Home
ಟೆಕ್ ನೌಕರಿ

ಫೇಸ್‌ಬುಕ್‌, ವಾಟ್ಸ್ಆಪ್‌ನಲ್ಲಿನ ನೀಲಿ ಲಿಂಕ್‌ಗಳನ್ನು ಕ್ಲಿಕ್ ಮಾಡ್ತೀರಾ?..ಈ ಶಾಕಿಂಗ್ ಸ್ಟೋರಿ ನೋಡಿ!!

ಎಲ್ಲಾ ಪ್ರಮುಖ ಬ್ಯಾಂಕ್‌ಗಳು ಸೇರಿ ಸರಿಸುಮಾರು 232 ಬ್ಯಾಕಿಂಗ್ ಆಪ್‌ಗಳು ಆಂಡ್ರಾಯ್ಡ್ ಮಾಲ್‌ವೇರ್/ ಸೈಬರ್ ಅಪಾಯದಲ್ಲಿ ಸಿಲುಕಿವೆ ಎಂದು ಕ್ವಿಕ್ ಹಿಲ್ ರಿಪೋರ್ಟ್ ಹೇಳಿದೆ.!!

By Bhaskar N J

ಡಿಜಿಟಲ್ ಬ್ಯಾಂಕಿಂಗ್ ಪ್ರಪಂಚಕ್ಕೆ ಆಘಾತಕಾರಿ ಸುದ್ದಿಯನ್ನು ಪ್ರಖ್ಯಾತ ಐಟಿ ಸೆಕ್ಯುರಿಟಿ ಕಂಪೆನಿ 'ಕ್ವಿಕ್ ಹಿಲ್ ಸೆಕ್ಯುರಿಟಿ ಲ್ಯಾಬ್ಸ್' ನೀಡಿರುವ ವಿಷಯ ಈಗಾಗಲೇ ನಿಮಗೆ ತಿಳಿದಿದೆ.! ದೇಶದ ಎಲ್ಲಾ ಪ್ರಮುಖ ಬ್ಯಾಂಕ್‌ಗಳು ಸೇರಿ ಸರಿಸುಮಾರು 232 ಬ್ಯಾಕಿಂಗ್ ಆಪ್‌ಗಳು ಆಂಡ್ರಾಯ್ಡ್ ಮಾಲ್‌ವೇರ್/ ಸೈಬರ್ ಅಪಾಯದಲ್ಲಿ ಸಿಲುಕಿವೆ ಎಂದು ಕ್ವಿಕ್ ಹಿಲ್ ರಿಪೋರ್ಟ್ ಹೇಳಿದೆ.!!

ಆಂಡ್ರಾಂಯ್ಡ್ ಬ್ಯಾಂಕರ್.A9480 ('Android.banker.A9480)' ಎಂದು ಹೆಸರಿಸಲಾಗಿರುವ ಮಾಲ್‌ವೇರ್ ಒಂದು ಬಳಕೆದಾರರಿಗೆ ಗೊತ್ತಿಲ್ಲದಂತೆಯೇ ಅವರ ಸ್ಮಾರ್ಟ್‌ಫೋನ್ ಪ್ರವೇಶಿಸಿ ಬ್ಯಾಂಕಿಂಗ್ ದಾಖಲೆಗಳನ್ನು ಕದಿಯುತ್ತಿದೆ ಎಂದು ಕ್ವಿಕ್ ಹಿಲ್ ತಿಳಿಸಿದ್ದು, ಹಾಗಾದರೆ, ಇಂತಹ ಮಾಲ್‌ವೇರ್‌ಗಳಿಂದ ಕಾಪಾಡಿಕೊಳ್ಳುವುದು ಹೇಗೆ? ಎಂದು ಮುಂದೆ ತಿಳಿಯಿರಿ

ಬ್ಯಾಕಿಂಗ್ ಆಪ್ ಡಿಲೀಟ್!?

ಬ್ಯಾಕಿಂಗ್ ಆಪ್ ಡಿಲೀಟ್!?

ಹೆಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಎಸ್‌ಬಿಐ ಸೇರಿ ದೇಶದ ಎಲ್ಲಾ ಪ್ರಮುಖ ಬ್ಯಾಂಕ್‌ಗಳು ಅಪಾಯದಲ್ಲಿವೆ ಎನ್ನಲಾಗಿದೆ. ಆದರೆ, ಮೊಬೈಲ್ ಬ್ಯಾಂಕಿಗ್ ಅನ್ನು ಬಳಸದೇ ಇರುವುದು ಮೂರ್ಖತನವಾದೀತು.!! ಹಾಗಾಗಿ, ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ಸುರಕ್ಷಿತವಾಗಿರಿಸಿ.!!

ಕುತಂತ್ರಿ ಮಾಲ್‌ವೇರ್!!

ಕುತಂತ್ರಿ ಮಾಲ್‌ವೇರ್!!

ಆಂಡ್ರಾಂಯ್ಡ್ ಬ್ಯಾಂಕರ್.A9480 ('Android.banker.A9480)' ಎಂದು ಹೆಸರಿಸಲಾಗಿರುವ ಮಾಲ್‌ವೇರ್ ಬ್ಯಾಕಿಂಗ್ ಆಪ್‌ಗಳನ್ನೇ ಗುರಿಮಾಡುವ ಹಾಗೆ ರೂಪಿಸಲಾಗಿದೆ. ಬ್ಯಾಂಕಿಂಗ್‌ಗೆ ಸಂಬಂಧಿಸಿದ ಮಾಹಿತಿಯನ್ನು ಹುಡುಕುವ ಇದರ ಕಾರ್ಯ ಮೊಬೈಲ್ ಬಳಕೆದಾರರಿಗೆ ತಿಳಿಯುವುದಿಲ್ಲ ಎಂದು ರಿಪೋರ್ಟ್ ಹೇಳಿದೆ.!!

ನಕಲಿ ಲಿಂಕ್‌ಗಳಲ್ಲಿ ಸೇರುತ್ತಿದೆ.!!

ನಕಲಿ ಲಿಂಕ್‌ಗಳಲ್ಲಿ ಸೇರುತ್ತಿದೆ.!!

ಫೇಕ್ ಫ್ಲಾಶ್ ಪ್ಲೇಯರ್‌ಗಳು, ವಾಟ್ಸ್‌ಆಪ್ ಮತ್ತು ಫೇಸ್‌ಬುಕ್‌ನಲ್ಲಿ ಹರಿದಾಡುವ ಲಿಂಕ್‌ಗಳಲ್ಲಿ ಆಂಡ್ರಾಂಯ್ಡ್ ಬ್ಯಾಂಕರ್.A9480 ('Android.banker.A9480)' ಮಾಲ್‌ವೇರ್ ಸ್ಮಾರ್ಟ್‌ಫೋನ್‌ಗಳನ್ನು ಸೇರಿಕೊಳ್ಳುತ್ತಿದೆ.! ಒಮ್ಮೆ ಲಿಂಕ್ ಕ್ಲಿಕ್ ಮಾಡಿದರೂ ನಿಮ್ಮ ಫೋನ್‌ನಲ್ಲಿ ಮಾಲ್‌ವೇರ್ ಸೇರಿಕೊಂಡಿರುತ್ತದೆ.!!

ಅಶ್ಲೀಲ ವಿಡಿಯೋ ಸೈಟ್‌ಗಳು!!

ಅಶ್ಲೀಲ ವಿಡಿಯೋ ಸೈಟ್‌ಗಳು!!

ಮೊಬೈಲ್ ಹಾಗೂ ಡಿಜಿಟಲ್ ಜಗತ್ತಿನಲ್ಲಿ ಆಪತ್ತು ಯಾವ ಬಾಗಿಲಿನಿಂದ ಬರುತ್ತೆ ಅನ್ನೋದನ್ನು ಹೇಳೋದು ಅಸಾಧ್ಯ.! ಮೋಸ ಹೋಗುತ್ತೇವೆ ಎಂದು ತಿಳಿದು ಕೂಡ ಅಶ್ಲೀಲ ವಿಡಿಯೋ ಸೈಟ್‌ಗಳಿಗೆ ಭೇಟಿ ನೀಡುವುದು ಕೂಡ ಮಾಲ್‌ವೇರ್‌ಗಳು ಸ್ಮಾರ್ಟ್‌ಫೋನ್‌ಗಳಿಗೆ ಕಾಲಿಡುತ್ತಿವೆ.!!

ನೀವು ಎಚ್ಚರವಾಗಿರಿ.!!

ನೀವು ಎಚ್ಚರವಾಗಿರಿ.!!

ಸ್ಮಾರ್ಟ್‌ಫೋನ್ ಮೂಲಕ ಹಣದ ವ್ಯವಹಾರ ನಡೆಸುವ ವೇಳೆ ಎಲ್ಲರೂ ಬಹಳಷ್ಟು ಎಚ್ಚರ ವಹಿಸಬೇಕಾಗುತ್ತದೆ. ಭದ್ರತೆಯಿರದ ಆಪ್‌ಗಳ ಬಗ್ಗೆ, ನಕಲಿ ಲಿಂಕ್‌ಗಳ ಬಗ್ಗೆ ಎಚ್ಚರವಾಗಿರಿ. ಇಲ್ಲವಾದಲ್ಲಿ ನಿಮ್ಮದಲ್ಲದ ತಪ್ಪಿಗೆ ಹಣಕಳೆದುಕೊಳ್ಳುವುದರ ಜೊತೆಗೆ ಕೋರ್ಟು ಕಚೇರಿ ಎಂದು ಸುಮ್ಮನೆ ತಿರುಗಾಡಬೇಕು.!!

Best Mobiles in India

English summary
Android banking trojan steals login ID, password, SMS, contact lists. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+