಬಳಕೆಯ ಚಟುವಟಿಕೆ ದಾಖಲೆಗಳು, ತಕ್ಷಣ ಡೇಟಾ ಲಾಕ್ ಮಾಡುವ ವ್ಯವಸ್ಥೆ ಮತ್ತು ಡಿಜಿಟಲ್ ಲಾಕರ್‌ನಲ್ಲಿ e-Aadhaar ಸಂಗ್ರಹಿಸುವ ಸೌಲಭ್ಯಗಳು ಈ ಆಪ್‌ನ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಪ್ರಯಾಣ, ಬ್ಯಾಂಕಿಂಗ್ ಹಾಗೂ ಸರ್ಕಾರಿ ಸೇವೆಗಳಲ್ಲಿ ಇದು ಸಮಯ ಉಳಿಸುವ ಸಾಧನವಾಗಿದೆ.

ಒಟ್ಟಾರೆಯಾಗಿ, UIDAI ಬಿಡುಗಡೆ ಮಾಡಿದ ಹೊಸ ಆಧಾರ್ ಆಪ್ ಡಿಜಿಟಲ್ ಗುರುತು ಸೇವೆಗಳನ್ನು ಹೆಚ್ಚು ಸುಲಭ, ಸುರಕ್ಷಿತ ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ. ಕಡಿಮೆ ಕಾಗದಪತ್ರ, ವೇಗವಾದ ಸೇವೆ ಮತ್ತು ಹೆಚ್ಚಿದ ಗೌಪ್ಯತೆಯೊಂದಿಗೆ, ಈ ಆಪ್ ಸಮಕಾಲೀನ ಡಿಜಿಟಲ್ ಪರಿಹಾರವಾಗಿ ಹೊರಹೊಮ್ಮಿದೆ ಎಂಬುದು ನಮ್ಮ ಅಭಿಪ್ರಾಯ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
UIDAI’s new official Aadhaar mobile app replaces mAadhaar, offering enhanced security, multi-profile support, and direct access to Aadhaar services. Users can update details, verify information, and manage family Aadhaar profiles without visiting enrollment centers, supporting Digital India goals.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+