ಆಧಾರ್ ಅಪ್ಡೇಟ್‌ಗೆ ಒಂದೇ ದಿನ ಬಾಕಿ!: ಉಚಿತವಾಗಿ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡುವುದು ಹೇಗೆ?
ಆಧಾರ್ ಕಾರ್ಡ್ (Aadhaar Card) ಅಪ್ಡೇಟ್‌ಗೆ ಕೇವಲ ಒಂದೇ ದಿನ ಬಾಕಿ! ಆಧಾರ್ ಕಾರ್ಡ್‌ದಾರರು ತಮ್ಮ ವಿವರಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್ಡೇಟ್ (Free Aadhaar Updation) ಮಾಡಲು ನಾಳೆಯವರೆಗೆ (ಜೂನ್ 14, 2024) ಸಮಯವಿದೆ. ಬಳಿಕ, ಆನ್‌ಲೈನ್‌ನಲ್ಲಿ ನೀವು ಆಧಾರ್‌ನಲ್ಲಿ ಯಾವುದೇ ಮಾಹಿತಿ ಅಪ್ಡೇಟ್ ಮಾಡಿದ್ರೆ, ಶುಲ್ಕ ಪಾವತಿ ಕಡ್ಡಾಯ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ಅಪ್ಡೇಟ್ ಪ್ರಕ್ರಿಯೆಯನ್ನು ಕಾರ್ಡ್‌ದಾರರಿಗೆ ಸರಳವಾಗಿಸುವ ಗುರಿಯನ್ನು ಹೊಂದಿದೆ. ನೀವಿನ್ನೂ ಆಧಾರ್ ಅಪ್ಡೇಟ್ ಮಾಡಿಲ್ಲ ಅಂದ್ರೆ ನಾಳೆಯ ಒಳಗೆ ಯಾವುದೇ ಶುಲ್ಕವಿಲ್ಲದೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಬಳಿಕ, ಯಾವುದೇ ಅಪ್‌ಡೇಟ್‌ಗಳಿಗೆ 50 ರೂ. ಶುಲ್ಕ ಪಾವತಿಸಬೇಕು.
ಆಧಾರ್ ಕಾರ್ಡ್ ಭಾರತದಲ್ಲಿ ಪ್ರಮುಖವಾಗಿ ಬೇಕಾಗಿರುವ ದಾಖಲೆಯಾಗಿದೆ. ಯಾವುದೇ ಶುಲ್ಕ ಪಾವತಿ ಇಲ್ಲದೇ ಉಚಿತವಾಗಿ ಆನ್‌ಲೈನ್‌ನಲ್ಲಿ ಆಧಾರ್ ಅಪ್ಡೇಟ್ ಮಾಡಲು ನಾಳೆಯೇ (ಜೂನ್ 14) ಕೊನೆಯ ದಿನವಾಗಿದೆ. ನೀವು 10 ವರ್ಷಕ್ಕಿಂತ ಹಳೆಯ ಆಧಾರ್ ಅನ್ನು ಹೊಂದಿದ್ರೆ, ಅಪ್ಡೇಟ್ ಮಾಡುವುದು ಅವಶ್ಯಕವಾಗಿದೆ. ಯುಐಡಿಎಐ ವೆಬ್‌ಸೈಟ್‌ಗೆ ಭೇಟಿ ನೀಡಿ, ಉಚಿತವಾಗಿ ಈ ಪ್ರಕ್ರಿಯೆಯನ್ನು ಮಾಡಬಹುದು. ಹಾಗಿದ್ರೆ, ಉಚಿತವಾಗಿ ಆಧಾರ್ ಅಪ್ಡೇಟ್ ಹೇಗೆ ಮಾಡಬಹುದು ಎಂಬ ಸರಳ ವಿಧಾನವನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಸರ್ಕಾರವು, ಆನ್‌ಲೈನ್‌ನಲ್ಲಿ ಉಚಿತವಾಗಿ Aadhaar Card ಅಪ್ಡೇಟ್ ಮಾಡಲು ಮಾರ್ಚ್ 14 ರವರೆಗೆ ಗಡುವು ನೀಡಿತ್ತು. ಬಳಿಕ, ಮಾರ್ಚ್ 14 ರಿಂದ ಜೂನ್ 14ಕ್ಕೆ ಈ ಸಮಯಾವಕಾಶವನ್ನು ವಿಸ್ತರಿಸಿತ್ತು. ಇದು 10 ವರ್ಷಕ್ಕೂ ಹೆಚ್ಚು ಹಳೆಯ ಆಧಾರ್ ಹೊಂದಿರುವವರಿಗೆ ಮಾತ್ರ ಅನ್ವಯವಾಗಲಿದೆ. ಹೆಸರು ಬದಲಾವಣೆ, ಜನ್ಮದಿನಾಂಕ ಬದಲಾವಣೆ, ಫೋಟೋ ಬದಲಾವಣೆ ಅಥವಾ ವಿಳಾಸ ಬದಲಾಯಿಸಲು ಇಚ್ಚಿಸಿದರೆ, ನೀವು ಆಧಾರ್‌ನಲ್ಲಿ ಅಪ್ಡೇಟ್ ಮಾಡಬಹುದು. ನಾಳೆಯವರಗೆ ನೀವು ಆನ್‌ಲೈನ್‌ನಲ್ಲಿ ಅಪ್ಡೇಟ್ ಮಾಡಲು ಅವಕಾಶವಿದೆ.
ಆಧಾರ್ ಕಾರ್ಡ್ ಅಪ್ಡೇಟ್ ಯಾಕೆ ಮಾಡಬೇಕು?
ಸರ್ಕಾರವು 10ಕ್ಕೂ ಹೆಚ್ಚು ವರ್ಷಗಳಿಂದ ಆಧಾರ್ ಕಾರ್ಡ್ ಅಪ್ಡೇಟ್ ಮಾಡದೇ ಇರುವವರು, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ. ಹಲವರು Aadhaar Card ಮಾಡಿಸಿದಾಗಿನಿಂದ ಅದನ್ನು ಅಪ್ಡೇಟ್ ಮಾಡಿಸಿಯೇ ಇಲ್ಲ. ಒಂದುವೇಳೆ ನಿಮಗೆ ವಯಸ್ಸಾಗಿದ್ದರೆ ಬೆರಳಚ್ಚು ಗುರುತು ಮಾಸಿರಬಹುದು. ಮೊದಲಿನಂತೆ ಬೆರಳಚ್ಚು ಸರಿಯಾಗಿ ಮೂಡದಿರಬಹುದು. ಹೀಗಾಗಿ, Aadhaar Cardನಲ್ಲಿ ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಅಪ್ಡೇಟ್ ಮಾಡಿಸಬೇಕು. ಇನ್ನೂ, ಪ್ರೊಫೈಲ್‌ನಲ್ಲಿ ಯಾವುದೇ ಮಾಹಿತಿ ಬದಲಾವಣೆ ಇಲ್ಲದಿದ್ದರೂ, ಅದನ್ನು ನಮೂದಿಸಿ ಅಪ್ಡೇಟ್ ಮಾಡಬಹುದು.
ಆಧಾರ್‌ನಲ್ಲಿ ಏನೆಲ್ಲಾ ಅಪ್ಡೇಟ್ ಮಾಡಬೇಕು?
- ಕಾರ್ಡ್‌ದಾರರ ಹೆಸರು ಬದಲಾವಣೆ
- ಜನ್ಮದಿನಾಂಕ ಬದಲಾವಣೆ
- ಫೋಟೋ ಬದಲಾವಣೆ
- ಮನೆಯ ವಿಳಾಸ ಬದಲಾವಣೆ
- ಹೊಸ ಮೊಬೈಲ್ ಸಂಖ್ಯೆ
- ಇಮೇಲ್ ಐಡಿ
'ಫ್ರೀ'ಯಾಗಿ ಆಧಾರ್ ಅಪ್ಡೇಟ್ ಮಾಡುವುದು ಹೇಗೆ?
ಹಂತ 1: ಮೊದಲಿಗೆ UIDAIನ https://uidai.gov.in/ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: 'My Aadhaar' ಮೇಲೆ ಕ್ಲಿಕ್ ಮಾಡಿ ನಂತರ ಮೆನುವಿನಿಂದ 'Update Your Aadhaar' ಅನ್ನು ಆಯ್ಕೆ ಮಾಡಿ.
ಹಂತ 3: ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ಬಳಿಕ, ಓಟಿಪಿ ನಮೂದಿಸಿ ಲಾಗಿನ್ ಆಗಿ.
ಹಂತ 4: ಮುಂದಿನ ಪೇಜ್‌ನಲ್ಲಿ ನೀವು ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಹಂತ 5: ಅದರಲ್ಲಿ ನೀವು ಅಪ್ಡೇಟ್ ಮಾಡಬೇಕಾದ ಆಯ್ಕೆಯನ್ನು ಕ್ಲಿಕ್ಕಿಸಿ. (ಉದಾಹರಣೆಗೆ, ಫೋಟೋ, ಮೊಬೈಲ್ ಸಂಖ್ಯೆ, ವಿಳಾಸವನ್ನು ಬದಲಾಯಿಸಬೇಕಿದ್ದರೆ ಆ ಆಯ್ಕೆಯನ್ನು ಆರಿಸಿ).
ಹಂತ 6: ಬಳಿಕ ನೀವು ಆಧಾರ್ ಅನ್ನು ಅಪ್ಡೇಟ್ ಮಾಡಲು ಮುಂದುವರಿಯಿರಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ಹಂತ 7: ಬಳಿಕ ಅಪ್ಡೇಟ್ ಮಾಡಿದ ಆಯ್ಕೆಗೆ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಿ. ಎಲ್ಲವೂ ಸರಿ ಇದ್ದರೆ ಒಪ್ಪಿಗೆ ನೀಡಬಹುದು.
ಹಂತ 8: ಆಗ ನಿಮಗೆ ಒಂದು ವಿನಂತಿ ಸಂಖ್ಯೆಯನ್ನು ರಚಿಸಲಾಗುತ್ತದೆ. ಈ ನಂಬರ್ ಅನ್ನು ಸೇವ್ ಮಾಡಿ ಇಟ್ಟುಕೊಳ್ಳಿ. ಇಷ್ಟು ಮಾಡಿದರೆ ಸಾಕು.
ಹಂತ 9: ಅಪ್ಡೇಟ್ ಮಾಡಿದ ಕೆಲವೇ ದಿನಗಳಲ್ಲಿ ಆಧಾರ್ ಕಾರ್ಡ್ (ನವೀಕರಿಸಿದ ಆಧಾರ್) ನಿಮ್ಮ ವಿಳಾಸಕ್ಕೆ ತಲುಪುತ್ತದೆ.
ಒಂದುವೇಳೆ ನಿಮಗೆ ಆನ್‌ಲೈನ್‌ನಲ್ಲಿ ಅಪ್ಡೇಟ್ ಮಾಡಲು ಆಗದಿರಬಹುದು. ಆಗ ನೀವು ಸಮೀಪದ ಆಧಾರ್ ಕೇಂದ್ರಗಳಿಗೆ ಹೋಗಿ Aadhaar Card ಅಪ್ಡೇಟ್ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಬೆಂಗಳೂರು ಒನ್ ಇತ್ಯಾದಿ ಕಡೆಯೂ ಈ ಸೇವೆ ಲಭ್ಯವಿರುತ್ತದೆ. ಇಲ್ಲಿ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ನಾಳೆಯವರೆಗೂ (ಜೂನ್ 14) ನಿಮಗೆ ಆನ್‌ಲೈನ್‌ಲ್ಲಿ ಅಪ್ಡೇಟ್ ಮಾಡಿಸಲು ಅವಕಾಶವಿದ್ದು, ಬೇರೆ ಕೆಲಸಗಳಿಗೆ ಕೊಂಚ ವಿರಾಮ ಕೊಡಿ. ದಿನದ ಕೆಲವು ಗಂಟೆಗಳನ್ನು ಮೀಸಲಿಟ್ಟು, ಕೂಡಲೇ ಆಧಾರ್ ಅಪ್ಡೇಟ್ ಮಾಡಿಸಿ.


Click it and Unblock the Notifications








