ಅಮೆಜಾನ್ 'ಪ್ರೈಮ್' ಗ್ರಾಹಕನಿಗೆ 4ದಿನ ಹಬ್ಬ!!..'ಪ್ರೈಮ್' ಗ್ರಾಹಕನಾಗುವುದು ಹೇಗೆ?
ಏನಿದು ಅಮೆಜಾಜ್ ಪ್ರೈಮ್? ಪ್ರೈಮ್ ಗ್ರಾಹಕನಾಗುವುದು ಹೇಗೆ? ಎಂಬುದನ್ನು ತಿಳಿಯಿರಿ.!!
ಒಂದು ಮಧ್ಯರಾತ್ರಿಯಿಂದಲೇ ಪ್ರಮುಖ ಆನ್‌ಲೈನ್ ಶಾಪಿಂಗ್ ಜಾಲತಾಣ ಅಮೆಜಾನ್ 'ದಿ ಗ್ರೇಟ್ ಇಂಡಿಯನ್ ಸೇಲ್' ಆಯೋಜನೆ ಮಾಡಿದ್ದು, ತನ್ನ ಎಲ್ಲಾ ವಿಭಾಗಗಳ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ.! ಈ ಸೇಲ್‌ನಲ್ಲಿ ಆಫರ್ ಹಾಗೂ ಡಿಸ್ಕೌಂಟ್ಸ್‌ಗಳ ಸುರಿಮಳೆಯೇ ಇದ್ದು ವಸ್ತುಗಳನ್ನು ಸಕಾಲ ಎನ್ನಬಹುದು.!!
ಇನ್ನು ಈ ಸೇಲ್‌ನಲ್ಲಿ ವಸ್ತುಗಳನ್ನು ಖರೀದಿಮಾಡುವ ಎಲ್ಲರೂ ಅಮೆಜಾನ್‌ನಲ್ಲಿ ಡಿಸ್ಕೌಂಟ್ಸ್ ಪಡೆಯಬಹುದಾದರೆ, ಅಮೆಜಾನ್ ತನ್ನ ಪ್ರೈಮ್ (ಪ್ರಧಾನ) ಗ್ರಾಹಕರಿಗೆ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದೆ. ಆದರೆ, ಈ ಡಿಸ್ಕೌಂಟ್ಸ್ ಸಾಮಾನ್ಯರಿಗೆ ಲಭ್ಯವಿಲ್ಲ.! ಹಾಗಾದರೆ, ಏನಿದು ಅಮೆಜಾಜ್ ಪ್ರೈಮ್? ಪ್ರೈಮ್ ಗ್ರಾಹಕನಾಗುವುದು ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏನಿದು ಅಮೆಜಾಜ್ ಪ್ರೈಮ್
ಅಮೆಜಾಜ್ ಪ್ರೈಮ್ ಮೆಂಬರ್‌ಶಿಪ್ ಎಂದರೆ ಒಂದು ನಂಬಿಕಸ್ಥ ವ್ಯವಹಾರ ಎನ್ನಬಹುದು. ಪ್ರೈಮ್ ಮೆಂಬರ್‌ಶಿಪ್ ಪಡೆದರೆ ಅಮೆಜಾನ್ ನಿಮ್ಮನ್ನು ಆತ್ಮೀಯ ಗೆಳೆಯನಂತೆ ಟ್ರೀಟ್ ಮಾಡುತ್ತದೆ. ಮೊದಲ ಒಂದು ತಿಂಗಳು ಉಚಿತ ಪ್ರೈಮ್ ಮೆಂಬರ್‌ಶಿಪ್ ಪಡೆಯಬಹುದು. ನಂತರ ಪ್ರೈಮ್ ಮೆಂಬರ್‌ಶಿಪ್ ಪಡೆಯಲು 499 ರೂಪಾಯಿ ಹಣವನ್ನು ಪಾವತಿಸಬೇಕು. !!

ಪ್ರೈಮ್ ಮೆಂಬರ್‌ಶಿಪ್ ಪಡೆದರೆ ಏನು ಲಾಭ?
ನೀವು ಆನ್‌ಲೈನ್ ಶಾಪಿಂಗ್ ಪ್ರಿಯರಾಗಿದ್ದರೆ ನಿಮಗೆ ಪ್ರೈಮ್ ಮೆಂಬರ್‌ಶಿಪ್‌ನಿಂದ ಬಹಳಷ್ಟು ಲಾಭವಿದೆ.!! ಪ್ಲಾಶ್‌ಸೇಲ್‌ನಲ್ಲಿ ಮೊದಲ ಗ್ರಾಹಕರು ನೀವಾಗುತ್ತೀರಾ. ! ಇನ್ನು ಎಕ್ಸ್‌ಕ್ಲೂಸಿವ್ ಡಿಸ್ಕೌಂಟ್ಸ್ , ಫ್ರೀ ಶಿಪ್ಪಿಂಗ್, ಒನ್‌ಡೇ ಡೆಲಿವರಿ ಮತ್ತು ಅಮೆಜಾನ್ ವಿಡಿಯೋಸ್‌ಗೆ ಸದಸ್ಯತ್ವ ಸೇರಿದಂತೆ ಹಲವು ಲಾಭಗಳು ನಿಮಗೆ ದೊರೆಯುತ್ತವೆ.

ಪ್ರೈಮ್ ಮೆಂಬರ್‌ಶಿಪ್ ಪಡೆಯವುದು ಹೇಗೆ?
ಅಮೆಜಾನ್ ಆಪ್ ಡೌನ್‌ಲೋಡ್ ಮಾಡಿ ನಿಮ್ಮ ಅಕೌಂಟ್ ಮೂಲಕ ಲಾಗಿನ್ ಆಗಿ. ನಂತರ ನಿಮ್ಮ ಎಡಭಾಗದಲ್ಲಿ 'try menu' ಎಂದು ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ. ನಂತರ ನಿಮ್ಮ ಹೆಸರು, ಫೋನ್‌ನಂಬರ್ ಎಲ್ಲವನ್ನು ನೀಡಿ ಪ್ರೈಮ್ ಮೆಂಬರ್‌ಶಿಪ್‌ಗೆ ಸೇರಿಕೊಳ್ಳಿ. ಇದು ಒಂದು ತಿಂಗಳು ಉಚಿತವಾಗಿರುತ್ತದೆ.


ಪ್ರೈಮ್ ಮೆಂಬರ್‌ಶಿಪ್ ಆದರೆ ಒಳ್ಳೆಯದೆ?
ಈಗ ನಡೆಯುತ್ತಿರುವ ಸೇಲ್‌ಗಾಗಿ ಪ್ರೈಮ್ ಮೆಂಬರ್‌ಶಿಪ್ ಪಡೆದರೆ ಒಳ್ಳೆಯದೇ.!! ಏಕೆಂದರೆ, ಪ್ರೈಮ್ ಮೆಂಬರ್‌ಶಿಪ್ ಒಂದು ತಿಂಗಳು ಉಚಿತವಾಗಿರುತ್ತದೆ.!! ತದನಂತರ ನೀವು ಹೆಚ್ಚು ಆನ್‌ಲೈನ್ ಶಾಪಿಂಗ್ ಮಾಡದೇ ಇದ್ದರೆ ಈ ಅಮೆಜಾನ್ ಪ್ರೈಮ್ ಮೆಂಬರ್‌ಶಿಪ್‌ಗೆ ಹಣ ಪಾವತಿ ಉತ್ತಮವಲ್ಲ ಎನ್ನಬಹುದು.!!


Click it and Unblock the Notifications








