Just In
Don't Miss
- News
ಕರ್ನಾಟಕದ 18 ಜಿಲ್ಲೆಗಳಲ್ಲಿ ಒಂದಂಕಿ ಕೊರೊನಾವೈರಸ್ ಪ್ರಕರಣ
- Sports
ಅಸಾಧಾರಣ ಆಟಗಾರರಿಂದಾಗಿ ಭಾರತದ ವಿರುದ್ಧ ಇಂಗ್ಲೆಂಡ್ ಗೆಲ್ಲಲಿದೆ: ಆ್ಯಂಡಿ ಫ್ಲವರ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 28ರ ದರ
- Automobiles
ಮೆಕ್ಸಿಕೋ ಮಾರುಕಟ್ಟೆಗೆ ಕಾಲಿಡಲಿದೆ ಹೀರೋ ಮೋಟೊಕಾರ್ಪ್
- Movies
ರಾಬರ್ಟ್, ಪೊಗರು, ಕೋಟಿಗೊಬ್ಬ 3 ಬಗ್ಗೆ ಪುನೀತ್ ರಾಜ್ಕುಮಾರ್ ಮಾತು
- Lifestyle
ಶನಿ ಸಂಚಾರ 2021: ನಿಮ್ಮ ರಾಶಿಯ ಮೇಲೆ ವರ್ಷ ಪೂರ್ತಿ ಇರಲಿದೆ ಶನಿಯ ಪ್ರಭಾವ
- Education
KVAFSU Bidar Recruitment 2021: 9 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫಾಸ್ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?..ಇಲ್ಲಿದೆ ಸಂಪೂರ್ಣ ಮಾಹಿತಿ!
ಸರ್ಕಾರವು ಡಿಜಿಟಲೀಕರಣದ ವ್ಯವಸ್ಥೆಗೆ ಒತ್ತು ನೀಡಲು ವಿವಿಧ ಯೋಜನೆಗಳನ್ನು ಆನ್‌ಲೈನ್ ವ್ಯವಸ್ಥೆಗೆ ತರುತ್ತಿವೆ. ದೇಶದ ಜನತೆ ಕೂಡ ನಿತ್ಯ ಕ್ಯಾಶ್‌ಲೆಸ್ ವಹಿವಾಟು ನಡೆಸಲು ಒತ್ತು ನೀಡುತ್ತಿದ್ದಾರೆ. ಈಗಾಗಲೇ ಇದಕ್ಕೆ ದೇಶದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಗೇಟ್‌ಗಳು ಹೊರತಾಗಿಲ್ಲ. ಆದರೆ, ಇದೀಗ ನೀವು ಕಡ್ಡಾಯವಾಗಿ ಫಾಸ್ಟ್ಯಾಗ್ ಅನ್ನು ಪಡೆಯಲೇಬೇಕಾಗಿದೆ. ನೀವು ಫಾಸ್ಟ್ಯಾಗ್ ಅನ್ನು ಪಡೆದು ನಿಮ್ಮ ವಾಹನದ ವಿಂಡ್ ಸ್ಕ್ರೀನ್‌ಗೆ ಅಂಟಿಸಿದ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಗೇಟ್‌ಗಳಲ್ಲಿ ಆಟೊಮ್ಯಾಟಿಕ್ ಟೋಲ್ ಕಲೆಕ್ಷನ್ ಸಾಧ್ಯವಾಗುತ್ತದೆ.

ದ್ವಿಚಕ್ರ ಹೊರತುಪಡಿಸಿ ತ್ರಿಚಕ್ರ, ಕಾರ್, ಲಾರಿ ಸೇರಿ ಎಲ್ಲ ವಾಹನಗಳಿಗೂ ಫಾಸ್ಟ್ಯಾಗ್ ಅಳವಡಿಕೆ ಮಾಡಬೇಕಿದ್ದು, ಇದೊಂದು ರೀತಿಯ ವ್ಯಾಲೆಟ್ ಅಕೌಂಟ್ ಇದ್ದ ಹಾಗೆ ಎಂದು ಹೇಳಿದರೆ ನಿಮಗೆ ಸುಲಭವಗಾಗಿ ಅರ್ಥವಾಗಬಹುದು. ಆದರೆ, ಇದರ ಬಗ್ಗೆ ನೀವು ಸಂಪೂರ್ಣವಾಗಿ ತಿಳಿಯಬೇಕೆಂದರೆ, RFID (ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್) ಇರುವ ಸ್ಮಾರ್ಟ್ ಲೇಬಲ್‌ಗಳನ್ನು FasTag ಎಂದು ಕರೆಯಲಾಗುತ್ತದೆ. ಇದನ್ನು ವಾಹನಕ್ಕೆ ಅಂಟಿಸಿರುವ ಫಾಸ್ಟ್ಯಾಗ್ ರೀಡ್ ಆಗಿ ಫಾಸ್ಟ್ಯಾಗ್ ಖಾತೆಯಿಂದ ರಸ್ತೆ ಬಳಕೆ ಶುಲ್ಕ ಪಾವತಿಯಾಗಲಿದೆ.

ಯಾವುದೇ ವಾಹನದ ಮಾಲಿಕ ತನ್ನ ಬ್ಯಾಂಕ್ ಖಾತೆ ಇರುವುದಕ್ಕೆ ಫಾಸ್ಟ್ಯಾಗ್ ಲಿಂಕ್ ಮಾಡಿಸಬಹುದಾಗಿದೆ. ಇಲ್ಲವೇ ಪ್ರತ್ಯೇಕ ಹಣ ಜಮೆ ಮಾಡಿಕೊಳ್ಳಬಹುದು. ಅಲ್ಲದೇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಉಚಿತವಾಗಿ ಫಾಸ್ಟ್ಯಾಗ್ ಕೊಡಲು ಮುಂದಾಗಿದೆ. ಹಾಗಾದರೆ, ಫಾಸ್ಟ್ಯಾಗ್ ಸೇವೆಯನ್ನು ಬಳಸುವುದು ಹೇಗೆ?, ಫಾಸ್ಟ್ಯಾಗ್ ಸೇವೆಗೆ ಚಂದಾದಾರರಾಗುವುದು ಹೇಗೆ? ಯಾವ ಮೊಬೈಲ್ ಆಪ್ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಇರಬೇಕು ಎಂಬುದು ನಿಮ್ಮ ಪ್ರಶ್ನೆಗಳಾಗಿದ್ದರೆ, ಇದಕ್ಕೆ ಇಂದಿನ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನಾವು ಒದಗಿಸಿದ್ದೇವೆ.

ಫಾಸ್ಟ್ಯಾಗ್ ಎಲ್ಲೆಲ್ಲಿ ಲಭ್ಯವಿದೆ.
ಯಾವುದೇ ವಾಹನ ಮಾಲೀಕರು ಖಾತೆದಾರರಾಗಿರುವ ಬ್ಯಾಂಕ್‌ಗಳಿಂದ ಫಾಸ್ಟ್ಯಾಗ್ ಖರೀದಿಸಬಹುದಾಗಿದೆ. ಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೊದಲಾದ ನೋಂದಾಯಿತ 23 ಬ್ಯಾಂಕ್‌ಗಳ ಆಯ್ದ ಶಾಖೆಗಳಲ್ಲಿ ಫಾಸ್ಟ್ಯಾಗ್ ಲಭ್ಯವಿದೆ.ಇದಲ್ಲದೆ ಬ್ಯಾಂಕ್ ನ್ಯೂಟ್ರಲ್ (Bank Neutral ) ಫಾಸ್ಟ್ಯಾಗ್‌ಗಳು ಆಯ್ದ ಪೆಟ್ರೋಲ್ ಬಂಕ್ ಮತ್ತು ಅಮೆಜಾನ್, ಪೇಟಿಎಂ ಮತ್ತು ಏರ್‌ಟೆಲ್ ಥ್ಯಾಂಕ್ಸ್ App ನಲ್ಲಿ ಲಭ್ಯವಿವೆ.

ಫಾಸ್ಟ್ಯಾಗ್ ಬಳಕೆ ಹೇಗೆ?
ಮೊದಲೇ ಹೇಳಿದಂತೆ RFID (ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್) ಇರುವ ಸ್ಮಾರ್ಟ್ ಲೇಬಲ್‌ಗಳೇ FasTag ಎಂದು ಸುಲಭವಾಗಿದೆ ಹೇಳಬಹುದು. ಇದನ್ನು ನಿಮ್ಮ ವಾಹನಕ್ಕೆ ಅಂಟಿಸಿದರೆ ಟೋಲ್ ಬೂತ್‌ಗಳಲ್ಲಿರುವ ಫಾಸ್ಟ್ಯಾಗ್ ಲೇನ್‌ನಲ್ಲಿ ರೀಡರ್ ಇರಲಿದೆ. ಈ ದಾರಿಯಲ್ಲಿ ವಾಹನ ಹಾದು ಹೋದಾಗ ವಾಹನಕ್ಕೆ ಅಂಟಿಸಿರುವ ಫಾಸ್ಟ್ಯಾಗ್ ರೀಡ್ ಆಗಿ ಫಾಸ್ಟ್ಯಾಗ್ ಖಾತೆಯಿಂದ ಶುಲ್ಕ ಪಾವತಿಯಾಗಲಿದೆ. ಗೂಗಲ್ ಪ್ಲೇಸ್ಟೋರ್‌ನಿಂದ App ಡೌನ್‌ಲೋಡ್ ಮಾಡಿಕೊಂಡು ವಾಹನದ ಮಾಹಿತಿ ನಮೂದಿಸಿದರೆ FasTag ಆಕ್ಟಿವೇಟ್ ಆಗುತ್ತದೆ.

ಯಾವ ಆಪ್ ಬೇಕು?
ಗೂಗಲ್ ಪ್ಲೇಸ್ಟೋರ್‌ನಿಂದ My FasTag App ಡೌನ್‌ಲೋಡ್ ಮಾಡಿಕೊಂಡು ವಾಹನದ ಮಾಹಿತಿ ನಮೂದಿಸಿದರೆ FasTag ಆಕ್ಟಿವೇಟ್ ಆಗುತ್ತದೆ. . ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಫಾಸ್ಟ್ಯಾಗ್, ಬ್ಯಾಂಕ್ ನ್ಯೂಟ್ರಲ್ ಫಾಸ್ಟ್‌ಟ್ಯಾಗ್ ಮತ್ತು ಬ್ಯಾಂಕ್‌ಗಳಿಂದಲೂ ಫಾಸ್ಟ್ಯಾಗ್ ಖರೀದಿಸುವ ಆಯ್ಕೆ ಆಪ್‌ನಲ್ಲಿದೆ. ಇಲ್ಲಿ ಆನ್‌ಲೈನ್‌ನಲ್ಲಿ ಫಾಸ್ಟ್ಯಾಗ್ ಖರೀದಿಸುವ ಮತ್ತು ನಿಮ್ಮ ಹತ್ತಿರದಲ್ಲಿರುವ ಪಾಯಿಂಟ್ ಆಫ್ ಸೇಲ್ (PoS) ಯಾವುದು ಎಂಬುದರ ಬಗ್ಗೆಯೂ ಮಾಹಿತಿ ಸಿಗುತ್ತದೆ. ಹಾಗಾಗಿ, ಈ ನಾಪ್ ನಿಮ್ಮ ಎಲ್ಲಾ ಸಮಸ್ಸೆಗಳಿಗೆ ಉತ್ತರ ಎನ್ನಬಹುದು.
ಫಾಸ್ಟ್ಯಾಗ್ ರೀಚಾರ್ಜ್ ಹೇಗೆ?
ಈ ಫಾಸ್ಟ್ಯಾಗ್‌ಳನ್ನು ಯಾವುದೇ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಬಹುದಾಗಿದ್ದು, ಆನ್‌ಲೈನ್‌ನಲ್ಲೇ ರೀಚಾರ್ಜ್ ಮಾಡಬಹುದಾಗಿದೆ. ನೀವು ಯಾವ ರೀತಿಯಲ್ಲಿ ಪೇಮೆಂಟ್ ಮಾಡಲು ಇಚ್ಚಿಸುತ್ತೀರಿ ಎಂಬುದಕ್ಕೆ ಮೂರು ಆಯ್ಕೆಗಳಿರುತ್ತವೆ.ಬ್ಯಾಂಕ್‌ನಿಂದ ಪಡೆಯುವ ಫಾಸ್ಟ್ಯಾಗ್‌ಗಳನ್ನು ಖರೀದಿಸುವುದಾದರೆ ನಿಮ್ಮ ಪ್ರದೇಶದಲ್ಲಿರುವ ಯಾವೆಲ್ಲ ಬ್ಯಾಂಕ್‌ಗಳಲ್ಲಿ ಫಾಸ್ಟ್ಯಾಗ್ ಲಭ್ಯ ಎಂಬ ಮಾಹಿತಿ ಇಲ್ಲಿ ತೋರಿಸುತ್ತದೆ.UPI ಮೂಲಕ ರೀಚಾರ್ಜ್ ಮಾಡುವುದಾದರೆ ನಿಮ್ಮ ಫೋನ್ PSP (ಪೇಮೆಂಟ್ ಸರ್ವೀಸ್ ಪ್ರೊವೈಡರ್) ಜತೆ ನೋಂದಣಿಯಾಗಿರಬೇಕು.

ಆನ್‌ಲೈನ್‌ನಲ್ಲಿ ಖರೀದಿ ಮಾಡಿದರೆ?
ನೀವು ಅಮೆಜಾನ್‌ನಲ್ಲಿ ಆರ್ಡರ್ ಮಾಡಿ ಫಾಸ್ಟ್ಯಾಗ್ ಅನ್ನು ಖರೀದಿಸಿದರೆ ಫಾಸ್ಟ್ಯಾಗ್ ಅನ್ನು ಆಕ್ಟಿವೇಟ್ ಮಾಡಲು ಹೀಗೆ ಮಾಡಿ. My FasTag App ಆಪ್‌ನಲ್ಲಿ ನೀವು ಫಾಸ್ಟ್ಯಾಗ್ ಅನ್ನು ಎಲ್ಲಿಂದ ಖರೀದಿ ಮಾಡಿದಿರಿ ಎಂಬ ಆಪ್ಶನ್ ಕ್ಲಿಕ್ ಮಾಡಿದ ಕೂಡಲೇ ಅಮೆಜಾನ್ ಎಂಬ ಆಪ್ಶನ್ ತೋರಿಸುತ್ತದೆ. ಅಲ್ಲಿ QR code ಸ್ಕ್ಯಾನ್ ಮಾಡಿ ಫಾಸ್ಟ್ಯಾಗ್ ಆಕ್ಟಿವೇಟ್ ಮಾಡಿ. ಆಕ್ಟಿವೇಟ್ ಆದನಂತರ ಪೇಮೆಂಟ್ ಆಯ್ಕೆ ಕ್ಲಿಕ್ ಮಾಡಿ. ಅಲ್ಲಿ ನೀವು ಯಾವುದೇ ರೀತಿಯಲ್ಲಿ ಪೇಮೆಂಟ್ ಮಾಡಲು ಸಾಧ್ಯವಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190