Home
ಟೆಕ್ ನೌಕರಿ

ಅಮೇಜಾನ್ ಪ್ರೈಮ್ ಸದಸ್ಯತ್ವ ಪಡೆಯುವುದು ಹೇಗೆ ಗೊತ್ತಾ..?

ಅಮೇಜಾನ್ ನಲ್ಲಿ ಆಫರ್ ಗಳಿಗೆ ಕೊರತೆ ಇಲ್ಲ. ಅಮೇಜಾನ್ ಆನ್ ಲೈನ್ ನ ಅತೀ ದೊಡ್ಡ ಶಾಪಿಂಗ್ ಮಾಲ್. ಲಕ್ಷಕ್ಕೂ ಅಧಿಕ ವಸ್ತುಗಳು ಇದರಲ್ಲಿ ರಿಯಾಯಿತಿ ಬೆಲೆಯಲ್ಲಿ ಲಭ್ಯವಿರುತ್ತದೆ. ಇದೀಗ ಈ ವೆಬ್ ಸೈಟ್ ಅಮೇಜಾನ್ ಮೆಂಮರ್ ಶಿಪ್ ನ್ನು ಆರಂಭಿಸಿದ್ದು ಈ ಸದಸ್ಯರಿಗೆ ಹೆಚ್ಚಿನ ಸವಲತ್ತುಗಳನ್ನು ನೀಡುತ್ತಿದೆ.

ಅಮೇಜಾನ್ ಪ್ರೈಮ್ ಸದಸ್ಯತ್ವ ಪಡೆಯುವುದು ಹೇಗೆ ಗೊತ್ತಾ..?

ಹೌದು, ಅಮೇಜಾನ್ ಸದಸ್ಯತ್ವವನ್ನು ಪಡೆದವರು ಉಚಿತ ಶಿಪ್ಪಿಂಗ್, ಕನಿಷ್ಟ ಶಾಪಿಂಗ್ ವ್ಯಾಲ್ಯೂ, ಎಕ್ಸ್ ಕ್ಲೂಸೀವ್ ಡಿಲ್ಸ್ ಗಳು ಮತ್ತು ಪ್ರೈಮ್ ವೀಡಿಯೋ ಮತ್ತು ಪ್ರೈಮ್ ಮ್ಯೂಸಿಕ್ ಗೆ ಆಕ್ಸಿಸ್ ಸೇರಿದಂತೆ ಹತ್ತು ಹಲವು ಬೆನಿಫಿಟ್ ಗಳನ್ನು ಪಡೆಯಲಿದ್ದಾರೆ. ಹಾಗಾದ್ರೆ ಅಮೇಜಾನ್ ಪ್ರೈಮ್ ಮೆಂಬರ್ ಆದರೆ ಏನೆಲ್ಲಾ ಲಾಭಗಳಿವೆ , ಅದಕ್ಕೆ ಸೈನ್ ಆಗುವುದು ಹೇಗೆ ಎಂಬ ಬಗ್ಗೆ ಈ ಲೇಖನದಲ್ಲಿ ಚರ್ಚಿಸೋಣ.

ಅಮೇಜಾನ್ ಪ್ರೈಮ್ ನ ಅತೀ ದೊಡ್ಡ ಬೆನಿಫಿಟ್ ಗಳು ? 

ಅಮೇಜಾನ್ ಪ್ರೈಮ್ ನ ಅತೀ ದೊಡ್ಡ ಬೆನಿಫಿಟ್ ಗಳು ? 

ನೀವು ಅಮೇಜಾನ್ ನಲ್ಲಿ ಶಾಪಿಂಗ್ ಮಾಡಿ ಅಭ್ಯಾಸವಿರುವವರಾದರೆ ಕ್ವಿಕ್ ಶಿಪ್ಪಿಂಗ್ ಆಯ್ಕೆಯನ್ನು ಗಮನಿಸಿರುತ್ತೀರಿ. ಅದರಲ್ಲಿ ಒಂದು ದಿನಕ್ಕೆ ಡೆಲಿವರಿ ಅಥವಾ ಎರಡೇ ದಿನಕ್ಕೆ ಡೆಲಿವರಿ ಆಯ್ಕೆಗಳಿರುತ್ತದೆ ಮತ್ತು ಅದಕ್ಕಾಗಿ ಹೆಚ್ಚುವರಿ ಶಿಪ್ಪಿಂಗ್ ಚಾರ್ಜ್ ನ್ನು ಹಾಕಲಾಗುತ್ತದೆ. ಆದರೆ ಅಮೇಜಾನ್ ಪ್ರೈಮ್ ಸದಸ್ಯರಿಗೆ ಈ ಹೆಚ್ಚುವರಿ ಶಿಪ್ಪಿಂಗ್ ಚಾರ್ಜ್ ಇರುವುದಿಲ್ಲ. ಅಷ್ಟೇ ಅಲ್ಲ ಮಾರ್ನಿಂಗ್ ಡೆಲಿವರಿ ಮತ್ತು ಆರ್ಡರ್ ಮಾಡಿದ ದಿನವೇ ಡೆಲಿವರಿ ಮಾಡುವ ಆಯ್ಕೆಗಳನ್ನು ಅಮೇಜಾನ್ ಪ್ರೈಮ್ ಸದಸ್ಯರಿಗೆ ನೀಡುತ್ತದೆ. ಇದು ಖಂಡಿತವಾಗಲೂ ಗ್ರಾಹಕರಿಗೆ ಲಾಭದಾಯಕವಾಗಿರುತ್ತದೆ.

ಮತ್ತೊಂದು ಪ್ರಮುಖ ಲಾಭವೆಂದರೆ ಅಮೇಜಾನ್ ಪ್ರೈಮ್ ವೀಡಿಯೋ ಮತ್ತು ಪ್ರೈಮ್ ಮ್ಯೂಸಿಕ್ ಗಳಿಗೆ ಪ್ರೈಮ್ ಸದಸ್ಯರು ಆಡ್ ಫ್ರೀ ಆಕ್ಸಿಸ್ ನ್ನು ಪಡೆದಿರುತ್ತಾರೆ. ಪ್ರೈಮ್ ವೀಡಿಯೋಗಳಲ್ಲಿ ದೊಡ್ಡ ಮಟ್ಟದ ಟಿವಿ ಶೋಗಳ, ಚಲನಚಿತ್ರಗಳು ಮತ್ತು ಪ್ರೈಮ್ ಮ್ಯೂಸಿಕ್ ಗಳು ಲಭ್ಯವಿರುತ್ತದೆ ಮತ್ತು ಇದನ್ನು ನೀವು ನಿಮ್ಮ ಲ್ಯಾಪ್ ಟಾಪ್, ಮೊಬೈಲ್ ಫೋನ್, ಸ್ಮಾರ್ಟ್ ಟಿವಿ ಮತ್ತು ಇತರೆ ಡಿವೈಸ್ ಗಳನ್ನು ಕನೆಕ್ಟ್ ಮಾಡಿಕೊಂಡು ನೋಡುವುದಕ್ಕೆ ಅವಕಾಶವಿರುತ್ತದೆ.

ಹಬ್ಬದ ಸೀಸನ್ ಸೇಲ್ ಗಳಲ್ಲಿ ಪ್ರೈಮ್ ಸದಸ್ಯರಿಗೆ ಬೇಗನೆ ಆಕ್ಸಿಸ್ ನೀಡಲಾಗುತ್ತದೆ ಮತ್ತು ಪ್ರೊಮೊಷನಲ್ ಸೇಲ್ಸ್ ಗಳು ಅವರಿಗೆ ಟೈಮ್ ಟು ಟೈಮ್ ಲಭ್ಯವಾಗುತ್ತದೆ. ನಾನ್- ಪ್ರೈಮ್ ಸದಸ್ಯರಿಗಿಂತ 30 ನಿಮಿಷ ಬೇಗನೆ ಇವುಗಳಿಗೆ ನೀವು ಆಕ್ಸಿಸ್ ನ್ನು ಪಡೆಯಬಹುದು. ಅಮೇಜಾನ್ ಫ್ಯಾಮಿಲಿಯಲ್ಲಿ 15 ಶೇಕಡಾ ಚಂದಾದಾರಿಕೆಯನ್ನು ಪ್ರೈಮ್ ಸದಸ್ಯರು ಪಡೆದುಕೊಳ್ಳಬಹುದು.

ಅಮೇಜಾನ್ ಪ್ರೈಮ್ ಸದಸ್ಯತ್ವ ಪಡೆಯಲು ಎಷ್ಟು ಮೊತ್ತ ಪಾವತಿಸಬೇಕು? 

ಅಮೇಜಾನ್ ಪ್ರೈಮ್ ಸದಸ್ಯತ್ವ ಪಡೆಯಲು ಎಷ್ಟು ಮೊತ್ತ ಪಾವತಿಸಬೇಕು? 

ಅಮೇಜಾನ್ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳಲು ಭಾರತದಲ್ಲಿ ಒಂದು ವರ್ಷಕ್ಕೆ 999 ರುಪಾಯಿ ಪಾವತಿಸಬೇಕಾಗುತ್ತದೆ. ಇತ್ತೀಚೆಗೆ ಕಂಪೆನಿಯು ಒಂದು ತಿಂಗಳ ಚಂದಾದಾರಿಕೆಯ ಆಫರ್ ನ್ನು ನೀಡಿದ್ದು ತಿಂಗಳಿಗೆ 129 ರುಪಾಯಿ ಪಾವತಿಸಿ ಖರೀದಿಸುವ ಅವಕಾಶವೂ ಲಭ್ಯವಿದೆ. ಒಂದು ವರ್ಷದ ಪ್ಲಾನ್ ನಿಮಗೆ ಅಗತ್ಯವಿಲ್ಲದೇ ಇದ್ದಲ್ಲಿ ಒಂದೇ ತಿಂಗಳಿಗೆ ನೀವು ಸದಸ್ಯತ್ವವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೇ ಟೆಲಿಕಾಂ ಆಪರೇಟರ್ ಗಳಾದ ಏರ್ ಟೆಲ್ ಮತ್ತು ವಡಾಫೋನ್ ಗಳು ಪ್ರೈಮ್ ಸದಸ್ಯರಿಗೆ ಪ್ರೊಮೋಷನಲ್ ರಿಯಾಯಿತಿ ಪ್ಲಾನ್ ಗಳನ್ನು ಕೂಡ ನೀಡುತ್ತಿದ್ದಾರೆ.

ಅಮೇಜಾನ್ ಪ್ರೈಮ್ ಸದಸ್ಯತ್ವಕ್ಕೆ ಸೈನ್ ಇನ್ ಆಗುವುದು ಹೇಗೆ? 

ಅಮೇಜಾನ್ ಪ್ರೈಮ್ ಸದಸ್ಯತ್ವಕ್ಕೆ ಸೈನ್ ಇನ್ ಆಗುವುದು ಹೇಗೆ? 

ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ ನೀವು ಅಮೇಜಾನ್ ಪ್ರೈಮ್ ಸದಸ್ಯತ್ವಕ್ಕೆ ಲಾಗಿನ್ ಆಗಬಹುದು.

1. ಅಮೇಜಾನ್ ವೆಬ್ ಸೈಟ್ ಗೆ ತೆರಳಿ. ಅಮೇಜಾನ್ ಮೊಬೈಲ್ ಆಪ್ ನ್ನು ಕೂಡ ಬಳಸಬಹುದು. ಆಂಡ್ರಾಯ್ಡ್ ನಲ್ಲೂ ತೆರೆಯಬಹುದು. ಆದರೆ ಐಓಎಸ್ ಸದಸ್ಯರು ನೇರವಾಗಿ ಪ್ರೈಮ್ ಸದಸ್ಯತ್ವವನ್ನು ಫೋನ್ ನಲ್ಲಿಯೇ ನೇರವಾಗಿ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

2. ಅಮೇಜಾನ್ ವೆಬ್ ಸೈಟ್ ನಲ್ಲಿ ಪ್ರೈಮ್ ಮೆಂಬರ್ ಶಿಪ್ ಪೇಜ್ ಗೆ ವಿಸಿಟ್ ಮಾಡಿ. ಅಮೇಜಾನ್ ಆಂಡ್ರಾಯ್ಡ್ ಆಪ್ ನಲ್ಲಿ ಬ್ರೆಡ್ ಕ್ರಂಪ್ ಮೆನುವನ್ನು (ಪುಟದ ಮೇಲ್ಬಾಗದಲ್ಲಿರುತ್ತೆ) ನ್ನು ಟ್ಯಾಪ್ ಮಾಡಿ ಮತ್ತು ಟ್ರೈ ಪ್ರೈಮ್ ನ್ನು ಸೆಲೆಕ್ಟ್ ಮಾಡಿ.

3. ನಿಮ್ಮ ಅಮೇಜಾನ್ ಅಕೌಂಟಿನಿಂದ ಸೈನ್ ಇನ್ ಆಗಿ ಅಥವಾ ಈಗಾಗಲೇ ನಿಮ್ಮ ಬಳಿ ಅಮೇಜಾನ್ ಅಕೌಂಟ್ ಇಲ್ಲದೇ ಇದ್ದರೆ ಹೊಸದಾಗಿ ಕ್ರಿಯೇಟ್ ಮಾಡಿ.

4. ಒಮ್ಮೆ ಸೈನ್ ಇನ್ ಆದ ನಂತರ ಲಭ್ಯವಿರುವ ಸದಸ್ಯತ್ವದ ಆಯ್ಕೆಗಳನ್ನು ನೀಡಲಾಗುತ್ತದೆ. ಅಂದರೆ ತಿಂಗಳ ಪ್ಲಾನ್ ಅಥವಾ ವಾರ್ಷಿಕ ಪ್ಲಾನ್. ಯಾವುದು ಬೇಕೋ ಅದನ್ನು ಆಯ್ಕೆ ಮಾಡಿ.

5. ಪೇಮೆಂಟ್ ಮಾಡಿದರೆ ನಿಮ್ಮ ಕೆಲಸ ಆದಂತೆ. ನೀವು ಇನ್ಸೆಂಟ್ ಆಗಿ ಅಮೇಜಾನ್ ಪ್ರೈಮ್ ಮೆಂಬರ್ ಆಗುತ್ತೀರಿ. ನಂತರ ನೀವು ಎಲ್ಲಾ ಪ್ರೈಮ್ ಸದಸ್ಯತ್ವದ ಲಾಭಗಳನ್ನು ಪಡೆಯಬಹುದು.

ಅಮೇಜಾನ್ ಪ್ರೈಮ್ ಸದಸ್ಯರಿಗೆ ಏರ್ ಟೆಲ್ ಆಫರ್

ಅಮೇಜಾನ್ ಪ್ರೈಮ್ ಸದಸ್ಯರಿಗೆ ಏರ್ ಟೆಲ್ ಆಫರ್

ಏರ್ ಟೆಲ್ ಇನ್ಫಿನಿಟಿ ಪೋಸ್ಟ್ ಪೇಡ್ ಪ್ಲಾನ್ ಬಳಕೆದಾರರಿಗೆ ಒಂದು ವರ್ಷದ ಅಮೇಜಾನ್ ಪ್ರೈಮ್ ಚಂದಾದಾರಿಕೆಯನ್ನು ಉಚಿತವಾಗಿ ನೀಡುತ್ತದೆ. ಇದು ಹೇಗೆ ಕೆಲಸ ಮಾಡುತ್ತದೆ ಇಲ್ಲಿದೆ ವಿವರ :

1. ನೀವು ನಿಮ್ಮ ಏರ್ ಟೆಲ್ ನ ಸದ್ಯದ ಪ್ಲಾನ್ ನ್ನು ಇನ್ಫಿನಿಟಿ ಪೋಸ್ಟ್ ಪೇಡ್ ಪ್ಲಾನ್ 499 ಅಥವಾ ಅದಕ್ಕಿಂತ ಹೆಚ್ಚಿನದ್ದಕ್ಕೆ ಅಪ್ ಗ್ರೇಡ್ ಮಾಡಿ.

2. ಒಮ್ಮೆ ನಿಮ್ಮ ಪ್ಲಾನ್ ಮೈಗ್ರೇಟ್ ಆದ ನಂತರ, ಏರ್ ಟೆಲ್ ಟಿವಿ ಆಪ್ ನ್ನು ಡೌನ್ ಲೋಡ್ ಮಾಡಿ ಮತ್ತು ಅಮೇಜಾನ್ ಡಿಜಿಟಲ್ ಕಾರ್ಡ್ ನ್ನು ಟ್ಯಾಪ್ ಮಾಡಿ ( ಅರ್ಹ ಏರ್ ಟೆಲ್ ಬಳಕೆದಾರರಿಗೆ ಇದು ಸಹಜವಾಗಿಯೇ ಪಾಪ್ ಅಪ್ ಆಗುತ್ತಿರುತ್ತದೆ).

3. ಮುಂದಿನ ಪೇಜ್ ನಲ್ಲಿ ನೀವು ಅಮೇಜಾನ್ ಪ್ರೈಮ್ ಸದಸ್ಯತ್ವಕ್ಕೆ ಲಾಗಿನ್ ಆಗುವ ಅವಕಾಶವನ್ನು ನೀಡುಲಾಗುತ್ತದೆ ಅದಕ್ಕೆ ನೀವು ನಿಮ್ಮ ಫೋನ್ ನಂಬರ್ ಮತ್ತು ಪಾಸ್ ವರ್ಡ್ ನ್ನು ಬಳಕೆ ಮಾಡಬೇಕು. ಆದರೆ ನೀವು ಯಾವುದೇ ಪೇಮೆಂಟ್ ಮಾಹಿತಿಯನ್ನು ಇಲ್ಲಿ ನೀಡಬೇಕಾದ ಅಗತ್ಯವಿಲ್ಲ.

ವೊಡಾಫೋನ್‌ ಆಫರ್

ವೊಡಾಫೋನ್‌ ಆಫರ್

ವೊಡಾಫೋನ್‌ ಕೂಡ ತನ್ನ ರೆಡ್ ಪೋಸ್ಟ್ ಪೇಡ್ ಗ್ರಾಹಕರಿಗೆ ಒಂದು ವರ್ಷದ ಅಮೇಜಾನ್ ಪ್ರೈಮ್ ಚಂದಾದಾರಿಕೆಯನ್ನು ಒದಗಿಸುತ್ತದೆ. ವೊಡಾಫೋನ್‌ ಮೂಲಕ ಪ್ರೈಮ್ ಸದಸ್ಯತ್ವ ಪಡೆದುಕೊಳ್ಳುವುದು ಹೇಗೆ ಇಲ್ಲಿದೆ ನೋಡಿ ವಿವರ :

1. 399 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ವೊಡಾಫೋನ್‌ ರೆಡ್ ಎಂಟರ್ಟೈನ್ ಮೆಂಟ್ ಪ್ಲಾನ್ ಗೆ ನಿಮ್ಮ ವೊಡಾಫೋನ್‌ ನ್ನು ಅಪ್ ಗ್ರೇಡ್ ಮಾಡಿ.

2. ಒಮ್ಮೆ ನಿಮ್ಮ ಪ್ಲಾನ್ ಸ್ವಿಚ್ ಆದ ಕೂಡಲೆ ನೀವು ನಿಮ್ಮ ಫೋನ್ ನಲ್ಲಿ ವೊಡಾಫೋನ್‌ ಪ್ಲೇಯನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಆಗ ಆಫರ್ ನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದು.

3. ವೊಡಾಫೋನ್‌ ಪ್ಲೇ ಆಪ್ ಪ್ರಮೊಷನಲ್ ಬ್ಯಾನರ್ ನ್ನು ಹೋಮ್ ಪೇಜ್ ನಲ್ಲೇ ಡಿಸ್ಪ್ಲೇ ಮಾಡುತ್ತದೆ( ಒಂದು ವೇಳೆ ನೀವು ಆಫರ್ ಗೆ ಅರ್ಹರಾಗಿದ್ದರೆ ಮಾತ್ರ). ನೀವು ನೂತನ ವರ್ಷನ್ ನ್ನೇ ಬಳಸಿದ್ದೀರಿ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಯಾಕೆಂದರೆ ಲೇಟೆಸ್ಟ್ ವರ್ಷನ್ ನಲ್ಲಿ ಮಾತ್ರ ಬ್ಯಾನರ್ ಕಾಣಿಸುತ್ತದೆ.

4. ಒಮ್ಮೆ ನೀವು ಬ್ಯಾನರ್ ಟ್ಯಾಪ್ ಮಾಡಿದ ಕೂಡಲೇ, ನೀವು ಪ್ರೈಮ್ ಸದಸ್ಯಕ್ಕೆ ಲಾಗಿನ್ ಆಗುವಂತೆ ಕೇಳಲಾಗುತ್ತದೆ. ಆಫರ್ ಗಳು ಹೊಸ ಪ್ರೈಮ್ ಸದಸ್ಯರಿಗೆ ಮಾತ್ರ ಲಭ್ಯವಿರುತ್ತದೆ.

Best Mobiles in India

English summary
Amazon Prime: How to Sign Up for Amazon Prime Membership. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+