ಅಮೆಜಾನ್ ಪೇ EMI ಎಂಬ ಹೊಸ ಆಯ್ಕೆ..! ಬಳಸುವುದು ಹೇಗೆ ಗೊತ್ತಾ?

|

ಅಮೇಜಾನ್ ನಲ್ಲಿ ಆಗಾಗ ಹೊಸ ಹೊಸ ವೈಶಿಷ್ಟ್ಯತೆಗಳು ಬಿಡುಗಡೆಗೊಳ್ಳುತ್ತಲೇ ಇರುತ್ತದೆ ಮತ್ತು ಗ್ರಾಹಕರಿಗೆ ಅನುಕೂಲವನ್ನು ಅದು ಮಾಡಿಕೊಡುತ್ತದೆ. ಅಷ್ಟೇ ಅಲ್ಲ, ಗ್ರಾಹಕರನ್ನು ಅಟ್ರ್ಯಾಕ್ಟ್ ಮಾಡುವ ಅದೆಷ್ಟೋ ಆಫರ್ ಗಳನ್ನು ಬಿಡುಗಡೆಗೊಳಿಸುವುದು ಅಮೇಜಾನ್ ನಲ್ಲಿ ಯಾವಾಗಲೂ ನಡೆಯುತ್ತಿರುತ್ತದೆ.

ಅಮೆಜಾನ್ ಪೇ EMI ಎಂಬ ಹೊಸ ಆಯ್ಕೆ..! ಬಳಸುವುದು ಹೇಗೆ ಗೊತ್ತಾ?

ಈ ತಿಂಗಳ ಆರಂಭದಲ್ಲಿ ಅಮೇಜಾನ್ ಇಂಡಿಯಾ ತನ್ನ ಮೊಬೈಲ್ ವೆಬ್ ಸೈಟ್ ನ ಹಿಂದಿ ಇಂಟರ್ಫೇಸ್ ಮತ್ತು ಆಪ್ ನ್ನು ಭಾರತದಲ್ಲಿ ಪರಿಚಯಿಸಿದೆ. ಇದೀಗ ಭಾರತೀಯ ಬಳಕೆದಾರರಿಗಾಗಿ ಮತ್ತೊಂದು ಹೊಸ ವೈಶಿಷ್ಟ್ಯತೆಯನ್ನು ಈ ಇ-ರೀಟೈಲರ್ ಪರಿಚಯಿಸುತ್ತಿದೆ. ಭಾರತೀಯ ಬಳಕೆದಾರರಿಗಾಗಿ ಅಮೇಜಾನ್ ಪೇ ಇಎಂಐ ಸೌಲಭ್ಯವನ್ನು ತನ್ನ ಮೊಬೈಲ್ ಬಳಕೆದಾರರಿಗೆ ನೀಡುತ್ತಿದೆ.

ಕಂತಿನ ಮೂಲಕ ಖರೀದಿಗೆ ಅವಕಾಶ

ಕಂತಿನ ಮೂಲಕ ಖರೀದಿಗೆ ಅವಕಾಶ

ಹೊಸದಾಗಿ ಪರಿಚಯಿಸಲಾಗುತ್ತಿರುವ ಈ ವೈಶಿಷ್ಟ್ಯತೆಯು ಬಳಕೆದಾರರಿಗೆ ಒಂದೇ ಸಲ ಸಂಪೂರ್ಣ ಮೊತ್ತವನ್ನು ಪಾವತಿಸದೇ ಕಂತಿನಲ್ಲಿ ಪಾವತಿ ಮಾಡಿ ಖರೀದಿ ಮಾಡಲು ಈ ವೈಶಿಷ್ಟ್ಯತೆಯು ಗ್ರಾಹಕರಿಗೆ ಅವಕಾಶ ನೀಡುತ್ತದೆ. ಇನ್ಸೆಂಟ್ ಕ್ರೆಡಿಟ್ ಮತ್ತು ತಮ್ಮ ಡೆಬಿಟ್ ಕಾರ್ಡ್ ಮೂಲಕ ಪೇ ವಯಾ ಇಎಂಐ ಆಯ್ಕೆಯನ್ನು ಈ ಹೊಸ ವೈಶಿಷ್ಟ್ಯತೆಯು ದೊರಕಿಸಿಕೊಡುತ್ತದೆ.

ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಲು ಅವಕಾಶ

ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಲು ಅವಕಾಶ

ಅಮೇರಿಕಾದ ಈ ಸಂಸ್ಥೆ ಕ್ಯಾಪಿಟಲ್ ಫ್ಲೋಟ್ ಜೊತೆಗೆ ಕೈಜೋಡಿಸಿದ್ದು ಇಎಂಐ ಸ್ವಯಂಚಾಲಿತವಾಗಿ ಪಾವತಿಯಾಗುವಂತೆ ತಮ್ಮ ಡೆಬಿಟ್ ಕಾರ್ಡ್ ಗಳನ್ನು ಲಿಂಕ್ ಮಾಡಿಕೊಳ್ಳುವುದಕ್ಕೆ ಇದು ಅವಕಾಶ ನೀಡುತ್ತದೆ..

ಯಾವ ಬ್ಯಾಂಕ್ ಗಳಿಂದ ಬೆಂಬಲ ಲಭ್ಯ?:

ಯಾವ ಬ್ಯಾಂಕ್ ಗಳಿಂದ ಬೆಂಬಲ ಲಭ್ಯ?:

ಹೆಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಗಳು ಇಎಂಐ ಪೇಮೆಂಟ್ ಸೌಲಭ್ಯಕ್ಕಾಗಿ ತಮ್ಮ ಕಾರ್ಡ್ ಗಳನ್ನು ಲಿಂಕ್ ಮಾಡಲು ಅವಕಾಶ ನೀಡುತ್ತದೆ. ಕೆಲವೇ ದಿನಗಳಲ್ಲಿ ಇನ್ನು ಹಲವು ಬ್ಯಾಂಕ್ ಗಳು ಇದಕ್ಕೆ ಬೆಂಬಲ ನೀಡಲಿವೆ ಎಂದು ಕಂಪೆನಿಯು ತಿಳಿಸಿದೆ.

ಕನಿಷ್ಟ ಮತ್ತು ಗರಿಷ್ಟ ಖರೀದಿ ಮೊತ್ತ:

ಕನಿಷ್ಟ ಮತ್ತು ಗರಿಷ್ಟ ಖರೀದಿ ಮೊತ್ತ:

3 ತಿಂಗಳ ಅವಧಿಯಿಂದ 12 ತಿಂಗಳ ಅವಧಿಯ ಇಎಂಐ ಸೌಲಭ್ಯವನ್ನು ಗ್ರಾಹಕ ಪಡೆದುಕೊಳ್ಳಬಹುದು. ಆದರೆ ಇದರಲ್ಲಿ ಒಂದು ಸಮಸ್ಯೆ ಇದೆ. ಅಮೇಜಾನ್ ಪೇ ಇಎಂಐ ಸೌಲಭ್ಯವು ಒಂದು ಖರೀದಿಗೆ ಮಾತ್ರ ಲಭ್ಯವಾಗುತ್ತದೆ ಮತ್ತು ಅದರ ಮೊತ್ತ ಕನಿಷ್ಟವೆಂದರೂ 8000 ರುಪಾಯಿಗೂ ಅಧಿಕದ್ದಾಗಿರಬೇಕು. ಈ ಸೌಲಭ್ಯದ ಅಡಿಯಲ್ಲಿ ಖರೀದಿ ಮಾಡಬಹುದಾದ ಗರಿಷ್ಟ ಮೊತ್ತ 60,000 ರುಪಾಯಿಗಳಾಗಿರುತ್ತದೆ. ಅಷ್ಟೇ ಅಲ್ಲದೆ ಎಕ್ಸ್ ಚೇಂಜ್ ಆಫರ್ ನಲ್ಲಿ ಖರೀದಿಸಿದರೆ ಈ ಸೌಲಭ್ಯವನ್ನು ಗ್ರಾಹಕ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾದ್ರೆ ಅಮೇಜಾನ್ ಪೇ ಇಎಂಐ ವೈಶಿಷ್ಟ್ಯತೆಗೆ ರಿಜಿಸ್ಟರ್ ಮಾಡಿಕೊಳ್ಳುವುದು ಹೇಗೆ ಎಂಬ ಬಗೆಗಿನ ವಿವರ ಇಲ್ಲಿದೆ ನೋಡಿ.

ರಿಜಿಸ್ಟರ್ ಮಾಡಿಕೊಳ್ಳಲು ಅನುಸರಿಸಬೇಕಾಗಿರುವ ಹಂತಗಳು:

ರಿಜಿಸ್ಟರ್ ಮಾಡಿಕೊಳ್ಳಲು ಅನುಸರಿಸಬೇಕಾಗಿರುವ ಹಂತಗಳು:

ಹಂತ 1: ಮೊದಲ ಹಂತದಲ್ಲಿ ಬಳಕೆದಾರರು ತಮ್ಮ ಪ್ಯಾನ್ ಕಾರ್ಡ್ ನಂಬರ್ ನ್ನು ಮತ್ತು ಆಧಾರ್ ನಂಬರ್ ನ್ನು ವೆರಿಫಿಕೇಷನ್ ಪ್ರೊಸೆಸ್ ಗಾಗಿ ನೀಡಬೇಕಾಗುತ್ತದೆ. ನಂತರ ಅಮೇಜಾನ್ ನಿಂದ ನಿಮಗೊಂದು OTP ಲಭ್ಯವಾಗುತ್ತದೆ. ಆಧಾರ್ ಲಿಂಕ್ ಆಗಿರುವ ಮೊಬೈಲ್ ನಂಬರಿಗೆ ಆ ಓಟಿಪಿ ಬರಲಿದೆ.

ತಮ್ಮ ಮೊಬೈಲ್ ಆಪ್ ನಲ್ಲಿ ಓಟಿಪಿಯನ್ನು ಎಂಟರ್ ಮಾಡಿದ ನಂತರ ವೆರಿಫಿಕೇಷನ್ ಪ್ರೊಸೆಸ್ ಅಂತ್ಯವಾಗುತ್ತದೆ.. ಒಮ್ಮೆ ಬಳಕೆದಾರರು ಓಪಿಟಿ ಎಂಟರ್ ಮಾಡಿದ ನಂತರ, ಅವರ ಕ್ರೆಡಿಟ್ ಲಿಮಿಟ್ ನ್ನು ಅವರ ಮೊಬೈಲ್ ಸ್ಕ್ರೀನ್ ನಲ್ಲಿ ಡಿಸ್ಪ್ಲೇ ಮಾಡಲಾಗುತ್ತದೆ. ಇದು ಕ್ಯಾಪಿಟಲ್ ಪ್ಲೋಟ್ ಕಂಪೆನಿಯು ತಮ್ಮ ಬಳಿ ಕ್ರೆಡಿಟ್ ಬ್ಯೂರೋದಿಂದ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ನಿಗದಿ ಮಾಡಿರುತ್ತದೆ.

ಹಂತ 2: ಮುಂದಿನ ಹಂತದಲ್ಲಿ, ಬಳಕೆದಾರರು ಅಮೇಜಾನ್ ಪೇ ಇಎಂಐ ಲಿಮಿಟ್ ಮತ್ತು ಲೋನ್ ಅಗ್ರಿಮೆಂಟ್ ನ್ನು ಅಸೆಪ್ಟ್ ಮಾಡಬೇಕು.

ಹಂತ 3: ಅಂತಿಮ ಹಂತದಲ್ಲಿ, ಬಳಕೆದಾರರು ಇಎಂಐ ಮೊತ್ತ ಸ್ವಯಂಚಾಲಿತವಾಗಿ ಡಿಟಕ್ಟ್ ಆಗುವಂತೆ ಮಾಡಲು ತಮ್ಮ ಸಂಬಂಧಿತ ಬ್ಯಾಂಕ್ ಅಕೌಂಟಿನ ಡೆಬಿಟ್ ಕಾರ್ಡ್ ವಿವರವನ್ನು ನೀಡಬೇಕಾಗುತ್ತದೆ. ಸಧ್ಯಕ್ಕೆ ಅಮೇಜಾನ್ ಪೇ ಇಎಂಐ ಆಯ್ಕೆಯು ಕೆಲವೇ ಕೆಲವು ಆಯ್ದ ಬಳಕೆದಾರರಿಗೆ ಮಾತ್ರವೇ ಲಭ್ಯವಿದೆ. ಹೊಸದಾಗಿ ಬಿಡುಗಡೆಗೊಂಡಿರುವ ಈ ವೈಶಿಷ್ಟ್ಯತೆಯು ಲಭ್ಯವಾಗಲು ಉಳಿದ ಬಳಕೆದಾರರು ಇನ್ನೂ ಕೆಲವು ದಿನ ಕಾಯಬೇಕಾಗುತ್ತದೆ.

Best Mobiles in India

English summary
Amazon introduces Amazon Pay EMI; Here's how you can use it. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X