Home
ಟೆಕ್ ನೌಕರಿ

iOS 17 ಅಪ್ಡೇಟ್‌ ಅನ್ನು ಡೌನ್‌ಲೋಡ್‌ ಮಾಡುವುದು ಹೇಗೆ? ಏನೆಲ್ಲಾ ಫೀಚರ್ಸ್‌ ಲಭ್ಯ!

ಟೆಕ್‌ ದೈತ್ಯ ಆಪಲ್‌ ಕಂಪೆನಿ ತನ್ನ ಐಫೋನ್‌ಗಳಿಗಾಗಿ ಹೊಸ iOS 17 ಆಪರೇಟಿಂಗ್‌ ಸ್ಟಿಸ್ಟಂ ಅನ್ನು ಪರಿಚಯಿಸುತ್ತಿದೆ. ಇಂದು ರಾತ್ರಿ ಬಿಡುಗಡೆ ಆಗಲಿರುವ iOS 17 ಆಪರೇಟಿಂಗ್‌ ಸಿಸ್ಟಂ ಹೊಸ ಮಾದರಿಯ ಫೀಚರ್ಸ್‌ಗಳೊಂದಿಗೆ ಬರಲಿದೆ. ಇದನ್ನು ಆಪಲ್‌ ಕಂಪೆನಿಯ ಇತ್ತೀಚಿನ ಐಫೋನ್‌ಗಳು ಬೆಂಬಲಿಸಲಿದ್ದು, ಹೊಸ ಫೀಚರ್ಸ್‌ಗಳನ್ನು ಪಡೆದುಕೊಳ್ಳಲಿವೆ.

ಹೌದು, iOS 17 ಇಂದು (ಸೆ.18) ರಾತ್ರಿ 10:30pm ಕ್ಕೆ ರೂಲ್‌ ಔಟ್‌ ಆಗಲಿದೆ. ರೂಲ್‌ಔಟ್‌ ಬಳಿಕ ಬಳಕೆದಾರರು ತಮ್ಮ ಐಫೋನ್‌ಗಳನ್ನು iOS 17 ಆವೃತ್ತಿಗೆ ಅಪ್ಡೇಟ್‌ ಮಾಡಬಹುದಾಗಿದೆ. ಹಾಗಾದ್ರೆ iOS 17 ಅಪ್ಡೇಟ್‌ ಡೌನ್‌ಲೋಡ್‌ ಮಾಡುವುದು ಹೇಗೆ? ಇದರಲ್ಲಿ ಲಭ್ಯವಾಗುವ ಹೊಸ ಫೀಚರ್ಸ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

iOS 17 ಅಪ್ಡೇಟ್‌ ಅನ್ನು ಡೌನ್‌ಲೋಡ್‌ ಮಾಡುವುದು ಹೇಗೆ? ಏನೆಲ್ಲಾ ಫೀಚರ್ಸ್‌ ಲಭ್ಯ!

iOS 17 ಸ್ವೀಕರಿಸುವ ಐಫೋನ್‌ಗಳು ಯಾವುವು?
ಆಪಲ್‌ ಕಂಪೆನಿ ಹೇಳಿರುವಂತೆ iOS 17 ಆಪರೇಟಿಂಗ್‌ ಸಿಸ್ಟಂ ಅನ್ನು ಈ ಕೆಳಕಂಡ ಡಿವೈಸ್‌ಗಳು ಪಡೆದುಕೊಳ್ಳಲಿವೆ.
* ಐಫೋನ್‌ XS
* ಐಫೋನ್‌ XS ಮ್ಯಾಕ್ಸ್‌
* ಐಫೋನ್‌ XR
* ಐಫೋನ್‌ 11
* ಐಫೋನ್‌ 11 ಪ್ರೊ
* ಐಫೋನ್‌ 11 ಪ್ರೊ ಮ್ಯಾಕ್ಸ್‌
* ಐಫೋನ್‌ 12
* ಐಫೋನ್‌ 12 ಮಿನಿ
* ಐಫೋನ್‌ 12 ಪ್ರೊ
* ಐಫೋನ್‌ 12 ಪ್ರೊ ಮ್ಯಾಕ್ಸ್
* ಐಫೋನ್‌ 13 ಮತ್ತು ಐಫೋನ್‌ 13 ಮಿನಿ
* ಐಫೋನ್‌ 13 ಪ್ರೊ ಮತ್ತು ಐಫೋನ್‌ 13ಪ್ರೊ ಮ್ಯಾಕ್ಸ್‌
* ಐಫೋನ್‌ 14 ಮತ್ತು ಐಫೋನ್‌ 14 ಪ್ಲಸ್‌
* ಐಫೋನ್‌ 14 ಪ್ರೊ ಮತ್ತು ಐಫೋನ್‌14 ಪ್ರೊ ಮ್ಯಾಕ್ಸ್‌
* ಐಫೋನ್‌ SE (2nd gen)
* ಐಫೋನ್‌ (3rd gen)

iOS 17 ಅಪ್‌ಡೇಟ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?
ಮೊದಲಿಗೆ ನಿಮ್ಮ ಐಫೋನ್‌ನಲ್ಲಿ iCloud ಅಥವಾ PC/Mac ಬಳಸಿಕೊಂಡು ನಿಮ್ಮ ಡೇಟಾವನ್ನು ಬ್ಯಾಕಪ್ ಮಾಡಿ. ನಂತರ ನಿಮ್ಮ ಐಫೋನ್ ಅನ್ನು ವೈ-ಫೈ ಸಂಪರ್ಕಕ್ಕೆ ಸಂಪರ್ಕಿಸಿ ಮತ್ತು ಶೇಕಡಾ 80 ರಷ್ಟು ಚಾರ್ಜ್ ಮಾಡಿ. ಇದೀಗ ಸೆಟ್ಟಿಂಗ್ಸ್‌ ಅಪ್ಲಿಕೇಶನ್‌ ತೆರೆಯಿರಿ, ಇದರಲ್ಲಿ ಸಾಮಾನ್ಯ > ಸಾಫ್ಟ್‌ವೇರ್ ಅಪ್ಡೇಟ್‌ > ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್‌ ಟ್ಯಾಪ್ ಮಾಡಿ. ಇದೀಗ iOS 17 ಅಪ್‌ಡೇಟ್ ಡೌನ್‌ಲೋಡ್ ಮಾಡಿದ ನಂತರ, iOS 17 ಅಪ್‌ಡೇಟ್ ಅನ್ನು ಪೂರ್ಣಗೊಳಿಸಲು ನಿಮ್ಮ ಐಫೋನ್ ಅನ್ನು ರಿ ಸ್ಟಾರ್ಟ್‌ ಮಾಡಿ.

ಆಪಲ್‌ iOS 17 ಅಪ್ಡೇಟ್‌ನಲ್ಲಿ ಹೊಸದೇನಿದೆ?
iOS 17 ಆಪರೇಟಿಂಗ್‌ ಸಿಸ್ಟಂನಲ್ಲಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ನೀಡಲಾಗಿದೆ. ಇವುಗಳಲ್ಲಿ ಪ್ರಮುಖವಾಗಿ ಲೈವ್ ವಾಯ್ಸ್‌ಮೇಲ್, ಸ್ಟ್ಯಾಂಡ್‌ಬೈ ಮೋಡ್, ಸಂಪರ್ಕ ಪೋಸ್ಟರ್‌ಗಳು, ಸಂವಾದಾತ್ಮಕ ವಿಜೆಟ್‌ಗಳು, ಫೋನ್ ಕರೆಗಳ ಸಮಯದಲ್ಲಿ ಸಿರಿಯನ್ನು ಬಳಸುವ ಸಾಮರ್ಥ್ಯ ಮತ್ತು ಅನೇಕ ಇತರ ವರ್ಧನೆಗಳನ್ನು ಒಳಗೊಂಡಿವೆ.

ಇನ್ನು ಆಪಲ್‌ ಕಂಪೆನಿ ಎರಡು ದಿನಗಳ ಹಿಂದೆಯಷ್ಟೇ ಐಫೋನ್‌ 15 ಸರಣಿ ಪರಿಚಯಿಸಿದೆ. ಇದರಲ್ಲಿ ಐಫೋನ್‌ 15 6.1 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿದ್ದು, 1600 nits ಬ್ರೈಟ್ನಸ್‌ ಸಪೋರ್ಟ್‌ ಸಹ ಪಡೆದುಕೊಂಡಿದೆ. ಹಾಗೆಯೇ ಇದು ಮಾತ್ರೆ ಮಾದರಿಯ ( ಪಿಲ್‌ ಶೇಪ್‌ ಮಾದರಿ) ಪಂಚ್‌ ಹೋಲ್‌ ರಚನೆ ಹೊಂದಿದ್ದು, ಫೇಸ್‌ಟೈಮ್ ಕ್ಯಾಮೆರಾ ಮತ್ತು ಫೇಸ್‌ಐಡಿ ಹೊಂದಿದೆ. ಇದು A16 ಬಯೋನಿಕ್ ಚಿಪ್ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಈ ಐಫೋನ್‌ ios 16 ಓಎಸ್‌ ಸಪೋರ್ಟ್ ಕೂಡಾ ಪಡೆದುಕೊಂಡಿದೆ. ಅಲ್ಲದೇ ಇದು 128GB, 256GB, 512GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

Best Mobiles in India

English summary
Apple iOS 17: iOS 17 for iPhones roll out today ; How to Download on Eligible Models
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+