ಇನ್‌ಸ್ಟಾಗ್ರಾಮ್‌ನಲ್ಲಿ ವಿಂಟೇಜ್ ಸೀರೆ AI ಟ್ರೆಂಡ್: ಏನಿದು ಹೊಸ ವೈರಲ್ ಟೂಲ್?
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ, ಅದರಲ್ಲೂ ಮುಖ್ಯವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಹೊಸ ಕ್ರೇಜ್ ಪ್ರಾರಂಭವಾಗಿದೆ. ಇದು AI ಬಳಸಿ ರಚಿಸಿದ ವಿಂಟೇಜ್ ಸೀರೆ ಫೋಟೋ ಎಡಿಟ್ಸ್ ಟ್ರೆಂಡ್. ಈ ಫೋಟೋಗಳು 90ರ ದಶಕದ ಹಳೆಯ ಕನ್ನಡ ಚಲನಚಿತ್ರಗಳ ಪೋಸ್ಟರ್‌ಗಳನ್ನು ನೆನಪಿಸುತ್ತವೆ. ಪ್ರಸ್ತುತ ಜನರೇಷನ್ ನವರು ಈ ಟ್ರೆಂಡ್‌ನಲ್ಲಿ ವಿಂಟೇಜ್ ಶೈಲಿಯ ಫೋಟೋಗಳನ್ನು ರಚಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಹಳದಿ ಶಿಫಾನ್ ಸೀರೆ, ಕಪ್ಪು ಪಾರ್ಟಿವೇರ್ ಸೀರೆ, ಅಥವಾ ಪೋಲ್ಕಾ ಡಾಟ್ ಸೀರೆಗಳನ್ನು AI ಮೂಲಕ ಹಳೆಯ ಸಿನಿಮಾದಂತಹ ಶೈಲಿಯಲ್ಲಿ ಬದಲಾಯಿಸಿರುವುದು ನೋಡುಗರ ಗಮನ ಸೆಳೆಯುತ್ತಿದೆ. ಹಾಗಾದರೆ, ಏನಿದು ಹೊಸ ಟ್ರೆಂಡ್?, ಇದನ್ನು ನಾವು ಕ್ರಿಯೇಟ್ ಮಾಡುವುದು ಹೇಗೆ? ಎಂಬುದನ್ನು ನೋಡೋಣ ಬನ್ನಿ.
ಈ ಟ್ರೆಂಡ್ ಮಾಡಲು, ಗೂಗಲ್‌ನ ಜೆಮಿನಿ (Gemini) ಮತ್ತು ಚಾಟ್‌ಜಿಪಿಟಿ (ChatGPT) ನಂತಹ AI ಟೂಲ್‌ಗಳನ್ನು ಬಳಸಲಾಗುತ್ತಿದೆ. ಫೋಟೋಗಳನ್ನು ಸಿನಿಮಾ ಶೈಲಿಗೆ ಬದಲಾಯಿಸಲು, ಬಳಕೆದಾರರು ನಿರ್ದಿಷ್ಟವಾದ ಪ್ರಾಂಪ್ಟ್‌ಗಳನ್ನು ಬಳಸುತ್ತಾರೆ. ಈ ಎಡಿಟ್ಸ್ ಹಳೆಯ ಸಿನಿಮಾದ ನೆನಪು ಮತ್ತು ಒಂದು ನಾಟಕೀಯ ಭಾವವನ್ನು ಮೂಡಿಸುತ್ತವೆ. ಗಾಳಿಯಲ್ಲಿ ಹಾರಾಡುವ ಸೀರೆ, ಕಪ್ಪು-ಬಿಳುಪಿನ ಶೇಡ್‌ಗಳು, ಮತ್ತು ಹಳೆಯ ಸಿನಿಮಾ ಪೋಸ್ಟರ್ ಶೈಲಿಯ ಫೋಟೋಗಳು ಈ ಟ್ರೆಂಡ್‌ನ ಪ್ರಮುಖ ಆಕರ್ಷಣೆ.
ಈ ಟ್ರೆಂಡ್ ಪ್ರಯತ್ನಿಸಲು, ಬಳಕೆದಾರರು ಮೊದಲು ತಮ್ಮ ಗೂಗಲ್ ಖಾತೆಯ ಮೂಲಕ ಜೆಮಿನಿ ಅಥವಾ ಚಾಟ್‌ಜಿಪಿಟಿಗೆ ಲಾಗಿನ್ ಆಗಬೇಕು. ಜೆಮಿನಿ ಬಳಸುತ್ತಿದ್ದರೆ, ಅಲ್ಲಿನ "ಟ್ರೈ ಇಮೇಜ್ ಎಡಿಟಿಂಗ್" ಆಯ್ಕೆಯನ್ನು ಆಯ್ದುಕೊಳ್ಳಬೇಕು. ನಂತರ ತಮ್ಮ ಸ್ಪಷ್ಟವಾದ ಮುಖವಿರುವ ಫೋಟೋವನ್ನು ಅಪ್‌ಲೋಡ್ ಮಾಡಿ, ಕೆಲವು ಜನಪ್ರಿಯ ಪ್ರಾಂಪ್ಟ್‌ಗಳನ್ನು ಕಾಪಿ-ಪೇಸ್ಟ್ ಮಾಡಬೇಕು. ಕೆಲವೇ ಕ್ಷಣಗಳಲ್ಲಿ, AI ಆ ಫೋಟೋವನ್ನು ವಿಂಟೇಜ್ ಸಿನಿಮಾ ಶೈಲಿಯ ಸೀರೆ ಲುಕ್‌ಗೆ ಪರಿವರ್ತಿಸುತ್ತದೆ. ಈ ಪ್ರಕ್ರಿಯೆಯು ಸರಳ ಮತ್ತು ಎಲ್ಲರಿಗೂ ಸುಲಭವಾಗಿ ಲಭ್ಯವಿದೆ.
ಉದಾಹರಣೆಗೆ, ಜನಪ್ರಿಯ ಪ್ರಾಂಪ್ಟ್‌ಗಳಲ್ಲಿ ಒಂದು: "ವಿಂಟೇಜ್ ಗ್ರೇನಿ ಶೈಲಿಯಲ್ಲಿ ಕಪ್ಪು ಪಾರ್ಟಿ-ವೇರ್ ಸೀರೆ, 90ರ ದಶಕದ ಸಿನಿಮಾ ಲುಕ್.. ಸೂರ್ಯಾಸ್ತದ ಬಣ್ಣಗಳಂತೆ ಬಿಸಿ ಬೆಳಕು ಇರಲಿ. ಮುಖಭಾವ ಮೃದು, ಶಾಂತ, ಸ್ವಲ್ಪ ಸಂತೋಷ ತುಂಬಿದಂತೆ ಕಾಣಬೇಕು." ಇಂತಹ ವಿವರವಾದ ಪ್ರಾಂಪ್ಟ್‌ಗಳಿಂದಲೇ ವಿಶಿಷ್ಟವಾದ ಮತ್ತು ಕಲಾತ್ಮಕವಾದ ಫೋಟೋಗಳು ಸೃಷ್ಟಿಯಾಗುತ್ತವೆ.

AI ಬಳಕೆಗೆ ಕೆಲವು ಇಂಗ್ಲಿಷ್ ಪ್ರಾಂಪ್ಟ್‌ಗಳು: ನಿಮ್ಮ ಫೋಟೋಗಳಿಗೆ ಮತ್ತಷ್ಟು ವೈವಿಧ್ಯತೆ ತರಲು ಕೆಲವು ಜನಪ್ರಿಯ ಇಂಗ್ಲಿಷ್ ಪ್ರಾಂಪ್ಟ್‌ಗಳು ಇಲ್ಲಿವೆ:
Dramatic & Moody Look:
"A 4K, realistic, portrait of a woman in a black party-wear saree, vintage grainy style, evoking a 90s Bollywood cinematic look. Standing against a dark wall with dramatic shadows and high contrast. A slight breeze catches the saree, creating a sense of drama. The lighting is warm and golden, like a sunset. Her expression is soft, calm, and slightly joyful. Maintain the subject's facial features."
Soft & Ethereal Look:
"A 4K, high-quality, full-length portrait of a woman wearing a sheer white polka dot saree. Her facial features should be preserved. A small pink rose tucked behind her ear, and a soft, gentle smile on her face. Cinematic shadows fall from warm light hitting her from the right side. The entire image should have a vintage diva aesthetic. Soft focus background."
Joyful & Vibrant Look:
"A full shot, vintage grainy photo of a woman in a flowing yellow chiffon saree. She is standing in a lush green garden during golden hour. The sunlight is warm and bright, creating a nostalgic atmosphere. Her hair is gently blowing in the wind, and she has a happy, carefree expression. The style should feel like a classic 80s or 90s Indian film song sequence. Maintain original facial details."
ಈ ಟ್ರೆಂಡ್ ಜನಪ್ರಿಯವಾಗಲು ಕಾರಣವೇನು?
ಈ ಟ್ರೆಂಡ್ ಜನಪ್ರಿಯವಾಗಲು ಹಲವು ಕಾರಣಗಳಿವೆ. AI ಬಳಸಿ ರಚಿಸಿದ ಈ ಫೋಟೋಗಳು ಹಳೆಯ ಸಿನಿಮಾಗಳ ಸೌಂದರ್ಯವನ್ನು ಪ್ರತಿಬಿಂಬಿಸುತ್ತವೆ. ವಿಂಟೇಜ್ ಶೈಲಿಯ ಚಿತ್ರಗಳಿಗೆ ವಿಶಿಷ್ಟ ಸ್ಪರ್ಶ ನೀಡುತ್ತವೆ. ಜೊತೆಗೆ, ಸೀರೆ ಎಂಬುದು ಭಾರತೀಯ ಸಂಸ್ಕೃತಿ ಮತ್ತು ಸಿನಿಮಾದಲ್ಲಿ ಒಂದು ಪ್ರಮುಖ ಭಾಗವಾಗಿದೆ, ಇದು ಈ ಎಡಿಟ್‌ಗಳನ್ನು ಇನ್ನಷ್ಟು ಆಕರ್ಷಕವಾಗಿಸಿದೆ.
ನೀವು ಕೂಡ ಕೇವಲ ಒಂದು AI ಟೂಲ್ ಮತ್ತು ಸೂಕ್ತ ಪ್ರಾಂಪ್ಟ್ ಬಳಸಿ ಈ ಟ್ರೆಂಡ್‌ನಲ್ಲಿ ಭಾಗವಹಿಸಬಹುದು. ಇದು ಬಳಕೆದಾರರಿಗೆ ವಿಭಿನ್ನ ಮತ್ತು ಸೃಜನಶೀಲ ಅನುಭವವನ್ನು ನೀಡುತ್ತಿದೆ. ತಮ್ಮ ಫೋಟೋಗಳನ್ನು ಸಿನಿಮಾದ ಪೋಸ್ಟರ್‌ಗಳಂತೆ ಪರಿವರ್ತಿಸಿಕೊಳ್ಳುವ ಈ ಹೊಸ ಪ್ರವೃತ್ತಿ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಈ ಮೇಲಿನ ಪ್ರಾಂಫ್ಟ್‌ಗಳನ್ನು ಬಳಸಿಕೊಂಡು ನೀವು ಈ ಟ್ರೆಂಟ್‌ನ ಭಾಗವಾಗಬಹುದು.


Click it and Unblock the Notifications








