Home
ಟೆಕ್ ನೌಕರಿ

ಸಿಹಿಸುದ್ದಿ! ಶೀಘ್ರವೇ Apple iOS 18.2 ಅಪ್ಡೇಟ್‌ ಲಭ್ಯ; ಈ ಐಫೋನ್‌ಗಳಲ್ಲಿ ಮಾತ್ರ.. ಇನ್‌ಸ್ಟಾಲ್ ಮಾಡುವುದು ಹೇಗೆ?

ಆಪಲ್‌ (Apple) ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಬಹುನಿರೀಕ್ಷಿತ ಐಒಎಸ್ 18.2 (iOS 18.2) ಅಪ್ಡೇಟ್‌ ಸೂಪರ್ ಎಐ​ ಫೀಚರ್‌ಗಳ ಜೊತೆ ಶೀಘ್ರವೇ ಲಭ್ಯವಾಗಲಿದೆ. ಹೌದು, ಇನ್ನು ಕೆಲ ದಿನಗಳ್ಳಲ್ಲಿ ಐಒಎಸ್​ ಅಪ್ಡೇಟ್‌ ಐಫೋನ್ ಪ್ರಿಯರ ​ಕೈ ಸೇರಲಿದೆ. ಐಫೋನ್ ಗ್ರಾಹಕರಿಗಾಗಿ 'ಆಪಲ್​ 18.2' ಅಪ್ಡೇಟ್‌ ತಯಾರಾಗಿದೆ. ಈ ಅಪ್ಡೇಟ್‌ ಡಿಸೆಂಬರ್ ಎರಡನೇ ವಾರದಲ್ಲಿ ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳೊಂದಿಗೆ ಪ್ರಾರಂಭವಾಗಲಿದೆ ಎಂದು ಕಂಪನಿ ಘೋಷಿಸಿದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ವರದಿಯ ಪ್ರಕಾರ ಆಪಲ್‌, ಈಗಾಗಲೇ ಐಒಎಸ್ 18.2 ಅಪ್ಡೇಟ್‌ ಬಿಡುಗಡೆ ಮಾಡಿದೆ ಎಂದು ಹೇಳಲಾಗುತ್ತಿದೆ. ಕಂಪನಿಯು WWDC 2024ರಲ್ಲಿ ತನ್ನ ಆಪಲ್​ ಇಂಟೆಲಿಜೆನ್ಸ್ ಘೋಷಿಸಿತು. ಆದಾಗ್ಯೂ, ಐಒಎಸ್ 18 (iOS 18) ಅಪ್ಡೇಟ್‌ ​ಜೊತೆಗೆ ಈ ವೈಶಿಷ್ಟ್ಯಗಳು ಲಭ್ಯವಿರಲಿಲ್ಲ. ಆಪಲ್‌ನ ಇತ್ತೀಚಿನ 18.2 ಅಪ್ಡೇಟ್‌ನಲ್ಲಿ ಸಿರಿ, ಜೆನ್‌ಮೋಜಿ, ವಿಜುವಲ್​ ಇಂಟೆಲಿಜೆನ್ಸ್​, ಇಮೇಜ್ ಪ್ಲೇಗ್ರೌಂಡ್, ಅಡ್ವಾನ್ಸ್​ಡ್​ ರೈಟಿಂಗ್ ಟೂಲ್ಸ್​ ಮತ್ತು ಚಾಟ್‌ಜಿಪಿಟಿ ಇಂಟಿಗ್ರೇಶನ್ ಸೇರಿದಂತೆ ಹಲವು ಎಐ (AI) ವೈಶಿಷ್ಟ್ಯಗಳು ಲಭ್ಯವಿರುವುದು ಖಚಿತವಾಗಿದೆ.

ಬರ್ತಿದೆ iOS 18.2 ಅಪ್ಡೇಟ್‌; ಈ ಫೋನ್‌ಗಳಲ್ಲಿ ಮಾತ್ರ ಲಭ್ಯ.. ಇನ್‌ಸ್ಟಾಲ್ ಹೇಗೆ?

ಐಒಎಸ್ 18.2 ಅಪ್ಡೇಟ್‌ ಯಾವಾಗ ಬರುತ್ತೆ?

ವರದಿಯ ಪ್ರಕಾರ, ಐಒಎಸ್ 18.2 ಅಪ್ಡೇಟ್‌ ನಿನ್ನೆ (ಡಿಸೆಂಬರ್ 9, 2024) ಭಾರತದಲ್ಲಿ ಬಿಡುಗಡೆಯಾಗಿದೆ ಎಂದು ಹೇಳಲಾಗಿದೆ. ಆದರೆ, ಈ ಐಒಎಸ್ 18.2 ಅಪ್ಡೇಟ್‌ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳೊಂದಿಗೆ ಹತ್ತಾರು ಹೊಸ ವೈಶಿಷ್ಟ್ಯಗಳು ಇದರಲ್ಲಿ ಲಭ್ಯವಿರಲಿದೆ. ಶೀಘ್ರವೇ ಐಒಎಸ್​ ಅಪ್ಡೇಟ್‌ ಐಫೋನ್ ಬಳಕೆದಾರರ​ ಕೈ ಸೇರಲಿದೆ.

ಐಒಎಸ್ 18.2 ಅಪ್ಡೇಟ್‌ ಮಾಡುವುದು ಹೇಗೆ?

ಕಂಪನಿಯು ಐಒಎಸ್ 18.2 ಅಪ್ಡೇಟ್‌ ಪರಿಚಯಿಸಿದ ಬಳಿಕ ಡೌನ್‌ಲೋಡ್ ಮಾಡಲು ಸಾಧ್ಯವಾಗಲಿದೆ. ನಿಮ್ಮ ಐಫೋನ್‌ನಲ್ಲಿ ಐಒಎಸ್ 18.2 ಅಪ್ಡೇಟ್‌ ಮಾಡುವುದು ಹೇಗೆ? ಎನ್ನುವುದನ್ನು ತಿಳಿಯಲು ಮುಂದೆ ಓದಿ.

* ಐಒಎಸ್ 18.2 ಅಪ್ಡೇಟ್‌ಗಾಗಿ ನಿಮ್ಮ ಐಫೋನ್‌ನಲ್ಲಿ ಸೆಟ್ಟಿಂಗ್ (Settings​) ಓಪನ್‌ ಮಾಡಬೇಕು.
* ಬಳಿಕ ಜನರಲ್ (General) ಆಯ್ಕೆಯ ಮೇಲೆ ಕ್ಲಿಕ್ಕಿಸಬೇಕು.
* ನಂತರ ಸಾಫ್ಟ್‌ವೇರ್‌ ಅಪ್ಡೇಟ್‌ (Software Update) ಮೇಲೆ ಕ್ಲಿಕ್​ ಮಾಡಬೇಕು.
* ಈಗ ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಆಯ್ಕೆಯನ್ನು ಕ್ಲಿಕ್ ಮಾಡಿ.
* ಇಷ್ಟು ಮಾಡಿದರೆ ಸುಲಭವಾಗಿ ಐಒಎಸ್ 18.2 ಅಪ್ಡೇಟ್ ಡೌನ್​ಲೋಡ್ ಆಗುತ್ತದೆ.

ಈ ಯಾವ ಫೋನ್‌ಗಳಲ್ಲಿ ಮಾತ್ರ ಈ ಅಪ್ಡೇಟ್‌​ ಲಭ್ಯ!

ಕಂಪನಿಯು ಆಪಲ್​ ಇಂಟೆಲಿಜೆನ್ಸ್ ವೈಶಿಷ್ಟ್ಯಗಳನ್ನು ಐಫೋನ್​ 16 ಸರಣಿ ಮತ್ತು ಐಫೋನ್​ 15 ಪ್ರೊ ಸ್ಮಾರ್ಟ್‌ಫೋನ್‌ಗಳಿಗೆ ಐಒಎಸ್‌ 18.2 ಅಪ್ಡೇಟ್‌ ತರಲಿದೆ. ಆದರೂ, ಇತರೆ ಕೆಲವು ಐಫೋನ್‌ಗಳಿಗೂ ಈ ಅಪ್ಡೇಟ್‌ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ.

ಐಫೋನ್ 16 ಸರಣಿಯ ಫೋನ್‌ಗಳು

ಐಫೋನ್ 16 ಸರಣಿಯ ಫೋನ್‌ಗಳಲ್ಲಿ ಐಒಎಸ್ 18.2 ಅಪ್ಡೇಟ್ ಲಭ್ಯವಿರುತ್ತದೆ. ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್​ ಬಳಕೆದಾರರು ಇದರ ಪ್ರಯೋಜನ ಪಡೆಯಬಹುದು.

ಐಫೋನ್ 15 ಸರಣಿಯ ಫೋನ್‌ಗಳು

ಐಫೋನ್ 15 ಸರಣಿಯ ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್‌ಗಳಲ್ಲಿ ​ಐಒಎಸ್ 18.2 ಅಪ್ಡೇಟ್ ಲಭ್ಯವಾಗುತ್ತದೆ.

ಐಫೋನ್ 14 ಸರಣಿಯ ಫೋನ್‌ಗಳು

ಐಫೋನ್ 14 ಸರಣಿಯ ಸ್ಮಾರ್ಟ್‌ಫೋನ್‌ಗಳಾದ ಐಫೋನ್ 14, ಐಫೋನ್ 14 ಪ್ಲಸ್, ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್‌ ಬಳಕೆದಾರರು ಐಒಎಸ್ 18.2 ಅಪ್ಡೇಟ್ ಡೌನ್‌ಲೋಡ್ ಮಾಡಬಹುದು.

ಐಫೋನ್ 13 ಸರಣಿಯ ಫೋನ್‌ಗಳು

ಐಫೋನ್ 13 ಮಿನಿ, ಐಫೋನ್ 13, ಐಫೋನ್ 13 ಪ್ರೊ ಮತ್ತು ಐಫೋನ್13 ಪ್ರೊ ಮ್ಯಾಕ್ಸ್​ ಮೊಬೈಲ್ ಬಳಸುತ್ತಿರುವ ಗ್ರಾಹಕರಿಗೆ ಐಒಎಸ್ 18.2 ಅಪ್ಡೇಟ್ ಲಭ್ಯವಿರುತ್ತದೆ.

ಐಫೋನ್ 12 ಸರಣಿಯ ಫೋನ್‌ಗಳು

ಐಫೋನ್ 12 ಮಿನಿ, ಐಫೋನ್ 12, ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್​ ಫೋನ್‌ಗಳಲ್ಲಿಯೂ ಹೊಸ ಐಒಎಸ್ 18.2 ಅಪ್ಡೇಟ್ ಇರುತ್ತದೆ.

ಐಫೋನ್ 11 ಸರಣಿಯ ಫೋನ್‌ಗಳು

ಐಫೋನ್ 11, ಐಫೋನ್ 11 ಪ್ರೊ, ಐಫೋನ್ 12 ಪ್ರೊ ಮ್ಯಾಕ್ಸ್ ಜೊತೆಗೆ ಐಫೋನ್ XR, XS, XS Max ಮತ್ತು ಐಫೋನ್ SE (2ನೇ ಜೆನ್), ಐಫೋನ್ SE (3ನೇ ಜೆನ್) ಮೊಬೈಲ್‌ಗಳಲ್ಲಿಯೂ ಸಹ ಐಒಎಸ್ 18.2 ಅಪ್ಡೇಟ್ ಅನ್ನು ಇನ್‌ಸ್ಟಾಲ್ ಮಾಡಬಹುದು.

Best Mobiles in India

English summary
Apple iOS 18.2 To Be Released in India This Week: know Eligible iPhones and how to install.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+